ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂ ಸಿರಿ-ಸೂರ್ಯನೊಲವು ಬೆಸೆವ ಘಳಿಗೆ ಸಂಕ್ರಾಂತಿ!

|
Google Oneindia Kannada News

ಬೆಂಗಳೂರು, ಜನವರಿ 10: ಒಳ್ಳೆಯ ಮಾತುಗಳನ್ನಾಡಲು ಪ್ರೇರೇಪಿಸುವ ಸಂಕ್ರಾಂತಿ ಬಂದೇ ಬಿಟ್ಟಿದೆ, ಇದು ದೇಶ ವಿದೇಶಗಳಲ್ಲಿ ಬೇರೆ ಬೇರೆ ಹೆಸರುಗಳಲ್ಲಿ ಆಚರಿಸುವ ಒಂದು ಸುಗ್ಗಿ.

ಕನ್ನಡ ನಾಡಿನಲ್ಲಿ ಮತ್ತು ಆಂಧ್ರಪ್ರದೇಶದಲ್ಲಿ ಸಂಕ್ರಾಂತಿ ಎಂದು ಆಚರಿಸಿದರೆ, ಅದನ್ನು ತಮಿಳುನಾಡಿನಲ್ಲಿ ಪೊಂಗಲ್ ಎಂದು ಆಚರಿಸುತ್ತಾರೆ. ಸಂಕ್ರಾಂತಿಯ ನಾಯಕ ಬೆಳಕು ನೀಡುವ ಸೂರ್ಯನಾದರೆ, ಸಂಕ್ರಾಂತಿಯ ನಾಯಕಿ ಸಸ್ಯ ಬೆಳೆಯಲು ಅನುವು ಮಾಡಿಕೊಡುವ ಭೂಮಿ ತಾಯಿ. ಹೀಗಾಗಿ ಇದನ್ನು ವಿವಿಧೆಡೆ ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಾರೆ. ಈ ಬಾರಿ ಜನವರಿ 15 ರಂದು ಸಂಕ್ರಾಂತಿ ಆಚರಣೆ ಮಾಡಲಾಗುತ್ತಿದೆ.

ಸುಗ್ಗಿಯ ಸಂಕ್ರಾಂತಿ ಕುರಿತು ನಿಮಗೆ ಗೊತ್ತೆ 8 ಕುತೂಹಲಕಾರಿ ಸಂಗತಿ?!ಸುಗ್ಗಿಯ ಸಂಕ್ರಾಂತಿ ಕುರಿತು ನಿಮಗೆ ಗೊತ್ತೆ 8 ಕುತೂಹಲಕಾರಿ ಸಂಗತಿ?!

ವರ್ಷದ ಮೊದಲ ಹಬ್ಬ ಸಂಕ್ರಾಂತಿ ಸಂಭ್ರಮ ಈಗಲೇ ಎಲ್ಲೆಡೆ ಗರಿಗೆದರಿದೆ. ಈ ಸಂಭ್ರಮ ಇಡೀ ವರ್ಷಕ್ಕೆ ಚೈತನ್ಯ ತುಂಬುವಂತದ್ದು, ಈ ಸಂಭ್ರಮ ನಿರಂತರವಾಗಬೇಕಿದ್ದರೆ ಸಂಕ್ರಾಂತಿಯನ್ನು ನೆನಪಿನಲ್ಲಿ ಉಳಿಯುವ ಹಾಗೆ ಸೆಲಬ್ರೇಟ್ ಮಾಡಿ.

ಸಂಕ್ರಾಂತಿ ವಿಶೇಷ ಪುಟ

ವೆರೈಟಿ ಡಿಶ್ ಗಳಿರಲಿ:

ವೆರೈಟಿ ಡಿಶ್ ಗಳಿರಲಿ:

ಸಂಕ್ರಾಂತಿ ಹಬ್ಬಕ್ಕೆ ಪೊಂಗಲ್ ರುಚಿ ಸವಿಯುವುದರ ಜತೆಗೆ ಇನ್ನಿತರೆ ಖಾದ್ಯಗಳನ್ನೂ ಮಾಡಿ ಸೇವಿಸಿ, ಟಿಕ್ಕಿ, ಲಡ್ಡು ಮುಂತಾದ ತಿನಿಸುಗಳು ಸಂಕ್ರಾಂತಿ ಸಂಭ್ರಮವನ್ನು ಹೆಚ್ಚಿಸುತ್ತದೆ.

