ಕೊವಿಡ್ 19: ಭಾರತದಂತೆ ರಷ್ಯಾದಲ್ಲೂ ಕೂಡಾ 7 ಲಕ್ಷ ಪ್ಲಸ್ ಕೇಸ್

ಬೆಂಗಳೂರು, ಜುಲೈ 8: ಜಾಗತಿಕ ಮಹಾಮಾರಿ ಕೊವಿಡ್19 ಸೋಂಕಿನಿಂದ ಸಾವು ನೋವಿನ ಇಂದಿನ ಲೆಕ್ಕಾಚಾರದ ಸಚಿತ್ರ ವರದಿ ಇಲ್ಲಿದೆ. ಅತಿ ಹೆಚ್ಚು ಸೋಂಕಿತರ ಪಟ್ಟಿಯಲ್ಲಿರುವ ಟಾಪ್ 10 ದೇಶಗಳು, ಅತಿ ಹೆಚ್ಚು ಸಾವು ಕಂಡಿರುವ ದೇಶಗಳ ಟಾಪ್ 10 ದೇಶಗಳ ಪಟ್ಟಿ ಇಲ್ಲಿದೆ. ಭಾರತ 7 ಲಕ್ಷಕ್ಕೂ ಅಧಿಕ ಸೋಂಕಿತರನ್ನು ಹೊಂದಿದೆ.

ಇನ್ನೊಂದೆಡೆ ರಷ್ಯಾದಲ್ಲಿ ಸತತವಾಗಿ ಸರಾಸರಿ 6 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ಕಂಡು ಬಂದಿದೆ. ಜೊತೆಗೆ ರಷ್ಯಾದಲ್ಲಿ ಮರಣ ಪ್ರಮಾಣವೂ ಏರಿಕೆಯಾಗುವ ಲಕ್ಷಣಗಳಿವೆ. ಸದ್ಯ 10 ಸಾವಿರಕ್ಕೂ ಅಧಿಕ ಮಂದಿ ಮೃತರಾಗಿದ್ದಾರೆ. ಭಾರತದಲ್ಲಿ ಸಾವಿನ ಸಂಖ್ಯೆ ಪ್ರಮಾಣದಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ ಜುಲೈ 8ಕ್ಕೆ ಸಾವು ನೋವಿನ ಅಂಕಿ ಅಂಶ ಇಲ್ಲಿದೆ..

COVID-19 Infographics: Countries With Most Number of Infected

ಜುಲೈ 8ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 11,957,477 ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 546,785ಕ್ಕೇರಿದೆ. ಒಟ್ಟಾರೆ, 6,904,004. ಮಂದಿ ಗುಣಮುಖರಾಗಿದ್ದಾರೆ. ಒಟ್ಟು 4,508,159 ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 58,239 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ.

ಮೆಕ್ಸಿಕೋದಲ್ಲಿ ಒಂದೇ ದಿನ 6,258 ಪ್ರಕರಣ ಕಾಣಿಸಿಕೊಂಡು ಟಾಪ್ 10 ಪಟ್ಟಿಯೊಳಗೆ ಮತ್ತೆ ಸೇರಿದೆ. ಇರಾನ್ ಮೇಲಕ್ಕೇರಿದ್ದರೆ, ಟಾಪ್ 11ಕ್ಕೆ ಇಟಲಿ ಕುಸಿದಿದ್ದು, ನಂತರ ಸ್ಥಾನದಲ್ಲಿ ಪಾಕಿಸ್ತಾನ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ 2 ಲಕ್ಷಕ್ಕೂ ಅಧಿಕ ಸೋಂಕಿತರನ್ನು ಹೊಂದಿವೆ.

ಮೃತರ ಸಂಖ್ಯೆಯಲ್ಲಿ ಟಾಪ್ 10 ರಾಷ್ಟ್ರಗಳಲ್ಲದೆ 5 ಸಾವಿರಕ್ಕೂ ಅಧಿಕ ಸಾವು ಕಂಡಿರುವ ದೇಶಗಳ ಪೈಕಿ ರಷ್ಯಾ (10,667), ಬೆಲ್ಜಿಯಂ ( 9,776), ಜರ್ಮನಿ (9,103), ಕೆನಡಾ (8,711), ಚಿಲಿ (6,434), ನೆದರ್ಲೆಂಡ್ಸ್(6,132), ಸ್ವೀಡನ್ (5,447), ಟರ್ಕಿ(5,260) ಕಾಣಿಸಿಕೊಂಡಿವೆ.

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳ ಸಚಿತ್ರ ವಿವರ ಇಲ್ಲಿದೆ...

COVID-19 Infographics: Countries With Most Number of Infected

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು:
ಯುಎಸ್ಎ: 3,097,538 ಪ್ರಕರಣಗಳು
ಬ್ರೆಜಿಲ್: 1,674,655
ಭಾರತ: 746,506
ರಷ್ಯಾ: 700,792
ಪೆರು: 309,278
ಚಿಲಿ: 301,019
ಸ್ಪೇನ್: 299,210
ಯುಕೆ: 286,349
ಮೆಕ್ಸಿಕೋ: 268,008
ಇರಾನ್: 248,379

COVID-19 Infographics: Countries With Most Number of Infected and Deaths July 08

ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
ಯುಎಸ್ಎ: ಮೃತರ ಸಂಖ್ಯೆ 133,991
ಬ್ರೆಜಿಲ್: 66,868
ಯುಕೆ: 44,391
ಇಟಲಿ: 34,899
ಮೆಕ್ಸಿಕೋ: 32,014
ಫ್ರಾನ್ಸ್: 29,933
ಸ್ಪೇನ್: 28,392
ಭಾರತ: 20,684
ಇರಾನ್: 12,084
ಪೆರು: 10,952

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+