ಚಿತ್ರವಿವರ: ಚುನಾವಣೆಯ ದಿಕ್ಕು ಬದಲಿಸೀತು ಬಜೆಟ್ ನ ಈ 5 ಘೋಷಣೆ
Recommended Video

Union Budget 2019 : ಲೋಕಸಭಾ ಚುನಾವಣೆ 2019ಕ್ಕೆ ಎಫೆಕ್ಟ್ ನೀಡುವ ಈ 5 ಮೋದಿ ಸರ್ಕಾರದ ಘೋಷಣೆಗಳು
ನವದೆಹಲಿ, ಫೆಬ್ರವರಿ 01: ಲೋಕಸಭಾ ಚುನಾವಣೆಗೂ ಮುನ್ನ ಮೋದಿ ಸರ್ಕಾರದ ಬಳಿ ಇದ್ದ ಮಧ್ಯಂತರ ಬಜೆಟ್ ಎಂಬ ಪ್ರಬಲ ಅಸ್ತ್ರವನ್ನು ಅಷ್ಟೇ ಪ್ರಭಾವಶಾಲಿಯಾಗಿ ಸರ್ಕಾರ ಹೂಡಿದೆ.
ಬಜೆಟ್ ನಲ್ಲಿ ಆದಾಯ ತೆರಿಗೆ ಮಿತಿಯನ್ನು 2.5 ಲಕ್ಷ ರೂ.ನಿಂದ 5 ಲಕ್ಷ ರೂ.ವರೆಗೆ ಏರಿಸಿದ್ದು, ಚುನಾವಣೆಯ ಮೇಲೆ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇದೆ.
ಏಪ್ರಿಲ್- ಮೇ ತಿಂಗಳಿನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನೋಡಿದರೆ ಹಂಗಾಮಿ ಹಣಕಾಸು ಸಚಿವ ಪಿಯೂಶ್ ಗೋಯಲ್ ಅವರು ಇಂದು ಮಂಡಿಸಿದ ಬಜೆಟ್ 'ಗೇಮ್ ಚೇಂಜರ್' ಆದರೆ ಅಚ್ಚರಿಯಿಲ್ಲ.
ಲೋಕಸಭಾ ಚುನಾವಣೆಯ ದಿಕ್ಕು ಬದಲಿಸುವ ಬಜೆಟ್ ನ 5 ಘೋಷಣೆಗಳು
ಮುಖ್ಯವಾಗಿ ಮಧ್ಯಮ ವರ್ಗ, ಕಾರ್ಮಿಕ ವರ್ಗ ಮತ್ತು ರೈತರನ್ನೇ ಗಮನದಲ್ಲಿಟ್ಟುಕೊಂಡು ಮಂಡಿಸಿದ ಈ ಬಜೆಟ್ 'ಮೋದಿ ಮತ್ತೊಮ್ಮೆ' ಎಂಬ ಘೋಷಣೆಯನ್ನು ಸತ್ಯವಾಗಿಸುತ್ತದಾ ಎಂಬುದನ್ನು ಕಾದು ನೋಡಬೇಕು.
ಬಜೆಟ್ ನಲ್ಲಿ ಸರ್ಕಾರ ಘೋಷಿಸಿದ 5 ಮಹತ್ವದ ಯೋಜನೆಗಳ ಚಿತ್ರ ಮಾಹಿತಿ ಇಲ್ಲಿವೆ.












Click it and Unblock the Notifications