ಭರ್ತಿಯಾದ ಡ್ಯಾಂಗಳು; ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ
ಬೆಂಗಳೂರು ಜುಲೈ 14: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಗುರುವಾರವು ಮುಂಗಾರು ಮಳೆ ಅಬ್ಬರಿಸಿದೆ. ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಾಗಿದೆ. ಕರಾಳಿಯ ಮೂರು ಜಿಲ್ಲೆಗಳಲ್ಲೂ ಬಹುತೇಕ ಕಡೆ ಧಾರಾಕಾರ ಮಳೆ ದಾಖಲಾಗಿದ್ದು, ಜುಲೈ 19ರವರೆಗೂ ಮಳೆ ಮುಂದುವರಿಯಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ನೈಋತ್ಯ ಮುಂಗಾರು ತೀವ್ರವಾಗಿದ್ದು, ಉತ್ತರ ಒಳನಾಡಿನ ಭಾಗದಲ್ಲಿ ಮಳೆ ತೀವ್ರತೆ ಸದ್ಯಕ್ಕೆ ಕುಂದಿದೆ. ಇದರ ಹೊರತಾಗಿ ರಾಜ್ಯದ ಹವಾಮಾನದಲ್ಲಿ ಯಾವುದೇ ಗಮನಾರ್ಹ ಬದಲಾವಣೆಯಿಲ್ಲ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿದ್ದು, ಆಗಾಗ ಜಿಟಿ ಜಿಟಿ ಮಳೆ ಸುರಿಯುತ್ತಿದೆ. ಇದೇ ಮುಂದಿನ 48ಗಂಟೆಯು ಮುಂದುವರಿಯುವ ಸಾಧ್ಯತೆ ಇದೆ. ಕಳೆದ ಮೂರು ವಾರಗಳಿಂದ ಕರ್ನಾಟಕದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಜಲಾಶಯಗಳಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ.
ಕರ್ನಾಟಕದ ಕರಾವಳಿಯ ಎಲ್ಲಾ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಯ ಒಂದೆರೆಡು ಕಡೆಗಳಲ್ಲಿ ಅತಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಬೆಳಗಾವಿ ಮತ್ತು ಕಲಬುರಗಿ ಜಿಲ್ಲೆಗಳ ಒಂದೆರಡು ಕಡೆ ಸಾಧಾರಣದಿಂದ ಭಾರಿ ಮಳೆ ಆಗಲಿದೆ. ಇನ್ನು ದಕ್ಷಿಣ ಒಳನಾಡಿನ ಹಾಸನ ಜಿಲ್ಲೆಯ ಹಲವೆಡೆ ಭಾರೀ ಮಳೆ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ
ಲಿಂಗನಮಕ್ಕಿಯಲ್ಲಿ ಪೂರ್ಣಮಟ್ಟ 554.44 ಮೀಟರ್ ಇದ್ದು, ಗುರುವಾರ 544.74 ಮೀಟರ್ ನೀರಿದೆ. ಹಾರಂಗಿಯ ಪೂರ್ಣಮಟ್ಟ 871.38 ಮೀಟರ್ ಇದ್ದು, ಇಂದು 869.97ರಷ್ಟಿದೆ. ಇನ್ನು ಹೇಮಾವತಿಯ ಪೂರ್ಣಮಟ್ಟ 890.58 ಮೀಟರ್ ಇದ್ದು, ಇಂದು 890.06ಮೀಟರ್‌ನಷ್ಟಿದೆ.

ಕಬಿನಿ ಜಲಾಶಯದ ಮಟ್ಟ
ಕಬಿನಿ ಜಲಾಶಯದ ಪೂರ್ಣ ಮಟ್ಟ 696.13 ಮೀಟರ್‌ನಷ್ಟಿದ್ದು, ಇಂದು 695.42ರಷ್ಟಿದೆ. ಕೆಆರ್‌ಎಸ್‌ನಲ್ಲಿ 38.04 ಸಾಮರ್ಥ್ಯವಿದ್ದು, ಇಂದು ನೀರಿನ ಮಟ್ಟ 37.79 ಮೀಟರ್‌ನಷ್ಟಿದೆ, ಭದ್ರಾದಲ್ಲಿ ನೀರಿನ ಸಾಮರ್ಥ್ಯ 657.73ರಷ್ಟಿದ್ದು, ಇಂದಿನ ಮಟ್ಟ 656.86ರಷ್ಟಿದೆ.

ತುಂಗಭದ್ರಾ ಜಲಾಶಯ ವರದಿ
ತುಂಗಭದ್ರಾದಲ್ಲಿ 497.71 ಮೀಟರ್ ಸಾಮರ್ಥ್ಯವಿದ್ದು, ಇಂದು 497.18 ಮೀಟರ್‌ನಷ್ಟು ನೀರಿದೆ. ಆಲಮಟ್ಟಿಯಲ್ಲಿ ಸಾಮರ್ಥ್ಯ 519.60ರಷ್ಟಿದ್ದರೂ ಇಂದು 517.25 ಮೀಟರ್‌ನಷ್ಟಿದೆ. ಅದೇ ರೀತಿ ನಾರಾಯಣಪುರದಲ್ಲಿ 492.25 ಮೀಟರ್‌ನಷ್ಟು ನೀರಿನ ಸಾಮರ್ಥ್ಯವಿದ್ದರೂ 491.20 ಮೀಟರ್‌ನಷ್ಟು ನೀರಿದೆ ಎಂದು ಮೂಲಗಳು ತಿಳಿಸಿವೆ.

ಸೂಪಾ ಜಲಾಶಯದ ವಿವರ
ಸೂಪಾ ಜಲಾಶಯ 564.00 ನೀರಿನ ಸಾಮರ್ಥ್ಯ ಹೊಂದಿದೆ, 534.60ರಷ್ಟು ನೀರು ಸಂಗ್ರಹವಾಗಿದೆ. ಘಟಪ್ರಭಾದಲ್ಲಿ 662.91 ಮೀಟರ್‌ನಷ್ಟು ನೀರಿನ ಸಾಮರ್ಥ್ಯವಿದ್ದು, 648.49ರಷ್ಟು ನೀರಿದೆ, ಮಲಪ್ರಭಾದಲ್ಲಿ 633.80 ಮೀಟರ್ ನೀರಿನ ಸಾಮರ್ಥ್ಯವಿದ್ದು, 628.16ರಷ್ಟು ನೀರು ಸಂಗ್ರಹವಾಗಿದೆ.











Click it and Unblock the Notifications