ಕೊರೊನಾ Infographics: ದೇಶದ ಹೊಸ ಪ್ರಕರಣ ತೀವ್ರ ಏರಿಕೆ
ದೇಶದಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆಯು ತೀವ್ರ ಮಟ್ಟಕ್ಕೆ ಏರಿಕೆ ಕಂಡಿದೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಸುಮಾರು 90,928 ಹೊಸ ಕೊರೊನಾ ವೈರಸ್ ಪ್ರಕರಣಗಳು ಕಾಣಿಸಿಕೊಂಡಿದೆ. ನಿನ್ನೆ ದೇಶದಲ್ಲಿ 58,097 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದವು. ಆದರೆ ಇಂದು ಸುಮಾರು ಶೇಕಡ 56ರಷ್ಟು ಕೋವಿಡ್ ಪ್ರಕರಣಗಳ ಏರಿಕೆ ಕಂಡು ಬಂದಿದೆ.
ಇನ್ನು ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 19,206 ಮಂದಿ ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದಾರೆ. ಹಾಗೆಯೇ 325 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಇನ್ನು ಪ್ರಸ್ತುತ ದೇಶದಲ್ಲಿ ಪಾಸಿಟಿವಿಟಿ ದರವು ಶೇಕಡ 6.43 ಆಗಿದೆ. ವಾರದ ಪಾಸಿಟಿವಿಟಿ ದರವು ಶೇಕಡ 3.47ರಲ್ಲಿ ಇದೆ. ಪ್ರಸ್ತುತ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆಯು 2,85,401ಕ್ಕೆ ಏರಿಕೆ ಆಗಿದೆ. ಒಟ್ಟು ದೇಶದಲ್ಲಿ 3,43,41,009 ಮಂದಿ ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದಾರೆ. ಕೋವಿಡ್ ಸಾವು ಪ್ರಕರಣಗಳ ಸಂಖ್ಯೆಯು 4,82,876ಕ್ಕೆ ಏರಿದೆ. ಒಟ್ಟು 148.67 ಕೋಟಿ ಡೋಸ್ ಲಸಿಕೆಯನ್ನು ಹಾಕಲಾಗಿದೆ.
ಮಹಾರಾಷ್ಟ್ರದಲ್ಲಿ 26,538 ಕೊರೊನಾ ವೈರಸ್ ಸೋಂಕು ಪ್ರಕರಣಗಳು ವರದಿ ಆಗಿದೆ. ಇನ್ನು ಪಶ್ಚಿಮ ಬಂಗಾಳದಲ್ಲಿ 14,022 ಹೊಸ ಕೊರೊನಾ ವೈರಸ್ ಪ್ರಕರಣಗಳು ದಾಖಲು ಆಗಿದೆ. ದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ 10,665 ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿದ್ದು, ಮೇ 12ರ ಬಳಿಕ ಇದೇ ಮೊದಲ ಬಾರಿಗೆ ಈ ಪ್ರಮಾಣದಲ್ಲಿ ದೆಹಲಿಯಲ್ಲಿ ಕೋವಿಡ್ ದಾಖಲಾಗಿದೆ. ಇನ್ನು ಎಂಟು ಸಾವು ಕೂಡಾ ಸಂಭವಿಸಿದೆ. ಜೂನ್ 26ರ ಬಳಿಕ ಅಧಿಕ ದೈನಂದಿನ ಸಾವು ಪ್ರಕರಣ ಇದಾಗಿದೆ.

ದೇಶದಲ್ಲಿ ಕೋವಿಡ್ ಪ್ರಕರಣಗಳ ನಿರಂತರ ಏರಿಕೆ
ಡಿಸೆಂಬರ್ 28ರಂದು ದೇಶದಲ್ಲಿ 9,195, ಡಿಸೆಂಬರ್ 29ರಂದು 13,154, ಡಿಸೆಂಬರ್ 30ರಂದು 16,764, ಡಿಸೆಂಬರ್ 31ರಂದು 22,775, ಜನವರಿ 1ರಂದು 27,553, ಜನವರಿ 2ರಂದು 33750, ಜನವರಿ 3ರಂದು 37359, ಜನವರಿ 4ರಂದು 58,097, ಜನವರಿ 5ರಂದು 90,928 ಕೋವಿಡ್ ಪ್ರಕರಣಗಳು ದಾಖಲು ಆಗಿದೆ.
ಈ ನಡುವೆ ದೇಶದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆಯು 2,630ಕ್ಕೆ ಏರಿಕೆ ಕಂಡಿದೆ. ದೇಶದಲ್ಲಿ ಸುಮಾರು 26 ರಾಜ್ಯಗಳಲ್ಲಿ ಓಮಿಕ್ರಾನ್ ಪ್ರಕರಣಗಳು ಕಾಣಿಸಿಕೊಂಡಿದೆ. ಇಲ್ಲಿದೆ ರಾಜ್ಯವಾರು ಓಮಿಕ್ರಾನ್ ಪ್ರಕರಣಗಳ ಪಟ್ಟಿ.













Click it and Unblock the Notifications