ಉದ್ಯೋಗ ಮಾಹಿತಿ; ಧಾರವಾಡ, ಹಾಸನದಲ್ಲಿ ಕೆಲಸ ಖಾಲಿ ಇದೆ

ಬೆಂಗಳೂರು, ಅಕ್ಟೋಬರ್ 29; ಧಾರವಾಡದಲ್ಲಿ ಯುವಪರಿವರ್ತಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನವೆಂಬರ್ 6ರೊಳಗೆ ಅರ್ಜಿ ಸಲ್ಲಿಸಬೇಕು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕರ್ನಾಟಕ ಯುವನೀತಿ-2012 ರನ್ವಯ ಜಾರಿಗೊಳಿಸುತ್ತಿರುವ ಯುವಜನ ಮಾನಸಿಕ ಆರೋಗ್ಯಕ್ಕೆ ಪೂರಕ ಸೇವೆಗಳ ಸಮಗ್ರ ಅಭಿವೃದ್ಧಿ ಮತ್ತು ಅನುಷ್ಠಾನ ಯೋಜನೆಯು ಜನ ಆರೋಗ್ಯ ಸಂಸ್ಥೆ, ಎಪಿಡೀಮಿಯಾಲಜಿ ವಿಭಾಗ, ನಿಮ್ಹಾನ್ಸ್, ಬೆಂಗಳೂರು ಇವರಿಂದ ಅನುಷ್ಠಾನಗೊಳ್ಳುತ್ತಿದೆ.

ಯುವಜನರನ್ನು ಸಬಲೀಕರಣಗೊಳಿಸಿ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಪೂರಕಗೊಳಿಸುವುದು ಈ ಯೋಜನೆಯ ಉದ್ದೇಶವಾಗಿರುತ್ತದೆ. ಖಾಲಿ ಇರುವ ಯುವಪರಿವರ್ತಕರ ಹುದ್ದೆಗೆ ಗೌರವಧನ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

Apply For Various Post In Hassan And Dharwad

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಪದವೀಧರರಾಗಿರಬೇಕು. 21 ರಿಂದ 35 ವರ್ಷದೊಳಗಿನವರಾಗಿರಬೇಕು. ಸ್ಥಳೀಯ ಭಾಷೆ ಕನ್ನಡವನ್ನು ಸ್ಪಷ್ಟವಾಗಿ ಮಾತನಾಡಬೇಕು. ಸಮುದಾಯದಲ್ಲಿ ಕೆಲಸ ಮಾಡಲು ಆಸಕ್ತಿ ಹಾಗೂ ಹುಮ್ಮಸ್ಸು, ಉತ್ತಮ ಸಂವಹನ ಕೌಶಲ್ಯದ ಜೊತೆಗೆ ಸಂವಾದ ಕೌಶಲ್ಯಗಳನ್ನು ಹೊಂದಿರಬೇಕು.

ಸಮುದಾಯದಲ್ಲಿ ಯುವಜನರಿಗೆ ತರಬೇತಿ ಕಾರ್ಯಕ್ರಮಗಳನ್ನು ನಡೆಸಲು ಅರ್ಹರಾಗಿರಬೇಕು. ನವಲಗುಂದ, ಕುಂದಗೋಳ, ಮತ್ತು ಕಲಘಟಗಿ ತಾಲೂಕಿನ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ವಿಳಾಸ; ಆಸಕ್ತರು ತಮ್ಮ ಸ್ವ ವಿವರಗಳೊಂದಿಗೆ ಅರ್ಜಿಗಳನ್ನು ಯುವಸ್ಪಂದನ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆರ್. ಎನ್. ಶೆಟ್ಟಿ ಕ್ರೀಡಾಂಗಣ ಧಾರವಾಡ ಇವರಿಗೆ ಸಲ್ಲಿಕೆ ಮಾಡಬಹುದಾಗಿದೆ. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 9448299673, 9110809886, 9900674224 ಸಂಪರ್ಕಿಸಬಹುದು.

ವ್ಯವಸ್ಥಾಪಕರ ಹುದ್ದೆ ಭರ್ತಿ; ಕೃಷಿ ಇಲಾಖೆಯ ಕೃಷಿ ತಂತ್ರಜ್ಞಾನ ನಿರ್ವಹಣೆ ಸಂಸ್ಥೆ ಸಹಾಯಕ ತಾಂತ್ರಿಕ ವ್ಯವಸ್ಥಾಪಕರು ಹುದ್ದೆಯನ್ನು ಒಪ್ಪಂದದ ಆಧಾರದ ಮೇಲೆ 2021-22 ನೇ ಸಾಲಿನ ಸೀಮಿತ ಅವಧಿಗೆ ಹಳ್ಳಿ ಮೈಸೂರು ಹೋಬಳಿಗೆ ಸೇರಿದ ರೈತ ಸಂಪರ್ಕ ಕೇಂದ್ರದಲ್ಲಿ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಕರೆದಿದೆ.

