ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Job News: ಅಮೆಜಾನ್ ಕಂಪನಿಯಲ್ಲಿ ನೇಮಕಾತಿಯೂ ವಿಳಂಬ!

|
Google Oneindia Kannada News

ನವದೆಹಲಿ, ಡಿಸೆಂಬರ್ 14: ಜಾಗತಿಕ ಆರ್ಥಿಕ ಹಿಂಜರಿತದ ನಡುವೆ ತಂತ್ರಜ್ಞಾನ ವಲಯದ ದೈತ್ಯ ಕಂಪನಿ ಎನಿಸಿರುವ ಅಮೆಜಾನ್ ಕೆಲವು ವಿಶ್ವವಿದ್ಯಾಲಯದ ಪದವೀಧರರ ಸೇರ್ಪಡೆ ದಿನಾಂಕವನ್ನು ವಿಳಂಬಗೊಳಿಸುತ್ತಿದೆ. ಅಮೆಜಾನ್ ಕಂಪನಿಯು 10,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದ ನಂತರದಲ್ಲಿ ಈ ಪ್ರಕ್ರಿಯೆ ನಡೆಯುತ್ತಿದೆ. ಮೇ ತಿಂಗಳಿನಲ್ಲಿಯೇ ಆರಂಭವಾಗಬೇಕಾಗಿದ್ದ ನೇಮಕಾತಿ ಪ್ರಕ್ರಿಯೆಯನ್ನು ವರ್ಷಾಂತ್ಯದವರೆಗೂ ವಿಸ್ತರಣೆ ಮಾಡಲಾಗಿದೆ.

ಸಾಮಾನ್ಯವಾಗಿ 2023ರ ಮೇ ತಿಂಗಳಿನಲ್ಲಿ ಹೊಸ ಉದ್ಯೋಗಿಗಳು ಕಂಪನಿಗೆ ಸೇರಿಕೊಳ್ಳುವುದಕ್ಕೆ ಸಮಯವನ್ನು ನಿಗದಿ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಕಂಪನಿಯು ಸ್ಥೂಲ ಆರ್ಥಿಕ ಪರಿಸರದಿಂದಾಗಿ ಹೊಸ ಉದ್ಯೋಗಿಗಳ ನೇಮಕ ಪ್ರಕ್ರಿಯೆ ಅನ್ನು ಮೇ ತಿಂಗಳ ಬದಲಿಗೆ 2023ರ ವರ್ಷಾಂತ್ಯಕ್ಕೆ ವಿಸ್ತರಿಸಲಾಗುವುದು ಎಂದು ಹೇಳಿದೆ. ವಿಶ್ವವಿದ್ಯಾಲಯದ ಪದವೀಧರರಿಗೆ ಆಂತರಿಕ ಮೇಲ್ ಮೂಲಕ ಈ ಸಂದೇಶವನ್ನು ರವಾನಿಸಲಾಗಿದೆ.

ಮತ್ತೆ 20,000 ನೌಕರರ ವಜಾಗೊಳಿಸಲು ಅಮೆಜಾನ್‌ ಸಜ್ಜುಮತ್ತೆ 20,000 ನೌಕರರ ವಜಾಗೊಳಿಸಲು ಅಮೆಜಾನ್‌ ಸಜ್ಜು

ಹೊಸದಾಗಿ ನೇಮಕವಾಗಿರುವ ಪದವೀಧರರು ಕ್ಯಾಲಿಫೋರ್ನಿಯಾದ ಸನ್ನಿವೇಲ್‌ನಲ್ಲಿರುವ ಅಮೆಜಾನ್‌ನ ಕ್ಯಾಂಪಸ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಬೇಕಿತ್ತು. ಆದರೆ ಈ ವಿಳಂಬದಿಂದ ಪ್ರಭಾವಿತರಾದ ಹೊಸ ಉದ್ಯೋಗಿಗಳಿಗೆ ತಡವಾಗುತ್ತದೆ, ಹಾಗಿದ್ದರೂ ಒಂದೇ ಬಾರಿ ಪಾವತಿಯಲ್ಲಿ ಅವರು 10 ಲಕ್ಷ ರೂಪಾಯಿ ಅನ್ನು ಸ್ವೀಕರಿಸುತ್ತಾರೆ ಎಂದು ಪ್ರತಿಪಾದಿಸಲಾಗುತ್ತಿದೆ.

