ಬೆಂಗಳೂರು; ರಿಸರ್ಚ್ ಅಸೋಸಿಯೇಟ್ ಹುದ್ದೆಗೆ ಅರ್ಜಿ ಹಾಕಿ
ಬೆಂಗಳೂರು, ಫೆಬ್ರವರಿ 24; ಸಂವಾದ ಬೆಂಗಳೂರು ರಿಸರ್ಚ್ ಅಸೋಸಿಯೇಟ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿಗಳನ್ನು ಸಲ್ಲಿಕೆ ಮಾಡಲು ಫೆಬ್ರವರಿ 28 ಕೊನೆಯ ದಿನವಾಗಿದೆ.
ಕಣಜ ಸೆಂಟರ್ ಫಾರ್ ಯೂತ್ ರಿಸರ್ಚ್ ರಿಸರ್ಚ್ ಅಸೋಸಿಯೇಟ್ ಹುದ್ದೆ ಭರ್ತಿ ಮಾಡುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ 35,000 ಪ್ರತಿ ತಿಂಗಳ ವೇತನ ನಿಗದಿ ಮಾಡಲಾಗಿದೆ.
ರಿಸರ್ಚ್ ಅಸೋಸಿಯೇಟ್ ಹುದ್ದೆಗೆ ಆಯ್ಕೆಯಾದವರು ಕಣಜ ಸೆಂಟರ್ ಫಾರ್ ಯೂತ್ ರಿಸರ್ಚ್ ಕೈಗೊಂಡ ಸಂಶೋಧನಾ ಅಧ್ಯಯನಗಳನ್ನು ಯೋಜಿಸಲು ಮತ್ತು ಪೂರ್ಣಗೊಳಿಸಲು ಸಹಾಯ ಮಾಡಬೇಕು.

ಕಣಜ ಕನ್ವೀನರ್, ಸಹ-ಸಂಚಾಲಕರು ಮತ್ತು ಹಲವು ಸಂಶೋಧನಾ ಯೋಜನೆಗಳಿಗಾಗಿ ರಚಿಸಲಾದ ವಿವಿಧ ಸಂಶೋಧನಾ ತಂಡಗಳೊಂದಿಗೆ ನಿಕಟವಾಗಿ ಕೆಲಸ ಮಾಡಬೇಕು. ಅಭ್ಯರ್ಥಿಗಳು ಕಣಜದ ಸಂಚಾಲಕರಿಗೆ ವರದಿ ಮಾಡಿಕೊಳ್ಳಬೇಕು.
ಆಯ್ಕೆಯಾದ ಅಭ್ಯರ್ಥಿಗಳು ಸಂಶೋಧನಾ ಯೋಜನೆಗಳ ರಚನೆ ಮತ್ತು ವಿನ್ಯಾಸಕ್ಕೆ ಸಹಾಯ ಮಾಡಬೇಕು. ಕಣಜ ನಿಧಿಯ ಪ್ರಸ್ತಾವನೆಗಳ ತಯಾರಿಕೆಯಲ್ಲಿ ಸಹಾಯ ಮಾಡಬೇಕಿದೆ. ಸಂಶೋಧನಾ ಯೋಜನೆಗಳಿಗೆ ಸ್ವತಂತ್ರವಾಗಿ ಸಂಪೂರ್ಣ ಸಾಹಿತ್ಯ ವಿಮರ್ಶೆಗಳನ್ನು ಪೂರ್ಣಗೊಳಿಸಬೇಕು.
ಸ್ವತಂತ್ರವಾಗಿ ಸಮೀಕ್ಷೆ, ಸಂದರ್ಶನ, ಮಾಹಿತಿ ಸಂಗ್ರಹ ಮಾಡಬೇಕು. ಕನ್ನಡದಿಂದ ಇಂಗ್ಲಿಶ್, ಇಂಗ್ಲಿಶ್‌ನಿಂದ ಕನ್ನಡಕ್ಕೆ ಭಾಷಾಂತರಗಳನ್ನು ಮಾಡಬೇಕು. ಸ್ವತಂತ್ರವಾಗಿ ಸಾಹಿತ್ಯದ ಸಂಪಾದಿನೆ, ತಿದ್ದುವಿಕೆ ಮಾಡಬೇಕು.
ವರದಿಗಳ ತಯಾರಿ ಮತ್ತು ಪ್ರಕಟಣೆಯಲ್ಲಿ ಸಹಾಯ ಮಾಡಬೇಕು. ಖಾತೆಗಳನ್ನು ನಿರ್ವಹಣೆ ಮತ್ತು ಸಂಶೋಧನೆಗೆ ತಗಲುವ ವೆಚ್ಚಗಳನ್ನು ನಿರ್ವಹಣೆ ಮಾಡಬೇಕು.
ಕಣಜಕ್ಕೆ ಆಡಳಿತಾತ್ಮಕ ಮತ್ತು ವ್ಯವಸ್ಥಾಪನಾ ಬೆಂಬಲ ನೀಡಬೇಕು. ಸಲಹೆಗಾರರು, ಅನುವಾದಕರು, ಪ್ರಕಾಶಕರು ಮತ್ತು ಸಂಶೋಧನಾ ತಂಡಗಳೊಂದಿಗೆ ಸಮನ್ವಯದಿಂದ ಕೆಲಸ ಮಾಡಬೇಕು.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಮಾಜ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ವಿಶ್ವವಿದ್ಯಾಲಯ/ ಎನ್‌ಜಿಓ/ ಸ್ವತಂತ್ರ ಸಂಸ್ಥೆಯಲ್ಲಿ 2 ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು.
ಅರ್ಜಿ ಸಲ್ಲಿಸುವವರು ಇಂಟರ್‌ನೆಟ್ ಮೂಲಕ ವಿಷಯ ಸಂಗ್ರಹಣೆ ಕೌಶಲ್ಯ ಹೊಂದಿರಬೇಕು. ಶೈಕ್ಷಣಿಕ ಬರವಣಿಗೆ ತಿಳಿದಿರಬೇಕು. ಇಂಗ್ಲಿಷ್ ಮತ್ತು ಕನ್ನಡದಲ್ಲಿ ಹಿಡಿತ ಹೊಂದಿರಬೇಕು. ಇಂಗ್ಲಿಷ್‌ನಿಂದ ಕನ್ನಡ ಮತ್ತು ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಿಸುವ ಸಾಮರ್ಥ್ಯ ಇರಬೇಕು.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಫೆಬ್ರವರಿ 28ರೊಳಗೆ ರೆಸ್ಯೂಮ್ ಅನ್ನು [email protected] ವಿಳಾಸಕ್ಕೆ ಕಳಿಸಬೇಕು.












Click it and Unblock the Notifications