ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಪ್ರಿಲ್‌ 22ರಂದು ಕೆಕೆಎನ್‌ಸಿಯಲ್ಲಿ ಯುಗಾದಿ ಸಂಭ್ರಮ

By Staff
|
Google Oneindia Kannada News

ಏಪ್ರಿಲ್‌ 22ರಂದು ಕ್ಯಾಲಿಫೋರ್ನಿಯಾ ಕನ್ನಡ ಕೂಟ, ಸನ್ನಿವೇಲ್‌ನಲ್ಲಿ ಸಂಭ್ರಮದ ಯುಗಾದಿ ಹಬ್ಬ ಆಚರಿಸಲಿದ್ದು, ಕನ್ನಡ ಬಂಧುಗಳಿಗೆಲ್ಲ ಆದರದ ಸ್ವಾಗತ ಕೋರಿದೆ.

ಚೈತ್ರ ನಮ್ಮ ಪಾರಂಪರಿಕ ಚಾಂದ್ರಮಾನ ವರ್ಷದ ಮೊದಲ ತಿಂಗಳು. ಹೊಸ ಚಿಗುರು, ಪರಿಮಳ ಸೂಸುವ ಹೂಗಳು ಮತ್ತು ಚಳಿಯನ್ನು ಹೊಡೆದೋಡಿಸುವ ಎಳೆಬಿಸಿಲು ತರುವ ಚೈತ್ರವನ್ನು ಸಂತಸಗಳ ಹರಿಕಾರ ಎಂದೇ ನಮ್ಮ ಪರಂಪರೆ ಭಾವಿಸಿದೆ. ಹಾಗಾಗಿ ಈ ತಿಂಗಳ(ಚೈತ್ರ ಮಾಸ) ಮೊದಲ ದಿನವನ್ನು, ವರ್ಷದ ಮೊದಲ ದಿನ ಅಥವಾ ಯುಗಾದಿಯೆಂಬ ಹೆಸರಿನಿಂದ ಕರೆಯುವುದೂ ಅರ್ಥಪೂರ್ಣ ಎನಿಸುತ್ತದೆ.

ಪಾರ್ಥಿವ ಸಂವತ್ಸರ ಕಳೆದು, ಆರಂಭವಾಗಿರುವ ವ್ಯಯ ಸಂವತ್ಸರ ಸಿಹಿ-ಕಹಿಯನ್ನು ಸಮಚಿತ್ತದಿಂದ ಎದುರಿಸುವ ಶಕ್ತಿ ನೀಡಲಿ. ಅಲ್ಲದೆ ಎಲ್ಲರಿಗೂ ಸುಖ-ಸಮೃದ್ಧಿ ಹೊತ್ತು ತರಲಿ ಎಂದು ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ(ಕೆಕೆಎನ್‌ಸಿ)ಹಾರೈಸುತ್ತದೆ.

ಹಬ್ಬದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಎಂದಿನಂತೆ ಹಬ್ಬದ ಸಡಗರದಲ್ಲಿ ಎಲ್ಲರೂ ಸವಿಯೂಟ ಸವಿಯಬಹುದು.

ಕಾರ್ಯಕ್ರಮ ನಡೆಯುವ ಸ್ಥಳ:

ಸನ್ನಿವೇಲ್‌ ದೇವಾಲಯದ ಸಭಾಂಗಣ
420 ಪರ್ಷಿಯನ್‌ ಡ್ರೈವ್‌, ಸನ್ನಿವೇಲ್‌

ಸಮಯ : ಏಪ್ರಿಲ್‌ 22, ಶನಿವಾರ ಸಂಜೆ 4 ಗಂಟೆಗೆ

ಕಾರ್ಯಕ್ರಮಗಳ ವಿವರ :

ಮಿಲನ : ಮಧ್ಯಾಹ್ನ 3:30 - 4:00 ಗಂಟೆಯ ವರೆಗೆ

ವರದಾನ : ಕನ್ನಡ ಕಲಿ ವಿದ್ಯಾರ್ಥಿಗಳಿಂದ ಪ್ರಾರ್ಥನೆ

ಎಳೆಯರ ಪದ್ಯಗಳು : ಮಕ್ಕಳ ನೃತ್ಯ ( ನಿರ್ದೇಶನ - ವಸಂತ ರವಿಶಂಕರ್‌)

ಕಿನ್ನರ ಗಾನ ಲಹರಿ : ಮಕ್ಕಳ ಸಂಗೀತ ಕಾರ್ಯಕ್ರಮ (ನಿರ್ದೇಶನ - ಜಯಂತಿ ಉಮೇಶ್‌)

ಗಾಂಪರ ಗುಂಪು : ಮಕ್ಕಳ ನಾಟಕ (ನಿರ್ದೇಶನ - ಲಕ್ಷ್ಮೀ ಶ್ರೀನಾಥ್‌)

ಯುಗಾದಿ ನವೋಲ್ಲಾಸ ನೃತ್ಯ: ಮಕ್ಕಳ ನೃತ್ಯ (ನಿರ್ದೇಶನ - ಮೀನಾ ಸುಬ್ಬರಾವ್‌)

ಹಾಡೊಂದ ನಾ ಹಾಡುವೆನು : ವಿಶೇಷ ಅಂತ್ಯಾಕ್ಷರಿ ಕಾರ್ಯಕ್ರಮ

(ನಿರ್ವಹಣೆ - ರಾಮಪ್ರಸಾದ್‌, ಸೋಮಶೇಖರ್‌ ಮತ್ತು ಶುಭಾ ಶ್ರೀನಾಥ್‌ )

ಕೃಷ್ಣ ಲೀಲಾ : ಮಕ್ಕಳ ನಾಟಕ (ನಿರ್ದೇಶನ - ಲತಾ ಗಣಪತಿ)

ಊಟದ ವಿರಾಮ

ಕರ್ನಾಟಕ ವಸ್ತ್ರ ವಿಶೇಷ : ಭರತನಾಟ್ಯದ ಮೂಲಕ ಕರ್ನಾಟಕದ ಸಾಂಪ್ರದಾಯಿಕ ಉಡುಗೆ

ತೊಡುಗೆಗಳ ಪ್ರದರ್ಶನ (ನಿರ್ದೇಶನ - ನಂದಿತಾ ಮತ್ತು ಪ್ರೀತಿ)

ಕಂಡೆ ನಾ ಕನಸಿನಲಿ : ಪಂಪ ಕಲಾವಿದರು ಪ್ರಸ್ತುತಪಡಿಸುವ ನೃತ್ಯನಾಟಕ - ದಾಸರು ಕಂಡಂತೆ ಶ್ರೀಕೃಷ್ಣನ ಚಿತ್ರಣ(ನಿರ್ದೇಶನ-ನಿರ್ಮಲಾ ಮಾಧವ)

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವ್ಯಯನಾಮ ಸಂವತ್ಸರಕ್ಕೆ ಸ್ವಾಗತ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X