ಅಮೆಜಾನ್ ಕಂಪನಿಯ ಈ-ಮೇಲ್ ಸಂದೇಶದಲ್ಲಿ ಏನಿದೆ?

ಅಮೆಜಾನ್ ಕಂಪನಿಯ ಈ-ಮೇಲ್ ಸಂದೇಶದಲ್ಲಿ ಏನಿದೆ?

"ನಮ್ಮ ವಾರ್ಷಿಕ ಕಾರ್ಯಾಚರಣಾ ಯೋಜನೆ ಪರಿಶೀಲನೆಯ ಭಾಗವಾಗಿ, ವ್ಯವಹಾರದ ಪ್ರತಿಯೊಂದು ಭಾಗವನ್ನು ನೋಡುತ್ತೇವೆ ಮತ್ತು ಅಗತ್ಯವಿರುವಂತೆ ಹೊಂದಾಣಿಕೆ ಮಾಡುತ್ತೇವೆ. ಇದು ನಿಮ್ಮ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ. ಏಕೆಂದರೆ ಇದೊಂದು ವೈಯಕ್ತಿಕ ನಿರ್ಧಾರವಲ್ಲ, ವ್ಯವಹಾರಿಕ ನಿರ್ಧಾರ ಎಂದು ತಿಳಿಯುವುದು ಮುಖ್ಯವಾಗುತ್ತದೆ. ಸವಾಲಿನ ಆರ್ಥಿಕ ಪರಿಸ್ಥಿತಿಗಳಲ್ಲಿ, ನಮ್ಮ ಕೆಲವು ಕಾಲೇಜು ವಿದ್ಯಾರ್ಥಿಗಳ ನೇಮಕಾತಿ ಪ್ರಾರಂಭ ದಿನಾಂಕಗಳನ್ನು ಆರು ತಿಂಗಳವರೆಗೆ ವಿಳಂಬಗೊಳಿಸುತ್ತಿದ್ದೇವೆ. ಇದರಿಂದ ಎದುರಾಗುವ ಹಣಕಾಸಿನ ಪರಿಣಾಮವನ್ನು ಪರಿಹರಿಸಲು ನಾವು ಸಹಾಯ ಮಾಡುತ್ತೇವೆ. ಮುಂದಿನ ಪೀಳಿಗೆಯ ನಾಯಕರು ಮತ್ತು ಬಿಲ್ಡರ್‌ಗಳನ್ನು ಹುಡುಕುವುದರಲ್ಲಿ ವಿಶ್ವವಿದ್ಯಾನಿಲಯಗಳಿಂದ ನೇರ ನೇಮಕಾತಿ ಮತ್ತು ಇಂಟರ್ನ್‌ಶಿಪ್ ಕಾರ್ಯಕ್ರಮಕ್ಕೆ ಅಮೆಜಾನ್ ಬದ್ಧವಾಗಿದೆ," ಎಂದು ಮೇಲ್ ವರದಿಯಾಗಿದೆ.

