Get Updates
Get notified of breaking news, exclusive insights, and must-see stories!

ಪೊಲೀಸರಿಗೆ ಮಕ್ಕರ್ ಮಾಡಿದ್ರಾ ಅಂಬರ್ ಗ್ರಿಸ್ ಚೋರ್ ಗ್ಯಾಂಗ್?

ಬೆಂಗಳೂರು, ಆ. 10: ಅಂಬರ್‌ಗ್ರಿಸ್‌ನ್ನು ದೊಡ್ಡ ಮಟ್ಟದಲ್ಲಿ ಡೀಲ್ ಮಾಡಲು ಚೋರ್ ಗ್ಯಾಂಗ್ ಬೆಂಗಳೂರು ಪೊಲೀಸರಿಗೆ ದಿಕ್ಕು ತಪ್ಪಿಸಿ ಟೋಪಿ ಹಾಕಿದ್ದರಾ ? ಈ ಹಿಂದೆ ಬೆಂಗಳೂರು ಪೊಲೀಸರು ಮಾಡಿದ್ದ ಸುದ್ದಿಗೋಷ್ಠಿಯ ಪ್ರಚಾರದಿಂದ ಅಂಬರ್‌ಗ್ರಿಸ್‌ ಮಾರಾಟದ ಹಾದಿಯನ್ನು ಗ್ಯಾಂಗ್ ಸುಗಮ ಮಾಡಿಕೊಂಡಿತ್ತಾ? ಅಂಬರ್‌ಗ್ರಿಸ್‌ ಇನ್ನೇನು ಮಾರಾಟ ಮಾಡಿ ಕೋಟ್ಯಂತರ ರೂಪಾಯಿ ಕೈ ಬದಲಾವಣೆ ಹಂತದಲ್ಲಿ ಸಿಸಿಬಿ ಪೊಲೀಸರು ಎಂಟ್ರಿ ಕೊಟ್ಟು ಆಗುತ್ತಿದ್ದ ಬಹುದೊಡ್ಡ ಅನಾಹುತ ತಪ್ಪಿಸಿದರೇ? ಕಳೆದ ಜೂನ್ ನಲ್ಲಿ ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ರಾಜ್ಯದ ಮೊದಲ ಅಂಬರ್‌ಗ್ರಿಸ್‌ ಪ್ರಕರಣ ಹಾಗೂ ಸಿಸಿಬಿ ಪೊಲೀಸರು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಪ್ರಕರಣದ ಮೂಲ ಹುಡುಕಿದಾಗ ಅಂಬರ್‌ಗ್ರಿಸ್‌ ಮಾರಾಟ ಜಾಲದ ಇಂಟರೆಸ್ಟಿಂಗ್ ಮಾಹಿತಿ ಒನ್ಇಂಡಿಯಾ ಕನ್ನಡ ಲಭ್ಯವಾಗಿದ್ದು, ಇಲ್ಲಿ ವಿವರಿಸಲಾಗಿದೆ.

