ಕೊವಿಡ್ 19 : 1 ದಿನದಲ್ಲಿ ಹೆಚ್ಚು ಸೋಂಕು: ರಷ್ಯಾ, ಮೆಕ್ಸಿಕೋ ಜೊತೆ ಭಾರತ

ಬೆಂಗಳೂರು, ಜುಲೈ 17: ಜಾಗತಿಕ ಮಹಾಮಾರಿ ಕೊವಿಡ್19 ಅತಿ ಹೆಚ್ಚು ಸೋಂಕಿತರ ಪಟ್ಟಿಯಲ್ಲಿರುವ ಟಾಪ್ 10 ದೇಶಗಳು, ಅತಿ ಹೆಚ್ಚು ಸಾವು ಕಂಡಿರುವ ದೇಶಗಳ ಟಾಪ್ 10 ದೇಶಗಳ ಪಟ್ಟಿ ಇಲ್ಲಿದೆ. ಈ ದಿನ ಮೆಕ್ಸಿಕೋ, ರಷ್ಯಾ ಹಾಗೂ ಭಾರತ ಒಂದು ದಿನದಲ್ಲಿ ಅತಿ ಹೆಚ್ಚು ಸೋಂಕಿತ ಪ್ರಕರಣ ದಾಖಲಾದ ದೇಶಗಳೆನಿಸಿವೆ.

Recommended Video

      Bengaluru Lockdown ಮುಂದಿನ ವಾರವೂ ಇರುತ್ತಾ ? | Oneindia Kannada

      ಜುಲೈ 17ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 13,990,004 ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 593,596ಕ್ಕೇರಿದೆ. ಒಟ್ಟಾರೆ, 8,314,445ಮಂದಿ ಗುಣಮುಖರಾಗಿದ್ದಾರೆ. ಒಟ್ಟು 4,958,171 ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 59,967 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ.

      ಮೆಕ್ಸಿಕೋದಲ್ಲಿ ಒಂದೇ ದಿನ 6,406 ಪ್ರಕರಣ ಕಾಣಿಸಿಕೊಂಡಿದೆ. ಮೆಕ್ಸಿಕೋದಲ್ಲಿ ಒಂದೇ ದಿನ 668ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಅತಿ ಹೆಚ್ಚು ಸೋಂಕಿತರ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದ ದಕ್ಷಿಣ ಆಫ್ರಿಕಾ 6ನೇ ಸ್ಥಾನಕ್ಕೆರಿದೆ.

      ಇಟಲಿ 14ನೇ ಸ್ಥಾನಕ್ಕೆ ಕುಸಿದಿದೆ. ಟಾಪ್ 10ನೇ ಸ್ಥಾನದಲ್ಲಿ ಯುಕೆ ನಂತರ ಸ್ಥಾನದಲ್ಲಿ ಇರಾನ್, ಪಾಕಿಸ್ತಾನ, ಸೌದಿ ಅರೇಬಿಯಾ, ಇಟಲಿ, ಟರ್ಕಿ, ಜರ್ಮನಿ 2 ಲಕ್ಷಕ್ಕೂ ಅಧಿಕ ಸೋಂಕಿತರನ್ನು ಹೊಂದಿವೆ. ಬಾಂಗ್ಲಾದೇಶ ಬಹುತೇಕ 2 ಲಕ್ಷದ ಆಸುಪಾಸಿನ ಸೋಂಕಿತರನ್ನು ಹೊಂದಿದೆ.

      ಮೃತರ ಸಂಖ್ಯೆಯಲ್ಲಿ ಟಾಪ್ 10 ರಾಷ್ಟ್ರಗಳಲ್ಲದೆ 5 ಸಾವಿರಕ್ಕೂ ಅಧಿಕ ಸಾವು ಕಂಡಿರುವ ದೇಶಗಳ ಪೈಕಿ ರಷ್ಯಾ (12,123), ಬೆಲ್ಜಿಯಂ (9,795), ಜರ್ಮನಿ (9,157), ಕೆನಡಾ (8,827), ಚಿಲಿ (7,290), ನೆದರ್ಲೆಂಡ್ಸ್(6,138), ಸ್ವೀಡನ್ (5,593), ಟರ್ಕಿ(5,440) ಕಾಣಿಸಿಕೊಂಡಿವೆ.

      ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳ ಸಚಿತ್ರ ವಿವರ ಇಲ್ಲಿದೆ...

      COVID-19 Infographics: Countries With Most Number of Infected and Deaths July 17

      ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು:
      ಯುಎಸ್ಎ: 3,698,358ಪ್ರಕರಣಗಳು
      ಬ್ರೆಜಿಲ್: 2,015,382
      ಭಾರತ: 1,011,787
      ರಷ್ಯಾ: 759,203
      ಪೆರು: 341,586
      ದಕ್ಷಿಣ ಆಫ್ರಿಕಾ: 324,221
      ಮೆಕ್ಸಿಕೋ: 324,041
      ಚಿಲಿ: 323,698
      ಸ್ಪೇನ್: 305,935
      ಯುಕೆ: 292,552

      COVID-19 Infographics: Countries With Most Number of Infected and Deaths July 17


      ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
      ಯುಎಸ್ಎ: ಮೃತರ ಸಂಖ್ಯೆ 141,150
      ಬ್ರೆಜಿಲ್: 76,846
      ಯುಕೆ: 45,119
      ಮೆಕ್ಸಿಕೋ: 37,574
      ಇಟಲಿ: 35,017
      ಫ್ರಾನ್ಸ್: 30,138
      ಸ್ಪೇನ್: 28,416
      ಭಾರತ: 24,936
      ಇರಾನ್: 13,791
      ಪೆರು: 12,615

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+