ಮಾಯಾಜಿಂಕೆಯಲ್ಲಿ ಮಾಯವಾದೆ.. ಪ್ರೇಮಪಕ್ಷಿಯಾಗಿ ಹಾರಿಹೋದೆ...
ಫೆಬ್ರವರಿ 14: ಬಾನಲ್ಲಿದ್ದ ಬಿಳಿಮೋಡಗಳು ನನ್ನ ಪಾಲಿಗೆ ಕಾರ್ಮೋಡಗಳಂತೆ ಕಾಣುತ್ತಿದ್ದವು, ಜೀವನದಲ್ಲಿ ಜಿಗುಪ್ಸೆಗೆ ಒಳಗಾಗಿದ್ದೆ. ಬಾಹ್ಯ ಸೌಂದರ್ಯ ಚೆನ್ನಾಗಿದ್ದರೂ, ಆಂತರಿಕ ಸೌಂದರ್ಯ ಸತ್ತು ಹೋಗಿತ್ತು. ಮನಸ್ಸು ನಿರಾಶೆಯ ಗೂಡಾಗಿತ್ತು. ಏಕೋ ಏನೋ ಬದುಕು ನಶ್ವರ ಎಂದಿನಿಸತೊಡಗಿ ಗೃಹಸ್ಥಾಶ್ರಮ ಪ್ರವೇಶಿಸದೆ ಸನ್ಯಾಸತ್ವದೆಡೆಗೆ ವಾಲುತ್ತಿರುವೆನೋ ಎಂಬಂತಿತ್ತು ನನ್ನ ನಡೆನುಡಿ.
ಒಂದಿನ ಬೆಳ್ಳಂಬೆಳಗ್ಗೆ ಹ್ಯಾಪು ಮೋರೆ ಹೊತ್ತು ಹೈಸ್ಕೂಲಿಗೆ ಬಂದೆ. ಒಂದು ಹುಡುಗಿ ನಮ್ಮ ಕ್ಲಾಸ್ ರೂಂ ನಲ್ಲಿ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಓಡಾಡುತ್ತಿದ್ದಳು. ಅವಳ ಮುಖ ನೋಡಿ ಹೃದಯ ಟುವ್ವಿಟುವ್ವಿ ಎಂದು ಹಾಡಲಾರಂಭಿಸಿತು.
ಹೊತ್ತುಗೊತ್ತಿಲ್ಲದೇ ಹುಚ್ಚು ಮನಸ್ಸು ಚಿಟ್ಟೆಯಂತೆ ಹಾರತೊಡಗಿತು. ಆ ಕ್ಷಣ ಎಲ್ಲವೂ ಹೊಸತಾಗಿ ಕಂಡಿತು. ಅವಳನ್ನು ನೋಡಿ ಮೊದಲು ನಿಂತಲ್ಲಿಯೇ ಕಳೆದು ಹೋಗಿದ್ದೆ. ಬಾಳಬೇಕು, ಬಾಳಿ ಬದುಕಬೇಕು ಎಂಬ ಆಸೆ ಹುಟ್ಟಿತು.

ಆ ಹುಡುಗಿ ಎಷ್ಟು ಚೆಂದ ಎಂದರೆ ನನಗೆ ಮತ್ತೆ ಮತ್ತೆ ಅವಳನ್ನೇ ನೋಡಬೇಕು ಎಂದೆನಿಸುತ್ತಿತ್ತು. ತಿದ್ದಿ ತೀಡಿದ ಮೂಖ, ಉದ್ದನೆಯ ಜಡೆ, ಅವಳು ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳುತ್ತಿದ್ದಳು. ಅಂದು ಮೂಡಿದ ಆ ಪ್ರೇಮ ನನ್ನ ಪ್ರತಿ ರಾತ್ರಿ ಶಿವರಾತ್ರಿ ಮಾಡಿತ್ತು.
