ಬೆಂಗಳೂರು ಜಿ. ಪಂಚಾಯಿತಿ ನೇಮಕಾತಿ; ಮಾ.26 ಕೊನೆ ದಿನ

ಬೆಂಗಳೂರು, ಮಾರ್ಚ್ 16; ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿ ತಾಲೂಕು ಮಟ್ಟದಲ್ಲಿ ತಾಲೂಕು ಸಂಯೋಜಕರನ್ನು ನೇಮಕ ಮಾಡಿಕೊಳ್ಳಲು ಅರ್ಜಿಗಳನ್ನು ಕರೆದಿದೆ. ಅರ್ಜಿಗಳನ್ನು ಸಲ್ಲಿಕೆ ಮಾಡಲು 26/3/2021 ಕೊನೆಯ ದಿನವಾಗಿದೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಹೊರಗುತ್ತಿಗೆ ಆಧಾರದ ಮೇಲೆ ತಾಲೂಕು ಮಟ್ಟದಲ್ಲಿ ಸಂಯೋಜಕ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ತಾಂತ್ರಿಕ ಸಂಯೋಜಕರು 3 ಹುದ್ದೆ. ಅರ್ಜಿ ಸಲ್ಲಿಸುವವರು ಸಿವಿಲ್‌ನಲ್ಲಿ ಬಿಇ/ ಎಂ. ಟೆಕ್ ವ್ಯಾಸಂಗ ಮಾಡಿರಬೇಕು ಸಂಬಂಧಿಸಿದ ಕಾರ್ಯಕ್ಷೇತ್ರದಲ್ಲಿ ಅನುಭವ ಹೊಂದಿರಬೇಕು. ವಯೋಮಿತಿ 21-40 ವರ್ಷಗಳು. ಅಭ್ಯರ್ಥಿಗಳ ಮಾಸಿಕ ವೇತನ 29,000 (ಪ್ರಯಾಣ ಭತ್ಯೆ ಪ್ರತಿ ಕಿ. ಮೀ.ಗೆ 5 ರೂ. ನಂತೆ ಗರಿಷ್ಠ ಮಾಸಿಕ ರೂ. 1,500)

 Apply For Taluk Technical Assistant Post In Bengaluru Rural

ತಾಲೂಕು ಐ. ಇ. ಸಿ. ಸಂಯೋಜಕರು 4 ಹುದ್ದೆ. ಅಭ್ಯರ್ಥಿಗಳು MSW/ ಮಾಸ್ ಕಮ್ಯುನಿಕೇಷನ್‌ನಲ್ಲಿ ಯುಜಿ/ ಪಿಜಿ ಮತ್ತು ಸಂಬಂಧಿಸಿದ ಕಾರ್ಯಕ್ಷೇತ್ರದಲ್ಲಿ ಅನುಭವ ಹೊಂದಿರಬೇಕು. ವಯೋಮಿತಿ 21-40 ವರ್ಷಗಳು. ಅಭ್ಯರ್ಥಿಗಳ ಮಾಸಿಕ ವೇತನ 20,000 (ಪ್ರಯಾಣ ಭತ್ಯೆ 2000 ರೂ.).

ತಾಂತ್ರಿಕ ಸಹಾಯಕರು (ಕೃಷಿ) 1 ಹುದ್ದೆ. ಅಭ್ಯರ್ಥಿಗಳು ಕೃಷಿ ವಿಷಯದಲ್ಲಿ ಬಿಎಸ್‌ಸಿ/ ಎಂಎಸ್‌ಸಿ ಮತ್ತು ಸಂಬಂಧಿಸಿದ ಕಾರ್ಯಕ್ಷೇತ್ರದಲ್ಲಿ ಅನುಭವ ಹೊಂದಿರಬೇಕು. ವಯೋಮಿತಿ 21-40 ವರ್ಷಗಳು. ಅಭ್ಯರ್ಥಿಗಳ ಮಾಸಿಕ ವೇತನ 24,000 (ಪ್ರಯಾಣ ಭತ್ಯೆ ಪ್ರತಿ ಕಿ. ಮೀ.ಗೆ 5 ರೂ. ನಂತೆ ಗರಿಷ್ಠ ಮಾಸಿಕ ರೂ. 1,500).

ತಾಂತ್ರಿಕ ಸಹಾಯಕರು (ತೋಟಗಾರಿಕೆ) 1 ಹುದ್ದೆ. ಅಭ್ಯರ್ಥಿಗಳು ತೋಟಗಾರಿಕೆ ವಿಷಯದಲ್ಲಿ ಬಿಎಸ್‌ಸಿ/ ಎಂಎಸ್‌ಸಿ ಮತ್ತು ಸಂಬಂಧಿಸಿದ ಕಾರ್ಯಕ್ಷೇತ್ರದಲ್ಲಿ ಅನುಭವ ಹೊಂದಿರಬೇಕು. ವಯೋಮಿತಿ 21-40 ವರ್ಷಗಳು. ಅಭ್ಯರ್ಥಿಗಳ ಮಾಸಿಕ ವೇತನ 24,000 (ಪ್ರಯಾಣ ಭತ್ಯೆ ಪ್ರತಿ ಕಿ. ಮೀ.ಗೆ 5 ರೂ. ನಂತೆ ಗರಿಷ್ಠ ಮಾಸಿಕ ರೂ. 1,500).

ಆಸಕ್ತರು ವೆಬ್ ಸೈಟ್‌ನಲ್ಲಿ ಅರ್ಜಿಗಳನ್ನು ಪಡೆದು ಖುದ್ದಾಗಿ, ಅಂಚೆ ಮೂಲಕ ಸಲ್ಲಿಕೆ ಮಾಡಬೇಕು.

ಅರ್ಜಿ ಸಲ್ಲಿಕೆಗೆ ವಿಳಾಸ; ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ ಭವನ, ಬೀರಸಂದ್ರ (ಚಪ್ಪರದ ಕಲ್ಲು), ಕುಂದಾಣ ಹೋಬಳಿ, ದೇವನಹಳ್ಳಿ ತಾಲೂಕು 562110.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+