ಕೆ.ಜಿ. ಹಳ್ಳಿ ಅಂಬರ್ ಗ್ರಿಸ್ ಕೇಸ್

ಕೆ.ಜಿ. ಹಳ್ಳಿ ಅಂಬರ್ ಗ್ರಿಸ್ ಕೇಸ್

ಕೆ.ಜಿ. ಹಳ್ಳಿ ಪೊಲೀಸ್ ಠಾಣೆಯ ಸಬ್ ಇನ್ಸಪೆಕ್ಟರ್ ನೇತೃತ್ವದ ತಂಡ ಅಂಬರ್ ಗ್ರಿಸ್ ಮಾರಾಟ ಮಾಡಲು ಯತ್ನಿಸಿದ ಸಯ್ಯದ್ ತಜ್ಮುಲ್ ಪಾಷಾ, ಸಲೀಮ ಪಾಷಾ, ರಫೀ ಉಲ್ಲಾ, ನಾಸಿರ್ ಪಾಷಾ ಎಂಬುವರನ್ನು ಬಂಧಿಸಿದ್ದರು. ಪ್ರಮುಖ ಆರೋಪಿಗಳು ತಲೆ ಮರೆಸಿಕೊಂಡಿದ್ದರು. ಬಂಧಿತರಿಂದ ಎಂಟು ಕೋಟಿ ಮೌಲ್ಯದ ಅಂಬರ್ ಗ್ರಿಸ್ (ತಿಮಿಂಗಲ ವಾಂತಿ ಮಾಡುವ ವೀರ್ಯ) ನ್ನು ವಶಪಡಿಸಿಕೊಂಡಿದ್ದರು. ಕರ್ನಾಟಕ ಪೊಲೀಸರ ಪಾಲಿಗೆ ಮೊದಲ ಕೇಸ್ ಆಗಿದ್ದರಿಂದ ಬೆಂಗಳೂರು ನಗರ ಪೊಲೀಸ್ ಆಯುಕ್ತರೇ ಸುದ್ದಿಗೋಷ್ಠಿ ನಡೆಸಿದ್ದರು.ಇದು ಅಂಬರ್‌ಗ್ರಿಸ್‌, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಬೆಲೆ 1 ಕೋಟಿ ರೂ. ಬೆಲೆ ಬಾಳುತ್ತದೆ. ಇದು ಅಂಬರ್‌ಗ್ರಿಸ್‌ ಎಂಬುದನ್ನು ಖಚಿತ ಮಾಡಿಕೊಂಡಿದ್ದೇವೆ ಎಂದೇ ಹೇಳಿದ್ದರು. ಇದು ರಾಜ್ಯ ಮಟ್ಟದ ಪಾಲಿಗೆ ದೊಡ್ಡ ಸದ್ದಿಯಾಗಿತ್ತು. ಅಂಬರ್‌ಗ್ರಿಸ್‌ನ್ನು ತಪಾಸಣೆ ನಡೆಸುವ ವಿಡಿಯೋ ಕೂಡ ಮಾಧ್ಯಮಗಳಲ್ಲಿ ಪ್ರಸಾರ ಆಗಿತ್ತು.

80 ಕೆ.ಜಿ. ಅಂಬರ್ ಗ್ರಿಸ್ ಮಾರಾಟಕ್ಕೆ ಸಿದ್ಧತೆ

80 ಕೆ.ಜಿ. ಅಂಬರ್ ಗ್ರಿಸ್ ಮಾರಾಟಕ್ಕೆ ಸಿದ್ಧತೆ

ಯಾವಾಗ ಪೊಲೀಸರ ಕೆ.ಜಿ. ಹಳ್ಳಿ ಪೊಲೀಸರು ವಶಪಡಿಸಿಕೊಂಡ ವಸ್ತು ಅಂಬರ್‌ಗ್ರಿಸ್‌, ಇದನ್ನು ವಿಧಿ ವಿಜ್ಞಾನ ಪ್ರಯೋಗಾಲಯ ಅಧಿಕಾರಿಗಳು ಖಚಿತ ಪಡಿಸಿದ್ದಾರೆ ಎಂದು ಪೊಲೀಸ್ ಆಯುಕ್ತ ಕಮಲಪಂತ್ ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದರು. ದಂಧೆಕೋರರಿಗೆ ಅಷ್ಟು ಸಾಕಿತ್ತು. ಪೊಲೀಸರೇ ಅಂಬರ್‌ಗ್ರಿಸ್‌ ಖಚಿತ ಪಡಿಸಿದ ಮೇಲೆ ಬಾಕಿ ಇರುವ ಅಂಬರ್‌ಗ್ರಿಸ್‌ ಮಾರಾಟ ಮಾಡುವುದು ದೊಡ್ಡಕಷ್ಟವೇನಲ್ಲ. ಕೆ.ಜಿ. ಹಳ್ಳಿ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಪ್ರಮುಖ ಆರೋಪಿಗಳು ನಾಗವಾರದ ಮನೆಯಲ್ಲಿ ರಹಸ್ಯವಾಗಿಟ್ಟಿದ್ದ 80 ಕೆ.ಜಿ ಅಂಬರ್‌ಗ್ರಿಸ್‌ನ್ನು ಮಾರಾಟ ಮಾಡಲು ಮುಂದಾಗಿದ್ದರು ಎಂಬ ಮಾಹಿತಿ ಇದೀಗ ಗೊತ್ತಾಗಿದೆ. ಕೆ.ಜಿ. ಹಳ್ಳಿ ಪೊಲೀಸರು ವಶಪಡಿಸಿಕೊಂಡಿರುವುದು ಕೇವಲ 8 ಕೆ.ಜಿ. ಉಳಿದ, 80 ಕೆ.ಜಿ ನಮ್ಮ ಬಳಿಯಿದೆ ಎಂದು ಅಂಬರ್‌ಗ್ರಿಸ್‌ ಚೋರ್ ಗ್ಯಾಂಗ್ ವ್ಯಾಪಾರಕ್ಕೆ ಮುಂದಾಗಿತ್ತು ಎನ್ನಲಾಗಿದೆ.

