Get Updates
Get notified of breaking news, exclusive insights, and must-see stories!

Ugadi 2025: ಯುಗಾದಿ ಹಬ್ಬದ ದಿನ ಮನೆ ಬಾಗಿಲಿಗೆ ಈ ವಸ್ತು ಕಟ್ಟಿ: ಗುರು ಬಲ ಅದೃಷ್ಟ ಖಚಿತ

ಮಾರ್ಚ್ 30ನೇ ತಾರೀಖು ಯುಗಾದಿ ಹಬ್ಬದ ದಿನ ಈ ವಸ್ತು ಮನೆಯ ಮುಖ್ಯದ್ವಾರಕ್ಕೆ ಕಟ್ಟಿದರೆ ವರ್ಷ ಪೂರ್ತಿ ಸಂಪೂರ್ಣ ಗುರುಬಲ, ಅಖಂಡ ಯಶಸ್ಸು, ನಿರಂತರ ಧನಾಗಮನವಾಗುತ್ತದೆ. ಹಾಗಾದರೆ ಜನಾಕರ್ಷಣೆ ಹಾಗೂ ಧನಾಕರ್ಷಣೆ ಮಾಡುವ ಈ ವಿಶೇಷ ವಸ್ತು ಯಾವುದು? ಯಾವ ರೀತಿಯಾಗಿ ಯಾವ ಸಮಯದಲ್ಲಿ ಈ ವಸ್ತುವನ್ನು ಮನೆಯ ಬಾಗಿಲಿಗೆ ಕಟ್ಟಿದರೆ ಸರ್ವ ಗ್ರಹಗಳ ಸಮೇತ ಮಹಾಲಕ್ಷ್ಮೀ ಕೃಪೆ ಪ್ರಾಪ್ತಿಯಾಗುತ್ತದೆ ಎಂದು ಈಗ ತಿಳಿಯೋಣ.

ಈ ವಸ್ತುವನ್ನು ಮನೆ ಬಾಗಿಲಿಗೆ ಕಟ್ಟುವುದರಿಂದ ನಿತ್ಯ ಸಂತೋಷ, ಶಾಂತಿ, ಸಮೃದ್ಧಿಯಿಂದ ಮನೆ ಕೂಡಿರುತ್ತದೆ. ಯುಗಾದಿ ದಿನ ನೂತನ ವಸ್ತ್ರ ಧರಿಸಿ, ದೇವರ ಪೂಜೆ ಮಾಡಿ, ಬೇವು ಬೆಲ್ಲವನ್ನು ತಿಂದು ಹಬ್ಬವನ್ನು ಆಚರಿಸುವುದು ಎಷ್ಟು ಮುಖ್ಯವೋ ಮನೆಯ ಬಾಗಿಲಿಗೆ ಈ ವಸ್ತುವನ್ನು ಕಟ್ಟಿ ಪೂಜಿಸುತ್ತಾ ಬರುವುದು ಕೂಡ ಅಷ್ಟೇ ಮುಖ್ಯ.

Ugadi 2025 Tie this item at the door of your house on the day of Ugadi Good luck with you

ಎಷ್ಟೋ ಜನರ ಮನೆಯಲ್ಲಿ ಅದೆಷ್ಟೋ ವರ್ಷಗಳ ಕಾಲ ಶುಭ ಕಾರ್ಯಗಳೇ ನಡೆದಿರುವುದಿಲ್ಲ. ವಯಸ್ಸಿಗೆ ಬಂದ ಮಕ್ಕಳಿಗೆ ಮದುವೆ ಭಾಗ್ಯ ಕೂಡಿ ಬರುತ್ತಿರುವುದಿಲ್ಲ. ಇನ್ನೂ ಕೆಲವರಿಗೆ ಮದುವೆ ಆಗಿ ಎಷ್ಟೇ ವರ್ಷವಾಗಿದ್ದರೂ ಕೂಡ ಸಂತಾನ ಫಲ ಇರುವುದಿಲ್ಲ. ವರ್ಷ ವರ್ಷ ಎಷ್ಟೇ ಕಷ್ಟಪಟ್ಟು ದುಡಿದರೂ ಕೂಡ ಬಡತನದಿಂದ ಮುಕ್ತಿ ಸಿಕ್ಕಿರುವುದಿಲ್ಲ.

