ಶಿವಮೊಗ್ಗ; ಅತಿಥಿ ಉಪನ್ಯಾಸಕ ಹುದ್ದೆಗೆ ಅರ್ಜಿ ಆಹ್ವಾನ
ಶಿವಮೊಗ್ಗ, ಫೆಬ್ರವರಿ 22; ಶಿವಮೊಗ್ಗದಲ್ಲಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರಕ್ಕೆ ಅತಿಥಿ ಉಪನ್ಯಾಸಕರ (ಪಿಟಿಸಿ ಪ್ರಯೋಗಾಲಯ) ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹರು ಮಾರ್ಚ್ 22ರ ತನಕ ಅರ್ಜಿ ಸಲ್ಲಿಕೆ ಮಾಡಬಹುದು.
ಅರ್ಜಿ ಸಲ್ಲಿಸುವವರು ಬಿ.ಇ/ ಎಂ.ಟೆಕ್ (ಮೆಕ್ಯಾನಿಕಲ್ ಐ/ಪಿ) ಕೈಗಾರಿಕಾ ಕ್ಷೇತ್ರದಲ್ಲಿ ಎರಡು ವರ್ಷಗಳ ಕ್ಯಾಡ್ ಮತ್ತು ಕ್ಯಾಮ್‍ನಲ್ಲಿ ಅನುಭವ ಹೊಂದಿರಬೇಕು. ಅಭ್ಯರ್ಥಿಗಳ ವಯೋಮಿತಿ ಗರಿಷ್ಟ 32 ವರ್ಷಗಳು. ಈ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಪುನಃ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.
ಆಸಕ್ತರು ಮಾರ್ಚ್ 22ರ ತನಕ ಅರ್ಜಿ ಸಲ್ಲಿಸಲು ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಪ್ಲಾಟ್ ನಂಬರ್ ಸಿಎ 38, ನಿದಿಗೆ ಇಂಡಸ್ಟ್ರಿಯಲ್ ಏರಿಯಾ, ಮಾಚೇನಹಳ್ಳಿ, ಶಿವಮೊಗ್ಗ 577222 ಇವರನ್ನು ಸಂಪರ್ಕಿಸಬಹುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08182-246054.
ಆಶಾ ಕಾರ್ಯಕರ್ತರ ಹುದ್ದೆ; ಕೊಡಗು ಜಿಲ್ಲೆಯಲ್ಲಿ ವಿವಿಧ ಕಡೆಗಳಲ್ಲಿ ಖಾಲಿ ಇರುವ ಆಶಾ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 12 ಹುದ್ದೆಗಳು ಖಾಲಿ ಇವೆ, ಆಸಕ್ತರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಮಡಿಕೇರಿ ತಾಲ್ಲೂಕಿನ ಮೂರ್ನಾಡು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಮೂರ್ನಾಡು ಪಟ್ಟಣ, ಮೂರ್ನಾಡು ಪಿಎಚ್‍ಸಿ ವ್ಯಾಪ್ತಿಯ ಬೇತು, ಚೆಯ್ಯಂಡಾಣೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಬೇತು, ಮಡಿಕೇರಿ ನಗರದ ತ್ಯಾಗರಾಜ ಕಾಲೋನಿ, ವಿರಾಜಪೇಟೆ ತಾಲ್ಲೂಕಿನ ಕುಟ್ಟಂದಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ವಿ.ಬಾಡಗ, ಕಾನೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಬೆಸಗೂರು, ಬಿರುನಾಣಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ತೆರಾಲುವಿನಲ್ಲಿ ಹುದ್ದೆಗಳು ಖಾಲಿ ಇವೆ.
ಹೈಸೊಡ್ಲೂರು, ಬಿರುನಾಣಿ(ಎ), ಕಣ್ಣಂಗಾಲ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಹಚ್ಚಿನಾಡು, ಕಾರ್ಮಾಡು, ಸೋಮವಾರಪೇಟೆ ತಾಲ್ಲೂಕಿನ ಚೆಟ್ಟಳ್ಳಿ ಪಿಎಚ್‍ಸಿ ವ್ಯಾಪ್ತಿಯ ನೆಲ್ಯಹುದಿಕೇರಿ ಈ ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತರ ಹುದ್ದೆ ಖಾಲಿ ಇದೆ. ಒಟ್ಟಾರೆ ಜಿಲ್ಲೆಯಲ್ಲಿ 502 ಆಶಾ ಕಾರ್ಯಕರ್ತರ ಹುದ್ದೆಯಲ್ಲಿ 490 ಹುದ್ದೆಗಳು ಭರ್ತಿಯಾಗಿವೆ. 12 ಹುದ್ದೆಗಳು ಖಾಲಿ ಇವೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅದೇ ಗ್ರಾಮದ ನಿವಾಸಿಯಾಗಿರಬೇಕು. ಎಸ್‍ಎಸ್‍ಎಲ್‍ಸಿ ಪಾಸಾಗಿರಬೇಕು (ಗಿರಿಜನ ಬುಡಕಟ್ಟು ಸಮುದಾಯಕ್ಕೆ ಸೇರಿದ ಅಭ್ಯರ್ಥಿಗಳು ಕನಿಷ್ಟ 4ನೇ ತರಗತಿ ಉತ್ತೀರ್ಣರಾಗಿರಬೇಕು).