ಕೃಷಿ ಕೃಷಿ ಸಂಬಂಧಿತ ವಿಶ್ವವಿದ್ಯಾನಿಲಯಗಳು ನೀಡುವ ಕೃಷಿ ಪದವಿ, ಕೃಷಿ ಸ್ನಾತಕೋತ್ತರ ಪದವಿಯನ್ನು ಪಡೆದ ಅಭ್ಯರ್ಥಿಗಳು ನವೆಂಬರ್ 6 ಸಂಜೆ 5ರ ಒಳಗಾಗಿ ಉಪ ಕೃಷಿ ನಿರ್ದೇಶಕರು ಹಾಸನ ಕಚೇರಿಗೆ ಅರ್ಜಿ ಸಲ್ಲಿಸಬಹುದು. ನಿಗದಿತ ನಮೂನೆಯನ್ನು ಉಪ ಕೃಷಿ ನಿರ್ದೇಶಕರ ಕಚೇರಿ ಹಾಸನ ಇಲ್ಲಿ ಪಡೆಯಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ನಿಗದಿತ ವೇತನ ನೀಡಲಾಗುವುದು.

ಸರ್ಕಾರಿ ವಕೀಲರ ಹುದ್ದೆಗೆ ಅರ್ಜಿ ಆಹ್ವಾನ; ಚನ್ನರಾಯಪಟ್ಟಣ ತಾಲ್ಲೂಕಿನ ಹಿರಿಯ ಶ್ರೇಣಿ ನ್ಯಾಯಾಲಯದ ಅಪರ ಸರ್ಕಾರಿ ವಕೀಲರು ಹುದ್ದೆಯನ್ನು ಹೊಸದಾಗಿ ಭರ್ತಿಮಾಡುವ ಸಂಬಂಧವಾಗಿ ಕರ್ನಾಟಕ ಕಾನೂನು ಅಧಿಕಾರಿಗಳ ನೇಮಕಾತಿ ಮತ್ತು ಸೇವಾ ಷರತ್ತುಗಳು ನಿಯಮಗಳು ಅನ್ವಯ ಅರ್ಜಿ ಕರೆಯಲಾಗಿದೆ.

7 ವರ್ಷಗಳ ಕಾಲ ವಕೀಲ ವೃತ್ತಿಯನ್ನು ಪೂರೈಸಿದವರು ಚನ್ನರಾಯಪಟ್ಟಣ ತಾಲ್ಲೂಕಿನ ಹಿರಿಯ ಶ್ರೇಣಿ ನ್ಯಾಯದ ಪರ ಸರ್ಕಾರಿ ವಕೀಲರ ಹುದ್ದೆಗೆ ಅರ್ಜಿ ಹಾಕಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 8 ಸಂಜೆ 5 ಗಂಟೆಯಾಗಿರುತ್ತದೆ.

ಅಗತ್ಯ ದಾಖಲಾತಿಗಳ ಜೊತೆ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿ, ಡಿ ದೇವರಾಜ ಅರಸು ಭವನ ವಿದ್ಯಾಗಣಪತಿ ದೇವಸ್ಥಾನದ ಅಡ್ಡರಸ್ತೆ, ಆಕಾಶವಾಣಿ ಹತ್ತಿರ, ಸಾಲಗಾಮೆ ರಸ್ತೆ ಹಾಸನ ಇಲ್ಲಿಗೆ ಅರ್ಜಿ ಸಲ್ಲಿಸಬೇಕು. ದೂರವಾಣಿ ಸಂಖ್ಯೆ 08122-95108. ಕೊನೆಯ ದಿನಾಂಕದ ಬಳಿಕ ಬರುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ.

ದಾಖಲಾತಿಗಳು; ಎಸ್. ಎಸ್. ಎಲ್. ಸಿ ಅಂಕಪಟ್ಟಿ ದೃಢೀಕೃತ ಪ್ರತಿ, ಎಲ್. ಎಲ್. ಬಿ ದೃಡೀಕೃತ ಅಂಕಪಟ್ಟಿಗಳು, ವಕೀಲ ವೃತ್ತಿಯ ನೋಂದಣಿ ಪ್ರಮಾಣಪತ್ರ ದೃಢೀಕೃತ ಪ್ರತಿ, ಜಾತಿ ಪ್ರಮಾಣ ಪತ್ರ, ವಕೀಲ ವೃತ್ತಿ ನಡೆಸಿದ ಅನುಭವದ ಕುರಿತು ಸಂಕ್ಷಿಪ್ತ ವಿವರಗಳನ್ನು ಸಲ್ಲಿಸಬೇಕು.

ಅರ್ಜಿದಾರರು ಗಣಕಯಂತ್ರದ ಪರಿಣಿತಿ ಜ್ಞಾನ ಉಳ್ಳವರಾಗಿದ್ದಲ್ಲಿ ಇದರ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ನೀಡಬೇಕು, ಅರ್ಜಿದಾರರ ಭಾವಚಿತ್ರವನ್ನು ಅರ್ಜಿಯ ಜೊತೆ ಸಲ್ಲ್ಇಕೆ ಮಾಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+