ಏರ್ ಇಂಡಿಯಾದಲ್ಲಿ ಕ್ಯಾಬಿನ್ ಸಿಬ್ಬಂದಿ ಹುದ್ದೆಗಳಿಗೆ ಅರ್ಜಿ ಅಹ್ವಾನ

Written By: Ramesh
Subscribe to Oneindia Kannada

ಬೆಂಗಳೂರು, ನವೆಂಬರ್. 03 : ಏರ್ ಇಂಡಿಯಾ ಲಿಮಿಟೆಡ್ ನಲ್ಲಿ ಕ್ಯಾಬಿನ್ ಸಿಬ್ಬಂದಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 170 ಏರ್ ಪೋರ್ಟ್ ಕ್ಯಾಬಿನ್ ಸಿಬ್ಬಂದಿ ಹುದ್ದೆಗಳಿವೆ. ದಿನಾಂಕ 11-11-2016ರೊಳಗೆ ಆಸಕ್ತರು ಅರ್ಜಿ ಸಲ್ಲಿಸಬಹುದು.

ಆಸಕ್ತ ಅಭ್ಯರ್ಥಿಗಳುಭಾರತದ ಯಾವುದೇ ಏರ್ ಪೋರ್ಟ್ ಅಥವಾ ಕಚೇರಿಗಳಲ್ಲಿ ಕೆಲಸ ಮಾಡಲು ಸಿದ್ಧರಾಗಿರಬೇಕು. ಹಾಗೂ ಈ ಹುದ್ದೆಗಳಿಗೆ 5 ವರ್ಷಗಳ ಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳಲಾಗುವುದು ಎಂದು ಏರ್ ಇಂಡಿಯಾ ಲಿಮಿಟೆಡ್ ಪ್ರಕಟಣೆಯಲ್ಲಿ ತಿಳಿಸಿದೆ.

Air India Express Recruitment 2016 Cabin Crew 170 Vacancies

ಕೆಲಸ: ಕ್ಯಾಬಿನ್ ಸಿಬ್ಬಂದಿ
ಸ್ಥಳ: ಭಾರತದೆಲ್ಲೆಡೆ
ಒಟ್ಟು ಹುದ್ದೆಗಳು: 170
ಭಾಷೆ: ಇಂಗ್ಲೀಷ್ ಮತ್ತು ಹಿಂದಿ ಭಾಷೆಯಲ್ಲಿ ಬಲ್ಲವರಾಗಿರಬೇಕು.
ವೇತನ: ತರಬೇತಿಯಲ್ಲಿ 10,000 ತರಬೇತಿ ಮುಗಿದ ಬಳಿಕ 31880 ತಿಂಗಳಿಗೆ.
ವಿದ್ಯಾರ್ಹತೆ: 10th + 2(PUC) ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಪೂರ್ಣಾವಧಿಯಲ್ಲಿ ಮುಗಿಸಿರಬೇಕು.


ದೇಹದ ಅಳತೆ: ಪುರುಷರು 165 ಸೆ.ಮೀ, ಮಹಿಳೆಯರು 157.5 ಸೆ.ಮೀ.
ಕಣ್ಣಿನ ದೃಷ್ಠಿ: ಸಮೀಪ ದೃಷ್ಠಿ ಕನಿಷ್ಠ 5, ದೂರ ದೃಷ್ಠಿ ಕನಿಷ್ಠ 6 ಪಾಯಿಂಟ್ಸ್ ಗಳ ಒಳಗಿರಬೇಕು.
ಆಯ್ಕೆ ವಿಧಾನ: ವೈಯಕ್ತಿಕ ಸಂದರ್ಶನ, ಗ್ರೂಪ್ ಚರ್ಚೆ, ಮೆಡಿಕಲ್ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಶುಲ್ಕ: AIR INDIA CHARTERS LIMITED ಹೆಸರಿಗೆ 500 ರು ಡಿಮ್ಯಾಂಡ್ ಡ್ರಾಫ್ಟ್ ತೆಗೆಸಬೇಕು.ಎಸ್ಸಿ/ಎಸ್ಟಿ/ಅಭ್ಯರ್ಥಿಗೆ ಅರ್ಜಿ ಶುಲ್ಕ ಇಲ್ಲ.

ಸ್ವಹಸ್ತಾಕ್ಷರವುಳ್ಳ ಸಂಬಂಧಪಟ್ಟ ಸೂಕ್ತ ದಾಖಲೆಗಳ ಪ್ರತಿಗಳನ್ನು ಅರ್ಜಿ ಸಹಿತ ಕಳಿಸಬೇಕು. ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಎಲ್ಲಿಗೆ ಕಳಿಸಬೇಕು ಎಂಬ ವಿವರಗಳನ್ನು ಈ ಲಿಂಕ್ ನಲ್ಲಿ ಪಡೆದುಕೊಳ್ಳಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Air India limited invites application for the position of 170 Airport Cabin Crew vacancies. Apply before 11th November 2016.
Please Wait while comments are loading...