ಆಮೇಲೆ ಅವಳಿಗಾಗಿ ಕಾಯುವುದು, ಅವಳ ಮುಂದೆ ಸುಮ್ ಸುಮ್ನೆ ಹೋಗುವುದು, ಅವಳು ದಾರಿಯಲ್ಲಿ ಬರಬೇಕಾದರೆ ನಾನು ನನ್ನ ಗೆಳೆಯರ ಜೊತೆ ಜೋರಾಗಿ ಮಾತಾಡಿ ಅವಳ ಗಮನ ಸೆಳೆಯುವಂತೆ ಮಾಡುವುದು ಕಾಯಕವಾಗಿತ್ತು.
ಅವಳು ಮಧ್ಯಾಹ್ನ ಊಟ ಮಾಡುವಾಗ ಕದ್ದು ಕದ್ದು ನೋಡುವುದು, ಅವಳು ಅಪ್ಪಿ ತಪ್ಪಿ ನನ್ನೊಮ್ಮೆ ನೋಡಿದರೆ ಜಗತ್ತನ್ನೇ ಮರೆಯುವುದು ಇವೆಲ್ಲಾ ನನ್ನ ದಿನಚರಿಯಾಯಿತು. ಅವಳನ್ನು ನೋಡದೇ ದಿನ ಕಳೆಯುವುದಿಲ್ಲ ಎಂಬತ್ತಾಗಿತ್ತು. ಅವಳ ಜೊತೆ ಬಾಳಿ ಬದುಕುವುದನ್ನು ನೆನೆದು ಖುಷಿ ಪಡುತ್ತಿದ್ದೆ.
ಅವತ್ತೊಂದಿನ ಅದನ್ನೆಲ್ಲಾ ಅವಳ ಹತ್ತಿರ ಹೇಳಬೇಕು ಅಂತ ನಿರ್ಧಾರ ಮಾಡಿದ್ದೆ. ಬೆಳಿಗ್ಗೆ ಪ್ರಾರ್ಥನೆ ಮುಗಿಸಿ, ಕ್ಲಾಸ್ ರೂಂಗೆ ಹೋಗುತ್ತಿರುವಾಗ ಹೇಳಬೇಕು ಎಂದುಕೊಂಡೆ ಆದರೆ ಧೈರ್ಯ ಬರಲಿಲ್ಲ. ಹೀಗೆ ಪ್ರತಿದಿನವೂ ಹೇಳಬೇಕೆನಿಸಿದರೂ ಧೈರ್ಯ ಸಾಲದೇ ಬೇಜಾರಾಗುತ್ತಿದ್ದೆ.
ಇಡೀ ಹೈಸ್ಕೂಲ್ ಜೀವನವನ್ನು ಒಂದೇ ತರಗತಿಯಲ್ಲಿ ಕಳೆದರೂ ನಾನು ನಿನ್ನನ್ನು ಒಂದು ದಿನವೂ ಸರಿಯಾಗಿ ಮಾತನಾಡಿಸಲಿಲ್ಲ. ನೀನು ಕೂಡ ನನ್ನನ್ನು ಮಾತನಾಡಿಸಲು ಧೈರ್ಯ ತೋರಲಿಲ್ಲ. ನಮ್ಮಿಬ್ಬರ ಮಾತುಗಳು ಬರೀ ಕಣ್ಣಿನ ನೋಟದಲ್ಲೇ ರವಾನೆಯಾಗುತ್ತಿದ್ದವು.
ನೀನು ಹಾಗೇ ನೋಡುತ್ತದ್ದರಿಂದಲೋ ಏನೋ ನನ್ನ ಮನಸ್ಸಿನಲ್ಲಿ ನಿನ್ನ ಮೇಲಿನ ಪ್ರೀತಿ ಜಾಸ್ತಿಯಾಗ್ತಾನೇ ಇತ್ತು. ಬರೀ ನೋಟದಲ್ಲೇ ದಿನ ಕಳೆಯುತ್ತಿದ್ದೇವು, ಯಾಕೋ ಗೊತ್ತಿಲ್ಲ ನಿನ್ನನ್ನು ಮಾತಾಡಿಸಿ ಮನಸ್ಸಿನ ಭಾವನೆ ಹೇಳುವ ಧೈರ್ಯ ನನಗೂ ಬರಲಿಲ್ಲ. ಧೈರ್ಯಕ್ಕಿಂತ ಹೆಚ್ಚಾಗಿ ನೀನೇ ಮಾತನಾಡಿಸಿ ಹೇಲಬೇಕೆಂಬ ಅಹಂ ಇತ್ತು.