ಮನೆ ತುಂಬ ಕಷ್ಟ, ಸಾಲ, ಅನಾರೋಗ್ಯ ಸಮಸ್ಯೆಗಳು ತಾಂಡವ ಆಡುತ್ತಿರುತ್ತವೆ. ಮನೆಯ ಯಜಮಾನ ದುಡಿಯಲು ಹೋಗಿ ಯಾವ ಕೆಲಸಕ್ಕೆ ಕೈ ಹಾಕಿದರೂ ಕೂಡ ನಷ್ಟಗಳು, ಹೊಸದಾಗಿ ಏನನ್ನೇ ಶುರು ಮಾಡಲು ಹೋದರೂ ಕೂಡ ಅದರಿಂದ ಕಷ್ಟ ಕಣ್ಣೀರು ಹೆಚ್ಚಾಗುತ್ತಿರುತ್ತವೆ.

ಮಕ್ಕಳ ವಿದ್ಯೆಯಲ್ಲಿ ಏಳಿಗೆ ಕೂಡ ಇರುವುದಿಲ್ಲ. ವಿದ್ಯಾಭ್ಯಾಸ ಮಾಡಿದರೂ ತಲೆಯಲ್ಲಿ ನಿಲ್ಲುವುದಿಲ್ಲ. ಹೀಗೆ ಒಂದಲ್ಲಾ ಒಂದು ಸಮಸ್ಯೆ ಇದ್ದೇ ಇರುತ್ತದೆ. ಈ ಎಲ್ಲಾ ಕಣ್ಣೀರು ದುಖ:ದಿಂದ ಹೊರ ಬರಲು ಇಚ್ಚಿಸುವವರು ಇದೇ ಮಾರ್ಚ್ 30ನೇ ತಾರೀಖು ಭಾನುವಾರ ಯುಗಾದಿಯ ದಿನ ಸೂರ್ಯ ಹುಟ್ಟುವ ಮುನ್ನವೇ ಎದ್ದು ಈ ವಿಶೇಷ ಕೆಲಸವನ್ನು ಮಾಡಬೇಕು.

Ugadi 2025 Tie this item at the door of your house on the day of Ugadi Good luck with you

ಯುಗಾದಿಯಂದು ಈ ವಸ್ತು ಮನೆ ಬಾಗಿಲಿಗೆ ಕಟ್ಟಿ..

ನಿಮ್ಮ ಮನೆಯಲ್ಲಿ ದೊಡ್ಡವರು ಅಥವಾ ಹಿರಿಯರು ಈ ಕೆಲಸವನ್ನು ಮಾಡಬೇಕಾಗುತ್ತದೆ. ಯುಗಾದಿ ಹಬ್ಬಕ್ಕೂ ಮುನ್ನ ಚೆನ್ನಾಗಿ ಇರುವ ಅರಿಶಿಣದ ಕೊಂಬುಗಳನ್ನು ಮನೆಗೆ ತಂದು ಇಟ್ಟುಕೊಳ್ಳಬೇಕು. ಸಮಸಂಖ್ಯೆಯಲ್ಲಿ ಅರಿಶಿಣದ ಕೊಂಬುಗಳನ್ನು ಮನೆಗೆ ತಂದು ಯುಗಾದಿಯ ಬ್ರಾಹ್ಮಿ ಮುಹೂರ್ತದಲ್ಲಿ ಈ ಅರಿಶಿಣದ ಕೊಂಬುಗಳನ್ನು ತೋರಣದ ಹಾಗೆ ಅರಿಶಿಣದ ದಾರ ಬಳಸಿ ಕಟ್ಟಿಕೊಳ್ಳಬೇಕು.

ಅರಿಶಿಣ ಕೊಂಬುಗಳನ್ನು ಹೂವು ಕಟ್ಟುವ ರೀತಿ ಕಟ್ಟಿಕೊಳ್ಳಬೇಕು. ಆದರೆ ಒಂದು ಅರಿಶಿಣ ಕೊಂಬು ಮತ್ತೊಂದು ಅರಿಶಿಣ ಕೊಂಬಿಗೂ ಅಂತರ ಇರಬೇಕು. ಎರಡು, ನಾಲ್ಕು, ಆರು, ಎಂಟು, ಹತ್ತು, ಹನ್ನೆರೆಡು ಹೀಗೆ ಸಮ ಸಂಖ್ಯೆಯಲ್ಲಿ ನಿಮ್ಮ ಬಾಗಿಲಿಗೆ ಹೊಂದಿಕೊಳ್ಳುವಂತೆ ತೋರಣದಂತೆ ಅರಿಶಿಣ ಕೊಂಬುಗಳನ್ನು ಕಟ್ಟಿಕೊಳ್ಳಬೇಕು.

