Infographics: ವಾಸ್ತುಪ್ರಕಾರ ಸಚಿವರಿಗೆ ಹಂಚಿಕೆಯಾದ ಕೊಠಡಿ, ಗೃಹ ಕಚೇರಿ
ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಮ್ಮ ಸಚಿವ ಸಂಪುಟದ 17 ಸಚಿವರುಗಳಿಗೆ ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿ ಕೊಠಡಿಗಳನ್ನು ಹಂಚಿಕೆ ಮಾಡಿದ್ದಾರೆ.
ಬಹುತೇಕ ಎಲ್ಲಾ ಸಚಿವರುಗಳು ಸಾಂಪ್ರದಾಯಿಕ ಪೂಜೆ ಪುನಸ್ಕಾರ ನಡೆಸಿ, ವಾಸ್ತುಪ್ರಕಾರ ತಮ್ಮ ಕಚೇರಿಗಳನ್ನು ಪ್ರವೇಶಿಸಿದ್ದಾರೆ. 13 ಸಚಿವರಿಗೆ ವಿಧಾನಸೌಧ ಕೊಠಡಿ ಹಂಚಿಕೆಯಾದ ಬೆನ್ನಲ್ಲೇ ಇದೀಗ ವಸತಿ ಗೃಹ ಕೂಡ ಹಂಚಿಕೆ ಮಾಡಲಾಗಿದೆ.
ಯಡಿಯೂರಪ್ಪ ಅವರ ಸಚಿವ ಸಂಪುಟದ 17 ಮಂದಿ ಸಚಿವರ ಪೈಕಿ 12 ಮಂದಿಗೆ ಕೊಠಡಿ ಹಂಚಿಕೆ ಸಚಿವರಾಗಿ ಅನುಭವವಿದೆ. ಮಿಕ್ಕ ಐವರಿಗೆ ಇದು ಹೊಸ ಅನುಭವ. ಡಾ. ಸಿ.ಎನ್ ಅಶ್ವಥ ನಾರಾಯಣ, ಶಶಿಕಲಾ ಜೊಲ್ಲೆ, ಪ್ರಭು ಚವಾಣ್, ಮಾಧುಸ್ವಾಮಿ ಅವರಿಗೆ ಸಚಿವರಾಗಿ ಹೊಸ ಅನುಭವ, ಹೊಸ ಕೊಠಡಿ ಲಭ್ಯತೆ.
ಬದಲಾವಣೆ: ಆಗಸ್ಟ್ 26ರಂದು ಮರು ಆದೇಶ ನೀಡಿ, ಲಕ್ಷ್ಮಣ ಸವದಿ, ವಿ ಸೋಮಣ್ಣ, ಪ್ರಭು ಚೌವಾಣ್ ಅವರಿಗೆ ನೀಡಿದ್ದ ಕೊಠಡಿ ಸಂಖ್ಯೆಗಲನ್ನು ಬದಲಾಯಿಸಲಾಗಿದೆ.
* ಲಕ್ಷ್ಮಣ ಸವದಿ 301-301 ಎ ವಿಧಾನಸೌಧದಲ್ಲಿ ಕೊಠಡಿ ನೀಡಲಾಗಿತ್ತು. ಈಗ 344-345, ವಿಕಾಸಸೌಧ
* ವಿ ಸೋಮಣ್ಣ - 329-329 A ವಿಧಾನಸೌಧ ಬದಲಿಗೆ 143-146 ವಿಕಾಸ ಸೌಧ














Click it and Unblock the Notifications