ಇದೇ ವರ್ಷದೊಳಗೆ ಇತಿಹಾಸದ ಪುಟ ಸೇರಲಿದೆಯಂತೆ ಐಟಿ ಲೋಕದ ಈ ಜನಪ್ರಿಯ ಉದ್ಯೋಗ

ಇಂದಿನ ತಂತ್ರಜ್ಞಾನ ಲೋಕದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ದೊಡ್ಡ ಬಿರುಗಾಳಿ ಸೃಷ್ಟಿಸುತ್ತಿರುವುದು ಗೊತ್ತೇ ಇದೆ. ಕೋಡಿಂಗ್ ಬರೆಯುವುದು, ಬಗ್‌ಗಳನ್ನು ಫಿಕ್ಸ್ ಮಾಡುವುದು ಹಾಗೂ ಸ್ವತಂತ್ರವಾಗಿ ಆ್ಯಪ್‌ಗಳನ್ನು ನಿರ್ಮಿಸುವಲ್ಲಿ ಎಐ ಟೂಲ್‌ಗಳು ಸೈ ಎನಿಸಿಕೊಳ್ಳುತ್ತಿವೆ. ಈ ಬೆಳವಣಿಗೆಗಳ ಬೆನ್ನಲ್ಲೇ ಮುಂಬರುವ ದಿನಗಳಲ್ಲಿ ಸಾಫ್ಟ್‌ವೇರ್ ಇಂಜಿನಿಯರಿಂಗ್ ಕ್ಷೇತ್ರವು ಸಂಪೂರ್ಣವಾಗಿ ಬದಲಾಗಲಿದೆ ಎಂಬ ಆಘಾತಕಾರಿ ಭವಿಷ್ಯ ನುಡಿದಿದ್ದಾರೆ ಆಂಥ್ರೋಪಿಕ್ (Anthropic) ಕಂಪನಿಯ 'ಕ್ಲಾಡ್ ಕೋಡ್' ಸೃಷ್ಟಿಕರ್ತ ಬೋರಿಸ್ ಚೆರ್ನಿ.

ಮಾಧ್ಯಮ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, "ಇದೇ ವರ್ಷಾಂತ್ಯದ ವೇಳೆಗೆ 'ಸಾಫ್ಟ್‌ವೇರ್ ಇಂಜಿನಿಯರ್' ಎಂಬ ಹುದ್ದೆಗಳು ಮಾರುಕಟ್ಟೆಯಿಂದ ಮಾಯವಾಗಲು ಪ್ರಾರಂಭಿಸಬಹುದು ಎಂದು ಎಚ್ಚರಿಸಿದ್ದಾರೆ. ಆದರೆ ಇದು ಐಟಿ ಉದ್ಯೋಗಗಳ ಸಂಪೂರ್ಣ ಅಂತ್ಯವಲ್ಲ, ಬದಲಿಗೆ ಹೊಸ ರೂಪಾಂತರ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Software Engineer Jobs

ಇಂಜಿನಿಯರ್ ಸ್ಥಾನಕ್ಕೆ ಬರಲಿದ್ದಾರೆ 'ಬಿಲ್ಡರ್ಸ್'

ತಮ್ಮದೇ ಉದಾಹರಣೆ ನೀಡಿದ ಬೋರಿಸ್ ಚೆರ್ನಿ, "ನಾನು ಸ್ವತಃ ಕಳೆದ ಆರು ತಿಂಗಳಿಂದ ಒಂದು ಲೈನ್ ಕೋಡ್ ಕೂಡ ಬರೆದಿಲ್ಲ" ಎಂದಿದ್ದಾರೆ. ಏಕೆಂದರೆ ಅವರ ಬಹುತೇಕ ಕೋಡಿಂಗ್ ಕೆಲಸಗಳನ್ನು ಕ್ಲಾಡ್ ಎಐ ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಇನ್ಮುಂದೆ ಇಂಜಿನಿಯರ್‌ಗಳು ಮ್ಯಾನುಯಲ್ ಆಗಿ ಕೋಡ್ ಬರೆಯುವ ಬದಲು, ಎಐ ಸಿಸ್ಟಮ್‌ಗಳನ್ನು ಮುನ್ನಡೆಸುವ, ಪ್ಲಾನಿಂಗ್ ಮತ್ತು ಟೆಸ್ಟಿಂಗ್ ಮಾಡುವ ಕೆಲಸ ಮಾಡಲಿದ್ದಾರೆ. ಈ ಬದಲಾವಣೆಯಿಂದಾಗಿ ಸಾಫ್ಟ್‌ವೇರ್ ಇಂಜಿನಿಯರ್ ಎಂಬ ಪದದ ಬದಲು 'ಬಿಲ್ಡರ್' ಎಂಬ ಹೊಸ ನಾಮಕರಣ ಉದ್ಯಮದಲ್ಲಿ ಮುಂಚೂಣಿಗೆ ಬರಬಹುದು ಎಂದಿದ್ದಾರೆ.

ಕೋಡಿಂಗ್ ತಿಳಿಯದವರಿಗೂ ಸಾಫ್ಟ್‌ವೇರ್ ಅವಕಾಶ

ಎಐ ಟೂಲ್‌ಗಳ ನೆರವಿನಿಂದಾಗಿ ಈಗ ಕಂಪನಿಗಳಲ್ಲಿನ ಡಿಸೈನರ್‌ಗಳು, ಪ್ರಾಡಕ್ಟ್ ಮ್ಯಾನೇಜರ್‌ಗಳು ಕೂಡ ಸ್ವತಂತ್ರವಾಗಿ ಸಾಫ್ಟ್‌ವೇರ್ ಬಿಲ್ಡ್ ಮಾಡಿ ಮಾರುಕಟ್ಟೆಗೆ ಬಿಡುತ್ತಿದ್ದಾರೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ಸಾಫ್ಟ್‌ವೇರ್ ನಿರ್ಮಾಣದ ಪ್ರಕ್ರಿಯೆಯಲ್ಲಿ ಭಾಗಿಯಾಗುವ ಜನರ ಸಂಖ್ಯೆ 100 ಪಟ್ಟು ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ.

ಎಐ ಬಳಕೆಯಿಂದ ಉದ್ಯೋಗಿಗಳ ದಕ್ಷತೆ ಹೆಚ್ಚಾಗುವುದರಿಂದ, ಕೆಲವು ಕಂಪನಿಗಳಿಗೆ ಕಡಿಮೆ ಇಂಜಿನಿಯರ್‌ಗಳ ಅವಶ್ಯಕತೆ ಇರಲಿದ್ದು, ಉದ್ಯೋಗ ಕಡಿತದ ಭೀತಿ ಎದುರಾಗಬಹುದು. ತಂತ್ರಜ್ಞಾನದ ವೇಗ ಹೆಚ್ಚಾಗುವುದರಿಂದ ಕಂಪನಿಗಳು ಅತಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಪ್ರಾಡಕ್ಟ್‌ಗಳನ್ನು ಲಾಂಚ್ ಮಾಡಲು ಮುಂದಾಗುತ್ತವೆ. ಹೀಗಾಗಿ ಹೊಸ ಐಡಿಯಾಗಳನ್ನು ಅನುಷ್ಠಾನಗೊಳಿಸಲು ಹೆಚ್ಚಿನ ಜನರನ್ನು ನೇಮಿಸಿಕೊಳ್ಳುವ ಸಾಧ್ಯತೆಯೂ ಇದೆ.

