ಕೊಡಗು: ಅತಿಥಿ ಉಪನ್ಯಾಸಕ, ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ
ಮಡಿಕೇರಿ, ಮೇ 24: ಕೊಡಗು ಜಿಲ್ಲೆಯಲ್ಲಿ ಅತಿಥಿ ಉಪನ್ಯಾಸಕ, ಅತಿಥಿ ಶಿಕ್ಷಕ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಕೆ ಮಾಡಲು ಮೇ 30 ಕೊನೆಯ ದಿನವಾಗಿದೆ.
2024-25ನೇ ಸಾಲಿಗೆ ಕೊಡ್ಲಿಪೇಟೆ ಕ್ಯಾತೆ ಗ್ರಾಮದ ಡಾ. ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಗೆ ಅತಿಥಿ ಉಪನ್ಯಾಸಕರ ನೇಮಕಾತಿ ನಡೆಯುತ್ತಿದೆ. ಗಣಿತ (1), ರಸಾಯನಶಾಸ್ತ್ರ (1), ಜೀವಶಾಸ್ತ್ರ, ಭೌತಶಾಸ್ತ್ರ, ಕನ್ನಡ, ಆಂಗ್ಲ ಭಾಷೆ ಉಪನ್ಯಾಸಕರು (ತಲಾ 1), ಕನ್ನಡ ಶಿಕ್ಷಕರು (1), ಆಂಗ್ಲ ಭಾಷೆ ಶಿಕ್ಷಕರು(1), ಸಮಾಜ ವಿಜ್ಞಾನ ಶಿಕ್ಷಕರು (1), ವಿಜ್ಞಾನ ಶಿಕ್ಷಕರು (1), ಗಣಕಯಂತ್ರ ಶಿಕ್ಷಕರು(1), ಸ್ಟಾಪ್ ನರ್ಸ್ ಶಿಕ್ಷಕರು (1) ಹಾಗೂ ದೈಹಿಕ ಶಿಕ್ಷಣ ಶಿಕ್ಷಕರು (1) ಹುದ್ದೆಗಳು ಖಾಲಿ ಇವೆ.

ವಿರಾಜಪೇಟೆಯ ಪೆರುಂಬಾಡಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಗಣಕಯಂತ್ರ ಶಿಕ್ಷಕರು (01) ಮತ್ತು ಸ್ಟಾಪ್ ನರ್ಸ್ ಶಿಕ್ಷಕರು (1) ವಿಷಯಗಳಿಗೆ ಅನುಗುಣವಾಗಿ ಅತಿಥಿ ಉಪನ್ಯಾಸಕರು ಮತ್ತು ಅತಿಥಿ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಅರ್ಜಿ ಸಲ್ಲಿಸಲು ಮೇ 30 ಕೊನೆಯ ದಿನವಾಗಿದೆ. ಅರ್ಹ ಅಭ್ಯರ್ಥಿಗಳು ಕಡೆಯ ದಿನಾಂಕದೊಳಗೆ ಜಿಲ್ಲಾ ಕಚೇರಿಗೆ ಅಥವಾ ಸಂಬಂಧಪಟ್ಟ ಶಾಲೆಗಳಿಗೆ ಅರ್ಜಿ ಸಲ್ಲಿಸಬಹುದು.
ಉಪನ್ಯಾಸಕರ ಮತ್ತು ಶಿಕ್ಷಕರ ಹುದ್ದೆಗೆ ವಿದ್ಯಾರ್ಹತೆ ಎಂಎಸ್ಸಿ ಮತ್ತು ಬಿ.ಎಡ್ ಆಗಿರಬೇಕು. ಗಣಕಯಂತ್ರ ಶಿಕ್ಷಕರಿಗೆ ಬಿಸಿಎ ಆಗಿರಬೇಕು. ಸ್ಟಾಫ್ ನರ್ಸ್‍ಗೆ ಜಿಎನ್‍ಎಂ ಆಗಿರಬೇಕು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಿಗೆ ಬಿಪಿಎಡ್ ಆಗಿರಬೇಕು.
