Infographics: ಅತಿ ಹೆಚ್ಚು ಸೋಂಕಿತ, ಮರಣ ಟಾಪ್ 10 ಪಟ್ಟಿ

ಬೆಂಗಳೂರು, ಜುಲೈ 3: ಜಾಗತಿಕ ಮಹಾಮಾರಿ ಕೊವಿಡ್19 ಸೋಂಕಿನಿಂದ ಅಪಾರ ಪ್ರಮಾಣದಲ್ಲಿ ಸಾವು ನೋವು ಉಂಟಾಗಿದೆ. ಭಾರತದಲ್ಲಿ ದಿನದಿಂದ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಜುಲೈ 2ರಂದು 6 ಲಕ್ಷಕ್ಕೂ ಅಧಿಕ ಸಂಖ್ಯೆ ಸೋಂಕಿತ ಹೊಂದಿರುವ ರಾಷ್ಟ್ರಗಳ ಪಟ್ಟಿಗೆ ರಷ್ಯಾ ಹಾಗೂ ಭಾರತ ಸೇರಿಕೊಂಡಿವೆ.

ರಷ್ಯಾದಲ್ಲಿ ಮರಣ ಪ್ರಮಾಣ ತೀರಾ ಕಡಿಮೆಯಿದ್ದರೆ ಭಾರತದಲ್ಲಿ ಸಾವಿನ ಸಂಖ್ಯೆ ಪ್ರಮಾಣದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಸೋಂಕು ನಿಯಂತ್ರಣ, ಸೋಂಕು ನಿವಾರಣೆಗಾಗಿ ಲಸಿಕೆ ತಯಾರಿ ಜೋರಾಗಿ ನಡೆದಿದೆ. ಈಗಾಗಲೇ ಎರಡು ಮೂರು ಔಷಧಗಳು ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿವೆ. ಆದರೆ, ವಿಶ್ವದೆಲ್ಲೆಡೆ ವ್ಯಾಪ್ತಿಸಿರುವ ಸೋಂಕು ದಿನದಿಂದ ದಿನಕ್ಕೆ ಬಲಿ ಪಡೆಯುತ್ತಲೇ ಇದೆ.

ಜುಲೈ 3ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 11,011,667 ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 524,584 ಕ್ಕೇರಿದೆ. ಒಟ್ಟಾರೆ, 6,169,495 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 4,317,588 ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 57,877 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ.

ಮೆಕ್ಸಿಕೋದಲ್ಲಿ ಒಂದೇ ದಿನ 6,741 ಪ್ರಕರಣ ಕಾಣಿಸಿಕೊಂಡು ಟಾಪ್ 10 ಪಟ್ಟಿಯೊಳಗೆ ಸೇರಿದೆ. ಟಾಪ್ 11ಕ್ಕೆ ಇರಾನ್ ಕುಸಿದಿದ್ದು, ನಂತರ ಸ್ಥಾನದಲ್ಲಿ ಪಾಕಿಸ್ತಾನ, ಟರ್ಕಿ 2 ಲಕ್ಷಕ್ಕೂ ಸೋಂಕಿತರನ್ನು ಹೊಂದಿವೆ.

ಮೃತರ ಸಂಖ್ಯೆಯಲ್ಲಿ ಟಾಪ್ 10 ರಾಷ್ಟ್ರಗಳಲ್ಲದೆ 5 ಸಾವಿರಕ್ಕೂ ಅಧಿಕ ಸಾವು ಕಂಡಿರುವ ದೇಶಗಳ ಪೈಕಿ ಬೆಲ್ಜಿಯಂ: 9,765, ರಷ್ಯಾ (9,859), ಜರ್ಮನಿ (9,064), ಕೆನಡಾ (8,642), ನೆದರ್ಲೆಂಡ್ಸ್(6,113), ಚಿಲಿ (5,920), ಸ್ವೀಡನ್ (5,411) ಕಾಣಿಸಿಕೊಂಡಿವೆ.

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳ ಸಚಿತ್ರ ವಿವರ ಇಲ್ಲಿದೆ...

COVID-19 Infographics: Countries With Most Number of Infected and Deaths July 03

COVID-19 Infographics: Countries With Most Number of Infected and Deaths July 03


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+