ಕೋಡಿಂಗ್ ಕೆಲಸಗಳನ್ನು ಎಐ ಸುಲಭಗೊಳಿಸುತ್ತಿದ್ದರೂ, ಮಾನವನ ಬುದ್ಧಿಶಕ್ತಿಗೆ ಸದ್ಯಕ್ಕೆ ಪರ್ಯಾಯವಿಲ್ಲ ಎಂದು ಚೆರ್ನಿ ಒಪ್ಪಿಕೊಂಡಿದ್ದಾರೆ. ನಾಸಾದಂತಹ ಜಾಗತಿಕ ಸಂಸ್ಥೆಗಳು ಬಳಸುವ ಅತ್ಯಂತ ಸಂಕೀರ್ಣವಾದ ಉದ್ಯಮ ಕೋಡ್‌ಬೇಸ್‌ಗಳನ್ನು ನಿಭಾಯಿಸಲು ಎಐ ಇಂದಿಗೂ ಪರದಾಡುತ್ತಿದೆ. ಬ್ರೈನ್ ಸ್ಟಾರ್ಮಿಂಗ್, ತಾರ್ಕಿಕ ಚಿಂತನೆ ಹಾಗೂ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಗಳಲ್ಲಿ ಮನುಷ್ಯನ ಅಗತ್ಯ ಅತ್ಯಗತ್ಯವಾಗಿದೆ.

ಸ್ಟಾರ್ಟ್‌ಅಪ್‌ಗಳಿಗೆ ಇದು 'ಸುವರ್ಣ ಯುಗ'

ಹೊಸ ಉದ್ಯಮ ಹಾಗೂ ಸ್ಟಾರ್ಟ್‌ಅಪ್‌ಗಳನ್ನು ಆರಂಭಿಸಲು ಬಯಸುವ ಯುವ ಪೀಳಿಗೆಗೆ ಇದು ಅತ್ಯುತ್ತಮ ಸಮಯವಾಗಿದೆ. ಹಿಂದೆ ದೊಡ್ಡ ಟೀಮ್ ಹಾಗೂ ಕೋಟ್ಯಂತರ ರೂಪಾಯಿ ಬಂಡವಾಳದೊಂದಿಗೆ ಮಾಡಬೇಕಾಗಿದ್ದ ಕೆಲಸಗಳನ್ನು, ಇಂದು ಎಐ ಏಜೆಂಟ್‌ಗಳ ಸಹಾಯದಿಂದ ಅತ್ಯಂತ ಸಣ್ಣ ತಂಡಗಳು ಅತ್ಯಂತ ವೇಗವಾಗಿ ಮತ್ತು ದೊಡ್ಡ ಮಟ್ಟದಲ್ಲಿ ಮಾಡಿ ಮುಗಿಸುತ್ತಿವೆ. ಸಾಫ್ಟ್‌ವೇರ್ ಇಂಜಿನಿಯರಿಂಗ್ ಕ್ಷೇತ್ರವು ಮುಚ್ಚಿಹೋಗುತ್ತಿಲ್ಲ. ಬದಲಿಗೆ ಅದು ಮ್ಯಾನುಯಲ್ ಕೋಡಿಂಗ್ ಹಂತದಿಂದ ಮುಂದಿನ ತಲೆಮಾರಿನ ಎಐ ತಂತ್ರಜ್ಞಾನದತ್ತ ಹೆಜ್ಜೆ ಇಡುತ್ತಿದೆ. ಭವಿಷ್ಯದ ಮಾರುಕಟ್ಟೆಯಲ್ಲಿ ನೆಲೆನಿಲ್ಲಲು ಇಂಜಿನಿಯರ್‌ಗಳು ಕೇವಲ ಕೋಡಿಂಗ್ ಸ್ಕಿಲ್ಸ್ ನಂಬಿ ಕೂರದೆ, ಎಐ ಟೂಲ್‌ಗಳನ್ನು ಸ್ಮಾರ್ಟ್ ಆಗಿ ಬಳಸುವ ಕೌಶಲ್ಯ ಮೈಗೂಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+