ಏ.24ರಂದು ಕೆ.ಸಿ.ಎ.ಯಿಂದ ಯುಗಾದಿ ಅಚರಣೆ
ಹೊಸ ವರ್ಷವನ್ನು ಅದ್ಧೂರಿಯಿಂದ ಸ್ವಾಗತಿಸಲು ದಕ್ಷಿಣ ಕ್ಯಾಲಿಫೋರ್ನಿಯಾದ ಕರ್ನಾಟಕ ಸಾಂಸ್ಕೃತಿಕ ಸಂಘ ನಿರ್ಧರಿಸಿದೆ.
ಹೂವರ್ ಶಾಲೆಯಲ್ಲಿ ಭಾನುವಾರ(ಏಪ್ರಿಲ್ 24) ನಡೆಯುತ್ತಿರುವ ಕೆ.ಸಿ.ಎ ಸರ್ವ ಸದಸ್ಯರ ಸಭೆ ಈ ಸಲ ವಿಶೇಷ ಮಹತ್ವವನ್ನು ಪಡೆದಿದೆ. ಸರ್ವಸದಸ್ಯರ ಸಭೆಯ ಜೊತೆಯಲ್ಲಿಯೇ ವಿಶೇಷ ಯುಗಾದಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ರಂಗುತುಂಬಲು ವಿವಿಧ ಸಾಂಸ್ಕೃತಿಕ ಮತ್ತು ಮನರಂಜನಾ ಕಾರ್ಯಕ್ರಮಗಳಿಗೆ ರಂಗತಾಲೀಮು ನಡೆಯುತ್ತಿದೆ.
ಹೂವರ್ ಶಾಲೆಯಲ್ಲಿ ಭಾನುವಾರ ಮಧ್ಯಾಹ್ನ 2 ಗಂಟೆಗೆ ಕಾರ್ಯಕ್ರಮಗಳು ಆರಂಭವಾಗಲಿದ್ದು, ಸದಸ್ಯರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದ್ದು, ಸದಸ್ಯರಲ್ಲದವರಿಗೆ ಹದಿನೈದು ಡಾಲರ್ ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿದೆ.
ಯುಗಾದಿ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ನಾನಾ ಸ್ಪರ್ಧೆಗಳನ್ನು ಕೆ.ಸಿ.ಎ ಆಯೋಜಿಸಿದೆ. ಆದರ್ಶ ದಂಪತಿಗಳು, ಸಾಮೂಹಿಕ ಗಾನ, ನೃತ್ಯ, ಏಕಪಾತ್ರಾಭಿನಯ, ಪ್ರಹಸನ, ಹಾಸ್ಯ ಮತ್ತಿತರ ಸ್ಪರ್ಧೆಗಳಲ್ಲಿ ಪಾಲ್ಗೊಂಡು, ಪ್ರತಿಭೆಯನ್ನು ಹೊರಹೊಮ್ಮಿಸಲು ಕೆ.ಸಿ.ಎ ವೇದಿಕೆ ಕಲ್ಪಿಸಿದೆ.
ವಿಜಯಿಗಳಿಗಾಗಿ ಆಕರ್ಷಕ ಬಹುಮಾನಗಳು ಕಾಯುತ್ತಿದ್ದು, ಆಸಕ್ತರು ಕೂಡಲೇ ತಮ್ಮ ಹೆಸರುಗಳನ್ನು ವಲ್ಲೀಶ ಶಾಸ್ತ್ರಿ (909 597 9394) ಅವರಲ್ಲಿ ದೂರವಾಣಿಯ ಮೂಲಕ ಅಥವಾ ಈ-ಮೇಲ್ ([email protected]) ಮೂಲಕ ನೋಂದಾಯಿಸಲು ಕೋರಲಾಗಿದೆ.
ಆದರ್ಶ ದಂಪತಿಗಳು ಸ್ಪರ್ಧೆಯು ವಿವಿಧ ವಯೋಮಾನಕ್ಕೆ ತಕ್ಕಂತೆ ಪ್ರೀತಿ, ಪ್ರೇಮ, ಪ್ರಣಯ ಎಂಬ ಮೂರು ಹಂತಗಳಲ್ಲಿ ನಡೆಯಲಿದೆ. ಪ್ರತಿ ವಿಭಾಗದಲ್ಲೂ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಆರು ಜೋಡಿಗಳಿಗೆ ಅವಕಾಶ ಕಲ್ಪಿಸಲಾಗುವುದು. ವಲ್ಲೀಶಶಾಸ್ತ್ರಿ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.
ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದವರಿಗೆ ಆಕರ್ಷಕ ಬಹುಮಾನಗಳನ್ನು ನೀಡಲು ಸಿತಾಲ್, ಪೋಷಾಕ್, ಐ ಎಸ್‌ಪಿ, ಕ್ಯಾಂಸಿನ್ಸ್ ಕಲೆಕ್ಷನ್ಸ್ ಕಂಪನಿಗಳು ಪ್ರಾಯೋಜತ್ವವನ್ನು ವಹಿಸಿಕೊಂಡಿವೆ. ಸ್ಪರ್ಧೆಯಲ್ಲಿ ಪಾಲ್ಗೊಂಡು ಸಂಭ್ರಮದೊಂದಿಗೆ ಬಹುಮಾನಗಳನ್ನು ಗೆಲ್ಲಲು ಇದೋಂದು ಸುವರ್ಣಾವಕಾಶ.
ಸಂಘದ ವಾರ್ಷಿಕ ಸದಸ್ಯರು ಸದಸ್ಯತ್ವವನ್ನು ನವೀಕರಿಸಿಕೊಳ್ಳಲು ಕೋರಲಾಗಿದ್ದು, ಚೆಕ್ ಅಥವಾ ಹಣವನ್ನು ಸದಸ್ಯತ್ವ ಶುಲ್ಕಕ್ಕಾಗಿ ಮರೆಯದೇ ತರಬೇಕೆಂದು ಸಂಘ ಪ್ರೀತಿಯಿಂದ ನೆನಪು ಮಾಡಿದೆ.
ಹೆಚ್ಚಿನ ವಿವರಗಳಿಗೆ http://www.LaKannada.com, ಅಥವಾ ವಲ್ಲೀಶ ಶಾಸ್ತ್ರಿ (ದೂರವಾಣಿ- 909 597 9394), ವಿಜಯ್ ಕೊಟ್ರಪ್ಪ (ದೂರವಾಣಿ- 909 392 1454)ಅವರನ್ನು ಸಂಪರ್ಕಿಸಬಹುದು.












Click it and Unblock the Notifications