ಹೊಸ ಸಂವತ್ಸರದ ಆಗಮನ- ಕವಿಗಳಿಗೆ ನಮನ
ಸಂಭವಾಮಿ ಯುಗೇ...ಯುಗೇ. ಯುಗಾದಿಯಂದು ಬೇವು-ಬೆಲ್ಲ ಸೇವಿಸುವಾಗ ಕೆಳಗಿನ ಈ ಶ್ಲೋಕಗಳನ್ನು ಉಚ್ಚರಿಸಿ ತಿನ್ನುವಂತೆ ಹಿರಿಯರು ಹೇಳುತ್ತಾರೆ.
"ಶತಾಯು ವಜ್ರ ದೇಹಾಯ ಸರ್ವ ಸಂಪತ್ಕರಾಯಚ ಸರ್ವರಿಷ್ಟ ವಿನಾಶಯ ನಿಂಭಕಂದಳ ಭಕ್ಷಣಂ". ಹೊಸತು ವರುಷ, ಹೊಸತು ಹರುಷ, ಹೊಸತು ಹೊಸತು ತರುವ ವಿಜಯ ನಾಮ ಸಂವತ್ಸರದ ಹೊಸವರುಷಕ್ಕೆ ಕೆಲವೊಂದು "ಯುಗಾದಿ" ಕವನಗಳ (ಆಯ್ದ ಪದಗಳ) ಪಠಣ, ಮನನ.
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ|
ಹೊಂಗೆ ಹೂಂವ ತೊಂಗಲಲಿ ಭೃಂಗದ ಸಂಗೀತ ಕೇಳಿ ಮತ್ತೆ ಕೇಳ ಬರುತಿದೆ
ಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವಕಳೆಯ ತರುತಿದೆ||

ವರಕವಿ ಬೇಂದ್ರೆಯವರ ಈ ಕವನ ಮನಕೆ ಆಪ್ತವೆನಿಸುವುದು. "ಯುಗ ಯುಗಾದಿ ಕಳೆದರೂ" ಕವನದ ಶ್ರವಣವೂ, ಪಂಚಾಂಗ ಪಠಣದಷ್ಟೇ ಮುಖ್ಯ. ಯುಗಾದಿಗೆ ಯುಗಾದಿಯೇ ಸಾಟಿ. ಪ್ರತಿವರುಷವೂ ಪ್ರಭವದಿಂದ -ಅಕ್ಷಯದ ತನಕ 60 ಹೆಸರುಗಳಿಂದ ಆಚರಿಸುವ ಯುಗಾದಿ, ಮುಂಬರುವ ದಿನಗಳು "ಬೇವಿನ ಕಹಿ ಬಾಳಿನಲ್ಲಿ, ಹೂವಿನ ನಸುಗಂಪು ಸೂಸಿ" ಒಳ್ಳೆಯದಾಗುವುದು ಎಂಬ "ಜೀವಕಳೆಯ ತರುವ" ಭರವಸೆಯ ಅಭಯ ಹಸ್ತ.
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ...ಕುಲವಧು ಚಿತ್ರದಲಿ ಅಳವಡಿಸಿಕೊಂಡು, ಎಸ್. ಜಾನಕಿಯವರ ಕೋಕಿಲ ಕಂಠದಿಂದ ಹೊಮ್ಮಿರುವ, ಹೊಸ ಯುಗದ ಹುಟ್ಟು ಹಬ್ಬದ ಆಗಮನವನು ಸೂಚಿಸುವ ಈ ಕವನವನ್ನು ಎಷ್ಟೇ ಬಾರಿ ಕೇಳಿದರೂ ತೃಪ್ತಿಯಾಗದೆ ಮತ್ತೆ ಮತ್ತೆ ಕೇಳಬೇನಿಸುತ್ತದೆ. ಯುಗಾದಿ ಬಂತೆಂದರೆ ಸಾಕು ಪ್ರಕೃತಿಯಲ್ಲೊಂದು ಹೊಸ ಪುಳಕ.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications