Pitru Paksha 2023: ಪಿತೃ ಪಕ್ಷದಲ್ಲಿ ಶ್ರಾದ್ಧ ಮಾಡುವ ಅಭ್ಯಾಸವನ್ನು ಯಾರು ಪ್ರಾರಂಭಿಸಿದರು?
ಈ ವರ್ಷ ಪಿತೃ ಪಕ್ಷ ಸೆಪ್ಟೆಂಬರ್ 29 ಶುಕ್ರವಾರದಿಂದ ಪ್ರಾರಂಭವಾಗಲಿದೆ. ಇದು ಸರ್ವ ಪಿತೃ ಅಮಾವಾಸ್ಯೆಯ ದಿನದಂದು ಅಂದರೆ ಅಕ್ಟೋಬರ್ 14 ಶನಿವಾರದಂದು ಕೊನೆಗೊಳ್ಳುತ್ತದೆ. ಪಿತೃ ಪಕ್ಷದ 15 ದಿನಗಳ ಅವಧಿಯಲ್ಲಿ ಪೂರ್ವಜರಿಗೆ ಶ್ರಾದ್ಧ ಆಚರಣೆಗಳನ್ನು ಮಾಡಲಾಗುತ್ತದೆ. ಪಿತೃ ಪಕ್ಷದಲ್ಲಿ ಶ್ರಾದ್ಧ ಮಾಡುವ ಅಭ್ಯಾಸವನ್ನು ಯಾರು ಪ್ರಾರಂಭಿಸಿದರು? ಎನ್ನುವ ಬಗ್ಗೆ ತಿಳಿಯೋಣ.
ಪಿತೃಪಕ್ಷದಂದು ಪೂರ್ವಜರನ್ನು ಪೂಜಿಸುವುದರಿಂದ ಜೀವನದಲ್ಲಿನ ಅಡೆತಡೆಗಳು ನಿವಾರಣೆಯಾಗಿ ಪೂರ್ವಜರ ಆಶೀರ್ವಾದ ದೊರೆಯುತ್ತದೆ ಎಂಬ ನಂಬಿಕೆ ಇದೆ. ಪಿತೃ ಪಕ್ಷದ ಅವಧಿಯಲ್ಲಿ ನಮ್ಮ ಹಿಂದಿನ ಪೂರ್ವಜನರ ಮೂರು ತಲೆಮಾರಿನವರ ಆತ್ಮಗಳು ನಮ್ಮ ಬಳಿ ಬರುತ್ತವೆಂಬ ನಂಬಿಕೆ ಇದೆ. ಈ ಅವಧಿಯಲ್ಲಿ ಅವರಿಗೆ ನಾವು ಗೌರವ ತೋರಿಸಿದರೆ ಸಂತುಷ್ಟರಾಗುತ್ತಾರೆ.

ಹೀಗಾಗಿ ಪಿಂಡದಾನ ಶ್ರಾದ್ಧ ಕರ್ಮ ವಿಧಿಗಳು ಬಹಳ ಮುಖ್ಯ. ಪಿತೃ ಪಕ್ಷದ ಕೊನೆಯಲ್ಲಿ ಮಹಾಲಯ ಅಮಾವಾಸ್ಯೆ ಹೆಚ್ಚು ಮುಖ್ಯವಾಗಿದೆ. ಈ ದಿನ ಪೂರ್ವಿಕರ ಆತ್ಮಗಳನ್ನು ಸ್ಮರಿಸಿ ಎಡೆ ಹಾಕಲಾಗುತ್ತದೆ. ಅದನ್ನು ಗೋವು, ಕಾಗೆಗಳಿಗೆ ಸಮರ್ಪಿಸಲಾಗುತ್ತದೆ. ಈ ವೇಳೆ ನಮ್ಮ ಪೂರ್ವಜನರ ಆತ್ಮಗಳು ಕಾಗೆಗಳ ರೂಪದಲ್ಲಿ ಬಂದು ನೈವೇದ್ಯವನ್ನು ಸ್ವೀಕರಿಸಿ ಹೋಗುತ್ತಾರೆ ಎಂಬ ನಂಬಿಕೆ ಇದೆ.
ಪಿತೃ ಪಕ್ಷದಲ್ಲಿ ಶ್ರಾದ್ಧ ಮಾಡುವ ಅಭ್ಯಾಸವನ್ನು ಯಾರು ಪ್ರಾರಂಭಿಸಿದರು?
ಪಿತೃ ಪಕ್ಷದ ಬಗ್ಗೆ ಮಹಾಭಾರತದಲ್ಲಿ ಉಲ್ಲೇಖಿಸಲಾಗಿದೆ. ಮಹಾಭಾರತದಲ್ಲಿ ಅನುಶಾಸನ ಪರ್ವ ಎಂಬ ಅಧ್ಯಾಯವಿದೆ. ಈ ಅಧ್ಯಾಯದಲ್ಲಿ ಭೀಷ್ಮರು ಅಜ್ಜರ ಪಿತೃ ಪಕ್ಷದ ಸಮಯದಲ್ಲಿ ಮಾಡಿದ ನೈವೇದ್ಯವನ್ನು ಉಲ್ಲೇಖಿಸುತ್ತಾರೆ. ಅಶ್ವಿನ್ ಮಾಸದ ಕೃಷ್ಣ ಪಕ್ಷದಲ್ಲಿ ಪೂರ್ವಜರ ಶ್ರಾದ್ಧವನ್ನು ಮಾಡುವುದರಿಂದ ಪೂರ್ವಜರು ಸಂತುಷ್ಟರಾಗುತ್ತಾರೆ ಎಂದು ಅತ್ರಿ ಮುನಿಯು ಮಹರ್ಷಿ ನಿಮಿಗೆ ಹೇಳಿದರೆಂದು ಭೀಷ್ಮನು ಪಾಂಡುವಿನ ಮಗ ಯುಧಿಷ್ಠಿರನಿಗೆ ಹೇಳುತ್ತಾನೆ.
ಸಾವಿನ ನಂತರ ದೇಹವು ಐದು ಅಂಶಗಳಾಗಿ ಕರಗುತ್ತದೆ. ಆದರೆ ಇದರಲ್ಲಿ ಆತ್ಮ ಮಾತ್ರ ಅಮರವಾಗಿರುತ್ತದೆ. ಆ ಆತ್ಮ ಭ್ರಮೆಯ ಮೋಡಿಗೆ ಒಳಗಾಗಿ ಒಂದು ದಿನ ತನ್ನ ಮಕ್ಕಳನ್ನು ನೋಡಲು ಭೂಮಿಗೆ ಬರುತ್ತದೆ. ಆ ದಿನ ಕೃಷ್ಣ ಪಕ್ಷದಲ್ಲಿ ನೈವೇದ್ಯ ಸಲ್ಲಿಸಿದರೆ ಮರಣ ಹೊಂದಿದವರು ಸಂತುಷ್ಟರಾಗುತ್ತಾರೆ.