ಪೊಲೀಸರ ಕೈಯಲ್ಲಿ ಪರೀಕ್ಷೆ ಮಾಡಿಸಿದ್ರಾ ಕ್ರಿಮಿನಲ್ಸ್

ಪೊಲೀಸರ ಕೈಯಲ್ಲಿ ಪರೀಕ್ಷೆ ಮಾಡಿಸಿದ್ರಾ ಕ್ರಿಮಿನಲ್ಸ್

ಪೊಲೀಸರು ಕೆ.ಜಿ.ಹಳ್ಳಿ ಕೇಸು ದಾಖಲಿಸುವ ಮೊದಲು ಇದು ಅಂಬರ್‌ಗ್ರಿಸ್‌ ಎಂದು ದೃಢೀಕರಿಸಲು ಚೋರ್ ಗ್ಯಾಂಗ್ ಬಳಿ ಯಾವುದೇ ಪ್ರಮಾಣ ಪತ್ರವಿರಲಿಲ್ಲ. ಇನ್ನು ಖಾಸಗಿಯಾಗಿ ಯಾರೇ ಆಗಲಿ ಅಂಬರ್‌ಗ್ರಿಸ್‌ನ್ನು ವಿಧಿ ವಿಜ್ಞಾನ ಪ್ರಯೋಗಾಲಯದ ಪರೀಕ್ಷೆ ಮಾಡಿಸಿದರೆ ಬಂಧನಕ್ಕೆ ಒಳಗಾಗುತ್ತಾರೆ. ಹೀಗಾಗಿ ಚೋರ್ ಗ್ಯಾಂಗ್ ಬಳಿಯಿದ್ದ 80 ಕೆ.ಜಿ. ಅಂಬರ್‌ಗ್ರಿಸ್‌ನ್ನು ಮಾರಾಟ ಮಾಡಲು ಕೆ.ಜಿ. ಹಳ್ಳಿ ಪೊಲೀಸರಿಗೆ ಉದ್ದೇಶ ಪೂರ್ವಕವಾಗಿ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ. ಕೆ.ಜಿ. ಹಳ್ಳಿ ಪೊಲೀಸರು ಅಂಬರ್‌ಗ್ರಿಸ್‌ನ್ನು ಪರಿಶೀಲನೆ ನಡೆಸಿದ ವಿಡಿಯೋ ತಲೆ ಮರೆಸಿಕೊಂಡಿದ್ದ ಆರೋಪಿಗಳ ಕೈ ಸೇರಿತ್ತು ಎನ್ನಲಾಗಿದೆ. ಅದೇ ವಿಡಿಯೋ ಹಾಗೂ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಅಂಬರ್‌ಗ್ರಿಸ್‌ ವಿಡಿಯೋ ತೋರಿಸಿ ಮಾರಾಟ ಮಾಡಲಿಕ್ಕೆ ಮುಂದಾಗಿದ್ದರು ಎಂದು ತಿಳಿದು ಬಂದಿದೆ. ಈ ಬಗ್ಗೆ ಒನ್ಇಂಡಿಯಾ ಕನ್ನಡಕ್ಕೆ ಮಾಹಿತಿದಾರ ನೀಡಿದ್ದ ಮಾಹಿತಿ ಇದೀಗ ನಿಜವಾಗಿದೆ.

