ಏರ್ ಇಂಡಿಯಾದಲ್ಲಿ ಪೈಲಟ್ ಹುದ್ದೆಗಳಿಗೆ ವಾಕ್ ಇನ್ ಸಂದರ್ಶನ

Written By: Ramesh
Subscribe to Oneindia Kannada

ಬೆಂಗಳೂರು, ನವೆಂಬರ್ . 25 : ಏರ್ ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಇರುವ ಸಹಾಯಕ ಪೈಲಟ್ ಹಾಗೂ ಹಿರಿಯ ಟ್ರೈನಿ ಪೈಲಟ್ ಒಟ್ಟು 150 ಹುದ್ದೆಗಳಿಗೆ ವಾಕ್ ಇನ್ ಸಂದರ್ಶನವಿದ್ದು. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 14ರಂದು ನಡೆಯುವ ವಾಕ್ ಇನ್ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

ಈ ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಏರ್ ಇಂಡಿಯಾ ಇಂಡಿಯಾವು 5 ವರ್ಷದ ಅವಧಿಗಾಗಿ ಆಯ್ಕೆ ಮಾಡಿಕೊಳ್ಳಲಿದೆ.
ಹುದ್ದೆ: ಸಹಾಯಕ ಪೈಲಟ್ ಮತ್ತು ಹಿರಿಯ ಟ್ರೈನಿ ಪೈಲಟ್
ಒಟ್ಟು ಹುದ್ದೆಗಳು: 150
ಸಂದರ್ಶನದ ಸ್ಥಳಕ್ಕೆ: ಇಲ್ಲಿ ಕ್ಲಿಕ್ಕಿಸಿ
ಉದ್ಯೋಗದ ಸ್ಥಳ: ಭಾರತದಾದ್ಯಂತ [ಏರ್ ಇಂಡಿಯಾದಲ್ಲಿ 345 ಭದ್ರತಾ ಸಿಬ್ಬಂದಿ ಹುದ್ದೆಗಳು]

Air India Limited Recruitment 2016-2017 Pilots (150 Posts)


ಸಹಾಯಕ ಮತ್ತು ಹಿರಿಯ ಟ್ರೈನಿ ಪೈಲಟ್ ಹುದ್ದೆಯ ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವಿವಿದ್ಯಾಲಯದಲ್ಲಿ 10+2 ತತ್ಸಮಾನ ಪರೀಕ್ಷೆಯಲ್ಲಿ ಪಾಸಾಗಿರಬೇಕು.

ಅರ್ಜಿ ಶುಲ್ಕ: ಅರ್ಜಿಯನ್ನು ಡೌನ್ ಲೋಡ್ ಮಾಡಿಕೊಂಡು ಭರ್ತಿ ಮಾಡಿ ದಾಖಲೆ ಸಮೇತ ಸಂದರ್ಶನಕ್ಕೆ ಬರುವಾಗ ತರತಕ್ಕದ್ದು. ಎಸ್ ಸಿ ಮತ್ತು ಎಸ್ ಸಿ ಅಭ್ಯರ್ಥಿಗಳಿಗೆ ಹೊರತು ಪಡಿಸಿ ಉಳಿದ ಅಭ್ಯರ್ಥಿಗಳು 300 ರುಗಳನ್ನು ಏರ್ ಇಂಡಿಯಾ ಲಿಮಿಟೆಡ್ ದೆಹಲಿ ಹೆಸರಲ್ಲಿ ಡಿಡಿ ತುಂಬ ಬೇಕು.

ಹಿರಿಯ ಟ್ರೈನಿ ಪೈಲಟ್ ಹುದ್ದೆಗೆ ವಯೋಮಿತಿ: ಸಾಮಾನ್ಯರಿಗೆ 35, ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ 50 ವರ್ಷ. ಓಬಿಸಿ ಅಭ್ಯರ್ಥಿಗಳಿಗೆ 48 ವರ್ಷ ನಿಗಧಿ.

ಸಹಾಯಕ ಪೈಲಟ್ ವಯೋಮಿತಿ: ಸಾಮಾನ್ಯ ವರ್ಗಕ್ಕೆ 35, ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ 40, ಓಬಿಸಿ ಅಭ್ಯರ್ಥಿಗಳಿಗೆ 38 ವರ್ಷವಿರಬೇಕು.

ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ಕಿಸಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Air India Limited invites applications from Indian Nationals for Pilots requirement of Co-Pilots having B-777 OR B-787 OR B-737 Endorsement With Line Experience on Type and Senior Trainee Pilots. The selection based on Walk in Selection. The Walk in will be held on 14th December 2016.
Please Wait while comments are loading...