Infographics: ಆಗಸ್ಟ್ 20ರಂದು ದೇಶದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ?
ಬೆಂಗಳೂರು, ಆಗಸ್ಟ್ 20: ಭಾರತೀಯ ಮಾರುಕಟ್ಟೆಯಲ್ಲಿ ವರಮಹಾಲಕ್ಷ್ಮೀ ಹಬ್ಬದಂದು ಚಿನ್ನದ ಬೆಲೆಯಲ್ಲಿ ಏರಿಳಿತವಾಗಿದೆ.
ಪರಿಣಾಮ ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 46,240 ರೂಪಾಯಿಗೆ ತಲುಪಿದ್ದು, ಶುದ್ಧ ಚಿನ್ನ 10 ಗ್ರಾಂ 50,440 ರೂಪಾಯಿ ದಾಖಲಾಗಿದೆ. ಇದೇ ವೇಳೆ ಬೆಳ್ಳಿ ಬೆಲೆಯು ಕೆಜಿಗೆ 300 ರೂಪಾಯಿ ಕುಸಿದು 62,200 ರೂಪಾಯಿ ಮುಟ್ಟಿದೆ.
ಆಗಸ್ಟ್ 19 ರಂದು 22 ಕ್ಯಾರೇಟ್ ಚಿನ್ನದ ಬೆಲೆಯಲ್ಲಿ 370 ರೂ. ಇಳಿಕೆಯಾಗಿತ್ತು, ಆದರೆ ಆಗಸ್ಟ್ 20 ರಂದು ಮತ್ತೆ 270 ರೂ. ಏರಿಕೆ ಕಂಡಿದೆ. 1 ಗ್ರಾಂ ಚಿನ್ನದ ಬೆಲೆ 4,640 ರೂ ಇದ್ದು, 27 ರೂ. ಏರಿಕೆ ಕಂಡಿದೆ. 100 ಗ್ರಾಂ ಚಿನ್ನದ ಬೆಲೆ 4,64,000 ರೂ. ಇದ್ದು 2700 ರೂ. ಏರಿಕೆಯಾಗಿದೆ.
ಭಾರತದ ಪ್ರಮುಖ ನಗರಗಳಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ನಗರ ಚಿನ್ನದ ಬೆಲೆ(ರೂ.ಗಳಲ್ಲಿ)
ಮುಂಬೈ 46,120
ಚೆನ್ನೈ 44,650
ದೆಹಲಿ 46,240
ಕೊಲ್ಕತ್ತಾ 46,590
ಬೆಂಗಳೂರು 44,250
ಹೈದರಾಬಾದ್ 44,250
ಕೇರಳ 44,250
ಜೈಪುರ 46,300
ಪುಣೆ 45,390
ಉತ್ತರ ಪ್ರದೇಶ - ಲಕ್ನೋ 46,240
ಪಟ್ನಾ 45,390
ನಾಗ್ಪುರ 46,120
ಕೊರೊನಾ ನಂತರ ಲಾಕ್‌ಡೌನ್ ಆಗಿ ಚಿನ್ನದ ಉದ್ಯಮಕ್ಕೆ ಬರೆ ಬಿದ್ದಿತ್ತು. ಆಭರಣ ಖರೀದಿಸುವವರಿದ್ದರೂ ಆಭರಣ ಮಳಿಗೆಗಳು ಮುಚ್ಚಲ್ಪಟ್ಟಿದ್ದವು. ಆದರೆ ಲಾಕ್‌ಡೌನ್ ನಂತರ ಜನರು ಆರ್ಥಿಕ ತೊಂದರೆಯಲ್ಲಿದ್ದರೂ ಆಭರಣ ಖರೀದಿಯಲ್ಲಿ ಅಂತಹ ಇಳಕೆ ಕಂಡುಬಂದಿರಲಿಲ್ಲ. ಈಗ ಅನ್‌ಲಾಕ್ ಪ್ರಕ್ರಿಯೆ ಆರಂಭವಾದ ನಂತರ ಮತ್ತೆ ಚಿನ್ನದ ವಹಿವಾಟು ಜೋರಾಗಿದೆ.
ರಕ್ಷಾ ಬಂಧನ ಹಬ್ಬವೂ ಸಮೀಪಿಸಿದ್ದು ರಾಖಿ ಕಟ್ಟುವ ಸಹೋದರಿಯರಿಗೆ ಚಂದದ ಆಭರಣ ಗಿಫ್ಟ್ ಕೊಡುವ ಸಾಧ್ಯತೆಯೂ ಈ ಬಾರಿ ಹೆಚ್ಚಾಗಿದೆ. ಹಬ್ಬಗಳು ಇನ್ನೇನು ಆರಂಭವಾಗಿದ್ದು, ಇದೇ ಸಂದರ್ಭ ಚಿನ್ನದ ದರ ಇಳಿಕೆಯಾಗಿದ್ದು, ಉಡುಗೊರೆ ನೀಡುವವರಿಗೆ ಚಿನ್ನದ ಆಯ್ಕೆ ಮಾಡಲು ಚಿಂತೆ ಇಲ್ಲ.
ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?: ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.













Click it and Unblock the Notifications