ಏರ್ ಇಂಡಿಯಾದಲ್ಲಿ ಸೆಕ್ಯುರಿಟಿ ಏಜೆಂಟ್ ಹುದ್ದೆಗೆ ಅರ್ಜಿ ಆಹ್ವಾನ

ಬೆಂಗಳೂರು, ಸೆಪ್ಟೆಂಬರ್ 12 : ಎಐಎಟಿಎಸ್‌ಎಲ್‌ 64 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 29 ಮತ್ತು 30 ರಂದು ವಾಕ್ ಇನ್ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ.

ಏರ್‌ಇಂಡಿಯಾ ಏರ್‌ ಟ್ರಾನ್ಸ್‌ಪೋರ್ಟ್‌ ಸವೀರ್ಸ್ ಲಿಮಿಟೆಡ್‌ (ಎಐಎಟಿಎಸ್‌ಎಲ್‌) ಸೆಕ್ಯೂರಿಟಿ ಏಜೆಂಟ್ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಡೌನ್‌ ಲೋಡ್ ಮಾಡಿಕೊಂಡು ನೇರ ಸಂದರ್ಶನಕ್ಕೆ ಹಾಜರಾಗಬಹುದು.

ಆಯ್ಕೆಯಾದ ಅಭ್ಯರ್ಥಿಗಳು ಗೋವಾದಲ್ಲಿ ಕೆಲಸ ಮಾಡಬೇಕು. ವೇತನ ಶ್ರೇಣಿ 18,360 ರೂ.ಗಳು ಪ್ರತಿ ತಿಂಗಳು. ಸಾಮಾನ್ಯ ವರ್ಗಕ್ಕೆ 45, ಓಬಿಸಿ 11, ಎಸ್‌ಸಿ 01, ಎಸ್‌ಟಿ 07 ಹುದ್ದೆಗಳಿವೆ.

ಯಾವುದೇ ಮಾನ್ಯತೆ ಪಡೆದ ಸಂಸ್ಥೆ ಅಥವ ವಿಶ್ವವಿದ್ಯಾಲಯದಿಂದ ಪದವಿ ಪಡೆದವರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಬೇಸಿಕ್ ಎವಿಎಸ್‌ಇಸಿ ಸರ್ಟಿಫಿಕೇಟ್‌ ಹೊಂದಿರುವುದು ಅಗತ್ಯ.

Air India Air Transport Services Limited recruitment notification

ವಮೋಯಿತಿ : ಸಾಮಾನ್ಯ ವರ್ಗದವರಿಗೆ 31 ವರ್ಷ, ಓಬಿಸಿ ವರ್ಗದವರಿಗೆ 34, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 36 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಏರ್ ಇಂಡಿಯಾ ಲಿಮಿಟೆಡ್ ಮುಂಬೈ ಹೆಸರಿನಲ್ಲಿ ಡಿಡಿಯನ್ನು ತೆಗೆದು ಶುಲ್ಕ ಪಾವತಿ ಮಾಡಬಹುದಾಗಿದೆ. 500 ರೂ. ಅರ್ಜಿ ಶುಲ್ಕ ನಿಗದಿ ಮಾಡಲಾಗಿದೆ. ಎಸ್‌ಸಿ/ಎಸ್‌ಟಿ/ನಿವೃತ್ತ ಯೋಧರಿಗೆ ಯಾವುದೇ ಶುಲ್ಕ ಇರುವುದಿಲ್ಲ.

ವಾಕ್ ಇನ್ ಸಂದರ್ಶನದ ವಿಳಾಸ : ಸೆ.29ರಂದು Air India Limited, Dempo House, Ground Floor, Campal, D.B. Marg, Panaji, Goa-403001

ಸೆಪ್ಟೆಂಬರ್ 30ರಂದು Don Bosco High School, M.G. Road, Near Muncipal Market, Panaji, Goa-403001

ಅರ್ಜಿಯನ್ನು ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+