Infographics: ಮಾ.14ರಂದು ಕರ್ನಾಟಕದ ಯಾವ ಜಿಲ್ಲೆಯಲ್ಲಿ ಎಷ್ಟಿದೆ ಪೆಟ್ರೋಲ್-ಡೀಸೆಲ್ ದರ?

ಬೆಂಗಳೂರು, ಮಾರ್ಚ್ 12: ದೇಶದಲ್ಲಿ ಸರ್ಕಾರಿ ಸ್ವಾಮ್ಯದ ಮೂರು ಪ್ರಮುಖ ತೈಲ ಕಂಪನಿಗಳು ಮಾರ್ಚ್ 14ರಂದು ಪೆಟ್ರೋಲ್, ಡೀಸೆಲ್ ದರ ಪರಿಷ್ಕರಿಸಿಲ್ಲ. ನಾಲ್ಕು ತಿಂಗಳ ಹಿಂದೆ ಪೆಟ್ರೋಲ್, ಡೀಸೆಲ್ ದರದಲ್ಲಿ ವ್ಯತ್ಯಾಸ ಕಂಡು ಬಂದಿದ್ದು ಆ ಬಳಿಕ ಬೆಲೆಯು ಸ್ಥಿರವಾಗಿದೆ. ಆದರೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದು ಪೆಟ್ರೋಲ್‌ ಹಾಗೂ ಡೀಸೆಲ್ ಬೆಲೆಯಲ್ಲಿ ಕೊಂಚ ಏರಿಳಿತ ಕಂಡು ಬಂದಿದೆ. ಇಂದು ಚಿತ್ರದುರ್ಗ ಜಿಲ್ಲೆಯಲ್ಲಿ ಪೆಟ್ರೋಲ್‌ ಬೆಲೆ ಗರಿಷ್ಠ 102.62 ರೂಪಾಯಿ ಆಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಡೀಸೆಲ್ ದರ ಗರಿಷ್ಠ 86.72 ರೂ. ಇದೆ.

ಕಳೆದ 2021ರ ಮೇ 4ರಿಂದ ನವೆಂಬರ್ 4ರವರೆಗೆ ಪೆಟ್ರೋಲ್ ಒಟ್ಟು 65 ಬಾರಿ ಹಾಗೂ ಡೀಸೆಲ್ 55 ಬಾರಿ ಏರಿಕೆಯಾಗಿತ್ತು. ಭಾರತ ಸರ್ಕಾರ ಮೂಲ ಬೆಲೆಯ ಶೇಕಡಾ 125ರಷ್ಟು ತೆರಿಗೆ ವಿಧಿಸುತ್ತದೆ. ಇಂಧನದ ಮೇಲೆ ಅಬಕಾರಿ ಸುಂಕ ಪೆಟ್ರೋಲ್ ಮೇಲೆ 32.98 ರೂ. ಹಾಗೂ ಡೀಸೆಲ್ ಮೇಲೆ 31.80 ರೂ. ನಷ್ಟಿದೆ. ಕಳೆದ ವರ್ಷದ ನವೆಂಬರ್ 4ರಂದು ಕೇಂದ್ರ ಸರ್ಕಾರ ತೆರಿಗೆ ಇಳಿಕೆ ಮಾಡಿದ ಬಳಿಕ ಅನೇಕ ರಾಜ್ಯಗಳು ವ್ಯಾಟ್, ಸೆಸ್ ತಗ್ಗಿಸಿದ್ದರಿಂದ ಇಂಧನ ದರ ಇಳಿಕೆಯಾಗಿವೆ.

ರಷ್ಯಾ- ಉಕ್ರೇನ್ ಯುದ್ಧದಿಂದಾಗಿ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆಯು ಏಳು ವರ್ಷಗಳ ಗರಿಷ್ಠ ಮಟ್ಟದಲ್ಲಿದೆ. ಈ ಹಿನ್ನೆಲೆ ಮುಂದಿನ ಕೆಲವೇ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಭಾರತದಲ್ಲಿ ಭಾರೀ ಏರಿಕೆ ಕಾಣುವ ನಿರೀಕ್ಷೆಯಿದೆ. ರಾಜ್ಯದ ನಗರಗಳ ಪೆಟ್ರೋಲ್‌ ಡಿಸೇಲ್ ಬೆಲೆ ಈ ಕೆಳಗಿದೆ. ಮುಂದೆ ಓದಿ.

Petrol And Diesel Price In Karnataka On March 14th: Check Rate in Your City

ಕರ್ನಾಟಕದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ದರ ಎಷ್ಟಿದೆ?

ಬೆಂಗಳೂರಿನಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 100.58 ರೂಪಾಯಿಗೆ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಡೀಸೆಲ್ ದರವು ಪ್ರತಿ ಲೀಟರ್‌ಗೆ 85.01 ರೂಪಾಯಿಗೆ ಆಗಿದೆ. ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಪೆಟ್ರೋಲ್ ದರ 102 ರೂಪಾಯಿ ಗಡಿ ದಾಟಿದೆ. ಚಿತ್ರದುರ್ಗದಲ್ಲಿ ಪೆಟ್ರೋಲ್ ದರ 102.62 ರೂಪಾಯಿ ಆಗಿರುವುದೇ ಕರ್ನಾಟಕದಲ್ಲಿ ಅತ್ಯಧಿಕ ಬೆಲೆ ಎನಿಸಿಕೊಂಡಿದೆ. ಇನ್ನು ನಿನ್ನೆ ಚಿತ್ರದುರ್ಗದಲ್ಲಿ ಪೆಟ್ರೋಲ್ ದರ 102.03 ರೂಪಾಯಿ ಆಗಿದ್ದು, ಇಂದು ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಉಳಿದಂತೆ ಇತರೆ ಜಿಲ್ಲೆಗಳಲ್ಲಿ 100 ರಿಂದ 101 ರೂ. ನಷ್ಟಿದೆ ಎಂದು ಗುಡ್‌ರಿಟರ್ನ್ಸ್.ಇನ್ ವರದಿ ಮಾಡಿದೆ.

