ಇನ್ಫೋಗ್ರಾಫಿಕ್ಸ್: ಭಾರತದ ಜೊತೆ ಮೆಕ್ಸಿಕೋ ಕಾಡುತ್ತಿರುವ ಮಹಾಮಾರಿ
ಬೆಂಗಳೂರು, ಜುಲೈ 21: ಜಾಗತಿಕ ಮಹಾಮಾರಿ ಕೊವಿಡ್19 ಅತಿ ಹೆಚ್ಚು ಸೋಂಕಿತರ ಪಟ್ಟಿಯಲ್ಲಿರುವ ಟಾಪ್ 10 ದೇಶಗಳು, ಅತಿ ಹೆಚ್ಚು ಸಾವು ಕಂಡಿರುವ ದೇಶಗಳ ಟಾಪ್ 10 ದೇಶಗಳ ಪಟ್ಟಿ ಇಲ್ಲಿದೆ. ಇರಾನ್ ನಲ್ಲಿ ಒಂದೇ ದಿನದಲ್ಲಿ ಅತಿ ಹೆಚ್ಚು ಸಾವು ಕಂಡು ಬಂದಿದೆ. ಲಾಕ್ಡೌನ್ ತೆಗೆದ ಬಳಿಕ ಸ್ಪೇನ್ ನಲ್ಲಿ ಕೊರೊನಾವೈರಸ್ ನಿಯಂತ್ರಣಕ್ಕೆ ಸಿಗುತ್ತಿಲ್ಲ.
ರಷ್ಯಾ, ಮೆಕ್ಸಿಕೋದಲ್ಲಿ ಒಂದು ದಿನದಲ್ಲಿ ಅತಿ ಹೆಚ್ಚು ಸೋಂಕಿತ ಪ್ರಕರಣ ದಾಖಲಾದ ದೇಶಗಳೆನಿಸಿವೆ. ಇರಾನ್ ಜೊತೆಗೆ ಮೆಕ್ಸಿಕೋ ಕೂಡಾ ಒಂದು ದಿನದಲ್ಲಿ ಹೆಚ್ಚು ಸಾವು ಕಂಡಿರುವ ದೇಶವಾಗಿದೆ.
ಜುಲೈ 21ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 14,883,578 ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 614,019ಕ್ಕೇರಿದೆ. ಒಟ್ಟಾರೆ, 8,937,163ಮಂದಿ ಗುಣಮುಖರಾಗಿದ್ದಾರೆ. ಒಟ್ಟು 5,332,396 ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 63,721 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ.
ಮೆಕ್ಸಿಕೋದಲ್ಲಿ ಒಂದೇ ದಿನ 5,172ಪ್ರಕರಣ, ರಷ್ಯಾದಲ್ಲಿ 5,842 ಕೇಸ್ ಕಾಣಿಸಿಕೊಂಡಿದೆ. ಇರಾನ್ ನಲ್ಲಿ 229ಮೆಕ್ಸಿಕೋದಲ್ಲಿ ಒಂದೇ ದಿನ 301ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಅತಿ ಹೆಚ್ಚು ಸೋಂಕಿತರ ಪಟ್ಟಿಯಲ್ಲಿ ಈಗ 5 ದೇಶಗಳು 3 ಲಕ್ಷಕ್ಕೂ ಅಧಿಕ ಸೋಂಕಿತರನ್ನು ಹೊಂದಿವೆ.
2 ಲಕ್ಷಕ್ಕೂ ಅಧಿಕ ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಗೆ ಕೊಲಂಬಿಯಾ ಸೇರ್ಪಡೆಯಾಗಿದ್ದು, 9 ರಾಷ್ಟ್ರಗಳಿವೆ. 4 ರಾಷ್ಟ್ರಗಳು 1 ಲಕ್ಷಕ್ಕೂ ಅಧಿಕ ಸೋಂಕಿತರನ್ನು ಹೊಂದಿವೆ.
ಮೃತರ ಸಂಖ್ಯೆಯಲ್ಲಿ ಟಾಪ್ 10 ರಾಷ್ಟ್ರಗಳಲ್ಲದೆ ಅಧಿಕ ಸಾವು ಕಂಡಿರುವ ದೇಶಗಳ ಪೈಕಿ ಪೆರು(13,384) ರಷ್ಯಾ (12,427), ಬೆಲ್ಜಿಯಂ (9,805), ಜರ್ಮನಿ (9,173), ಕೆನಡಾ (8,858), ಚಿಲಿ (8,633), ಕೊಲಂಬಿಯಾ(6,929), ನೆದರ್ಲೆಂಡ್ಸ್(6,136), ಪಾಕಿಸ್ತಾನ(5,639) ಸ್ವೀಡನ್ (5,639), ಟರ್ಕಿ(5,508), ಈಕ್ವೆಡಾರ್(5,318), ದಕ್ಷಿಣ ಆಫ್ರಿಕಾ(5,173) ಕಾಣಿಸಿಕೊಂಡಿವೆ.
ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳ ಸಚಿತ್ರ ವಿವರ ಇಲ್ಲಿದೆ...ವಿನ್ಯಾಸ: ಭರತ್ ಎಚ್. ಸಿ
****
ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು:
ಯುಎಸ್ಎ: 3,962,380ಪ್ರಕರಣಗಳು
ಬ್ರೆಜಿಲ್: 2,121,645
ಭಾರತ: 1,156,189
ರಷ್ಯಾ: 783,328
ದಕ್ಷಿಣ ಆಫ್ರಿಕಾ: 373,628
ಪೆರು: 357,681
ಮೆಕ್ಸಿಕೋ: 349,396
ಚಿಲಿ: 333,029
ಸ್ಪೇನ್: 311,916
ಯುಕೆ: 295,372

ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
ಯುಎಸ್ಎ: ಮೃತರ ಸಂಖ್ಯೆ 143,872
ಬ್ರೆಜಿಲ್: 80,251
ಯುಕೆ: 45,312
ಮೆಕ್ಸಿಕೋ: 39,485
ಇಟಲಿ: 35,058
ಫ್ರಾನ್ಸ್: 30,177
ಸ್ಪೇನ್: 28,422
ಭಾರತ: 28,099
ಇರಾನ್: 14,634
ಪೆರು: 13,187













Click it and Unblock the Notifications