• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ರಾವಣ ಕುರಿತು ಬೇಂದ್ರೆ, ಕುವೆಂಪು ಕವನ

By Staff
|

ದ. ರಾ. ಬೇಂದ್ರೆಸಂವತ್ಸರ ಸೂರ್ಯಪಾನಅಭಿಜಿನ್ಮನ ಊರ್ಧ್ವಧ್ಯಾನಧ್ರುವಮಂಡಲ ಭಕ್ತಿಗಾನಸರೆಗಮಪದ ಏಕತಾನಬರುತಲಿಹುದು ಶ್ರಾವಣಾಮತ್ತೆ ಬಂತು ಶ್ರಾವಣಾದಿನ ದಿನಾ ನವೀನ ಜನನಗಗನ ಗಹನ ಯಂತ್ರ ಘನನ ಮಮ ನಮೋ ಮಂತ್ರ ಮನತನು ತಾನೆನೆ ತಂತ್ರ ತನಬರುತಲಿಹುದು ಶ್ರಾವಣಾಮತ್ತೆ ಬಂತು ಶ್ರಾವಣಾತನು ಮನ ಘನ ಪ್ರಾಣಿಯಾಗಿಜತೆಗು ನಾಗವೇಣಿಯಾಗಿಪಥದಲಿ ತತ್‌ತ್ರಾಣಿಯಾಗಿಬಿನ್ನಾಣದ ಶ್ರೇಣಿಯಾಗಿಬರುತಲಿಹುದು ಶ್ರಾವಣಾಮತ್ತೆ ಬಂತು ಶ್ರಾವಣಾಖಗ ನಗ ಜಗ ಸಂಮುಖ ಬಾಚುವ ರವಿ ಕಿರಣ ನಖತಮದ ಬಸಿರೊಳಮರ ಮುಖ ನಿರಂತರದ ಸಖ-ಸಖಿ-ಸುಖಬರುತಲಿಹುದು ಶ್ರಾವಣಾಮತ್ತೆ ಬಂತು ಶ್ರಾವಣಾ ರಾಧಾ ಧರ ಸುರಿಯುವಲ್ಲಿ ಯಮುನಾ ಜಲ ಹರಿಯುವಲ್ಲಿ ವೃಂದೆಯ ಚಿತೆ ಉರಿಯುವಲ್ಲಿತುಲಸಿಯು ಒಡಮುರಿಯುವಲ್ಲಿಬರುತಲಿಹುದು ಶ್ರಾವಣಾ ಮತ್ತೆ ಬಂತು ಶ್ರಾವಣಾಸಖೀ ಸ್ಮರಣ ಮುಕುರದಲ್ಲಿ ಮಂಗಲ ಮುಖ ದೂರದಲ್ಲಿ ಆ ಮಿಲಿಂದ ತೀರದಲ್ಲಿಮಧುರಸ್ಮಿತ ಪೂರದಲ್ಲಿಬರುತಲಿಹುದು ಶ್ರಾವಣಾ ಮತ್ತೆ ಬಂತು ಶ್ರಾವಣಾ ಬ್ರಹ್ಮರಂಧ್ರ ಗೀತಾಗಮಬೆನ್‌ ಬಿದಿರಿಗೆ ಧ್ವನಿ ಸಂಗಮಶೇಷ ಶ್ವಾಸ ಸಮ ಘಮ ಘಮ ಜೀವ ಭಾವ ಹೃದಯಂಗಮಬರುತಲಿಹುದು ಶ್ರಾವಣಾ ಮತ್ತೆ ಬಂತು ಶ್ರಾವಣಾ.