ಕೆ.ಜಿ ಹಳ್ಳಿ ಪೊಲೀಸರ ಕೇಸಿನ ಮರ್ಮ

ಕೆ.ಜಿ ಹಳ್ಳಿ ಪೊಲೀಸರ ಕೇಸಿನ ಮರ್ಮ

ಕೆ.ಜಿ. ಹಳ್ಳಿ ಪೊಲೀಸರ ಕೈಯಲ್ಲಿ ಕೇಸು ಹಾಕಿಸಿಕೊಂಡಿದ್ದೇ "ಅಂಬರ್‌ಗ್ರಿಸ್‌ನ್ನು ಅಸಲಿ ಎಂದು ಸಾಭೀತು ಮಾಡಲಿಕ್ಕೆ. ತಲೆ ಮರೆಸಿಕೊಂಡಿರುವ ಜಮೀಲ್ ಮತ್ತು ತಬ್ರೇಜ್ ಪ್ರಮುಖ ಆರೋಪಿಗಳು. ಅಂಬರ್ ಗ್ರಿಸ್ ನ್ನು ಮಾರಾಟ ಮಾಡಲಿಕ್ಕೆ ಅವರ ಬಳಿ ಅಸಲಿ ಅಥವಾ ನಕಲಿ ಎಂದು ಹೇಳಿಕೊಳ್ಳಲಿಕ್ಕೆ ಯಾವ ದಾಖಲೆ ಇರಲಿಲ್ಲ. ಇಬ್ಬರು ಅಮಾಯಕರಿಗೆ ಹಣದ ಅಮಿಷೆ ಒಡ್ಡಿ ಪೊಲೀಸರಿಗೆ ಹಿಡಿದುಕೊಟ್ಟು ಅವರು ತಲೆ ಮರೆಸಿಕೊಂಡರು. ಪೊಲೀಸರು ಪರಿಶೀಲನೆ ಮಾಡಿದ ವಿಡಿಯೋ ಮುಂದಿಟ್ಟುಕೊಂಡು ಬರೊಬ್ಬರಿ 80 ಕೆ.ಜಿ. ತೂಕದ ಅಂಬರ್‌ಗ್ರಿಸ್‌ನ್ನು ಮಾರಾಟ ಮಾಡಲಿಕ್ಕೆ ಮುಂದಾಗಿದ್ದಾರೆ. ಬೆಂಗಳೂರಿನ ಮನೆಯೊಂದರಲ್ಲಿ ಅಂಬರ್ ಗ್ರಿಸ್ ಇಟ್ಟಿದ್ದಾರೆ. ಪೊಲೀಸರು ಅಂಬರ್ ಗ್ರಿಸ್ ಬಗ್ಗೆ ಪ್ರೆಸ್ ಮೀಟ್ ಮಾಡಿದ ಬಳಿಕ ಗಿರಾಕಿಗಳನ್ನು ಹುಡುಕುತ್ತಿದ್ದಾರೆ ಎಂದು ಪೊಲೀಸರನ್ನೇ ದಿಕ್ಕು ತಪ್ಪಿಸಿದ್ದ ಅಂಬರ್‌ಗ್ರಿಸ್‌ ಚೋರ್ ಗ್ಯಾಂಗ್ ನ ಅಸಲಿ ಸಂಗತಿಯನ್ನು "ಮಾಹಿತಿದಾರ" ಒನ್ಇಂಡಿಯಾ ಕನ್ನಡಕ್ಕೆ ನೀಡಿದ್ದರು. ಅಲ್ಲದೇ ಕೆ.ಜಿ. ಹಳ್ಳಿ ಪೊಲೀಸರು ವಶಪಡಿಸಿಕೊಂಡ ಬಳಿಕ ಉಳಿದ ಸುಮಾರು 80 ಕೆ.ಜಿ. ತೂಕದ ಅಂಬರ್ ಗ್ರಿಸ್ ಮಾರಾಟಕ್ಕೆ ಯತ್ನಿಸುತ್ತಿದ್ದಾರೆ ಎನ್ನಲಾದ ವಿಡಿಯೋ ತುಣುಕು ಸಹ ಒದಗಿಸಿದ್ದರು. ಆರಂಭದಲ್ಲಿ ನಂಬಿಕೆ ಬರಲಿಲ್ಲ. ಇದೀಗ ಸಿಸಿಬಿ ಪೊಲೀಸರು ದಾಖಲಿಸಿರುವ ಪ್ರಕರಣದಲ್ಲಿ ದೊಡ್ಡ ಪ್ರಮಾಣ ಸಿಕ್ಕಿರುವುದು ನೋಡಿದರೆ, ಪೊಲೀಸರಿಂದ ಕೇಸು ಹಾಕಿಸಿಕೊಂಡು ಅಂಬರ್ ಗ್ರಿಸ್ ಮಾರಾಟಕ್ಕೆ ಚೋರ್ ಗ್ಯಾಂಗ್ ಯತ್ನಿಸಿತ್ತೇ ಎಂಬ ಅನುಮಾನ ಕಾಡುತ್ತಿದೆ.

