ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಕ್ಕಬಳ್ಳಾಪುರದಲ್ಲಿ ಕೆಲಸ ಖಾಲಿ ಇದೆ; ನ. 18ರೊಳಗೆ ಅರ್ಜಿ ಹಾಕಿ

|
Google Oneindia Kannada News

ಚಿಕ್ಕಬಳ್ಳಾಪುರ, ನವೆಂಬರ್ 08; ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾ ನಿರ್ಮಿತಿ ಕೇಂದ್ರ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 18/11/2022ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಜಿಲ್ಲಾ ನಿರ್ಮಿತಿ ಕೇಂದ್ರಕ್ಕೆ ಅಗತ್ಯವಿರುವ ಸಿಬ್ಬಂದಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಸ್ವಯಂ ದೃಡೀಕೃತ ದಾಖಲಾತಿಗಳೊಂದಿಗೆ ಇ-ಮೇಲ್‌ ಮೂಲಕ ಸಲ್ಲಿಸಬೇಕು.

ಚಾಮರಾಜನಗರ ಜಿಲ್ಲಾ ಕೋರ್ಟ್ ನೇಮಕಾತಿ 2022: ಟೈಪಿಸ್ಟ್ ಹುದ್ದೆಗಳಿಗೆ ಅರ್ಜಿಚಾಮರಾಜನಗರ ಜಿಲ್ಲಾ ಕೋರ್ಟ್ ನೇಮಕಾತಿ 2022: ಟೈಪಿಸ್ಟ್ ಹುದ್ದೆಗಳಿಗೆ ಅರ್ಜಿ

ಲೆಕ್ಕಿಗ (1) ಹುದ್ದೆಗೆ ಬಿ.ಕಾಂ/ ಎಂ. ಕಾಂ/ ಎಂಬಿಎ ಪದವೀಧರರು ಅರ್ಜಿ ಸಲ್ಲಿಸಬಹುದು. ಕನಿಷ್ಠ 3 ವರ್ಷಗಳು ಸಂಘ ಸಂಸ್ಥೆಗಳಲ್ಲಿ ಲೆಕ್ಕಶಾಖೆಯಲ್ಲಿ ಕಾರ್ಯ ನಿರ್ವಹಿಸಿರುವ ಅನುಭವವಿರಬೇಕು. ಅಭ್ಯರ್ಥಿಗೆ ಗರಿಷ್ಠ ವಯೋಮಿತಿ 35 ವರ್ಷಗಳು.

ಶೇ 14ರಷ್ಟು ಉದ್ಯೋಗ ಕಡಿತ ಘೋಷಿಸಿದ ಡಿಜಿಟಲ್ ಪೇಮೆಂಟ್ ಕಂಪನಿಶೇ 14ರಷ್ಟು ಉದ್ಯೋಗ ಕಡಿತ ಘೋಷಿಸಿದ ಡಿಜಿಟಲ್ ಪೇಮೆಂಟ್ ಕಂಪನಿ

Apply For Various Post At Nirmithi Kendra Chikkaballapur

ಶಾಸನಾತ್ಮಕ ತೆರಿಗೆಗಳಾದ ಜಿಎಸ್‌ಟಿ, ಟಿಡಿಎಸ್, ಇಪಿಎಫ್, ಇಎಸ್‌ಐ ಮತ್ತು ವೃತ್ತಿ ತೆರಿಗೆ ರಿಟನ್ಸ್‌ ಅನುಭವವಿರಬೇಕು. ಲೆಕ್ಕಪತ್ರಗಳ ಕಡತಗಳನ್ನು ನಿಭಾಯಿಸುವ ಅನುಭವವಿರಬೇಕು. ಕಾಮರಾಗಿಗಳ ಕಡತ ಪರಿಶೀಲನೆ, ಆದಾಯ ತೆರಿಗೆ ಮತ್ತು ಜಿಎಸ್‌ಟಿ ತೆರಿಗೆಗಳ ಮಾಹಿತಿ ತಿಳಿದಿರಬೇಕು. ಲೆಕ್ಕಪರಿಶೋಧಕರಿಗೆ ಸಹಾಯ ಮಾಡುವುದು.

