• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಂಟಿಸಿ ನೇಮಕಾತಿ; ಜುಲೈ 8ರೊಳಗೆ ಅರ್ಜಿ ಹಾಕಿ

|
Google Oneindia Kannada News

ಬೆಂಗಳೂರು, ಜುಲೈ 03; ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ( ಬಿಎಂಟಿಸಿ) ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 8 ಜುಲೈ 2022 ರೊಳಗೆ ಅರ್ಜಿಗಳನ್ನು ಸಲ್ಲಿಸಬೇಕಿದೆ.

ಸಾಫ್ಟ್‌ವೇರ್ ಇಂಜಿನಿಯರ್, ಸಿಸ್ಟಮ್ ಆಡ್ಮಿನಿಸ್ಟ್ರೇಟರ್ ಹುದ್ದೆಗಳಿಗೆ ಅರ್ಜಿಗಳನ್ನು ಕರೆಯಲಾಗಿದೆ. ಒಟ್ಟು ಎಷ್ಟು ಹುದ್ದೆಗಳಿವೆ ಎಂದು ಮಾಹಿತಿ ನೀಡಿಲ್ಲ. ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರಿನಲ್ಲಿ ಕೆಲಸ ಮಾಡಬೇಕು.

ಮುಂದಿನ 3 ತಿಂಗಳಲ್ಲಿ ಶೇ 50ರಷ್ಟು ನೇಮಕಾತಿ ಹೆಚ್ಚಳ! ಮುಂದಿನ 3 ತಿಂಗಳಲ್ಲಿ ಶೇ 50ರಷ್ಟು ನೇಮಕಾತಿ ಹೆಚ್ಚಳ!

ಸಾಫ್ಟ್‌ವೇರ್ ಇಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಬಿಎಸ್‌ಸಿ ಪದವಿ ಪಡೆದಿರಬೇಕು. ಬಿಇ/ ಬಿಟೆಕ್ ಪದವಿ ಪಡೆದವರು ಅರ್ಜಿ ಹಾಕಬಹುದು. ಸಿಎಸ್/ ಐಎಸ್/ ಇಸಿ/ ಪದವೀಧರ ಅರ್ಜಿ ಸಲ್ಲಿಸಬಹುದು. ಸಿಎಸ್‌ನಲ್ಲಿ ಎಂಸಿಸಿ/ ಎಂಎಸ್‌ಸಿ ಮಾಡಿದವರು ಅರ್ಜಿ ಸಲ್ಲಿಸಬಹುದು.

ಐಡಿಬಿಐ ನೇಮಕಾತಿ 2022: 226 ಸ್ಪೆಷಲ್ ಕೇಡರ್ ಅಧಿಕಾರಿ ಹುದ್ದೆಗಳಿವೆ ಐಡಿಬಿಐ ನೇಮಕಾತಿ 2022: 226 ಸ್ಪೆಷಲ್ ಕೇಡರ್ ಅಧಿಕಾರಿ ಹುದ್ದೆಗಳಿವೆ

ಸಿಸ್ಟಮ್ ಆಡ್ಮಿನಿಸ್ಟ್ರೇಟರ್ ಹುದ್ದೆಗೆ ಸಿಎಸ್/ ಎಲೆಕ್ಟ್ರಾನಿಕ್ಸ್‌ನಲ್ಲಿ ಡಿಪ್ಲೊಮಾ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಬಿಎಸ್‌ಸಿ ಇನ್ ಸಿಎಸ್, ಬಿಸಿಎ, ಬಿಇ ಅಥವ ಬಿಟೆಕ್ ಪದವಿ ಪಡೆದವರು ಅರ್ಜಿ ಹಾಕಬಹುದು. ಸಿಎಸ್/ ಐಎಸ್/ಇಸಿ, ಸಿಎಸ್‌ನಲ್ಲಿ ಎಂಸಿಎ/ ಎಂಎಸ್ಸಿ ಪದವಿ ಪಡೆದವರು ಅರ್ಜಿ ಹಾಕಬಹುದು.