ಹೀಗಾಗಿ ಮಹರ್ಷಿ ನಿಮಿ ತನ್ನ ಪೂರ್ವಜರಿಗೆ ಪ್ರಾರ್ಥನೆ ಸಲ್ಲಿಸಿದರು. ಅಂದಿನಿಂದ ಇತರ ಋಷಿಗಳೂ ತರ್ಪಣವನ್ನು ಅರ್ಪಿಸಲು ಪ್ರಾರಂಭಿಸಿದರು. ಇದಾದ ನಂತರ ಇದು ಸಂಪ್ರದಾಯವಾಯಿತು. ಅಂದಿನಿಂದ ಜನರು ಅಶ್ವಿನ್ ಮಾಸದ ಕೃಷ್ಣ ಪಕ್ಷದಲ್ಲಿ ತರ್ಪಣವನ್ನು ಅರ್ಪಿಸಲು ಪ್ರಾರಂಭಿಸಿದರು. ಇದರಿಂದಾಗಿ ಕೃಷ್ಣ ಪಕ್ಷವು ಪಿತೃ ಪಕ್ಷ ಎಂದು ಕರೆಯಲ್ಪಟ್ಟಿತು.
ತರ್ಪಣವನ್ನು ಹೇಗೆ ಮಾಡುವುದು
ಪೂರ್ವಜರನ್ನು ಕರೆಯಲಾಗುತ್ತದೆ. ಜೇನುತುಪ್ಪ, ಅಕ್ಕಿ ಅಥಚಾ ಗೋಧಿ, ಮೇಕೆ ಹಾಲು, ಸಕ್ಕರೆ ಮತ್ತು ತುಪ್ಪದಿಂದ ತಯಾರಿಸಿದ ಅಕ್ಕಿ ಅಥವಾ ಗೋಧಿ ಚೆಂಡುಗಳ ರೂಪದಲ್ಲಿ ಪಿಂಡವನ್ನು ನೀಡಲಾಗುತ್ತದೆ. ಅದರ ನಂತರ, ನೀರು, ಹಿಟ್ಟು, ಬಾರ್ಲಿ, ಕುಶ ಮತ್ತು ಕಪ್ಪು ಎಳ್ಳನ್ನು ಬೆರೆಸಿ ಮಾಡುವ ತರ್ಪಣವನ್ನು ಅರ್ಪಿಸಲಾಗುತ್ತದೆ. ಅಂದರೆ ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಆಹಾರವನ್ನು ನೀಡಲಾಗುತ್ತದೆ. ಕಪ್ಪು ಕಾಗೆ ಅದನ್ನು ತಿನ್ನುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ದಿನ ಯಾರಿಗೂ ಸುಳ್ಳು ಹೇಳಬಾರದು. ಕಿರುಕುಳ ನೀಡಬೇಡಬಾರದು. ಸದ್ಗುಣದ ಆಲೋಚನೆಗಳನ್ನು ಹೊಂದಿರಬೇಕು ಮತ್ತು ಕೋಪವನ್ನು ನಿಯಂತ್ರಿಸಬೇಕು. ಶ್ರಾದ್ಧ ಮತ್ತು ತರ್ಪಣ ಆಚರಣೆಯ ನಂತರ ಬಡವರಿಗೆ ಅನ್ನದಾನ ಮಾಡಲಾಗುತ್ತದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)












Click it and Unblock the Notifications