ಅಂಬರ್ ಗ್ರಿಸ್ ಡೀಲ್ ಮಣ್ಣು ಮುಕ್ಕಿತೇ?

ಅಂಬರ್ ಗ್ರಿಸ್ ಡೀಲ್ ಮಣ್ಣು ಮುಕ್ಕಿತೇ?

ಸುಗಂಧ ದ್ರವ್ಯ ಹಾಗೂ ವೈದ್ಯಕೀಯ ಗುಣ ಇರುವ ಅಂಬರ್‌ಗ್ರಿಸ್‌ಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದುಬಾರಿ ಬೆಲೆ. ಚಿನ್ನಕ್ಕಿಂತಲೂ ಹೆಚ್ಚಿನ ಬೆಲೆ. ಒಂದು ಕೆ.ಜಿ ಅಂಬರ್ ಗ್ರಿಸ್ ನ ಬೆಲೆ ಒಂದು ಕೋಟಿ ರೂ. ಇದೀಗ ಸಿಸಿಬಿ ಪೊಲೀಸರು ವಶಪಡಿಸಿಕೊಂಡಿರುವ 80 ಕೆ.ಜಿ. ತೂಕದ ಅಂಬರ್‌ಗ್ರಿಸ್‌ ಬೆಲೆ ಪೊಲೀಸರೇ ಹೇಳುವ ಪ್ರಕಾರ 80 ಕೋಟಿ ರೂ. ಆಗಿದೆ. ಕೆಜಿ ಹಳ್ಳಿ ಪೊಲೀಸರು ಕೇಸು ದಾಖಲಿಸುವ ವರೆಗೂ ಈ ಗ್ಯಾಂಗ್ ಬಳಿಯಿದ್ದ ಅಂಬರ್‌ಗ್ರಿಸ್‌ನ್ನು ಯಾರೂ ನಂಬುತ್ತಿರಲಿಲ್ಲ. ಪೊಲೀಸರು ಕೇಸು ಹಾಕಿದ ಬಳಿಕ ಅದಕ್ಕೆ ದೊಡ್ಡ ಡಿಮ್ಯಾಂಡ್ ಬಂದು ಕೋಟ್ಯಂತರ ರೂಪಾಯಿಗೆ ಡೀಲ್ ಮಾಡಲು ಗ್ಯಾಂಗ್ ಮುಂದಾಗಿತ್ತೇ? ಎನ್ನುವ ಅನುಮಾನ ಮೂಡಿಸಿದೆ. ಸಕಾಲಕ್ಕೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಐವರು ಆರೋಪಿಗಳನ್ನು ಬಂಧಿಸಿ ದೊಡ್ಡ ಅವಾಂತರ ತಡೆ ಹಿಡಿದರೆ? ಎಂಬುದು ನಿಗೂಢ ಪ್ರಶ್ನೆ.

