ಮೈಸೂರು; 'ಸಖಿ' ಒನ್‌ಸ್ಟಾಪ್ ಸೆಂಟರ್‌ನಲ್ಲಿ ಹುದ್ದೆಗಳ ಭರ್ತಿ
ಮೈಸೂರು, ಆಗಸ್ಟ್ 10; 'ಸಖಿ' ಒನ್‌ಸ್ಟಾಪ್ ಸೆಂಟರ್‌ನಲ್ಲಿ ಗೌರವಧನದ ಆಧಾರದ ಮೇಲೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಕರೆಯಲಾಗಿದೆ. ಆಯ್ಕೆಯಾದ ಮಹಿಳಾ ಅಭ್ಯರ್ಥಿಗಳು ಚೆಲುವಾಂಬ ಆಸ್ಪತ್ರೆ ಆವರಣದಲ್ಲಿನ ಸೆಂಟರ್‌ನಲ್ಲಿ ಕಾರ್ಯನಿರ್ವಹಿಸಬೇಕಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ದೌರ್ಜನ್ಯಕೊಳ್ಳಕ್ಕಾದ ಮಹಿಳೆಯರಿಗೆ ವೈದ್ಯಕೀಯ ಚಿಕಿತ್ಸೆ, ಪೊಲೀಸ್ ನೆರವು ಹಾಗೂ ಕಾನೂನಿನ ನೆರವು ಹಾಗೂ ಆಪ್ತ ಸಮಾಲೋಚನಾ ವ್ಯವಸ್ಥೆಗಳನ್ನು ಒದಗಿಸಲು 'ಸಖಿ' ಒನ್‌ಸ್ಟಾಪ್ ಸೆಂಟರ್ ತೆರೆಯಲಾಗಿದೆ.
ಕೇಂದ್ರದಲ್ಲಿ ಕೇಸ್ ವರ್ಕರ್/ ಸಮಾಜ ಸೇವಕರ (1) ಹುದ್ದೆ ಭರ್ತಿ ಮಾಡಲಾಗುತ್ತಿದೆ. ಅಭ್ಯರ್ಥಿಗಳು ಬಿಎಸ್‌ಡಬ್ಲ್ಯೂ, ಸಮಾಜಶಾಸ್ತ್ರ/ ಮಹಿಳಾ ಅಧ್ಯಯನದಲ್ಲಿ ಪದವೀಧರರಗಿರಬೇಕು.

ಕಾನೂನುಬದ್ಧ ಸಿಬ್ಬಂದಿ/ ವಕೀಲ ಹುದ್ದೆ(1)ಗೆ ಕಾನೂನು ಪದವಿಯನ್ನು ಹೊಂದಿರುವ ಜೊತೆಗೆ ಹುದ್ದೆಗೆ ಮೇಲೆ ನಿಗದಿಪಡಿಸಿದ ಯಾವುದಾದರೊಂದು ವಿಷಯದಲ್ಲಿ ಪದವಿಯನ್ನು ಕರ್ನಾಟಕದ ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಪಡೆದಿರುವವರು ಅರ್ಜಿ ಸಲ್ಲಿಸಬಹುದು.
ಪದವಿಯಲ್ಲಿ ಪಡೆದ ಶೇಕಡವಾರು ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ. ಹುದ್ದೆಗಳಿಗೆ ನಿಗದಿಪಡಿಸಿದ ಅವದಿಯ ಅನುಭವ ಹೊಂದಿರುವುದು ಕಡ್ಡಾಯವಾಗಿರುತ್ತದೆ. ಅಭ್ಯರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ಕಡ್ಡಾಯ.
ಈ ಹುದ್ದೆಗಳು ಸಂಪೂರ್ಣವಾಗಿ ತಾತ್ಕಾಲಿಕ ಹಾಗೂ ಗೌರವಧನ ಆಧಾರಿತ ಹುದ್ದೆಯಾಗಿವೆ. ಸಕ್ರಮಗೊಳ್ಳಲು ಅವಕಾಶವಿರುವುದಿಲ್ಲ. ಸಲ್ಲಿಕೆಯಾದ ಅರ್ಜಿಗಳಲ್ಲಿ ಮಹಿಳಾ ಅಭಿವೃದ್ದಿ ಕ್ಷೇತ್ರಗಳಲ್ಲಿ ಕೆಲಸ ಮಾಡಿರುವ ಅನುಭವ ಹಾಗೂ ತರಬೇತಿ ಹಾಗೂ ಸೇವಾ ಮನೋಭಾವನೆಯನ್ನು ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ಆಯ್ಕೆಯಾದ ಅಭ್ಯರ್ಥಿಗಳು 24*7 ಗಂಟೆಯ ಪಾಳಿಯ ಆಧಾರದಲ್ಲಿ ಕರ್ತವ್ಯ ನಿರ್ವಹಿಸುವುದು ಕಡ್ಡಾಯ. ಆಸಕ್ತರು ಅರ್ಜಿಗಳನ್ನು ಭರ್ತಿ ಮಾಡಿ ಸಂಬಂಧಿಸಿದ ದಾಖಲೆಗಳನ್ನು ಲಗತ್ತಿಸಿ ಆಗಸ್ಟ್ 25ರೊಳಗೆ ಸಲ್ಲಿಸಬೇಕಾಗಿದೆ.
ಅರ್ಜಿ ಸಲ್ಲಿಕೆಗೆ ವಿಳಾಸ; ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, 1ನೇ ಮಹಡಿ, ಸ್ತಿ ಶಕ್ತಿ ಭವನ, ಕೃಷ್ಣದೇವರಾಯ ವೃತ್ತ, ವಿಜಯನಗರ, 2ನೇ ಹಂತ, ಮೈಸೂರು 17.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0821-2495432.
ಅಂಚೆ ಜೀವವಿಮೆಯ ಪ್ರತಿನಿಧಿ; ಅಂಚೆ ಇಲಾಖೆಯ ವತಿಯಿಂದ ನಂಜನಗೂಡು ವಿಭಾಗದ ವ್ಯಾಪ್ತಿಯಲ್ಲಿ ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವವಿಮೆಯ ಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳಿಗೆ ಕನಿಷ್ಠ 18 ಹಾಗೂ ಗರಿಷ್ಟ 50 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. ಎಸ್.ಎಸ್.ಎಲ್.ಸಿ ವಿದ್ಯಾರ್ಹತೆಯನ್ನು ಹೊಂದಿರಬೇಕು. ನಿರುದ್ಯೋಗಿಗಳು, ಸ್ವ-ಉದ್ಯೋಗಿಗಳು ಇತರೆ ವಿಮೆ ಕಂಪನಿಗಳ ಮಾಜಿ ಪ್ರತಿನಿಧಿಗಳು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ನಿವೃತ್ತ ಶಿಕ್ಷಕರು ಹಾಗೂ ಆಸಕ್ತಿಯುಳ್ಳ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಬೇಕು.
ನೇರ ಸಂದರ್ಶನ ಆಗಸ್ಟ್ 20 ರಂದು ಬೆಳಗ್ಗೆ 11 ಗಂಟೆಗೆ ನಂಜನಗೂಡು ವಿಭಾಗದ ಅಂಚೆ ಅಧೀಕ್ಷಕರ ಕಚೇರಿಗೆ ಹಾಜರಾಗಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9980702143 ಅಥವಾ 9448291050.











Click it and Unblock the Notifications