ನಂತರ ಎರಡು ಕೈಯಲ್ಲಿ ಈ ತೋರಣ ಹಿಡಿದುಕೊಂಡು ಪ್ರಾರ್ಥನೆ ಮಾಡಿ. 'ವರ್ಷದ ಮೊದಲ ದಿನವಾದ ಯುಗಾದಿಯಂದು ಈ ತೋರಣವನ್ನು ನಾನು ಮನೆಗೆ ಕಟ್ಟುತ್ತಿದ್ದೇನೆ. ಈ ತೋರಣದ ಶಕ್ತಿಯು ನಮ್ಮ ಮನೆಯ ಒಳಗೆ ಯಾವುತ್ತೂ ಇರಲಿ. ನಕಾರಾತ್ಮ ಶಕ್ತಿಗಳು ಪ್ರವೇಶ ಮಾಡದಂತೆ ತಡೆಯಲಿ. ಈ ಶಕ್ತಿಶಾಲಿ ತೋರಣದ ಕೆಳಗೆ ಓಡಾಡುವಂತಹ ನಮ್ಮ ಕುಟುಂಬದವರಿಗೆ ಗುರುವಿನ ರಕ್ಷಣೆ ಇರಲಿ. ಸರ್ವ ಕಾಲಕ್ಕೂ ಸರ್ವ ವಿಧಾನದ ಯಶಸ್ಸು ಸಿಗಲಿ. ಮನೆಯಲ್ಲಿ ಯಜಮಾನ ಮಾಡುವ ಕೆಲಸಗಳಿಂದ ಮನೆಯ ಏಳಿಗೆ ಶೀರ್ಘವಾಗಿ ಆಗಲಿ. ಮಾಟ ಮಂತ್ರ, ಅಕ್ಕಪಕ್ಕದವರ ದೃಷ್ಟಿ, ನರ ದೃಷ್ಟಿ ನಮ್ಮ ಮನೆಯ ಮೇಲೆ ಬೀಳದಿರಲಿ. ಕಠಿಣ ಶಕ್ತಿಗಳು ಮನೆಗೆ ತಾಗದಂತೆ ನಶಿಸಿ ಹೋಗಲಿ. ಶತ್ರುಗಳ ಕಣ್ಣು ನಮ್ಮ ಮನೆಯ ಮೇಲೆ ಬೀಳದಿರಲಿ' ಎಂದು ಪ್ರಾರ್ಥಿಸಿ ಈ ತೋರಣವನ್ನು ಮನೆಯ ಬಾಗಿಲಿಗೆ ಕಟ್ಟಿ. ನಂತರ ನೀವು ಮಾವಿನ ತೋರಣ ಕಟ್ಟಬಹುದು.

ಈ ತೋರಣವನ್ನು ಎಷ್ಟು ದಿನ ಮನೆ ಬಾಗಿಲಿಗೆ ಬಿಡಬೇಕು?

ಈ ತೋರಣವನ್ನು ಎಷ್ಟು ದಿನ ಬೇಕಾದರೂ ಬಿಡಬಹುದು. ತಾನಾಗಿಯೇ ಒಣಗಿ ಬಿದ್ದರೆ ನಿಮ್ಮ ಮನೆಯ ಸಮೀಪವಿರುವ ಮರಗಿಡಗಳ ಮೇಲೆ ಇದನ್ನು ಹಾಕಿ. ಇಲ್ಲವಾದಲ್ಲಿ ಮುಂದಿನ ಯುಗಾದಿವರೆಗೂ ತೋರಣ ಬಾಗಿಲಿಗೆ ಇರುವಂತೆ ನೋಡಿಕೊಳ್ಳಬಹುದು. ಇದನ್ನು ಮನೆಯ ಒಳಗಿರುವ ದೇವರ ಮನೆ ಬಾಗಿಲಿಗೂ ಕಟ್ಟಬಹುದು.

ಇದು ವೈಜ್ಞಾನಿಕವಾಗಿಯೂ ಕ್ರಿಮಿ ಕೀಟಗಳನ್ನು ಮನೆ ಒಳಗೆ ಬಾರದಂತೆ ತಡೆಯುತ್ತದೆ. ಶಾಸ್ತ್ರ ಹಾಗೂ ವೈಜ್ಞಾನಿಕ ರೀತಿಯಲ್ಲೂ ಈ ತೋರಣದಿಂದ ಲಾಭವಿದೆ. ಮನೆಯಲ್ಲಿ ಯಾವುದೇ ಸಮಸ್ಯೆ ಇದ್ದರೂ ಕೂಡ ಇದನ್ನು ಮನೆಯಲ್ಲಿ ಕಟ್ಟಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+