ಅಭ್ಯರ್ಥಿಗಳಿಗೆ 25 ರಿಂದ 45 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ. ವಿವಾಹಿತೆ ಅಥವಾ ವಿಧವೆ, ವಿಚ್ಚೇದಿತ ಮಹಿಳೆಯಾಗಿದ್ದು, ಜೀವಂತ ಇಬ್ಬರು ಮಕ್ಕಳನ್ನು ಹೊಂದಿರಬೇಕು. ಸಮುದಾಯದ ಕೆಳಮಟ್ಟದ ಸವಲತ್ತು ಹೊಂದಿರುವ ವಿಭಾಗದಿಂದ ಆಧ್ಯತೆಯ ಮೇರೆ ಆರಿಸಿಕೊಳ್ಳಬೇಕು.
ಅಭ್ಯರ್ಥಿಯು ಉತ್ತಮ ಸಂವಹನ ಕೌಶಲ್ಯ ಹೊಂದಿರಬೇಕು. ಆಯ್ಕೆ ಪ್ರಕ್ರಿಯೆಗಳನ್ನು ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ಸಲ್ಲಿಸಿ ನಂತರ ತಾಲ್ಲೂಕು ಆರೋಗ್ಯಾಧಿಕಾರಿಗಳು ಜಿಲ್ಲಾ ಆರೋಗ್ಯ ಸಂಘದ ಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳಬೇಕು.
ತರಬೇತಿ ಕಾರ್ಯಕ್ರಮ; ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ ವತಿಯಿಂದ 'ಸಂಕಲ್ಪ' ಯೋಜನೆ ಅಡಿಯಲ್ಲಿ ಪ್ರತಿಭಾನ್ವಿತರಿಗೆ ಕಿರು ಉದ್ಯಮ ಪ್ರಾರಂಭಿಸಲು ಅಗತ್ಯವಿರುವ ಸೂಕ್ತ ಮಾರ್ಗದರ್ಶನ ಹಾಗೂ ಉತ್ತೇಜನ ಕಾರ್ಯಕ್ರಮವನ್ನು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು ಮೈಸೂರಿನ ಸ್ಫೂರ್ತಿ ಪರ್ಫಾರ್ಮನ್ ಸಲ್ಯೂಷನ್ಸ್ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದೆ.
ಕಿರು ಉದ್ಯಮ ಪ್ರಾರಂಭಿಸಲು ತಳಮಟ್ಟದ ಕಿರು ಉದ್ಯಮಿಗಳಿಗೆ ವಿವಿಧ ಕೌಶಲ್ಯಗಳನ್ನು ಕಲಿಯಲು ಮತ್ತು ವ್ಯವಹಾರ ಜ್ಞಾನವನ್ನು ಪಡೆಯಲು ಸಹಾಯ ಮಾಡುವುದು ಸರ್ಕಾರದ ಈ ವಿನೂತನ ಕಾರ್ಯಕ್ರಮ ಉದ್ದೇಶವಾಗಿದೆ.
ಉದ್ಯಮಿಗಳಿಗೆ ಬೇಕಾಗುವ ಜ್ಞಾನ, ಕೌಶಲ್ಯ ಮತ್ತು ವ್ಯವಹಾರ ಜ್ಞಾನವನ್ನು ಪಡೆಯಲು ಅಗತ್ಯವಿರುವ ತರಬೇತಿ, ಮಾರ್ಗದರ್ಶನ ಮತ್ತು ಸಂಬಂಧಪಟ್ಟ ಸಂಸ್ಥೆಗಳಲ್ಲಿ ನೋಂದಣಿ ಮಾಡಿಸಲು ಬೇಕಾಗುವ ಸಲಹೆಗಳನ್ನು ಹಾಗೂ ಬೇರೆ ಬೇರೆ ಕ್ಷೇತ್ರಗಳಲ್ಲಿ ಅನುಭವವಿರುವ ಪರಿಣಿತರು ಮತ್ತು ಮಾರ್ಗದರ್ಶಕರು ಉಚಿತವಾಗಿ ಮಾರ್ಗದರ್ಶನ ನೀಡಲಾಗುತ್ತದೆ.
ಉದ್ಯಮಶೀಲತೆ ಕಾರ್ಯಕ್ರಮವು ತಳಮಟ್ಟದ ಕಿರು ಉದ್ಯಮಿಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಮತ್ತು ಮಹಿಳೆಯರಿಗೆ ವಿಶೇಷ ಗಮನವನ್ನು ನೀಡುವ ಕಾರ್ಯಕ್ರಮವಾಗಿದೆ. ಉದ್ಯಮಶೀಲತೆಯನ್ನು ಪ್ರಾರಂಭಿಸುವ ಪ್ರಕ್ರಿಯೆಯ ಪ್ರತಿಯೊಂದು ಹಂತದಲ್ಲೂ ಎದುರಾಗುವ ಹಲವಾರು ಸವಾಲುಗಳನ್ನು ಎದುರಿಸಲು ಸಹಾಯ ಮಾಡುತ್ತದೆ.
ಉದ್ಯಮ ಪ್ರಾರಂಭಿಸಲು ಯಾವುದೇ ರೀತಿಯ ಸಹಾಯಧನದನ್ನು ಕಾರ್ಯಕ್ರಮದಡಿ ನೀಡುವುದಿಲ್ಲ. ಕಾರ್ಯಕ್ರಮದಲ್ಲಿ ನೋಂದಣಿ ಮಾಡಿಕೊಂಡು ಭಾಗವಹಿಸಲು ಯಾವುದೇ ರೀತಿಯ ಶುಲ್ಕವಿರುವುದಿಲ್ಲ.
ಈ ಕಾರ್ಯಕ್ರಮಕ್ಕೆ ಹೆಸರು ನೋಂದಾಯಿಸಿಕೊಳ್ಳಲು ಹಾಗೂ ಹೆಚ್ಚಿನ ವಿವರಗಳಿಗೆ ಮೊಬೈಲ್ ಸಂಖ್ಯೆ 9741501631.












Click it and Unblock the Notifications