• search
 • Live TV
keyboard_backspace

ವುಹಾನ್‌ ಮಾರುಕಟ್ಟೆ ಮೀನು ಮಾರಾಟಗಾರ್ತಿಯಲ್ಲಿ ಮೊದಲ ಕೋವಿಡ್‌ ಪತ್ತೆ: ಹೊಸ ವರದಿ

Google Oneindia Kannada News

ವಾಷಿಂಗ್ಟನ್‌, ನವೆಂಬರ್‌ 21: ಚೀನಾದ ವುಹಾನ್‌ ನಗರದ ಹುವಾನಾನ್ ಮಾರುಕಟ್ಟೆಯ ಮಹಿಳಾ ಮೀನು ಮಾರಾಟಗಾರರಲ್ಲಿ ಮೊದಲ ಬಾರಿಗೆ ಕೊರೊನಾ ವೈರಸ್‌ ಸೋಂಕು ಕಾಣಿಸಿಕೊಂಡಿದೆ. ಮಾರುಕಟ್ಟೆಯಿಂದ ಹಲವಾರು ಮೈಲುಗಳಷ್ಟು ದೂರದಲ್ಲಿ ವಾಸಿಸುತ್ತಿದ್ದ ಪುರುಷ ವ್ಯಕ್ತಿಗೆ ಮೊದಲ ಬಾರಿಗೆ ಕೋವಿಡ್‌ ಕಾಣಿಸಿಕೊಂಡಿದ್ದು ಅಲ್ಲ ಎಂದು ಹೊಸ ವರದಿಯೊಂದು ಉಲ್ಲೇಖ ಮಾಡಿದೆ.

ಈವರೆಗೆ ಚೀನಾದ ವುಹಾನ್‌ ನಗರದ ಹುವಾನನ್ ಮಾರುಕಟ್ಟೆಯಿಂದ ದಕ್ಷಿಣದಲ್ಲಿ ಸುಮಾರು 30 ಕಿಮೀ ದೂರದಲ್ಲಿ ವಾಸಿಸುತ್ತಿದ್ದ, 41 ವರ್ಷದ ಪುರುಷನಿಗೆ ಮೊದಲ ಬಾರಿಗೆ ಕೊರೊನಾವೈರಸ್‌ ಸೋಂಕು ಕಾಣಿಸಿಕೊಂಡಿದೆ ಎಂದು ನಂಬಲಾಗಿದೆ. ಆದರೆ ಇದನ್ನು ಇತ್ತೀಚಿನ ವರದಿಯೊಂದು ಅಲ್ಲಗಳೆಯುತ್ತದೆ.

ಯುಎಸ್‌ ಅನ್ನು ಹಿಂದಿಕ್ಕಿ ವಿಶ್ವದ ಶ್ರೀಮಂತ ರಾಷ್ಟ್ರವಾದ ಈ ರಾಷ್ಟ್ರ!ಯುಎಸ್‌ ಅನ್ನು ಹಿಂದಿಕ್ಕಿ ವಿಶ್ವದ ಶ್ರೀಮಂತ ರಾಷ್ಟ್ರವಾದ ಈ ರಾಷ್ಟ್ರ!

ಅರಿಝೋನಾ ವಿಶ್ವವಿದ್ಯಾನಿಲಯದ ಪರಿಸರ ವಿಜ್ಞಾನ ಮತ್ತು ವಿಕಸನದ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥ ಮೈಕೆಲ್ ವೊರೊಬೆ ಅವರು ವಿಜ್ಞಾನ ಜರ್ನಲ್‌ನಲ್ಲಿ ಈ ವರದಿಯನ್ನು ಪ್ರಕಟ ಮಾಡಿದ್ದಾರೆ. ವುಹಾನ್‌ನ ಪ್ರಾಣಿಗಳ ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಮಾರಟಗಾರರು ಓರ್ವರಿಗೆ 2019 ರ ಡಿಸೆಂಬರ್‌ 11 ರಂದು ಕೊರೊನಾ ವೈರಸ್‌ ಸೋಂಕು ಕಾಣಿಸಿಕೊಂಡಿದೆ, ಇದು ವಿಶ್ವದಲ್ಲಿ ಮೊದಲ ಕೋವಿಡ್‌ ಪ್ರಕರಣ ಎಂದು ನಂಬಲಾಗಿದೆ.

 ಈವರೆಗೆ ಮೊದಲ ಕೋವಿಡ್‌ ಪ್ರಕರಣ ಯಾವುದು?

ಈವರೆಗೆ ಮೊದಲ ಕೋವಿಡ್‌ ಪ್ರಕರಣ ಯಾವುದು?

