ಯಾದಗಿರಿಯಲ್ಲಿ ಅಕ್ಟೋಬರ್‌ 7ರಿಂದ ಸೇನಾ ನೇಮಕಾತಿ

Posted By:
Subscribe to Oneindia Kannada

ಯಾದಗಿರಿ, ಜುಲೈ 18 : ಬೆಳಗಾವಿಯ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಕಚೇರಿಯು ಯಾದಗಿರಿಯಲ್ಲಿ ಸೇನಾ ನೇಮಕಾತಿ ಹಮ್ಮಿಕೊಂಡಿದೆ. ಆಗಸ್ಟ್ 6 ರಿಂದ ಆನ್‌ಲೈನ್ ಮೂಲಕ ನೋಂದಣಿಯನ್ನು ಮಾಡಿಕೊಳ್ಳಬಹುದಾಗಿದೆ.

ಯಾದಗಿರಿಯಲ್ಲಿ ಅಕ್ಟೋಬರ್ 7 ರಿಂದ 15 ರವರೆಗೆ ನೇಮಕಾತಿ ನಡೆಯಲಿದೆ. ಸೈನಿಕ ಸಾಮಾನ್ಯ ಕರ್ತವ್ಯ, ಸೈನಿಕ ತಾಂತ್ರಿಕ, ಸೈನಿಕ ಟೆಡ್ಸ್‌ಮೆನ್ ಹಾಗೂ ಸಿಪಾಯಿ ಸಹಾಯಕ ನರ್ಸಿಂಗ್, ಸಿಪಾಯಿ ಕ್ಲರ್ಕ್‌/ಸ್ಟೋರ್ ಕೀಪರ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. [ಪುತ್ತೂರು : ಸಹಕಾರಿ ಬ್ಯಾಂಕಿನಲ್ಲಿ ಕೆಲಸ ಖಾಲಿ ಇದೆ]

indian army

ಯಾದಗಿರಿ ಜಿಲ್ಲೆಯಲ್ಲಿ ನಡೆಯಲಿರುವ ನೇಮಕಾತಿಗೆ ಕೊಪ್ಪಳ ಜಿಲ್ಲೆಯ ಅಭ್ಯರ್ಥಿಗಳು ಭಾಗವಹಿಸಬಹುದು. ಆಸಕ್ತರು ಅರ್ಜಿಯನ್ನು http://joinindianarmy.nic.in ನಲ್ಲಿ ಆಗಸ್ಟ್ 6ರಿಂದ ಸಲ್ಲಿಸಬಹುದಾಗಿದೆ. [ಬೆಳಗಾವಿ : 90 ಗ್ರಾಮ ಲೆಕ್ಕಿಗರ ಹುದ್ದೆಗೆ ಅರ್ಜಿ ಆಹ್ವಾನ]

ಹೆಚ್ಚಿನ ಮಾಹಿತಿಗೆ ಉಪ ನಿರ್ದೇಶಕರು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಬಾಗಲಕೋಟೆ ಇವರ ಕಚೇರಿಯನ್ನು 08354-235434 ಸಂಪರ್ಕಿಸಬಹುದಾಗಿದೆ.

ಕೆಲಸಕ್ಕಾಗಿ ಅರ್ಜಿ ಹಾಕಿ : ಕೊಪ್ಪಳ ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರ ಕಚೇರಿಯಲ್ಲಿ ಕಾರ್ಯ ನಿರ್ವಹಿಸಲು, ಇಚ್ಛೆ ಹೊಂದಿರುವವರು ತಮ್ಮ ಇಚ್ಛಾಪತ್ರವನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಕಳುಹಿಸಿಕೊಡಬಹುದು ಎಂದು ಕೊಪ್ಪಳ ಅಪರ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಸರ್ಕಾರದ ಜಂಟಿ ಕಾರ್ಯದರ್ಶಿ ದರ್ಜೆ ಹುದ್ದೆಗಿಂತ ಕಡಿಮೆ ಅಲ್ಲದ ದರ್ಜೆಯ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿ, ನಿವೃತ್ತರಾದ ಅಧಿಕಾರಿಗಳು ಮಾತ್ರ ತಮ್ಮ ಇಚ್ಛಾಪತ್ರವನ್ನು ಸಲ್ಲಿಸಬಹುದಾಗಿದೆ.

ಆಸಕ್ತರು ಇಚ್ಛಾಪತ್ರವನ್ನು ಇ-ಮೇಲ್- ವಿಳಾಸ deo.koppal@gmail.com ವಿಳಾಸಕ್ಕೆ ಜುಲೈ 22ರ ಒಳಗಾಗಿ ಕಳುಹಿಸಿಕೊಡಬೇಕು. ಹೆಚ್ಚಿನ ಮಾಹಿತಿಗೆ 08539-220844 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Belagavi army recruitment office organized army recruitment rally in Yadgir from October 7 to 15, 2016.
Please Wait while comments are loading...