ಬಿಬಿಎಂಪಿ; 165 ವಾರ್ಡ್‌ ವ್ಯಾಪ್ತಿಯಲ್ಲಿ ಕೆಲಸ ಖಾಲಿ ಇದೆ

ಬೆಂಗಳೂರು, ಅಕ್ಟೋಬರ್ 21; ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ನಗರ ಪುನರ್ವಸತಿ ಯೋಜನೆಯಡಿ ತಾಲ್ಲೂಕು ಮಟ್ಟದಲ್ಲಿ ನಗರ ಪುನರ್ವಸತಿ ಕಾರ್ಯಕರ್ತರು ಹುದ್ದೆಗಳಿಗೆ ಗೌರವಧನದ ಆಧಾರದ ಮೇಲೆ ನೇಮಕ ಮಾಡಲು ಅರ್ಹ ವಿಕಲಚೇತನರಿಂದ ಅರ್ಜಿ ಆಹ್ವಾನಿಸಲಾಗಿದೆ.

ಬೆಂಗಳೂರು ನಗರ ಜಿಲ್ಲೆಯ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ 8 ವಲಯಗಳ 198 ವಾರ್ಡ್‌ಗಳ ಪೈಕಿ ಖಾಲಿ ಇರುವ 165 ವಾರ್ಡ್‌ಗಳಲ್ಲಿ ನಗರ ಪುನರ್ವಸತಿ ಕಾರ್ಯಕರ್ತರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

Apply For Disabled Rehabilitation Activist Post At BBMP Limits

ಅರ್ಜಿಗಳನ್ನು ಸಲ್ಲಿಕೆ ಮಾಡುವ ಅಭ್ಯರ್ಥಿಗಳು ಶೇ 40ಕ್ಕಿಂತ ಹೆಚ್ಚು ಅಂಗವಿಕಲತೆಯನ್ನು ಹೊಂದಿರಬೇಕು. ಸ್ಥಳೀಯ ವಾರ್ಡ್ ವ್ಯಾಪ್ತಿಯಲ್ಲಿ ವಾಸಿಸುತ್ತಿರಬೇಕು. ವಯೋಮಿತಿ 18 ರಿಂದ 45, ವಿಕಲಚೇತನರ ಮಹಿಳೆಯರಿಗೆ ಆದತ್ಯೆ ನೀಡಲಾಗುವುದು.

ಆಸಕ್ತ ವಿಕಲಚೇತನರು ನಿಗದಿತ ಅರ್ಜಿ ನಮೂನೆಯನ್ನು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಛೇರಿ, ಸುಧಾರಣಾ ಸಂಸ್ಥೆಗಳ ಸಂಕೀರ್ಣ, ಹೊಸೂರು ರಸ್ತೆ, ಬೆಂಗಳೂರು ನಗರ ಜಿಲ್ಲೆ ಇಲ್ಲಿ ಪಡೆದುಕೊಂಡು ಅಕ್ಟೋಬರ್ 31ರೊಳಗಾಗಿ ಅರ್ಜಿಗಳನ್ನು ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆಗಳು 080-29752324.

ಬಳ್ಳಾರಿಯಲ್ಲಿ ಕೆಲಸ ಖಾಲಿ ಇದೆ; ಬಳ್ಳಾರಿ ನಿರ್ಮಿತಿ ಕೇಂದ್ರ ಗುತ್ತಿಗೆ ಆಧಾರದಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಅಭ್ಯರ್ಥಿಗಳನ್ನು 1 ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ.

ಯೋಜನಾ ವ್ಯವಸ್ಥಾಪಕರು 1 ಹುದ್ದೆಗೆ ಎಂಟೆಕ್ ಸಿವಿಲ್ ಆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 5 ವರ್ಷ ಕಾಮಗಾರಿ ಹಾಗೂ ಆಡಳಿತ ನಿರ್ವಹಣೆ ಜ್ಞಾನ, ಎಂಎಸ್ ಎಕ್ಸೆಲ್, ಅಂದಾಜು ಪಟ್ಟಿ & ಬಿಲ್ ತಯಾರಿ ಇತ್ತೀಚಿನ ಆಟೋ ಕ್ಯಾಡ್ ಜ್ಞಾನ ಹೊಂದಿರಬೇಕು.

ಯೋಜನಾ ಅಭಿಯಂತರ 5 ಹುದ್ದೆಗೆ ಬಿಇ ಸಿವಿಲ್ ಆದ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದು. 5 ವರ್ಷ (ಕನಿಷ್ಠ) ಕಾಮಗಾರಿ ಹಾಗೂ ಆಡಳಿತ ನಿರ್ವಹಣೆ ಜ್ಞಾನ, ಎಂಎಸ್ ಎಕ್ಸೆಲ್, ಅಂದಾಜು ಪಟ್ಟಿ & ಬಿಲ್ ತಯಾರಿ ಇತ್ತೀಚಿನ ಆಟೋ ಕ್ಯಾಡ್ ಜ್ಞಾನ ಹೊಂದಿರಬೇಕು.

ಆಸಕ್ತ ಮತ್ತು ಅರ್ಹರು ಅಕ್ಟೋಬರ್ 31ರ ಸಂಜೆ 5.30ರೊಳಗೆ ಬಳ್ಳಾರಿ ನಿರ್ಮಿತಿ ಕೇಂದ್ರದ [email protected] ಗೆ ಅರ್ಜಿಯನ್ನು ರೆಸ್ಯೂಮ್ ಮತ್ತು ಅನುಭವ ಪ್ರಮಾಣ ಪತ್ರದ ಜೊತೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9945494157.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+