ಏರ್ ಇಂಡಿಯಾದಲ್ಲಿ ಸೆಕ್ಯುರಿಟಿ ಏಜೆಂಟ್ ಹುದ್ದೆಗಳಿವೆ
ಏರ್ ಇಂಡಿಯಾ ಸಂಸ್ಥೆ ಸೆಕ್ಯುರಿಟಿ ಏಜೆಂಟ್ ನೇಮಕಾತಿ 2016-17 ಗೆ ಸಂಬಂಧಿಸಿದಂತೆ ಪ್ರಕಟಣೆ ಹೊರಡಿಸಿದೆ. ಒಟ್ಟು 107 ಸೆಕ್ಯುರಿಟಿ ಏಜೆಂಟ್ ಹುದ್ದೆಗಳಿದ್ದು, ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗುತ್ತಿದೆ.
ಬೆಂಗಳೂರು, ಜನವರಿ 01: ಏರ್ ಇಂಡಿಯಾ ಸಂಸ್ಥೆ ಸೆಕ್ಯುರಿಟಿ ಏಜೆಂಟ್ ನೇಮಕಾತಿ 2016-17 ಗೆ ಸಂಬಂಧಿಸಿದಂತೆ ಪ್ರಕಟಣೆ ಹೊರಡಿಸಿದೆ. ಒಟ್ಟು 107 ಸೆಕ್ಯುರಿಟಿ ಏಜೆಂಟ್ ಹುದ್ದೆಗಳಿದ್ದು, ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗುತ್ತಿದೆ. ಇದಕ್ಕೆ ನೇರ ಸಂದರ್ಶನ ಜನವರಿ 5 ಹಾಗೂ 6 ರಂದು ನಡೆಯಲಿದೆ.
ಹುದ್ದೆಯ ಹೆಸರು: ಸೆಕ್ಯುರಿಟಿ ಎಜೆಂಟ್
ಅರ್ಹತೆ: ಯಾವುದೇ ಪದವಿ
ಕಾರ್ಯಕ್ಷೇತ್ರ: ಭಾರತದ ಎಲ್ಲ ರಾಜ್ಯಗಳು
ವೇತನ: ರು 14.610/- ತಿಂಗಳಿಗೆ
ಒಟ್ಟು ಹುದ್ದೆಗಳು: 107
ಕೊನೆ ದಿನಾಂಕ: 6 ಜನವರಿ 2017
ವಯೋಮಿತಿ: 18 ರಿಂದ 28 ವರ್ಷ ಒಳಗಿನ ವಯಸ್ಸಾಗಿರಬೇಕು.

ವಿದ್ಯಾರ್ಹತೆ: ಅಭ್ಯರ್ಥಿಯು ಯಾವುದೇ ವಿಶ್ವವಿದ್ಯಾಲಯದಲ್ಲಿ ಮೂರು ವರ್ಷದ ಅವಧಿಯಲ್ಲಿ ಪಡೆದ ಅರ್ಹತಾ ಪತ್ರ ಹೊಂದಿರಬೇಕು. ಎವಿಎಸ್ಇಸಿ ಮಾನ್ಯತೆ ಅಥವಾ ಸ್ಕ್ರೀನರ್ ಪ್ರಮಾಣ ಪತ್ರ ಹೊಂದಿರಬೇಕು.
ಆಯ್ಕೆ ಹೇಗೆ: ಅಭ್ಯರ್ಥಿಗಳ ಆಯ್ಕೆಯನ್ನು ನೇರ ಸಂದರ್ಶನದ ಮೂಲಕ ಮಾಡಲಾಗುತ್ತಿದ್ದು, ಜನವರಿ 5 ಹಾಗೂ 6 ರಂದು ಸಂದರ್ಶನ ನಡೆಯಲಿದೆ.
* ಭಾರತೀಯ ನಾಗರಿಕರಿಗೆ ಮಾತ್ರ ಅವಕಾಶ.
* ಅರ್ಹ ಅಭ್ಯರ್ಥಿಗಳು ಹಿಂದಿ, ಇಂಗ್ಲೀಷ್ ಅಲ್ಲದೆ ಸ್ಥಳೀಯ ಭಾಷೆಯನ್ನು ಬಲ್ಲವರಾಗಿರಬೇಕು.
ಅರ್ಜಿ ಸಲ್ಲಿಸುವುದು ಹೇಗೆ?: ವಾಕ್ ಇನ್ ಸಂದರ್ಶನಕ್ಕೆ ಬರುವ ಅಭ್ಯರ್ಥಿಗಳು ಅರ್ಜಿಯನ್ನು ಪಡೆದು ಅಗತ್ಯ ಮೂಲ ದಾಖಲೆಗಳೊಂದಿಗೆ ಸಂದರ್ಶನದ ಸಂದರ್ಭದಲ್ಲಿ ನೀಡಬೇಕು.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.
(ಒನ್ಇಂಡಿಯಾ ಸುದ್ದಿ)












Click it and Unblock the Notifications