ವರದಿಗಳ ಪ್ರಕಾರ ಡಿಸೆಂಬರ್‌ 8 ರಂದು ಪುರುಷ ವ್ಯಕ್ತಿಗೆ ಅನಾರೋಗ್ಯ ಕಾಣಿಸಿಕೊಂಡಿದೆ. ಅದು ಹಲ್ಲಿನಲ್ಲಿ ಇದ್ದ ಸಮಸ್ಯೆಯ ಕಾರಣದಿಂದಾಗಿ ಆತನಿಗೆ ಆರೋಗ್ಯ ಸಮಸ್ಯೆಯು ಕಾಣಿಸಿಕೊಂಡಿತ್ತು. ಆದರೆ ಆ ವ್ಯಕ್ತಿಗೆ ನಿಜವಾಗಿ ಕೊರೊನಾ ವೈರಸ್‌ ಸೋಂಕು ಪ್ರಕರಣವು ಡಿಸೆಂಬರ್‌ 16 ರಂದು ಕಾಣಿಸಿಕೊಂಡಿದೆ. "ಈವರೆಗೆ 41 ವರ್ಷ ಪ್ರಾಯದ ವ್ಯಕ್ತಿಗೆ ಮೊದಲ ಬಾರಿಗೆ ಕೊರೊನಾ ವೈರಸ್‌ ಸೋಂಕು ಕಾಣಿಸಿಕೊಂಡಿದೆ ಎಂದು ನಂಬಲಾಗಿದೆ. ಈತ ವುಹಾನ್‌ನ ನಗರದ ಹುವಾನಾನ್ ಮಾರುಕಟ್ಟೆಯಿಂದ 30 ಕಿಮೀ ದೂರದಲ್ಲಿ ವಾಸಿಸುತ್ತಿದ್ದ. ಈತನಿಗೆ ಡಿಸೆಂಬರ್‌ 8 ರಂದು ಅನಾರೋಗ್ಯ ಕಾಣಿಸಿಕೊಂಡಿದೆ. ಆದ್ದರಿಂದಾಗಿ ಈತನಿಗೆಯೇ ಮೊದಲ ಬಾರಿಗೆ ಕೋವಿಡ್‌ ಸೋಂಕು ತಗುಲಿದೆ ಎಂಂದು ನಂಬಲಾಗಿದೆ," ಎಂದು ವಿಜ್ಞಾನಿಗಳು ಹೇಳಿದ್ದಾರೆ.

 ಪುರುಷ ವ್ಯಕ್ತಿಗೆ ಡಿ. 8 ರಂದು ಹಲ್ಲು ನೋವು ಕಾಣಿಸಿತ್ತು ಕೋವಿಡ್‌ ಅಲ್ಲ

ಪುರುಷ ವ್ಯಕ್ತಿಗೆ ಡಿ. 8 ರಂದು ಹಲ್ಲು ನೋವು ಕಾಣಿಸಿತ್ತು ಕೋವಿಡ್‌ ಅಲ್ಲ

ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಅರಿಝೋನಾ ವಿಶ್ವವಿದ್ಯಾನಿಲಯದ ಪರಿಸರ ವಿಜ್ಞಾನ ಮತ್ತು ವಿಕಸನದ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥ ಮೈಕೆಲ್ ವೊರೊಬೆ, "ನಾವು ಈ ವ್ಯಕ್ತಿಯನ್ನು ಸಂದರ್ಶನ ಮಾಡಿದಾಗ, ಆತನಿಗೆ ಕೋವಿಡ್‌ ಲಕ್ಷಣಗಳು ಡಿಸೆಂಬರ್‌ 16 ರಂದು ಕಾಣಿಸಿಕೊಂಡಿದೆ ಎಂದು ಹೇಳಿದ್ದಾನೆ. ಆತ ವಯಸ್ಕನಾಗುತ್ತಿದ್ದ ಕಾರಣದಿಂದಾಗಿ ಹಲ್ಲಿನಲ್ಲಿ ಆಗುವ ಬೆಳವಣಿಗೆಯಿಂದಾಗಿ ಡಿಸೆಂಬರ್‌ 8 ಆತನಿಗೆ ಹಲ್ಲು ನೋವು ಕಾಣಿಸಿಕೊಂಡಿತ್ತು. ಇದರಿಂದಾಗಿ ವುಹಾನ್‌ನ ಮಾರುಕಟ್ಟೆಯಲ್ಲಿ ಕೋವಿಡ್‌ ಸೋಂಕು ಹರಡಲು ಆರಂಭ ಆದ ಬಳಿಕ ಆತನಿಗೆ ಕೊರೊನಾ ವೈರಸ್‌ ಸೋಂಕು ಕಾಣಿಸಿಕೊಂಡಿದೆ ಎಂಬುವುದು ಸ್ಪಷ್ಟ," ಎಂದು ತಿಳಿಸಿದ್ದಾರೆ.