ಸಮಾಜಮುಖಿ ಆಚರಣೆ: ಕೇವಲ ಮನೆ ಮಂದಿಯೆಲ್ಲಾ ಸೇರಿ ಕಬ್ಬು, ಎಳ್ಳು, ಬೆಲ್ಲ ಹಂಚಿ ಸಂಭ್ರಮಿಸುವಕ್ಕಿಂತ ಎಲ್ಲಾ ಸೇರಿ ವೃದ್ಧಾಶ್ರಮ ಅಥವಾ ಅನಾಥಾಶ್ರಮಕ್ಕೆ ಭೇಟಿ ನೀಡಿ ಅವರೊಂದಿಗೆ ಹಬ್ಬವನ್ನು ಆಚರಿಸಿ, ತಮಗೋಸ್ಕರ ಯಾರೂ ಇಲ್ಲ ಎಂದು ನೊಂದುಕೊಳ್ಳುತ್ತಿರುವವರ ಮನಸ್ಸಲ್ಲಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಹೇಳಿ ಮೊಗದಲ್ಲಿ ನಗು ತರಿಸಿ.
ಗುಂಪು ಆಟ

ಗುಂಪು ಆಟ

ಹಬ್ಬಂದು ಮಕ್ಕಳು ಮೊಬೈಲ್, ವಿಡಿಯೋ ಗೇಮ್ ಇತ್ಯಾದಿಗಳಿಗೆ ಜೋತು ಬೀಳದಂತೆ ನೋಡಿಕೊಳ್ಳಿ, ಆ ದಿನ ಮಕ್ಕಳನ್ನು ಸೇರಿಸಿ ಗುಂಪು ಆಟಗಳನ್ನು ಆಡಿಸಿ, ಹಳೆ ಆಟಗಳಾದ ಕುಂಟಾಬಿಲ್ಲೆ, ಲಗೋರಿ, ರಾಮ,ನಚೆಂಡು, ಕಣ್ಣಾ ಮುಚ್ಚಾಲೆ ಇತ್ಯಾದಿಗಳನ್ನು ಆಡಲು ಪ್ರೇರೇಪಿಸಿ. ಇದರಿಂದಾಗಿ ಮಕ್ಕಳಲ್ಲಿ ಬೇರೆಯವರೊಂದಿಗೆ ಬೆರೆಯುವ ಗುಣ ಹೆಚ್ಚಾಗುತ್ತದೆ.

ಬಣ್ಣದ ಅಚ್ಚು ಮಾರಾಟ:

ಬಣ್ಣದ ಅಚ್ಚು ಮಾರಾಟ:

ಕಳಪೆ ಬಣ್ಣ ಬಳಸಿ ಸಕ್ಕರೆ ಅಚ್ಚು ತಯಾರಿಸಿ ಮಾರಾಟ ಮಾಡುವ ಮೂಲಕ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತಿದ್ದರಿಂದ ಬಣ್ಣದ ಅಚ್ಚುಗಳ ಮಾರಾಟ ನಿಷೇಧಿಸಲಾಗಿದೆ. ಹಾಗಿದ್ದರೂ ಕೆ.ಆರ್. ಮಾರುಕಟ್ಟೆ ಹಾಗೂ ನಗರದ ಇತರ ಕೆಲವೆಡೆ ಬಣ್ಣದ ಅಚ್ಚುಗಳು ಈ ವರ್ಷವೂ ಮಾರಾಟವಾಗುತ್ತಿವೆ. ನಾವು ಗುಣಮಟ್ಟದ ಫುಡ್ ಕಲರ್ ಬಳಸಿದ ಸಕ್ಕರೆ ಅಚ್ಚುಗಳನ್ನೇ ಮಾರಾಟ ಮಾಡುವುದು ಎಂದು ವ್ಯಾಪಾರಿಗಳು ಹೇಳುತ್ತಾರೆ.