ಎಸ್‌ಬಿಐ ನೇಮಕಾತಿ; ಬೆಂಗಳೂರಲ್ಲಿ 23 ಹುದ್ದೆಗೆ ಅರ್ಜಿ ಹಾಕಿ ಎಸ್‌ಬಿಐ ನೇಮಕಾತಿ; ಬೆಂಗಳೂರಲ್ಲಿ 23 ಹುದ್ದೆಗೆ ಅರ್ಜಿ ಹಾಕಿ

ಸೀನಿಯರ್ ಸಾಫ್ಟ್‌ವೇರ್ ಇಂಜಿನಿಯರ್ ಹುದ್ದೆಗೆ ಸಿಎಸ್‌ನಲ್ಲಿ ಬಿಇ/ ಬಿಟೆಕ್ ಪದವಿ ಪಡೆದವರು, ಸಿಎಸ್/ ಐಎಸ್/ ಇಸಿ, ಎಂಸಿಎ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು.

ಸಿಸ್ಟಮ್ ಆಡ್ಮಿನಿಸ್ಟ್ರೇಟರ್; ಹುದ್ದೆಗೆ ಅರ್ಜಿ ಸಲ್ಲಿಸುವವರು ಇನ್‌ಸ್ಟಾಲೇಷನ್, ಕಾನ್‌ಫಿಗರೇಷನ್, ವಿಂಡೋಸ್ ಮತ್ತು ಲೈನೆಕ್ಸ್‌ ನಿರ್ವಹಣೆ ಬಗ್ಗೆ ತಿಳಿದಿರಬೇಕು. ಇ-ಮೇಲ್ ಕಾನ್‌ಫಿಗರೇಷನ್, ನಿರ್ವಹಣೆ ಬಗ್ಗೆ ಜ್ಞಾನ ಹೊಂದಿರಬೇಕು.

ಸೀನಿಯರ್ ಸಾಫ್ಟ್‌ವೇರ್ ಇಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಕನಿಷ್ಠ ಎರಡು ವರ್ಷದ ಅನುಭವ ಹೊಂದಿರಬೇಕು. ಬಿಎಂಟಿಸಿ ನೇಮಕಾತಿ ನಿಯಮಗಳ ಅನ್ವಯ ಅಭ್ಯರ್ಥಿಗಳಿಗೆ ವಯೋಮಿತಿ ನಿಗದಿ ಮಾಡಲಾಗಿದೆ.

ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅರ್ಹ ಅಭ್ಯರ್ಥಿಗಳು systemsupervisor@mybmtc.com ಇ-ಮೇಲ್ ವಿಳಾಸಕ್ಕೆ ಜುಲೈ 8ರೊಳಗೆ ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು.

ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್‌ಗೆ ಭೇಟಿ ನೀಡಬಹುದು.

ಕೊಡಗಿನಲ್ಲಿ ಕೆಲಸ ಖಾಲಿ ಇದೆ; ಕೊಡಗು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧೀನದಲ್ಲಿ ಹೊಸದಾಗಿ ಮಡಿಲು ಸರ್ಕಾರಿ ವಿಶೇಷ ದತ್ತು ಸಂಸ್ಥೆಯನ್ನು ಪ್ರಾರಂಭಿಸಲಾಗಿದೆ. ಈ ಸಂಸ್ಥೆಯಲ್ಲಿ 0-6 ವರ್ಷದ ಅನಾಥ, ಪರಿತ್ಯಜಿಸಲ್ಪಟ್ಟ ಹಾಗೂ ಒಪ್ಪಿಸಲ್ಪಟ್ಟ ಪಾಲನೆ ಮತ್ತು ರಕ್ಷಣೆ ಅಗತ್ಯವಿರುವ ಮಕ್ಕಳಿದ್ದಾರೆ.

ಈ ಮಕ್ಕಳನ್ನು ಪೋಷಿಸಲು 4 ಆಯಾ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಸಿಬ್ಬಂದಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಜಿ ಕರೆಯಲಾಗಿದೆ. ಆಯ್ಕೆಯಾಗುವ ಸಿಬ್ಬಂದಿಗಳು ಹಗಲು, ರಾತ್ರಿ ಪಾಳಿ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು.

