ಗದಗ ಮೃಗಾಲಯದಲ್ಲಿ ಹುದ್ದೆಗೆ ಅರ್ಜಿ ಆಹ್ವಾನ
ಗದಗ, ಜೂ. 9: ಗದಗ ಮೃಗಾಲಯದಲ್ಲಿ ಜೀವಶಾಸ್ತ್ರಜ್ಞ (Biologist) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ಸರ್ಕಾರದ ಭಾಗವಾದ ಈ ಸಂಸ್ಥೆಯಲ್ಲಿ ಕೆಲಸ ಮಾಡಲು ಇಚ್ಚಿಸುವವರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಯು ಗುತ್ತಿಗೆ ಆಧಾರದ ಮೇಲೆ ಇರುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಸಂಸ್ಥೆಯ ಹೆಸರು: ಗದಗ ಮೃಗಾಲಯ
ಹುದ್ದೆಯ ಹೆಸರು: ಜೀವಶಾಸ್ತ್ರಜ್ಞ/ ಶಿಕ್ಷಣಾಧಿಕಾರಿ
ಉದ್ಯೋಗದ ಸ್ಥಳ: ಗದಗ
ಸಂಬಳ: 17,500 ತಿಂಗಳಿಗೆ
ವಯೋಮಿತಿ: 28 ವರ್ಷ ಮೀರಿರಬಾರದು
ಕೆಲಸದ ಅವಧಿ: ಆರು ತಿಂಗಳು
ಶಿಕ್ಷಣಾರ್ಹತೆ: ಬಿಎಸ್‌ಸಿ/ ಎಂಎಸ್‌ಸಿ ಅರಣ್ಯ, ವೈಲ್ಡ್‌ಲೈಫ್ ಮ್ಯಾನೇಜ್‌ಮೆಂಟ್, ಪ್ರಾಣಿಶಾಸ್ತ್ರ, ವೈಲ್ಡ್‌ಲೈಫ್ ಜೀವಶಾಸ್ತ್ರ ಪೂರೈಸಿರಬೇಕು

ಗದಗ ಮೃಗಾಲಯದಲ್ಲಿ ಜೀವಶಾಸ್ತ್ರಜ್ಞ ಹುದ್ದೆಗೆ ಅನುಭವ ಇರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಜೂ. 17ರಂದು ಬೆಳಗ್ಗೆ 11 ಗಂಟೆಗೆ ಕಾರ್ಯನಿರ್ವಹಕ ನಿರ್ದೇಶಕರು ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ, ಗದಗ ವಿಭಾಗ ಗದಗ ಇಲ್ಲಿಗೆ ತಮ್ಮ ಮೂಲ ದಾಖಲಾತಿಗಳು ಸೇರಿದಂತೆ ಒಂದು ಜೊತೆ ನಕಲು ಪ್ರತಿಯೊಂದಿಗೆ ಸಂದರ್ಶನಕ್ಕೆ ಹಾಜರಾಗಬುದು ಎಂದು ಪ್ರಕಟಣೆ ತಿಳಿಸಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications