Anganawadi Recruitment: ಈ ಜಿಲ್ಲೆಯಾದ್ಯಂತ ಸರ್ಕಾರಿ ಉದ್ಯೋಗಗಳು ಖಾಲಿ ಇವೆ
ಚಿಕ್ಕಮಗಳೂರು, ಸೆಪ್ಟಂಬರ್ 15: ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಕಲಿತು ಉದ್ಯೋಗ ಮಾಡುವ ಮನಸ್ಸು ಇದ್ದು, ಅದು ಸಾಧ್ಯವಾಗದ ಮಹಿಳೆಯರಿಗೆ ಇಲ್ಲೊಂದು ಉದ್ಯೋಗವಕಾಶ ಸಿಕ್ಕಿದೆ. ಹೌದು ಚಿಕ್ಕಮಗಳೂರಿನ ಗೃಹಿಣಿಯರಿಗೆ ಸರ್ಕಾರಿ ಉದ್ಯೋಗ ಮಾಡುವ ಅವಕಾಶ ದೊರೆತಿದೆ. ಹಾಗಾದರೆ ನೀವು ಮೊದಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಚಿಕ್ಕಮಗಳೂರು ನಡೆಸಲಿರುವ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕಿದೆ.
ಚಿಕ್ಕಮಗಳೂರಿನಲ್ಲಿ ಅಂಗನವಾಡಿ ಕಾರ್ಯಕರ್ತತೆಯರು ಹಾಗೂ ಸಹಾಯಕಿಯರ ಹುದ್ದೆಗೆ ಇಲಾಖೆಯು ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಈ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಅನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮಹಿಳಾ ಅಭ್ಯರ್ಥಿಗಳು ಅಕ್ಟೋಬರ್ 12ರೊಳಗೆ ಅರ್ಜಿ ಸಲ್ಲಿಸಬೇಕು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯಲ್ಲಿನ ಎಲ್ಲ ಅಂಗನವಾಡಿ ಕೇಂದ್ರಗಳಿಗೆ ಈ ನೇಮಕಾತಿ ನಡೆಯುತ್ತಿದೆ. ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಬೇಕು. ಹಾಗಾದರೆ ಅನ್‌ಲೈನ್ ಅರ್ಜಿ ಸಲ್ಲಿಕೆ ಹೇಗೆ, ಮಾಸಿಕ ವೇತನ, ಪೋಸ್ಟಿಂಗ್, ಇನ್ನಿತರ ಮಾಹಿತಿ ಇಲ್ಲಿದೆ.
ಅಂಗನವಾಡಿ ನೇಮಕಾತಿ ಪೂರ್ಣ ಮಾಹಿತಿ
ನೇಮಕಾತಿ ಸಂಸ್ಥೆ ಹೆಸರು: ಮಹಿಳಾ ಮತ್ತು ಮಕ್ಕಳ ಇಲಾಖೆ, ಚಿಕ್ಕಮಗಳೂರು
ಹುದ್ದೆ ಹೆಸರು: ಸಹಾಯಕಿ ಮತ್ತು ಕಾರ್ಯಕರ್ತೆಯರು
ಎಷ್ಟು ಹುದ್ದೆಗಳು: ಅನೇಕ ಹುದ್ದೆಗಳು
ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್
ಮಾಸಿಕ ವೇತನ : ನಿಯಮಾನುಸಾರ ವೇತನ
ಅರ್ಜಿ ಸಲ್ಲಿಕೆ ಕೊನೆ ದಿನಾಂಕ: ಅಕ್ಟೋಬರ್ 12
ಪೋಸ್ಟಿಂಗ್ ಸ್ಥಳ: ಚಿಕ್ಕಮಗಳೂರು

ವಿದ್ಯಾರ್ಹತೆ ಏನಿರಬೇಕು?
ಜಿಲ್ಲೆ ವ್ಯಾಪ್ತಿಯಲ್ಲಿನ ಈ ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕಡ್ಡಾಯವಾಗಿ 10ನೇ ತರಗತಿಯಲ್ಲಿ ಉತ್ತೀರ್ಣವಾಗಿರಬೇಕು ಎಂದು ತಿಳಿಸಲಾಗಿದೆ.
ಅರ್ಜಿ ಸಲ್ಲಿಕೆ ಹೇಗೆ?
ಆಸಕ್ತ ಅಭ್ಯರ್ಥಿಗಳು ಸೂಕ್ತ ದಾಖಲೆಗಳ ಸಮೇತವಾಗಿ ಅರ್ಜಿಯನ್ನು ಇಲ್ಲಿ ಕಾಣುವ ಅಧಿಕೃತ ವೆಬ್‌ಸೈಟ್ ಲಿಂಕ್ (https://karnemakaone.kar.nic.in/abcd/home.aspx) ಮೂಲಕ ನಿಗದಿತ ದಿನಾಂಕದೊಳಗಾಗಿ ಸಲ್ಲಿಸುವಂತೆ ಇಲಾಖೆಯ ನೇಮಕಾತಿ ಅಧಿಸೂಚನೆ ಮಾಹಿತಿ ನೀಡಿದೆ.
ಬೇಕಾದ ದಾಖಲಾತಿಗಳು ಏನೇನು?
ಚಿಕ್ಕಮಗಳೂರಿನ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ವೇಳೆ ಪೋಟೋ, ಆಧಾರ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಾಸಸ್ಥಳ ದೃಢೀಕರಣ ಪತ್ರ, SSLC ಅಂಕಪಟ್ಟಿ (ಸಹಾಯಕಿ ಹುದ್ದೆಗೆ), ಪಿಯುಸಿ ಅಂಕಪಟ್ಟಿ (ಟೀಚರ್ ಹುದ್ದೆಗೆ) ಬೇಕಾಗುತ್ತದೆ.
ಅಗತ್ಯ ವಿವರ ನಮೂದಿಸಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಭೇಟಿ ನೀಡಬೇಕು. ಇಲ್ಲವೇ ದೂರವಾಣಿ ಸಂಖ್ಯೆ 08262-295749ಗೆ ಸಂಪರ್ಕಿಸಿ.












Click it and Unblock the Notifications