ಚೀನಾದಲ್ಲಿ ಡೆಲ್ಟಾ ಪ್ರಕರಣಗಳ ಸಂಖ್ಯೆ ಮತ್ತಷ್ಟು ಹೆಚ್ಚಳಚೀನಾದಲ್ಲಿ ಡೆಲ್ಟಾ ಪ್ರಕರಣಗಳ ಸಂಖ್ಯೆ ಮತ್ತಷ್ಟು ಹೆಚ್ಚಳ

 ಮೊದಲು ಮಹಿಳೆಗೆ ಕೊರೊನಾ

ಮೊದಲು ಮಹಿಳೆಗೆ ಕೊರೊನಾ

"ಮೊದಲ ಬಾರಿಗೆ ಕೋವಿಡ್‌ ಸೋಂಕು ಕಾಣಿಸಿಕೊಂಡಿದೆ ಎಂದು ನಂಬಲಾದ ವ್ಯಕ್ತಿಯು ತನಗೆ ಆಸ್ಪತ್ರೆಯಲ್ಲಿ ಕೋವಿಡ್‌ ಸೋಂಕು ಹರಡಿದೆ ಎಂದು ಹೇಳಿಕೊಂಡಿದ್ದಾನೆ. ಇನ್ನು ಆತನಿಗೆ ಕೋವಿಡ್‌ ಸೋಂಕು ಲಕ್ಷಣಗಳು ಕಾಣಿಸಿಕೊಳ್ಳುವುದಕ್ಕೂ ಮೊದಲೇ ಆತ ವುಹಾನ್‌ ಮಾರುಕಟ್ಟೆಗೂ ಹೋಗಿದ್ದಾನೆ. ವುಹಾನ್‌ ಮಾರುಕಟ್ಟೆಯಲ್ಲಿ ಕೋವಿಡ್‌ ಸೋಂಕು ಕಾಣಿಸಿಕೊಂಡ ಬಳಿಕ ಆತನಿಗೆ ಕೋವಿಡ್‌ ಸೋಂಕಿನ ಲಕ್ಷಣಗಳು ಕಂಡು ಬಂದಿದೆ. ಮೊದಲ ಬಾರಿಗೆ ಡಿಸೆಂಬರ್‌ 11 ರಂದು ವುಹಾನ್‌ ಮಾರುಕಟ್ಟೆಯ ಮಹಿಳಾ ಮೀನು ಮಾರಾಟಗಾರ್ತಿಗೆ ಕೋವಿಡ್‌ ಲಕ್ಷಣ ಕಾಣಿಸಿಕೊಂಡಿದೆ," ಎಂದು ಹೇಳಿದ್ದಾರೆ.

  ಆಡಮ್ ಝಂಪಾ ತಮ್ಮ ಹ್ಯಾಟ್ರಿಕ್ ತಪ್ಪಿಸಿದ್ದಕ್ಕೆ ಕಾಲೆಳದದ್ದು ಹೀಗೆ | Oneindia Kannada
   ಕೋವಿಡ್‌ ಸೋಂಕು ನಿಜವಾಗಿಯೂ ಯಾರಿಗೆ ಮೊದಲು!

  ಕೋವಿಡ್‌ ಸೋಂಕು ನಿಜವಾಗಿಯೂ ಯಾರಿಗೆ ಮೊದಲು!

  ಇನ್ನು ಮಹಿಳೆಯು ನೀಡರುವ ಮಾಹಿತಿ ಪ್ರಕಾರ ಡಿಸೆಂಬರ್‌ 11 ರಂದೇ ವುಹಾನ್‌ ಮಾರುಕಟ್ಟೆಯ ಸಮೀಪದ ಹಲವಾರು ಮಂದಿ ಆಸ್ಪತ್ರೆಗೆ ಹಾಗೂ ಕ್ಲಿನಿಕ್‌ಗೆ ದಾಖಲು ಆಗಿದ್ದಾರೆ. ಅವರಿಗೆ ಕೋವಿಡ್‌ ಸೋಂಕು ಇದ್ದ ಸಾಧ್ಯತೆಗಳು ಇದೆ. ಇನ್ನು ಹುವಾನಾನ್ ಮಾರುಕಟ್ಟೆಯ ಹಲವಾರು ಮಂದಿ ಡಿಸೆಂಬರ್‌ 10 ರಂದೇ ಆಸ್ಪತ್ರೆಗೆ ದಾಖಲು ಆಗಿದ್ದಾರೆ. ಹಾಗಿರುವಾಗ ಮೊದಲ ಬಾರಿಗೆ ಯಾರಿಗೆ ಕೋವಿಡ್‌ ಸೋಂಕು ತಗುಲಿದೆ ಎಂಬುವ ವಿಚಾರದಲ್ಲಿ ಹಲವಾರು ಗೊಂದಲಗಳು ಇದೆ.

  (ಒನ್‌ಇಂಡಿಯಾ ಸುದ್ದಿ)

  English summary
  First Known COVID-19 Case Was a Seafood Vendor in Wuhan Market, Says New Report.
  Related News
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X