ಮತ್ತೆ ಬಂತು ಶ್ರಾವಣಾ

ದ. ರಾ. ಬೇಂದ್ರೆ

ಸಂವತ್ಸರ ಸೂರ್ಯಪಾನ

ಅಭಿಜಿನ್ಮನ ಊರ್ಧ್ವಧ್ಯಾನ

ಧ್ರುವಮಂಡಲ ಭಕ್ತಿಗಾನ

ಸರೆಗಮಪದ ಏಕತಾನ

ಬರುತಲಿಹುದು ಶ್ರಾವಣಾ

ಮತ್ತೆ ಬಂತು ಶ್ರಾವಣಾ

ದಿನ ದಿನಾ ನವೀನ ಜನನ

ಗಗನ ಗಹನ ಯಂತ್ರ ಘನ

ನ ಮಮ ನಮೋ ಮಂತ್ರ ಮನ

ತನು ತಾನೆನೆ ತಂತ್ರ ತನ

ಬರುತಲಿಹುದು ಶ್ರಾವಣಾ

ಮತ್ತೆ ಬಂತು ಶ್ರಾವಣಾ

ತನು ಮನ ಘನ ಪ್ರಾಣಿಯಾಗಿ

ಜತೆಗು ನಾಗವೇಣಿಯಾಗಿ

ಪಥದಲಿ ತತ್‌ತ್ರಾಣಿಯಾಗಿ

ಬಿನ್ನಾಣದ ಶ್ರೇಣಿಯಾಗಿ

ಬರುತಲಿಹುದು ಶ್ರಾವಣಾ

ಮತ್ತೆ ಬಂತು ಶ್ರಾವಣಾ

ಖಗ ನಗ ಜಗ ಸಂಮುಖ

ಬಾಚುವ ರವಿ ಕಿರಣ ನಖ

ತಮದ ಬಸಿರೊಳಮರ ಮುಖ

ನಿರಂತರದ ಸಖ-ಸಖಿ-ಸುಖ

ಬರುತಲಿಹುದು ಶ್ರಾವಣಾ

ಮತ್ತೆ ಬಂತು ಶ್ರಾವಣಾ

ರಾಧಾ ಧರ ಸುರಿಯುವಲ್ಲಿ

ಯಮುನಾ ಜಲ ಹರಿಯುವಲ್ಲಿ

ವೃಂದೆಯ ಚಿತೆ ಉರಿಯುವಲ್ಲಿ

ತುಲಸಿಯು ಒಡಮುರಿಯುವಲ್ಲಿ

ಬರುತಲಿಹುದು ಶ್ರಾವಣಾ

ಮತ್ತೆ ಬಂತು ಶ್ರಾವಣಾ

ಸಖೀ ಸ್ಮರಣ ಮುಕುರದಲ್ಲಿ

ಮಂಗಲ ಮುಖ ದೂರದಲ್ಲಿ

ಆ ಮಿಲಿಂದ ತೀರದಲ್ಲಿ

ಮಧುರಸ್ಮಿತ ಪೂರದಲ್ಲಿ

ಬರುತಲಿಹುದು ಶ್ರಾವಣಾ

ಮತ್ತೆ ಬಂತು ಶ್ರಾವಣಾ

ಬ್ರಹ್ಮರಂಧ್ರ ಗೀತಾಗಮ

ಬೆನ್‌ ಬಿದಿರಿಗೆ ಧ್ವನಿ ಸಂಗಮ

ಶೇಷ ಶ್ವಾಸ ಸಮ ಘಮ ಘಮ

ಜೀವ ಭಾವ ಹೃದಯಂಗಮ

ಬರುತಲಿಹುದು ಶ್ರಾವಣಾ

ಮತ್ತೆ ಬಂತು ಶ್ರಾವಣಾ

ಶ್ರಾವಣ ಸಂಧ್ಯಾಸಮೀರಣ

ಕುವೆಂಪು

ಶ್ರಾವಣ ಸಂಧ್ಯಾ ಸಮಯ ಸಮೀರನು

ಆಮಂದಗಮನದಿ ಬರುತಿಹನು ,

ಸುಯ್ಯನೆ ಬೀಸಿ ಬರುತಿಹನು !

ಪಡುಗಡಲಿನ ಪೆರ್ದೆರೆಗಳ ಗುಡಿಯಲಿ

ತುಂತುರುವನಿಗಳ ಕೂಡಾಡಿ,

ಬೆಳ್ನೊರೆಯುರುಳಿಯ ಚೆಲ್ಲಾಡಿ

ಜಲನಿಧಿ ಘೋಷದಿ ಬರುತಿಹನು

ಕಡಲಿನ ವಾರ್ತೆಯ ತರುತಿಹನು !

ಶ್ಯಾಮಲ ಪಲ್ಲವ ಸುಮ ಸಂಪೂಜಿತ

ಭೀಮನಿಬಿಡತರುರಾಜಿ ವಿರಾಜಿತ

ಮಲಯ ಸಹ್ಯವನ ಪರ್ವತ ಶಿಖರದಿ

ಯಾತ್ರೆಗೈದು ಪಾವನನಾಗಿ

ಪುಣ್ಯಪವನನು ಬರುತಿಹನು

ಧಾವಿಸಿ ಬರುತಿಹನು !

ಸುನೀಲ ಶ್ಯಾಮಲ ಜಲಧರ ಪಙ್ತಿ ಯ

ತೇಲಿಸಿ ಶ್ರಾವಣ ವ್ಯೋಮದಲಿ

ತಂಪನು ಸೂಸುತ, ತಣ್ಣನೆ ಬೀಸುತ,

ಸೋನೆಯ ಚಿಮುಕಿಸಿ ಭೂಮಿಯಲಿ,

ಮಂಗಳ ಪವನನು ಬರುತಿಹನು

ಬೀಸಿ ಬರುತಿಹನು !

