Infographics: ಭಾರತದಲ್ಲಿ 17 ದಿನದಲ್ಲಿ 3ನೇ ಬಾರಿ ಪೆಟ್ರೋಲ್-ಡೀಸೆಲ್ ದರ ಸ್ಥಿರ
ಬೆಂಗಳೂರು, ಏಪ್ರಿಲ್ 7: ಭಾರತದಲ್ಲಿ ನಿರಂತರವಾಗಿ ಏರಿಕೆ ಕಾಣುತ್ತಿದ್ದ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಗುರುವಾರ ಸ್ಥಿರತೆ ಕಂಡು ಬಂದಿದೆ. ಕಳೆದ 17 ದಿನಗಳಲ್ಲಿ 14 ಬಾರಿ ಏರಿಕೆ ಕಂಡಿದ್ದ ಇಂಧನ ದರ ಏಪ್ರಿಲ್ 7ರಂದು ಸ್ಥಿರವಾಗಿದೆ. ಈಗಾಗಲೇ ದೇಶದಲ್ಲಿ 17 ದಿನದಲ್ಲಿ ಪೆಟ್ರೋಲ್-ಡೀಸೆಲ್ ದರ 10 ರೂಪಾಯಿ ಏರಿಕೆಯಾಗಿದೆ.
ಸರ್ಕಾರಿ ಸ್ವಾಮ್ಯದ ಮೂರು ಪ್ರಮುಖ ತೈಲ ಕಂಪನಿಗಳು ಏಪ್ರಿಲ್ 7ರಂದು ಪೆಟ್ರೋಲ್, ಡೀಸೆಲ್ ದರದಲ್ಲಿ ಯಾವುದೇ ಪರಿಷ್ಕರಣೆ ಮಾಡಿಲ್ಲ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್‌ಗೆ ರೂ. 105.41 ಆಗಿದೆ. ಮಂಗಳವಾರ ದೆಹಲಿಯಲ್ಲಿ ಪೆಟ್ರೋಲ್‌ಗೆ 104.61 ರೂ. ಆಗಿತ್ತು. ಬುಧವಾರ ಪರಿಷ್ಕರಣೆಯ ಬಳಿಕ ಪೆಟ್ರೋಲ್ ಬೆಲೆ ರೂ. 105.41ಕ್ಕೆ ಏರಿಕೆ ಆಗಿತ್ತು. ಇನ್ನು ಡಿಸೇಲ್ ಬೆಲೆಯು ಕೂಡಾ ಸ್ಥಿರವಾಗಿದ್ದು ರೂ.96.67 ಆಗಿದೆ. ಮಂಗಳವಾರ ದೆಹಲಿಯಲ್ಲಿ ಡೀಸೆಲ್ ಬೆಲೆ ರೂ.95.87 ಆಗಿತ್ತು. ಬುಧವಾರ ರೂ.96.67ಕ್ಕೆ ಏರಿಕೆ ಆಗಿದ್ದು, ಗುರುವಾರ ಸ್ಥಿರವಾಗಿದೆ.
ರಷ್ಯಾ ಮತ್ತು ಉಕ್ರೇನ್ ಯುದ್ಧದ ಪರಿಣಾಮವಾಗಿ ಕಚ್ಚಾತೈಲ ಬೆಲೆ ದಶಕದ ಬಳಿಕ ಮೊದಲ ಬಾರಿಗೆ ಭಾರೀ ಏರಿಕೆ ಕಂಡು ಬಂದಿದೆ. ಈ ಬೆನ್ನಲ್ಲೇ ದೇಶದಲ್ಲಿ ಮಾರ್ಚ್ 22ರಂದು ಸುಮಾರು ನಾಲ್ಕೂವರೆ ತಿಂಗಳ ನಂತರ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಏರಿಕೆ ಮಾಡಲಾಗಿದೆ. ಪೆಟ್ರೋಲ್, ಡೀಸೆಲ್ ದರ ಕಳೆದ 17 ದಿನಗಳಲ್ಲಿ ಮೂರು ದಿನ ಮಾತ್ರ ಸ್ಥಿರವಾಗಿದ್ದು, ಉಳಿದ ದಿನಗಳಲ್ಲಿ ಏರಿಕೆ ಕಂಡಿದೆ. ರಾಜ್ಯದ ನಗರಗಳ ಪೆಟ್ರೋಲ್ ಡಿಸೇಲ್ ಬೆಲೆ ಈ ಕೆಳಗಿದೆ. ಮುಂದೆ ಓದಿ.