ಎಳ್ಳು-ಬೆಲ್ಲ ಪ್ಯಾಕೇಟ್ ಬೆಲೆ ಹೆಚ್ಚು:

ಎಳ್ಳು-ಬೆಲ್ಲ ಪ್ಯಾಕೇಟ್ ಬೆಲೆ ಹೆಚ್ಚು:

ಸಂಕ್ರಾಂತಿ ಹಬ್ಬಕ್ಕಾಗಿ ಎಳ್ಳು-ಬೆಲ್ಲಗಳ ರೆಡಿಮೇಡ್ ಪೊಟ್ಟಣಗಳು ಮಾರುಕಟ್ಟೆಗೆ ಪ್ರವೇಶಿಸಿದೆ. ಆದರೆ ಈ ಬಾರಿ ಕಳೆದ ವರ್ಷಕ್ಕಿಂತ ಶೇ.10 ರಿಂದ 30 ರಷ್ಟು ಬೆಲೆ ಏರಿಕೆಯಾಗಿದೆ. ಏಕೆಂದರೆ ಇವುಗಳನ್ನು ಸಿದ್ಧಪಡಿಸುವ ಕಾರ್ಮಿಕರ ಕೂಲಿ ಶೇ.30 ರಷ್ಟು ಏರಿಕೆಯಾಗಿದೆ.
ಅಂದಹಾಗೆ ಈಬಾರಿ ಕುಸುರಿಕಾಳು ಹೊರತುಪಡಿಸಿ ಇತರ ಎಲ್ಲಾ ವಸ್ತಗಳ ಬೆಲೆಗಳು ಏರಿಕೆಯಾಗಿದೆ. ಅದರಲ್ಲೂ ಕಡ್ಲೆಬೀಜ ಕೆಜಿಯ ಮೇಲೆ ಕಳೆದ ವರ್ಷಕ್ಕಿಂತ ಈ ಬಾರಿ 20 ರಿಂದ 40 ರೂ ವರೆಗೆ ಏರಿಕೆಯಾಗಿದೆ.

ಬೆಲ್ಲ 20 ರೂ ಹೆಚ್ಚಾಗಿದೆ. ಇದ್ದದ್ದು 15 ರೂ ಆಗಿದೆ. ಮಿಶ್ರಣಗೊಳಿಸಿದ ಎಳ್ಳು ಬೆಲ್ಲವೂ ಕೆಜಿಯ ಮೇಲೆ 30 ರಿಂದ 60 ರೂ ವರೆಗೆ ಏರಿಕೆಯಾಗಿದೆ. ಬೆಲೆ ಏರಿಕೆ ನಡುವೆಯೂ ಹಬ್ಬ ಇನ್ನೂ ಒಂದು ವಾರವಿರುವಾಗಲೇ ಬೇಡಿಕೆ ಆರಂಭವಾಗಿದೆ.

ವಿದೇಶದಲ್ಲಿರುವಭಾರತೀಯರು ಕಳೆದ 15-20 ದಿನಗಳಿಂದ ಎಳ್ಳು-ಬೆಲ್ಲಗಳಿಗಾಗಿ ಮಾರಾಟಗಾರರಿಗೆ ಬುಕ್ ಮಾಡಿದ್ದಾರೆ. ಕ್ರಿಸ್ ಮಸ್ ರಜೆ ಮೇಲೆ ಲಂಡನ್ ಅಮೆರಿಕ ಮತ್ತಿತರೆ ರಾಷ್ಟ್ರಗಳಿಂದ ಬಂದಿರುವವರು ಡಿಸೆಂಬರ್ ಅಂತ್ಯ ಹಾಗೂ ಜನವರಿ ಮೊದಲ ವಾರದಲ್ಲಿ ವಿದೇಶಕ್ಕೆತೆರಳುವರು ಇವರು ಇಲ್ಲಿಂದ ಎಳ್ಳು-ಬೆಲ್ಲಕೊಂಡೊಯ್ಯಲು ಖರೀದಿಸುತ್ತಿದ್ದಾರೆ.