ಅಮೆಜಾನ್ ಕಂಪನಿಯಿಂದ 10,000 ಉದ್ಯೋಗ ಕಡಿತ

ಅಮೆಜಾನ್ ಕಂಪನಿಯಿಂದ 10,000 ಉದ್ಯೋಗ ಕಡಿತ

ಇ-ಕಾಮರ್ಸ್ ದೈತ್ಯ ಕಂಪನಿಯು ಚಿಲ್ಲರೆ ಮತ್ತು ಮಾನವ ಸಂಪನ್ಮೂಲ ವಿಭಾಗಗಳಲ್ಲಿ 10,000 ಉದ್ಯೋಗಿಗಳನ್ನು ವಜಾಗೊಳಿಸಿದೆ. ಈ ಬೆಳವಣಿಗೆ ಬೆನ್ನಲ್ಲೇ ಹೊಸ ಉದ್ಯೋಗಿಗಳ ನೇಮಕಾತಿ ಪ್ರಕ್ರಿಯೆಯನ್ನು ವಿಳಂಬಗೊಳಿಸಲಾಗುತ್ತಿದೆ. ಈ ಕುರಿತು ಅಮೆಜಾನ್ ಸಿಇಒ ಆಂಡಿ ಜಾಸ್ಸಿ, ಕಂಪನಿಯಲ್ಲಿನ ಬೃಹತ್ ವಜಾಗಳನ್ನು ಸಮರ್ಥಿಸಿಕೊಂಡಿದ್ದು, ನಮ್ಮ ವೆಚ್ಚವನ್ನು ಸುಗಮಗೊಳಿಸಬೇಕಾಗಿದೆ ಎಂದು ನಾವು ಭಾವಿಸಿದ್ದೇವೆ," ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಉದ್ಯೋಗ ಕಡಿತದ ಬಗ್ಗೆ ಎಚ್ಚರಿಕೆ ನೀಡಿದ ಸಿಇಒ

ಉದ್ಯೋಗ ಕಡಿತದ ಬಗ್ಗೆ ಎಚ್ಚರಿಕೆ ನೀಡಿದ ಸಿಇಒ

ಅಮೆಜಾನ್ ಕಂಪನಿಯಲ್ಲಿ ಈಗಾಗಲೇ ಭಾರೀ ಸಂಖ್ಯೆಯಲ್ಲಿ ಉದ್ಯೋಗ ಕಡಿತವನ್ನು ಮಾಡಲಾಗಿದೆ. ಈ ಕುರಿತು ಡಿಸೆಂಬರ್ ತಿಂಗಳ ಆರಂಭದಲ್ಲಿ ಪ್ರತಿಕ್ರಿಯೆ ನೀಡಿರುವ ಸಿಇಒ ಆಂಡಿ ಜಾಸ್ಸಿ, 2023ರಲ್ಲೂ ಹೆಚ್ಚು ಹೆಚ್ಚು ಉದ್ಯೋಗ ಕಡಿತವನ್ನು ಮಾಡುವ ಸಾಧ್ಯತೆಗಳಿವೆ. ಉದ್ಯೋಗಿಗಳನ್ನು ವಜಾಗೊಳಿಸುವುದರ ಬಗ್ಗೆ ಹೊಂದಾಣಿಕೆ ಮಾಡಿಕೊಳ್ಳುವಂತೆ ಈಗಾಗಲೇ ಉದ್ಯೋಗಿಗಳಿಗೆ ಎಚ್ಚರಿಕೆಯನ್ನು ನೀಡಲಾಗಿದೆ.

ಸುಮ್ನೆ ಬೇರೆ ಕಡೆ ಕೆಲಸ ನೋಡಿ: ಅಮೆಜಾನ್

ಸುಮ್ನೆ ಬೇರೆ ಕಡೆ ಕೆಲಸ ನೋಡಿ: ಅಮೆಜಾನ್

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಂತರದಲ್ಲಿ ಹೆಚ್ಚುತ್ತಿರುವ ಬೆಲೆಗಳ ನಡುವೆ ಗ್ರಾಹಕರು ಮತ್ತು ವ್ಯಾಪಾರಿಗಳು ತಮ್ಮ ಖರ್ಚು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಈ ಕಾರಣದಿಂದಲೇ ಖರ್ಚು-ವೆಚ್ಚಗಳು ನಿಧಾನಗತಿಯಲ್ಲಿ ಸಾಗುತ್ತಿವೆ ಎಂದು ಕಂಪನಿ ಹೇಳಿದೆ. ಇದರ ಮಧ್ಯೆ ಹೆಚ್ಚು ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸುವ ಸಾಧ್ಯತೆಗಳಿದ್ದು, ಬೇರೆ ಸಂಸ್ಥೆಗಳಲ್ಲಿ ಉದ್ಯೋಗವನ್ನು ಕಂಡುಕೊಳ್ಳುವಂತೆ ಉದ್ಯೋಗಿಗಳಿಗೆ ಅಮೆಜಾನ್ ಸೂಚನೆ ನೀಡಿತ್ತು.

English summary
After Sacking 10,000 Employees, Amazon Company will Delays Joining Of College Graduates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X