ಧೂಪ ಮಾರಾಟ ಮಾಡುವ ಗ್ಯಾಂಗ್ ಗಳಿವೆ

ಧೂಪ ಮಾರಾಟ ಮಾಡುವ ಗ್ಯಾಂಗ್ ಗಳಿವೆ

ಇನ್ನು ಅಂಬರ್‌ಗ್ರಿಸ್‌ ಹೆಸರಿನಲ್ಲಿ ಧೂಪವನ್ನೂ ಮಾರಾಟ ಮಾಡುವ ಜಾಲ ಕರ್ನಾಟಕ, ತಮಿಳುನಾಡು ಮತ್ತು ಆಂಧ್ರ ಪ್ರದೇಶದಲ್ಲಿದೆ. ತಿಮಿಂಗಲದ ಅಂಬರ್ ಗ್ರಿಸ್ ಕೇವಲ ಮೂರ ರಿಂದ ನಾಲ್ಕು ಕೆ.ಜಿ ತೂಕ ಇರುತ್ತದೆ. ಅದೇ ರೀತಿ ದೂಪವನ್ನು ಸಹ ಅಂಬರ್ ಗ್ರಿಸ್ ಎಂದು ಬಿಂಬಿಸಿ ರೈಸ್ ಪುಲ್ಲಿಂಗ್ ಮಾದರಿಯಲ್ಲಿ ಜನರಿಗೆ ಟೋಪಿ ಹಾಕುವ ಗ್ಯಾಂಗ್ ಗಳು ಸಕ್ರಿಯವಾಗಿವೆ. ವಿಪರ್ಯಾಸವೆಂದರೆ ಕೆ.ಜಿ. ಹಳ್ಳಿ ಪೊಲೀಸರು ವಶಪಡಿಸಿಕೊಂಡಿರುವ ಅಂಬರ್‌ಗ್ರಿಸ್‌ ಸಹ ಇನ್ನೂ ಅಸಲಿ ಎಂಬುದು ಖಚಿತವಾಗಿಲ್ಲ. ಅಂಬರ್‌ಗ್ರಿಸ್‌ ಖಚಿತ ಪಡಿಸುವಂತೆ ಕೆ.ಜಿ. ಹಳ್ಳಿ ಪೊಲೀಸರು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ. ವರದಿ ಬರುವವರೆಗೂ ಅದು ಅಸಲಿ ಅಂಬರ್‌ಗ್ರಿಸ್‌ ಎಂದು ಹೇಳಲಿಕ್ಕೆ ಸಾಧ್ಯವಾಗದು.

ಸಿಸಿಬಿ ಪೊಲೀಸರು ವಶಪಡಿಸಿಕೊಂಡಿರುವ 80 ಕೆ.ಜಿ. ಅಂಬರ್‌ಗ್ರಿಸ್‌ನ್ನು ಕೂಡ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಒಳಪಡಿಸಿದಾಗಲೇ ಅದು ಅಸಲಿ ಎಂಬುದು ಗೊತ್ತಾಗಲಿದೆ. ಸದ್ಯ ಮೇಲ್ನೋಟಕ್ಕೆ ಅಂಬರ್‌ಗ್ರಿಸ್‌ ಎಂಬುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ. ಸಿಸಿಬಿ ಪೊಲೀಸರು ವಶಪಡಿಸಿಕೊಂಡಿರುವುದು ಅಸಲಿ ಅಂಬರ್‌ಗ್ರಿಸ್‌ ಎಂಬುದನ್ನು ಸಿಸಿಬಿ ಜಂಟಿ ಪೊಲೀಸ್ ಆಯುಕ್ತರಾದ ಸಂದೀಪ್ ಪಾಟೀಲ್ ಒನ್ಇಂಡಿಯಾ ಕನ್ನಡಕ್ಕೆ ಸ್ಪಷ್ಟಪಡಿಸಿದ್ದಾರೆ. ಸಿಸಿಬಿ ಪೊಲೀಸರ ಕಾರ್ಯಾಚರಣೆ ಮೆಚ್ಚಿ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಒಂದು ಲಕ್ಷ ರೂ. ಪರಿಹಾರ ಕೂಡ ಘೋಷಣೆ ಮಾಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+