• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಟೊಮ್ಯಾಟೋ ಬೆಳೆಗಾರರು ವಿಮಾ ನೋಂದಣಿಗೆ ಅರ್ಜಿ ಹಾಕಿ

|

ಬೆಂಗಳೂರು, ಜೂನ್ 25 : ತೋಟಗಾರಿಕೆ ಇಲಾಖೆ ವತಿಯಿಂದ 2020-21ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯಡಿ ಟೊಮ್ಯಾಟೋ ಬೆಳೆ ವಿಮೆ ನೋಂದಣಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ದೇವನಹಳ್ಳಿ ತಾಲೂಕಿನ ಕುಂದಾಣ ಹಾಗೂ ವಿಜಯಪುರ ಹೋಬಳಿ, ದೊಡ್ಡಬಳ್ಳಾಪುರ ತಾಲೂಕಿನ ಕಸಬಾ ಹಾಗೂ ತೂಬಗೆರೆ ಹೋಬಳಿ, ನೆಲಮಂಗಲ ತಾಲೂಕಿನ ಕಸಬಾ ಹೋಬಳಿ ಮತ್ತು ಹೊಸಕೋಟೆ ತಾಲೂಕಿನ ಅನುಗೊಂಡನಹಳ್ಳಿ, ಜಡಿಗೇನಹಳ್ಳಿ ಹಾಗೂ ನಂದಗುಡಿ ಹೋಬಳಿಯ ರೈತರು ಅರ್ಜಿ ಸಲ್ಲಿಸಬಹುದು.

ಮೊದಲು ನಮಗೆ ಭೂಮಿ ಕೊಡಿ- ಮಹಿಳಾ ರೈತ ವೇದಿಕೆಯಿಂದ ಹಕ್ಕೊತ್ತಾಯ

ಪ್ರತಿ ಹೆಕ್ಟೇರ್‌ಗೆ ವಿಮಾ ಮೊತ್ತ ರೂ.1,18,000ಗಳಾಗಿದೆ. ರೈತರು ಪಾವತಿಸಬೇಕಾಗಿರುವ ವಿಮಾ ಮೊತ್ತದ ಶೇಕಡ 5 ರಂತೆ ರೂ. 5,900/- ಗಳನ್ನು ಜುಲೈ 15 ರೊಳಗಾಗಿ ಪಾವತಿಸಬೇಕಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕೊರೊನಾ ಹೊಡೆತ: ವಿಮೆ, ಭವಿಷ್ಯ ನಿಧಿ, ಮಹಿಳೆಗೆ ಆರ್ಥಿಕ ಬಲ ತಂದ ಸರ್ಕಾರ

ವಿಮೆ ಮಾಡಿಸುವ ರೈತರು ನಿಗದಿತ ಅರ್ಜಿಯೊಂದಿಗೆ ಪಹಣಿ, ಬ್ಯಾಂಕ್ ಖಾತೆ ಪುಸ್ತಕ, ಆಧಾರ್ ನಕಲು ಪ್ರತಿಗಳನ್ನು ಮತ್ತು ಸ್ವಯಂ ಘೋಷಿತ ಬೆಳೆ ವಿವರಗಳನ್ನು ಲಗತ್ತಿಸಿ ಆಯಾ ತಾಲೂಕಿನ ಯಾವುದಾದರೂ ರಾಷ್ಟ್ರೀಯ ಅಧಿಕೃತ ಬ್ಯಾಂಕ್‍ಗಳಲ್ಲಿ (ಖಾತೆ ಹೊಂದಿರುವ ಬ್ಯಾಂಕ್) ನೋಂದಾಯಿಸಬಹುದಾಗಿದೆ.

ಮೋದಿ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ

ಟೊಮ್ಯಾಟೋ ಬೆಳೆ ಸಾಲ ಪಡೆದಿರುವ ರೈತರು ಬೆಳೆ ವಿಮೆ ಯೋಜನೆಯಡಿ ನೋಂದಣಿ ಮಾಡಿಕೊಳ್ಳಲು ಇಚ್ಛಿಸದಿದ್ದಲ್ಲಿ ನೋಂದಣಿಯ ಕೊನೆಯ ದಿನಾಂಕವಾದ 15-07-2020ರ 7 ದಿನಗಳ ಮುಂಚಿತವಾಗಿ ಸಾಲ ಪಡೆದ ಬ್ಯಾಂಕ್‌ನಲ್ಲಿ ನಿಗದಿತ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸುವುದು.

ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ತಾಲೂಕು ಮಟ್ಟದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಹಾಗೂ ತಾಂತ್ರಿಕ ಅಧಿಕಾರಿಗಳನ್ನು ಸಂಪರ್ಕಿಸಬಹುದು.

ದೇವನಹಳ್ಳಿ ತಾಲೂಕು 9448001644, ತಾಂತ್ರಿಕ ಸಹಾಯಕರು 9886736664, ದೊಡ್ಡಬಳ್ಳಾಪುರ ತಾಲೂಕು 9632410677, ತಾಂತ್ರಿಕ ಸಹಾಯಕರು 9741895988.

ಹೊಸಕೋಟೆ ತಾಲೂಕು 9538953949, ತಾಂತ್ರಿಕ ಸಹಾಯಕರು 8453966868. ನೆಲಮಂಗಲ ತಾಲೂಕು 9901754339, ತಾಂತ್ರಿಕ ಸಹಾಯಕರು 9980276248.

English summary
Application invited form farmers to the 2020-21 Pradhan mantri fasal bima yojana. Tomato growers can submit application in nationalised banks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X