10 ನೇ ತರಗತಿ ಪರೀಕ್ಷೆ ಬರೆಯಲು ದಿನಗಳನ್ನು ಎಣಿಸುತ್ತದ್ದೇವು. ಒಂದು ಕಡೆ ಪ್ರೀತಿ ಜಾಸ್ತಿಯಾಗ್ತಾನೆ ಇತ್ತು, ಇನ್ನೊಂದು ಕಡೆ ಪರೀಕ್ಷೆ ಹತ್ತಿರ ಬರುತ್ತಿತ್ತು. ಗೆಳೆಯರ ಬುದ್ಧಿ ಮಾತಿನಿಂದ ಪ್ರೀತಿಯ ಗುಂಗಿನಿಂದ ಹೊರಬಂದು ಓದಲು ಶುರುಮಾಡಿದೆ.
ಅಂದು ಬೀಳ್ಕೊಡುಗೆ ಸಮಾರಂಭ, ನನ್ನ ಹೃದಯದ ಬಡಿತ ಜೋರಾಗಿ ಬಡಿತ್ತಿತ್ತು. ಇನ್ನು ಮುಂದೆ ನನಗೆ ನೀನು ಸಿಗುವುದಿಲ್ಲ ಎಂಬ ಭಾವನೆ ಬಲವಾಗತೊಡಗಿತು. ಆದರೆ ನನ್ನ ಮುಂದೆ ನನ್ನದೇ ಆದ ಜವಾಬ್ದಾರಿ, ಗುರಿ, ಕನಸುಗಳಿದ್ದವು. ಅಂದು ನನ್ನ ಪ್ರೇಮ ನಿವೇದನೆಗೆ ಅವು ಅಡ್ಡಿಯಾದವು. ಎಲ್ಲರ ಜೊತೆಗೂಡಿ ಸ್ವಲ್ಪ ಜಾಸ್ತಿನೇ ಕಣ್ಣೀರು ಹಾಕಿದೆ.
ಆಗ ನಮ್ಮ ಕ್ಲಾಸ್ ಟೀಚರ್ ಬಂದು ಸಮಾಧಾನ ಮಾಡಿದ್ದರು. ಎಲ್ಲರೂ ಒಟ್ಟಿಗೆ ತೆಗೆಸಿಕೊಂಡ ಫೋಟೋ ಈಗಲೂ ಜೋಪಾನವಾಗಿ ಇಟ್ಟಿದ್ದೇನೆ. ಹೈಸ್ಕೂಲ್ ಪಾಸಾಗಿ ಮುಂದೆ ಪಿಯುಸಿಗೆ ಬೆಣ್ಣೆದೋಸೆ ನಗರಿ ದಾವಣಗೆರೆಗೆ ಬಂದೆ.
ಅಲ್ಲಿ ಪ್ರತಿದಿನವೂ ನಿನ್ನ ನೆನಪು ನನ್ನನ್ನು ಕಾಡುತ್ತಿತ್ತು. 2 ವರ್ಷದ ನಂತರ ಮತ್ತೆ ನಮ್ಮೂರಿಗೆ ಬಂದೆ. ನಮ್ಮದು ಬೇರೆ ಬೇರೆ ಊರಾದರೂ ಪದವಿ ಕಾಲೇಜಿಗೆ ಒಂದೇ ಬಸ್ಸಿನಲ್ಲಿ ಹೋಗಬೇಕು. 2 ವರ್ಷದ ನಂತರ ನಿನ್ನನ್ನು ನೋಡಿದಾಗ ಮನಸ್ಸಿಗೆ ಸಮಾಧಾನವಾಯಿತು. ಆದರೆ ನೀನು ಮಾತ್ರ ನೋಡಿಯೂ ನೋಡದ ರೀತಿ ಇರುತ್ತಿದ್ದೆ, ಮನಸ್ಸಿನ ಭಾವನೆಗಳನ್ನು ಹೇಳಲು ಕಾಯುತ್ತಿರುವ ನಿನ್ನ ಹುಡುಗ
-
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ












Click it and Unblock the Notifications