SSC GD ನೇಮಕಾತಿ 2022: 24000 ಹುದ್ದೆಗಳಿಗೆ ಅರ್ಜಿ ಆಹ್ವಾನ SSC GD ನೇಮಕಾತಿ 2022: 24000 ಹುದ್ದೆಗಳಿಗೆ ಅರ್ಜಿ ಆಹ್ವಾನ

ಗಣಕಯಂತ್ರ ನಿರ್ವಾಹಕರು (1) ಹುದ್ದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಪದವೀಧರರಾಗಿರಬೇಕು. ಅಭ್ಯರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಕನಿಷ್ಠ 3 ವರ್ಷಗಳು ಗಣಕಯಂತ್ರ ನಿರ್ವಹಣೆಯಲ್ಲಿ ಕಾರ್ಯ ನಿರ್ವಹಣೆಯಲ್ಲಿ ಕಾರ್ಯ ನಿರ್ವಹಿಸಿರಬೇಕು. ಗರಿಷ್ಠ ವಯೋಮಿತಿ 35 ವರ್ಷಗಳು. ಮಾಸಿಕ ವೇತನ 15 ಸಾವಿರ ರೂ.ಗಳು.

ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಬೆರಳಚ್ಚು ಮಾಡಬೇಕಿರುತ್ತದೆ. ಕಚೇರಿ ಪತ್ರ ವ್ಯವಹಾರಗಳ ಅನುಭವವಿರಬೇಕು. ಸರ್ಕಾರಿ ಕಚೇರಿ ಕಾರ್ಯ ನಿರ್ವಹಿಸುವವರಿಗೆ ಪ್ರಾಮುಖ್ಯತೆ ನೀಡಲಾಗುತ್ತದೆ.

ಅಭ್ಯರ್ಥಿಗೆ ಸೂಚನೆಗಳು

* ಅಭ್ಯರ್ಥಿಯು 10ನೇ ತರಗತಿ ಅಂಕಪಟ್ಟಿ (ವಯಸ್ಸಿನ ದೃಡೀಕರಣಕ್ಕೆ) ಹಾಗೂ ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟ ರೆಸ್ಯೂಮ್, ಅಂಕಪಟ್ಟಿ, ಅನುಭವ ಪ್ರಮಾಣ ಪತ್ರವನ್ನು ಒಂದು ಭಾವಚಿತ್ರ ಮತ್ತು ಆಧಾರ್ ಜೆರಾಕ್ಸ್ ಪ್ರತಿಯನ್ನು ಅರ್ಜಿಯೊಂದಿಗೆ ದೃಡೀಕರಿಸಿ ಲಗತ್ತಿಸಿ ಸಲ್ಲಿಸುವುದು.

* ಅಂತಿಮ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನ ಯಾವುದೇ ಕಾರಣ ನೀಡದೇ ಈ ನೇಮಕಾತಿ ಪ್ರಕ್ರಿಯೆಯನ್ನು ಮುಂದೂಡುವ ಅಥವ ರದ್ದುಗೊಳಿಸುವ ಸಂಪೂರ್ಣ ಹಕ್ಕನ್ನು ಆಯ್ಕೆ ಸಮಿತಿ ಹೊಂದಿರುತ್ತದೆ.

* ಒಂದೇ ಅಭ್ಯರ್ಥಿ ಎರಡು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವಾಗ ಪ್ರತ್ಯೇಕವಾಗಿ ಅರ್ಜಿಗಳನ್ನು ಸಲ್ಲಿಸುವುದು.

* ಅರ್ಜಿಗಳನ್ನು ಇ-ಮೇಲ್ ಮೂಲಕ ಸಲ್ಲಿಸುವುದು ([email protected]) ಖುದ್ದಾಗಿ ಅಥವ ಅಂಚೆ ಮೂಲಕ ಅರ್ಜಿ ಸಲ್ಲಿಕೆ ಮಾಡಲು ಅವಕಾಶವಿಲ್ಲ.

* ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08156-295080

English summary
Applications invited for various post at Nirmithi Kendra, Chikkaballapur. Candidates can apply till November 18th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X