ಕರ್ನಾಟಕದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ದರ ಎಷ್ಟಿದೆ?
ಬೆಂಗಳೂರಿನಲ್ಲಿ ಪೆಟ್ರೋಲ್ ದರ 111.09 ರೂಪಾಯಿಗೆ ಆಗಿದೆ. ಇನ್ನು ಡೀಸೆಲ್ ಬೆಲೆಯು 94.79 ರೂಪಾಯಿ ಆಗಿದೆ. ದಾವಣಗೆರೆಯಲ್ಲಿ ಪೆಟ್ರೋಲ್ ದರ 113.09 ರೂಪಾಯಿ ಆಗಿರುವುದೇ ಕರ್ನಾಟಕದಲ್ಲಿ ಅತ್ಯಧಿಕ ಬೆಲೆ ಎನಿಸಿಕೊಂಡಿದೆ. ಇನ್ನು ನಿನ್ನೆ ಇದೇ ದಾವಣಗೆರೆ ಜಿಲ್ಲೆಯಲ್ಲಿ ಪೆಟ್ರೋಲ್ ದರ 113.15 ರೂಪಾಯಿ ಆಗಿತ್ತು. ಉಳಿದಂತೆ ಇತರೆ ಜಿಲ್ಲೆಗಳಲ್ಲಿ 110 ರಿಂದ 112 ರೂ. ನಷ್ಟಿದೆ ಎಂದು ಗುಡ್‌ರಿಟರ್ನ್ಸ್.ಇನ್ ವರದಿ ಮಾಡಿದೆ.

ಕರ್ನಾಟಕದ ಪ್ರಮುಖ ನಗರಗಳಲ್ಲಿ ಡೀಸೆಲ್ ದರ?
ಬೆಂಗಳೂರಿನಲ್ಲಿ ಕಳೆದ 17 ದಿನಗಳಿಂದಲೂ ಡೀಸೆಲ್ ದರದಲ್ಲಿ ಏರಿಕೆ ಕಂಡು ಬರುತ್ತಿದ್ದು, ಗುರುವಾರ ಸ್ಥಿರವಾಗಿದೆ. ಸದ್ಯ ಬೆಂಗಳೂರಲ್ಲಿ ಪ್ರತಿ ಲೀಟರ್‌ಗೆ 94.79 ರೂ ಇದೆ. ಬಳ್ಳಾರಿ ಜಿಲ್ಲೆಯಲ್ಲಿ 96.56 ರೂ. ಪ್ರತಿ ಲೀಟರ್ ನಷ್ಟಿದ್ದು, ರಾಜ್ಯದಲ್ಲೇ ಅತ್ಯಧಿಕ ಬೆಲೆ ಹೊಂದಿದೆ. ನಿನ್ನೆ ಇದೇ ಬಳ್ಳಾರಿ ಜಿಲ್ಲೆಯಲ್ಲಿ ಡೀಸೆಲ್ ಬೆಲೆಯು 96.29 ರೂಪಾಯಿಯಾಗಿದ್ದು, ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ದಕ್ಷಿಣ ಕನ್ನಡ, ಧಾರವಾಡ ಹಾಸನ ಜಿಲ್ಲೆಗಳಲ್ಲಿ ಡೀಸೆಲ್ ದರವು 94 ರೂಪಾಯಿಗೆ ಹತ್ತಿರದಲ್ಲಿದ್ದರೆ, ಉಳಿದೆಲ್ಲ ಜಿಲ್ಲೆಗಳಲ್ಲಿ 94 ರೂಪಾಯಿಗಿಂತ ಹೆಚ್ಚಾಗಿದೆ.

ಬೆಳಗ್ಗೆ 6 ಗಂಟೆಗೆ ಪೆಟ್ರೋಲ್, ಡೀಸೆಲ್ ದರ ಬದಲಾವಣೆ:
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.
ಜಾಗತಿಕ ತೈಲ ಮಾರುಕಟ್ಟೆಯಲ್ಲಿ ದರ ಏರಿಳಿತ:
ಇದೀಗ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಮತ್ತೆ ಏರಿಕೆ ಕಾಣುತ್ತಿದೆ. ದೇಶದಲ್ಲಿ ಕಳೆದ 15 ದಿನಗಳಿಂದಲೂ ಪೆಟ್ರೋಲ್- ಡೀಸೆಲ್ ದರದಲ್ಲಿ ನಿರಂತರ ಏರಿಕೆ ಕಂಡು ಬರುತ್ತಿದೆ, ಇಂಧನ ದರ ಕಡಿಮೆಯಾದರೆ ವಾಹನ ಸವಾರರಿಗೆ ಮತ್ತಷ್ಟು ಭಾರ ಕಡಿಮೆಯಾಗಲಿದೆ. ರಷ್ಯಾ- ಉಕ್ರೇನ್ ಯುದ್ಧದಿಂದಾಗಿ ಡಬ್ಲ್ಯೂಟಿಐ ಕಚ್ಚಾತೈಲದ ಬೆಲೆ ಪ್ರತಿ ಬ್ಯಾರಲ್ಗೆ 103.60 ಡಾಲರ್ ಏರಿಕೆಯಾಗಿದ್ದು, ಇಂದು ಜಾಗತಿಕ ಬ್ರೆಂಟ್ ಕಚ್ಚಾ ತೈಲ ಬೆಲೆಯು ಪ್ರತಿ ಬ್ಯಾರೆಲ್ಗೆ 107.90 ಯುಸ್ ಡಾಲರ್ನಂತೆ ವ್ಯವಹಾರ ನಡೆಸುತ್ತಿದೆ.












Click it and Unblock the Notifications