ಆಸಕ್ತರು ಹೆಚ್ಚಿನ ಮಾಹಿತಿಗೆ ಜಿಲ್ಲಾ ಅಧಿಕಾರಿಗಳ ಕಚೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮೌಲಾನಾ ಆಜಾದ್ ಭವನ, ಎಫ್‍ಎಂಸಿ ಕಾಲೇಜು ಹತ್ತಿರ, ಮಡಿಕೇರಿ ಇವರನ್ನು ದೂರವಾಣಿ ಸಂಖ್ಯೆ 08272-225528 ಸಂಪರ್ಕಿಸಬಹುದು.
ಪ್ರಾಂಶುಪಾಲರು, ಡಾ. ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆ, ಕ್ಯಾತೆ ಗ್ರಾಮ ಕೊಡ್ಲಿಪೇಟೆ ದೂರವಾಣಿ ಸಂಖ್ಯೆ 7676473767 ಹಾಗೂ ಪ್ರಾಂಶುಪಾಲರು, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಪೆರುಂಬಾಡಿ, ವಿರಾಜಪೇಟೆ ದೂರವಾಣಿ ಸಂಖ್ಯೆ 9741209826 ಅನ್ನು ಸಂಪರ್ಕಿಸಬಹುದು.
ಉಚಿತ ಡಿಟಿಪಿ/ ಗ್ರಾಫಿಕ್ ಡಿಸೈನಿಂಗ್ ತರಬೇತಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್‍ನ ಸಹಯೋಗದಲ್ಲಿ ನಡೆಸುತ್ತಿರುವ ರುಡ್‍ಸೆಟ್ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿರುವ ಕಂಪ್ಯೂಟರ್ ಡಿಟಿಪಿ/ ಗ್ರಾಫಿಕ್ ಡಿಸೈನಿಂಗ್ ಕುರಿತ 45 ದಿನಗಳ ಉಚಿತ ತರಬೇತಿಗೆ ಅರ್ಜಿ ಕರೆಯಲಾಗಿದೆ.
ತರಬೇತಿಯನ್ನು ಜುಲೈ 10ರಿಂದ ಆಯೋಜಿಸಲಾಗಿದ್ದು, ಗ್ರಾಮೀಣ ಭಾಗದ ಆಸಕ್ತ ನಿರುದ್ಯೋಗಿ ಯುವಕ/ ಯುವತಿಯರು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತರು 18 ರಿಂದ 45 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾಷೆಯೊಂದಿಗೆ ಆಂಗ್ಲ ಭಾಷೆಯನ್ನು ಸಹ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಅಭ್ಯರ್ಥಿಗಳು ಆಧಾರ್ ಕಾರ್ಡ್ ಅನ್ನು ಹೊಂದಿರಬೇಕು ಹಾಗೂ ಬಿಪಿಎಲ್ ಕಾರ್ಡ್ ಅನ್ನು ಹೊಂದಿರುವ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ತರಬೇತಿಯು ಕಡ್ಡಾಯವಾಗಿ ವಸತಿಯುತವಾಗಿದ್ದು, ತರಬೇತಿಯ ಅವಧಿಯಲ್ಲಿ ಉಚಿತವಾಗಿ ಊಟ ಮತ್ತು ವಸತಿ ನೀಡಲಾಗುವುದು ಹಾಗೂ ತರಬೇತಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರವನ್ನು ವಿತರಿಸಲಾಗುವುದು.
ಅರ್ಜಿ ಸಲ್ಲಿಸಲು ಜೂನ್ 15 ಕೊನೆಯ ದಿನವಾಗಿದೆ. ಆಸಕ್ತರು ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ರುಡ್‍ಸೆಟ್ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರನ್ನು ಸಂಪರ್ಕಿಸಬಹುದು. ಮೊಬೈಲ್ ಸಂಖ್ಯೆ 9740982585.












Click it and Unblock the Notifications