ಹಸುರನೋಕರಿಪ ಜೋಳದ ಹೊಲದಲಿ

ತೊಳಲಿ ಚಿಮಿ ್ಮ ಸರಸವನೆಸಗಿ,

ಸಾಲು ಮರಗಳಿಂದುಣ್ಮಿಯೇರುತಿಹ

ಪಿಕರುತಿಗಂದಣವನು ಎಸಗಿ,

ಕೂದಲ ಕೆದರಿಹ ಈಚಲು ಮರಗಳ

ಮಿದುಳಿನಲಿ ಸುರಾಕ್ರೀಡೆಯನಾಡಿ,

ಅರಳಿ ಮರಗಳಲಿ, ಬಿದಿರು ಮೆಳೆಗಳಲಿ

ಮರ್ಮರ ಸಿಮಿಸಿಮಿ ಸದ್ದನು ಮಾಡಿ,

ಅಧ್ರುವನನು ತೂರಿ,

ಧ್ರುವದೆದೆಯನು ತೋರಿ

ನೂತನ ಚೇತನ ದಾಯಕನು,

ಶ್ರಾವಣ ತೋಯದ ನಾಯಕನು ,

ಪುಣ್ಯ ಸಮೀರನು ಬರುತಿಹನು,

ಬೀಸಿ ಬರುತಿಹನು !

ಆಗಾಮಿಕ ಶ್ಯಾಮಲ ಆನಂದವ

ಭೂದೇವಿಯ ಅಂತಃಕರಣದಲಿ

ದೀಪನಗೈದೈತರುತಿಹನು,

ಸಮೀರ ಬರುತಿಹನು !

ಉತ್ಸಾಹದಿ ಅನುರಾಗದಿ ವೇಗದಿ

ಮುದಿಗನಸುಗಳನು ತೂರುತ್ತ,

ಹೊಸಗನಸನು ಮೊಳೆದೋರುತ್ತ,

ಪಾವನ ಪವನನು ಬರುತಿಹನು ,

ಜೀವವ ತರುತಿಹನು !

ಅಸ್ತಾಚಲ ಶೃಂಗಸ್ಥ ದಿನೇಶನ

ತಪ್ತ ಸುವರ್ಣ ಜ್ಯೋತಿಯ ಹೊದೆದಿಹ

ನೀರಾಕರದಲಿ ವೀಚಿಯ ವಿರಚಿಸಿ,

ಹರ ಹರ ಹರ ಹರ ನಿನದವ ನಿರ್ಮಿಸಿ

ಶ್ರಾವಣ ಸಂಧ್ಯಾಸಮಯ ಸಮೀರನು

ಅಮಂದಗಮನದಿ ಬರುತಿಹನು,

ಸುಯ್ಯನೆ ಬೀಸಿ ಬರುತಿಹನು !

ಶ್ರಾವಣ ಸಂಧ್ಯಾಸಮಯ ಸಮೀರ ,

ಸ್ವಾಗತ ನಿನಗೆ, ಪಯೋಧಿಯ ವೀರ !

ಸ್ವಾತಂತ್ರ್ಯದ ರುಚಿಯರಿತಿಹ ಧೀರ ,

ಸ್ವಾತಂತ್ರ್ಯದ ಸಂದೇಶವ ತಾರ !

ಮುಕ್ತ ಸಮೀರ, ಬಾರಾ, ಬಾರಾ !

ಸತ್ಯಾಗ್ರಹವನು ನೀನೂ ಸೇರಾ 1

ಸೆರೆಮನೆಗಾದರೂ ಬಲ್ಲವರೆಲ್ಲ ,

ಸೇನೆಯ ನಡೆಸಲು ಬಲ್ಲಿದವರಿಲ್ಲ ,

ದಳಪತಿಯಾಗೈ ನೀನೆಮಗೆಲ್ಲ ,

ಬಾರಾ, ಸಮೀರ, ಮುಕ್ತಿಯ ಮಲ್ಲ !

ಹನುಮನ ಹೆತ್ತವ ನೀನಲ್ತೆ ?

ಭೀಮನ ಹಡೆದವ ನೀನಲ್ತೆ ?

ಕಡಲೊಡಲಲಿ ಬಡಬಾಗ್ನಿಯ ರೌದ್ರವ

ನಮ್ಮೊಡಲಲಿ ಕೆರಳಿಸಿ ಬಾರಾ !

ಸುಳಿಗಾಳಿಗೆ ಭೋರ್ಗರೆವ ಸಮುದ್ರವ

ನಮ್ಮೆದೆಗಳಲುರುಳಿಸಿ ಬಾರಾ !

ಮುಂಗಾರ್ಮೊಳಗನು ಗುಡುಗನು ಮಿಂಚನು

ನಮ್ಮೆದೆಗೂಡುತ ನೀ ಬಾರಾ !

ವಿಪ್ಲವ ಮೂರ್ತಿಯ ಕಳ್ಳೊಳಸಂಚನು

ತುತ್ತೂರಿಯೂದುತ ನೀ ಬಾರಾ !

ಶ್ರಾವಣ ಸಂಧ್ಯಾ ಸಮಯ ಸಮೀರ !

ಸ್ವಾಗತ, ಬಾರಾ, ಧೀರರ ದೀರ!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more