• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3,000 ಟ್ರೈನಿ ಇಂಜಿನಿಯರ್‌ಗಳ ನೇಮಿಸಿಕೊಂಡ ಎಲ್‌&ಟಿ

|
Google Oneindia Kannada News

ನವದೆಹಲಿ, ನವೆಂಬರ್‌ 25: ನಿರ್ಮಾಣ ಮತ್ತು ಇಂಜಿನಿಯರಿಂಗ್ ಕೆಲಸಗಳ ಕಂಪೆನಿ ಲಾರ್ಸೆನ್ & ಟೂಬ್ರೊ (ಎಲ್‌&ಟಿ) ಲಿಮಿಟೆಡ್ 2022-23 ರಲ್ಲಿ 3,000ಕ್ಕೂ ಹೆಚ್ಚು ಟ್ರೈನಿ ಇಂಜಿನಿಯರಿಂಗ್ ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರನ್ನು ನೇಮಿಸಿಕೊಂಡಿದೆ.

ಎಲ್‌&ಟಿ ಕಂಪನಿಯು ವೇಗವಾಗಿ ವಿಸ್ತರಿಸುತ್ತಿದ್ದು, ಇದು ಕಳೆದ ವರ್ಷಕ್ಕಿಂತ ಸುಮಾರು ಮೂರು ಪಟ್ಟು ಹೆಚ್ಚಿನ ನೇಮಕಾತಿಯಾಗಿದೆ. ಪ್ರಸ್ತುತ ಮತ್ತು ಭವಿಷ್ಯದ ವ್ಯವಹಾರ ಹಾಗೂ ಗ್ರಾಹಕರ ಅಗತ್ಯಗಳನ್ನು ಯಶಸ್ವಿಯಾಗಿ ಪೂರೈಸಲು ತರಬೇತಿ ಪಡೆದ ತಾಂತ್ರಿಕ ವೃತ್ತಿಪರರ ಪಡೆಯನ್ನು ಸಿದ್ಧಪಡಿಸುವುದು ಅಗತ್ಯವಾಗಿದೆ ಎಂದು ಎಲ್ & ಟಿ ಕಾರ್ಪೊರೇಟ್ ಮಾನವ ಸಂಪನ್ಮೂಲದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ಮುಖ್ಯಸ್ಥ ಡಾ. ಸಿ. ಜಯಕುಮಾರ್ ಹೇಳಿದರು.

ಎಸ್‌ಬಿಐ ನೇಮಕಾತಿ; 65 ವಿವಿಧ ಹುದ್ದೆಗಳಿಗೆ ಅರ್ಜಿ ಹಾಕಿಎಸ್‌ಬಿಐ ನೇಮಕಾತಿ; 65 ವಿವಿಧ ಹುದ್ದೆಗಳಿಗೆ ಅರ್ಜಿ ಹಾಕಿ

ಸೆಪ್ಟೆಂಬರ್ ಅಂತ್ಯದ ವೇಳೆಗೆ ಎಲ್ & ಟಿ 3.72 ಲಕ್ಷ ಕೋಟಿ ರೂಪಾಯಿಗಳ ದಾಖಲೆಯ ವ್ಯವಹಾರವನ್ನು ಹೊಂದಿತ್ತು. ಒಟ್ಟಾರೆ ಆದಾಯಕ್ಕೆ ಸುಮಾರು ಶೇ 45ರಷ್ಟು ಕೊಡುಗೆ ನೀಡುವ ಎಲ್ & ಟಿ ​​ಮೂಲಸೌಕರ್ಯ ಯೋಜನೆಗಳ ವಿಭಾಗವು ಬೆಳವಣಿಗೆಯನ್ನು ಕಂಡಿತು. ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಹೊಸದಾಗಿ ಇಂಜಿನಿಯರ್‌ಗಳ ನೇಮಕಾತಿಯನ್ನು ದುಪ್ಪಟ್ಟು ಮಾಡುವ ಕಂಪನಿಯ ನಿರ್ಧಾರಕ್ಕೆ ಈ ನೇಮಕಾತಿ ಪೂರಕವಾಗಿದೆ ಎಂದು ಅವರು ಹೇಳಿದರು.

2021-22 ರಲ್ಲಿ 248 ಮಂದಿ ಹಾಗೂ 2022-23ರಲ್ಲಿ 1,009 ಮಂದಿ ಮಹಿಳಾ ಇಂಜಿನಿಯರ್‌ಗಳ ನೇಮಕವಾಗಿತ್ತು. ಇದು ಕಂಪೆನಿಯ ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ಸಂಸ್ಥೆ ತಿಳಿಸಿದೆ. ಪ್ರಸ್ತುತ ಎಲ್ & ಟಿಯಲ್ಲಿ ಒಟ್ಟು ಉದ್ಯೋಗಿಗಳ 7.6% ರಷ್ಟು ಮಹಿಳಾ ಉದ್ಯೋಗಿಗಳು ಇದ್ದಾರೆ.

ಹೆಚ್ಚುತ್ತಿರುವ ಹಣದುಬ್ಬರದಿಂದಾಗಿ ಜಾಗತಿಕ ತಂತ್ರಜ್ಞಾನದ ದೈತ್ಯ ಕಂಪೆನಿಗಳಾದ ಮೆಟಾ, ಅಮೆಜಾನ್, ಮೈಕ್ರೋಸಾಫ್ಟ್, ಟ್ವಿಟರ್, ಭಾರತ ಸೇರಿದಂತೆ ಜಾಗತಿಕವಾಗಿ ತಮ್ಮ ಉದ್ಯೋಗಿಗಳ ಸಂಖ್ಯೆಯನ್ನು ಕಡಿತ ಮಾಡಿದೆ.

3,000 Trainee Engineers Recruitment by L&T

ಈ ಹಿನ್ನೆಲೆಯಲ್ಲಿ ಭಾರತದ ಪ್ರಮುಖ ನಿರ್ಮಾಣ ಮತ್ತು ಎಂಜಿನಿಯರಿಂಗ್ ಸಂಘಟಿತ ಸಂಸ್ಥೆಗಳ ನೇಮಕಾತಿಯಲ್ಲಿ ಹೆಚ್ಚಳವಾಗಿದೆ. ಇದು ವಿಶ್ವದ ಪ್ರಮುಖ ಆರ್ಥಿಕತೆಗಳಾದ್ಯಂತ ಆರ್ಥಿಕ ಮಂದಗತಿಗೆ ಕಾರಣವಾಗುತ್ತದೆ.

English summary
Construction and engineering works company Larsen & Toubro (L&T) Limited has hired more than 3,000 trainee engineering graduates and post graduates in 2022-23.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X