Vaikuntha Ekadashi 2025: ವೈಕುಂಠ ಏಕಾದಶಿಯ ದಿನ ಉಪವಾಸದ ಪ್ರಯೋಜನಗಳೇನು?
ಹೊಸ ವರ್ಷದ ಮೊದಲ ಹಬ್ಬ ಮಕರ ಸಂಕ್ರಾತಿಗೂ ಮುನ್ನ ಬರುವ ವೈಕುಂಠ ಏಕಾದಶಿ ಹಿಂದೂ ಧರ್ಮದಲ್ಲಿ ಪವಿತ್ರ ದಿನವಾಗಿದೆ. ಈ ದಿನ ವಿಷ್ಣು ಮತ್ತು ಲಕ್ಷ್ಮಿ ದೇವಿಯ ಆರಾಧನೆ ಮಾಡುವುದರಿಂದ ಹೆಸರೇ ಸೂಚಿಸುವಂತೆ ಮರಣಾ ನಂತರ ಮೋಕ್ಷ ಮತ್ತು ವೈಕುಂಠ ಪ್ರಾಪ್ತವಾಗುತ್ತದೆ. ಹಾಗಾದರೆ ಈ ಬಾರಿ ವೈಕುಂಠ ಏಕಾದಶಿ ಯಾವಾಗ ಆಚರಿಸಲಾಗುತ್ತದೆ? ಈ ದಿನ ಉಪವಾಸದ ಪ್ರಯೋಜನಗಳೇನು? ಪೂಜಾ ವಿಧಾನಗಳ ಕುರಿತು ನೋಡೊಣ.
ಏಕಾದಶಿಯನ್ನು ಹಿಂದೂ ಧರ್ಮದಲ್ಲಿ ಪವಿತ್ರ ದಿನಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. 2025ರ ಮೊದಲ ವೈಕುಂಠ ಏಕಾದಶಿಯನ್ನು ಜನವರಿ 10ರಂದು ಆಚರಿಸಲಾಗುತ್ತದೆ. ವೈಕುಂಠ ಏಕಾದಶಿಯನ್ನು ಪುತ್ರದ ಏಕಾದಶಿ ಎಂದೂ ಕರೆಯಲಾಗುತ್ತದೆ. ಈ ದಿನದಂದು ಉಪವಾಸ ಮಾಡುವುದರಿಂದ ಯೋಗ್ಯ ಮಗುವಿನ ಜನನವಾಗುತ್ತದೆ ಎಂಬ ನಂಬಿಕೆ ಇದೆ. ಈಗ ವೈಕುಂಠ ಏಕಾದಶಿಗೆ ಸಂಬಂಧಿಸಿದ ಕೆಲವು ವಿಶೇಷ ವಿಷಯಗಳನ್ನು ಮತ್ತು ಈ ದಿನದ ಉಪವಾಸದ ಪ್ರಯೋಜನಗಳನ್ನು ತಿಳಿದುಕೊಳ್ಳೋಣ.

ವೈಕುಂಠ ಏಕಾದಶಿಯ ಇಡೀ ದಿನ ಭಕ್ತರು ಉಪವಾಸವಿದ್ದು ಜಾಗರಣೆ ಮಾಡುತ್ತಾರೆ. ಈ ದಿನ ಅನ್ನವನ್ನು ತಿನ್ನುವುದು ಅಥವಾ ಅಕ್ಕಿಯಿಂದ ಮಾಡಿದ ಯಾವುದೇ ಆಹಾರ ಸೇವಿಸುವುದಿಲ್ಲ. ಇದರ ಜೊತೆಗೆ ಈರುಳ್ಳಿ, ಬೆಳ್ಳುಳ್ಳಿ ಮತ್ತು ಮಾಂಸಾಹಾರವನ್ನು ಹಿಂದೂ ಮನೆಗಳಲ್ಲಿ ಕಟ್ಟುನಿಟ್ಟಾಗಿ ನಿಷೇಧಿಸಲಾಗುತ್ತದೆ. ಈ ವಿಶೇಷ ದಿನ ವಿಷ್ಣುವಿನ ಅನುಗ್ರಹವನ್ನು ಪಡೆಯಲು ಜನ ಕಟ್ಟುನಿಟ್ಟಿನ ಉಪವಾಸವನ್ನು ಆಚರಿಸುತ್ತಾರೆ.
ವೈಕುಂಠ ಏಕಾದಶಿಯ ದಿನ ಉಪವಾಸದ ಪ್ರಯೋಜನಗಳು:-
* ವೈಕುಂಠ ಏಕಾದಶಿಯನ್ನು ಪುತ್ರದ ಏಕಾದಶಿ ಎಂದೂ ಕರೆಯುತ್ತಾರೆ. ಈ ದಿನ ಉಪವಾಸ ಮಾಡಿ ವಿಷ್ಣುವನ್ನು ಪೂಜಿಸುವುದರಿಂದ ಯೋಗ್ಯವಾದ ಮಗು ಜನಿಸುತ್ತದೆ. ಇದರೊಂದಿಗೆ ನಿಮ್ಮ ಮಕ್ಕಳು ಈ ದಿನ ಉಪವಾಸ ಮಾಡುವುದರಿಂದ ಜೀವನದ ವಿವಿಧ ಕ್ಷೇತ್ರಗಳಲ್ಲಿ ಪ್ರಗತಿಯನ್ನು ಪಡೆಯುತ್ತಾರೆ.
* ಈ ಏಕಾದಶಿಯನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗಿದೆ. ಈ ದಿನದಂದು ಭಕ್ತರು ವಿಷ್ಣುವನ್ನು ಸಂತೋಷಪಡಿಸುವ ಮೂಲಕ ತಮ್ಮ ಜೀವನದ ಕೊನೆಯಲ್ಲಿ ಅಂದರೆ ಮರಣದ ನಂತರ ವೈಕುಂಠ ಲೋಕಕ್ಕೆ ಹೋಗಲಿದ್ದಾರೆ. ಈ ದಿನ ಉಪವಾಸ ಮಾಡುವುದರಿಂದ ನಿಮ್ಮ ಕುಟುಂಬದ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.
* ಈ ದಿನವನ್ನು ಪೂರ್ವಜರ ಆತ್ಮಗಳಿಗೆ ಮುಕ್ತಿ ನೀಡುವ ದಿನವೆಂದು ಪರಿಗಣಿಸಲಾಗಿದೆ. ಈ ದಿನ ನೀವು ನಿಮ್ಮ ಪೂರ್ವಜರನ್ನು ಧ್ಯಾನಿಸಿ ದಕ್ಷಿಣಕ್ಕೆ ಮುಖ ಮಾಡಿ ಎಳ್ಳು ಬೆರೆಸಿದ ನೀರನ್ನು ಅವರಿಗೆ ಅರ್ಪಿಸಿದರೆ, ಅವರು ಮೋಕ್ಷವನ್ನು ಪಡೆಯುವಿರಿ. ಈ ಕೆಲಸವು ಪೂರ್ವಜರಿಗೆ ವೈಕುಂಠವನ್ನು ಸಹ ನೀಡುತ್ತದೆ ಎಂದು ನಂಬಲಾಗಿದೆ.
* ವೈಕುಂಠ ಏಕಾದಶಿಯ ಉಪವಾಸವನ್ನು ಆಚರಿಸುವವರಿಗೆ ಮೋಕ್ಷದ ಬಾಗಿಲುಗಳು ತೆರೆದುಕೊಳ್ಳುವುದಲ್ಲದೆ ಅನೇಕ ಜನ್ಮಗಳ ಪಾಪಗಳು ಸಹ ನಾಶವಾಗುತ್ತವೆ.
* ಇನ್ನೂ ವೈಕುಂಠ ಏಕಾದಶಿ ಉಪವಾಸದ ಸಮಯದಲ್ಲಿ ದಾನ ಮಾಡಿದರೆ ವಿಷ್ಣುವಿನ ಆಶೀರ್ವಾದ ಸಿಗುತ್ತದೆ. ಹೀಗೆ ಮಾಡುವುದರಿಂದ ಜೀವನದ ಅನೇಕ ಸಮಸ್ಯೆಗಳು ಪರಿಹಾರವಾಗುತ್ತವೆ.
* ಈ ದಿನದಂದು ಆಚರಿಸುವ ಉಪವಾಸ ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಮನಸ್ಸಾಕ್ಷಿಯು ಬಲವಾಗಿರುತ್ತದೆ. ಅದು ನಿಮಗೆ ಸತ್ಯದ ಜ್ಞಾನವನ್ನು ನೀಡುತ್ತದೆ.
* ವೈಕುಂಠ ಏಕಾದಶಿಯ ದಿನದಂದು ಉಪವಾಸ ಮಾಡುವುದರಿಂದ ಜಾತಕದಲ್ಲಿ ಗುರು ಬಲಶಾಲಿಯಾಗುತ್ತಾನೆ. ಜೀವನದಲ್ಲಿ ಸಂತೋಷ, ಸಮೃದ್ಧಿ ಸಿಗಲಿದೆ.
* ವೈಕುಂಠ ಏಕಾದಶಿಯಂದು ಉಪವಾಸ ಮಾಡುವುದರಿಂದ ದುಃಖ ಮತ್ತು ಬಡತನ ದೂರವಾಗುತ್ತದೆ. ಜೀವನದಲ್ಲಿ ಬರುವ ತೊಂದರೆಗಳು ದೂರವಾಗುತ್ತವೆ. ಅದೃಷ್ಟ ನಿಮ್ಮ ಕಡೆ ಇರುತ್ತದೆ. ಇದರೊಂದಿಗೆ, ವೈಕುಂಠ ಏಕಾದಶಿಯ ಉಪವಾಸವನ್ನು ಆಚರಿಸುವುದರಿಂದ, ನೀವು ಯೋಗ್ಯ ಮಗುವನ್ನು ಸಹ ಪಡೆಯುತ್ತೀರಿ. ಮಕ್ಕಳಿಲ್ಲದ ದಂಪತಿಗಳಿಗೆ ಈ ದಿನವು ತುಂಬಾ ವಿಶೇಷವೆಂದು ಪರಿಗಣಿಸಲಾಗಿದೆ.
* ಧಾರ್ಮಿಕ ನಂಬಿಕೆಗಳ ಪ್ರಕಾರ, ವೈಕುಂಠ ಏಕಾದಶಿಯ ಉಪವಾಸವನ್ನು ಆಚರಿಸುವುದರಿಂದ, ಸಾಕಷ್ಟು ಪ್ರಯೋಜನಗಳನ್ನು ನೀವು ಪಡೆಯುತ್ತೀರಿ. ನೀರು ಕುಡಿಯದೆ ಈ ಉಪವಾಸ ಆಚರಿಸುವ ಜನರ ಎಲ್ಲಾ ಆಸೆಗಳನ್ನು ವಿಷ್ಣು ಪೂರೈಸುತ್ತಾನೆ.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications