ಶ್ರಾವಣ ಸೋಮವಾರ 2021: ಉಪವಾಸ, ಪೂಜೆ, ಮಹತ್ವದ ಬಗ್ಗೆ ಮಾಹಿತಿ
ಮಾಸಗಳಲ್ಲೇ ಶ್ರಾವಣ ಮಾಸವು ಅತ್ಯಂತ ಶ್ರೇಷ್ಠ ಮಾಸವಾಗಿದೆ, ಶ್ರಾವಣದಲ್ಲಿ ಶಿವನನ್ನು ಆರಾಧಿಸಿದರೆ ಶುಭ ಫಲ ದೊರೆಯುವುದು ಎಂಬ ನಂಬಿಕೆ ಇದೆ.
ಶ್ರಾವಣ ಸೋಮವಾರ ಯಾರು ವಿಧಿ ವಿಧಾನದಿಂದ ಶಿವನ ಪೂಜೆ ಮಾಡುತ್ತಾರೋ ಅವರಿಗೆ ವಿಶೇಷ ಫಲ ಲಭಿಸುತ್ತದೆ. ವೃತದಿಂದಾಗಿ ಪ್ರತಿಯೊಂದು ದುಃಖ ಕಷ್ಟ, ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ.
ಸುಖಿ, ನಿರೋಗಿ ಹಾಗೂ ಸಮೃದ್ಧಿಯ ಜೀವನ ಸಾಗಿಸುತ್ತಾರೆ. ಈ ದಿನ ವ್ರತ ಮಾಡುವುದರಿಂದ ಮಕ್ಕಳ ರೋಗ ಗುಣಮುಖವಾಗುತ್ತದೆ. ದುರ್ಘಟನೆ ಹಾಗೂ ಅಕಾಲ ಮೃತ್ಯುವಿನಿಂದಮುಕ್ತಿ ಸಿಗುತ್ತದೆ, ವೈವಾಹಿಕ ಜೀವನದಲ್ಲಿ ಕಂಡು ಬರುವ ಭಿನ್ನಾಭಿಪ್ರಾಯಗಳು ದೂರವಾಗುತ್ತವೆ.

ಈ ಬಾರಿ ಶ್ರಾವಣದಲ್ಲಿ 4 ಸೋಮವಾರಗಳು ಬರುತ್ತವೆ. ಶ್ರಾವಣ ಮಾಸದ ಮೊದಲ ಸೋಮವಾರ ವ್ರತವು ಆಗಸ್ಟ್ 9 ರಂದು. ಎರಡನೇ ಶ್ರಾವಣ ಸೋಮವಾರ ವ್ರತ ಆಗಸ್ಟ್ 16 ರಂದು ಮತ್ತು ಮೂರನೇ ಶ್ರಾವಣ ಸೋಮವಾರ ವ್ರತ ಆಗಸ್ಟ್ 23 ರಂದು. ನಾಲ್ಕನೇ ಮತ್ತು ಕೊನೆಯ ಶ್ರಾವಣ ಸೋಮವಾರ ವ್ರತವು ಆಗಸ್ಟ್ 30 ರಂದು ಬರಲಿದೆ.
ಶ್ರಾವಣ ಸೋಮವಾರದ ಉಪವಾಸವನ್ನು ಆಚರಿಸುವ ಮೂಲಕ, ಭೋಲೇನಾಥ ಮತ್ತು ಮಾತಾ ಪಾರ್ವತಿಯ ಆಶೀರ್ವಾದವು ಭಕ್ತರ ಮತ್ತು ಅವರ ಕುಟುಂಬದ ಸದಸ್ಯರ ಮೇಲೆ ಉಳಿಯುತ್ತದೆ. ಇದರೊಂದಿಗೆ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯೂ ಇರುತ್ತದೆ. ಈ ಕಾರಣದಿಂದ ಶ್ರಾವಣ ಮಾಸಕ್ಕೆ ಸನಾತನ ಧರ್ಮದಲ್ಲಿ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಶಂಕರ ದೇವರನ್ನು ಪೂಜಿಸಲು ಶ್ರಾವಣ ತಿಂಗಳು ಅತ್ಯುತ್ತಮವಾದುದು ಎನ್ನುವ ನಂಬಿಕೆಯಿದೆ.
ಶ್ರಾವಣ ಮಾಸದ ಮೊದಲ ಸೋಮವಾರ, ಉತ್ತರಕ್ಕೆ ಮುಖ ಮಾಡಿ ಶಿವನನ್ನು ಆರಾಧಿಸಿ. ಇದರಿಂದ ಅವನಿಗೆ ತುಂಬಾ ಸಂತೋಷವಾಗುತ್ತದೆ. ಶ್ರಾವಣದ ಪ್ರತಿ ಸೋಮವಾರದಂದು ಭಕ್ತನು ನಿಯಮಿತವಾಗಿ ಶಿವ ಮಂತ್ರವಾದ 'ಓಂ ನಮಃ ಶಿವಾಯ' ಮಂತ್ರವನ್ನು 11, 21, 51 ಅಥವಾ 108 ಬಾರಿ ಉತ್ತರ ದಿಕ್ಕಿಗೆ ಎದುರಾಗಿ ಕುಳಿತು ಪಠಿಸಬೇಕು.
ವ್ರತ ಮಾಡುವಾಗ ಕೆಲವೊಂದು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ವ್ರತದ ದಿನ ಬ್ರಹ್ಮ ಮುಹೂರ್ತದಲ್ಲಿ ಎದ್ದು ನೀರಿಗೆ ಕಪ್ಪು ಎಳ್ಳನ್ನು ಹಾಕಿ ಸ್ನಾನ ಮಾಡಬೇಕು.
ಭಗವಂತ ಶಿವನ ಅಭಿಷೇಕ ನೀರು ಹಾಗೂ ಗಂಗಾಜಲದಲ್ಲಾಗುತ್ತದೆ, ವಿಶೇಷ ಫಲ ಪ್ರಾಪ್ತಿಗಾಗಿ ಹಾಲು, ತುಪ್ಪ, ಮೊಸರು, ಜೇನು, ಸಾಸಿವೆ, ಕಪ್ಪು ಎಳ್ಳಿನಿಂದ ಮಾಡುತ್ತಾರೆ.
ಓಂ ನಮಃಶಿವಾಯ ಮಂತ್ರದ ಜತೆಗೆ ದೇವರಿಗೆ ಬಿಳಿ ಹೂವು, ಬಿಳಿ ಅಕ್ಕಿ, ಪಂಚಾಮೃತ, ಅಡಿಕೆ, ಹಣ್ಣು ಹಾಗೂ ಗಂಗಾಜಲ ಅಥವಾ ಶುದ್ಧ ನೀರಿನಿಂದ ದೇವರ ಪೂಜೆ ಮಾಡಬೇಕು.
ಸೋಮವಾರ ಮಾಡುವ ವ್ರತವು ಶಿವನಿಗೆ ಅರ್ಪಿಸಲಾಗಿದೆ. ನಾವು ಸೋಮವಾರ ಶಿವನನ್ನು ಪೂಜಿಸಿದರೆ, ಆಗ ಶಿವನು ಸಂತಸಗೊಂಡು ನಮಗೆ ಬೇಕಾದ ಆಶೀರ್ವಾದವನ್ನು ನೀಡುತ್ತಾನೆ.
ಹೊಸ ಮನೆಗೆ ಪ್ರವೇಶಿಸಲು ಮತ್ತು ಮದುವೆಗೆ ಸಂಬಂಧಿಸಿದ ವ್ಯವಸ್ಥೆಗಳನ್ನು ಮಾಡಲು ಮತ್ತು ಕ್ರೀಡಾ ಸಂಬಂಧಿತ ಕೆಲಸಗಳಿಗೆ ಸೋಮವಾರ ಅತ್ಯಂತ ಸೂಕ್ತ ದಿನವೆಂದು ಪರಿಗಣಿಸಲಾಗುತ್ತದೆ. ಸೋಮವಾರದ ಉಪವಾಸ ಅಥವಾ ಪೂಜೆಯನ್ನು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಮಾಡಲಾಗುತ್ತದೆ.
ಸೋಮವಾರ ವ್ರತ: ಸೋಮವಾರದಂದು ಭಗವಾನ್ ಶಿವನನ್ನು ಪೂಜಿಸಿ ಉಪವಾಸ(Fasting) ವ್ರತವನ್ನು ಆಚರಿಸುವ ಮೂಲಕ ಓರ್ವ ವ್ಯಕ್ತಿಯ ಎಲ್ಲಾ ಆಸೆಗಳನ್ನು ಈಡೇರಿಸಲಾಗುತ್ತದೆ ಮತ್ತು ವ್ಯಕ್ತಿಯು ಸದ್ಭಾವನೆ ಪಡೆಯುತ್ತಾನೆ ಎಂದು ನಂಬಲಾಗಿದೆ. ಆದ್ದರಿಂದ ಹೆಚ್ಚಿನ ಜನರು ಸೋಮವಾರ ವ್ರತವನ್ನು ಆಚರಿಸುತ್ತಾರೆ.
ಸೋಮವಾರ ಶಿವ ಪೂಜೆ: ಶಿವ ಭಕ್ತರು ಸೋಮವಾರದ ದಿನದಂದು ಪಾರ್ವತಿ ದೇವಿಯನ್ನು ಮತ್ತು ಭಗವಾನ್ ಶಿವನನ್ನು ಪೂಜಿಸಲು ಇಷ್ಟಪಡುತ್ತಾರೆ. ಶ್ರಾವಣ ತಿಂಗಳಲ್ಲಿ ಸೋಮವಾರ ಉಪವಾಸವನ್ನು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಸೋಮವಾರ ಶಿವನನ್ನು ಪೂಜಿಸುವುದರಿಂದ ನಮ್ಮೆಲ್ಲಾ ಮನದಾಸೆಯು ಈಡೇರುತ್ತದೆ ಎನ್ನುವ ನಂಬಿಕೆಯಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ











Click it and Unblock the Notifications