ಕಳಪೆ ಸಕ್ಕರೆ ಅಚ್ಚಿನಿಂದ ಆರೋಗ್ಯಕ್ಕೆ ತೊಂದರೆ:

ಕಳಪೆ ಸಕ್ಕರೆ ಅಚ್ಚಿನಿಂದ ಆರೋಗ್ಯಕ್ಕೆ ತೊಂದರೆ:

ಕೊಳ್ಳುಗರೇ ಎಚ್ಚರವಿರಲಿ: ಸಕ್ಕರೆ ಅಚ್ಚು ತಯಾರಿಸಿ ಐಎಸ್ ಐ ಗುರುತಿರುವ ಬ್ರಾಂಡೆಡ್ ಕಲರ್ ಗಳನ್ನು ಮಿತವಾಗಿ ಬಳಸುವುದರಿಂದ ಆರೋಗ್ಯಕ್ಕೆ ಯಾವುದೇ ಹಾನಿಯಿಲ್ಲ. ಆದರೆ 2 ಪಿಪಿಎಂ ಪ್ರಮಾಣ ಹೆಚ್ಚಾಗುವುದು, ಅಧಿಕ ಕಲರ್ ಬಳಕೆ ಹಾಗೂ ಸಿಂಥೆಟಿಕ್ ಫುಡ್ ಕಲರ್ ಬಳಕೆ ಆರೋಗ್ಯಕ್ಕೆ ಹಾನಿಕಾರಕ ಎನ್ನುತ್ತಾರೆ ಆರೋಗ್ಯಾಧಿಕಾರಿಗಳು. ಕೆಲವೆಡೆ ಗುಣಮಟ್ಟದ ಸಕ್ಕರೆ ಬದಲಿಗೆ ಶುದ್ಧೀಕರಿಸದ ಕಡಿಮೆ ಬೆಲೆಯ ಸಕ್ಕರೆ ಜತೆಗೆ ಅಧಿಕ ಸಿಹಿಗಾಗಿ ಸ್ವೀಟಾಲ್ ಪೌಡರ್ ಬಳಕೆಯಾಗುತ್ತಿದೆ. ಈ ಬಗ್ಗೆ ಖರೀದಿದಾರರು ಎಚ್ಚರವಹಿಸಬೇಕು.
ಜಯನಗರ ಶಾಪಿಂಗ್ ಕಾಂಪ್ಲೆಕ್ಸ್, ಗಾಂಧಿ ಬಜಾರ್, ಮಲ್ಲೇಶ್ವರ, ಯಶವಂತಪುರ, ರಾಜಾಜಿನಗರಗಳಲ್ಲೂ ಸಕ್ಕರೆ ಅಚ್ಚು ಮತ್ತು ಎಳ್ಳು-ಬೆಲ್ಲಗಳು ಮಾರಾಟವಾಗುತ್ತಿದೆ.


ವಸ್ತುಗಳು ಬೆಲೆ
ಸಿದ್ಧ ಎಳ್ಳು ಬೆಲ್ಲ- 240 ರೂ
ಬೆಲ್ಲದ ಚೂರು -110-120 ರೂ
ಸಕ್ಕರೆ ಅಚ್ಚು -200 ರೂ
ಅವರೆಕಾಯಿ-80-100
ಕಬ್ಬು-100-120
ಗೆಣಸು-30-40
ಕಡಲೆಕಾಯಿ-100-120
ಹುರಿಗಡಲೆ-110-120
ಉಂಡೆ ಕೊಬ್ಬರಿ-100-105

ಹೂವುಗಳು ಬೆಲೆ
ಕನಕಾಂಬರ 350-400 ರೂ
ಕಾಕಡ ಮಲ್ಲಿಗೆ-250-300ರೂ
ದುಂಡು ಮಲ್ಲಿಗೆ-80-100ರೂ
ಗುಲಾಬಿ -120-140ರೂ
ಕಣಗಲ-120-140ರೂ
ಸೇವಂತಿಗೆ-80-100 ರೂ
ಸುಗಂಧರಾಜ-100-120 ರೂ

English summary
It's a time for celebration of greenery of the earth and rising the time of Sun into Makara, called Makara sankranti. The festival is of farmers who celebrate their Suggi in this season.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X