ಅರ್ಜಿ ಸಲ್ಲಿಸುವವರು ಹೆಚ್ಚಿನ ಮಾಹಿತಿಗಾಗಿ ಮಡಿಲು ಸರ್ಕಾರಿ ವಿಶೇಷ ದತ್ತು ಸಂಸ್ಥೆ ಕಾವೇರಿ ಲೇಔಟ್, ಮಡಿಕೇರಿ ಕೊಡಗು ಜಿಲ್ಲೆ ಇವರನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 08272-200450, 7019095397.

ವಾಯುಪಡೆಗೆ ಅರ್ಜಿ ಹಾಕಿ; ಭಾರತೀಯ ವಾಯುಪಡೆ ಅಗ್ನಿಪಥ್ ಯೋಜನೆಯಡಿಯಲ್ಲಿ ಅಗ್ನಿವೀರ್ ವಾಯು ಪ್ರವೇಶಕ್ಕೆ ಆಯ್ಕೆ ಪರೀಕ್ಷೆಗಾಗಿ ಅವಿವಾಹಿತ ಪುರುಷ ಅರ್ಹ ಅಭ್ಯರ್ಥಿಗಳಿಗೆ ಆನ್‍ಲೈನ್ ಮೂಲಕ ಅರ್ಜಿ ಕರೆದಿದೆ.

ಅರ್ಜಿ ಸಲ್ಲಿಸುವವರು ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ. 50 ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು/ ಡಿಪ್ಲೊಮಾ ವಿಭಾಗದ ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಆಟೋಮೊಬೈಲ್, ಕಂಪ್ಯೂಟರ್ ಸೈನ್ಸ್,ಇನ್ಟ್ಸ್ರುಮೆಂಟ್ ಟೆಕ್ನಾಲಜಿ, ಇನ್‍ಫಾರ್ಮೇಷನ್ ಟೆಕ್ನಾಲಜಿಯಲ್ಲಿ ಶೇ.50 ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.

2 ವರ್ಷದ ವೃತ್ತಿಪರ ಕೋರ್ಸ್‌ಗಳಲ್ಲಿ ಭೌತಶಾಸ್ತ್ರ ಮತ್ತು ಗಣಿತ ವಿಷಯಗಳನ್ನು ವ್ಯಾಸಂಗ ಮಾಡಿ ಶೇ.50 ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು ಅಥವಾ ಯಾವುದೇ ಪಿಯುಸಿ ವಿಭಾಗದಲ್ಲಿ ಶೇ.50 ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.

ವಯೋಮಿತಿ 17.5 ರಿಂದ 23 ವರ್ಷಗಳು ಅಂದರೆ ಅಭ್ಯರ್ಥಿಯು 29 ಡಿಸೆಂಬರ್ 1999 ರಿಂದ 29 ಜೂನ್ 2005 ನಡುವೆ ಜನಿಸಿರಬೇಕು. ಅರ್ಜಿ ಶುಲ್ಕ 250 ರೂ.ಗಳು. ಆಸಕ್ತ ಅಭ್ಯರ್ಥಿಗಳು ಸಂಪೂರ್ಣ ವಿವರಗಳಿಗೆ ವೆಬ್‍ಸೈಟ್ https://indianairforce.nic.in ಭೇಟಿ ನೀಡಬಹುದು.

ಆನ್‍ಲೈನ್ ಮೂಲಕ ಅರ್ಜಿಯನ್ನು https://agnipathvayu.cdac.in ವೆಬ್ ಸೈಟ್‌ಗೆ ಭೇಟಿ ನೀಡಬಹುದು. ಅರ್ಜಿ ಸಲ್ಲಿಸಲು ಜುಲೈ 5 ಕೊನೆಯ ದಿನವಾಗಿದೆ.

Recommended Video

   ಟೀಂ ಇಂಡಿಯಾ ನಾಯಕನಾಗಿದ್ದಕ್ಕೆ ರನ್ ಹೊಳೆ ಹರಿಸಿದ ಬುಮ್ರಾ | OneIndia Kannada
   English summary
   Bangalore Metropolitan Transport Corporation (BMTC) invited applications for various post. Candidates can apply before July 8th.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X