Petrol And Diesel Price In Karnataka On March 14th: Check Rate in Your City


ಕರ್ನಾಟಕದ ಪ್ರಮುಖ ನಗರಗಳಲ್ಲಿ ಡೀಸೆಲ್ ದರ?

ಬೆಂಗಳೂರಿನಲ್ಲಿ ಕಳೆದ ಎರಡು ತಿಂಗಳ ಹಿಂದೆ ಪೆಟ್ರೋಲ್, ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ ಸರಾಸರಿ 30-35 ಪೈಸೆಯಷ್ಟು ಏರಿಕೆಯಾಗಿತ್ತು. ನಂತರ ಸೆಸ್ ತಗ್ಗಿಸಿದ್ದರಿಂದ ಇಂಧನ ದರ ಇಳಿಕೆಯಾಗಿದ್ದು, ಸದ್ಯ ಬೆಂಗಳೂರಲ್ಲಿ ಪ್ರತಿ ಲೀಟರ್‌ಗೆ 85.01 ರೂ ಇದೆ. ಚಿತ್ರದುರ್ಗ ಜಿಲ್ಲೆಯಲ್ಲಿ 86.72 ರೂ. ಪ್ರತಿ ಲೀಟರ್ ನಷ್ಟಿದ್ದು, ರಾಜ್ಯದಲ್ಲೇ ಅತ್ಯಧಿಕ ಬೆಲೆ ಹೊಂದಿದೆ. ನಿನ್ನೆ ಬಳ್ಳಾರಿಯಲ್ಲಿ ಡೀಸೆಲ್ ಬೆಲೆಯು 86.20 ರೂ ರೂಪಾಯಿಯಾಗಿದ್ದು, ಬೆಲೆಯಲ್ಲಿ ಕೊಂಚ ಏರಿಕೆ ಕಂಡು ಬಂದಿದೆ. ಇದರ ಹೊರತಾಗಿ ಬಳ್ಳಾರಿ, ಬೀದರ್, ಚಿಕ್ಕಮಗಳೂರು, ದಾವಣಗೆರೆ, ಕೊಡುಗು, ಕೊಪ್ಪಳ, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ 86 ರೂಪಾಯಿಗಿಂತ ಹೆಚ್ಚಾಗಿದ್ದು, ಉಳಿದ ಜಿಲ್ಲೆಗಳಲ್ಲಿ 84 ರಿಂದ 85 ರೂಪಾಯಿಯಷ್ಟಿದೆ.

ಬೆಳಗ್ಗೆ 6 ಗಂಟೆಗೆ ಪೆಟ್ರೋಲ್, ಡೀಸೆಲ್ ದರ ಬದಲಾವಣೆ:

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

Petrol And Diesel Price In Karnataka On March 14th: Check Rate in Your City

ಜಾಗತಿಕ ತೈಲ ಮಾರುಕಟ್ಟೆಯಲ್ಲಿ ದರ ಏರಿಳಿತ:

ಇದೀಗ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಮತ್ತೆ ಏರಿಕೆ ಕಾಣುತ್ತಿದೆ. ಆದರೂ, ರಾಷ್ಟ್ರಾದ್ಯಂತ ಮತ್ತೆ ಪೆಟ್ರೋಲ್​- ಡೀಸೆಲ್​ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇಂಧನ ದರ ಕಡಿಮೆಯಾದರೆ ವಾಹನ ಸವಾರರಿಗೆ ಮತ್ತಷ್ಟು ಭಾರ ಕಡಿಮೆಯಾಗಲಿದೆ. ರಷ್ಯಾ- ಉಕ್ರೇನ್ ಯುದ್ಧದಿಂದಾಗಿ ಡಬ್ಲ್ಯೂಟಿಐ ಕಚ್ಚಾತೈಲದ ಬೆಲೆ ಪ್ರತಿ ಬ್ಯಾರಲ್​​ಗೆ 100 US ಡಾಲರ್​ಗಳಷ್ಟು ಏರಿಕೆಯಾಗಿತ್ತು. ಇಂದು ಜಾಗತಿಕ ಬ್ರೆಂಟ್ ಕಚ್ಚಾ ತೈಲ ಬೆಲೆಯು ಪ್ರತಿ ಬ್ಯಾರೆಲ್​ಗೆ 116.5 ಯುಸ್ ಡಾಲರ್​ನಂತೆ ವ್ಯವಹಾರ ನಡೆಸುತ್ತಿದೆ. ನಿನ್ನೆಯ ಸೆಷನ್​ಗೆ ಹೋಲಿಸಿದರೆ 3.60 ಡಾಲರ್ ಏರಿಕೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+