ಅ.25 ಪಾಪಾಂಕುಶ ಏಕಾದಶಿ : ಅಂದು ತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ
ಏಕಾದಶಿಯು ಹಿಂದೂಗಳ ಆಚರಣೆಯಲ್ಲಿ ಅತ್ಯಂತ ಮಹತ್ವವನ್ನು ಹೊಂದಿದೆ. ಈ ದಿನವನ್ನು ಮಂಗಳಕರ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನವು ಭಗವಂತ ಶ್ರೀ ವಿಷ್ಣುವನ್ನು ಪೂಜಿಸಲು ಮೀಸಲಾಗಿದೆ. ಜೊತೆಗೆ ಉಪವಾಸ ಮಾಡಿ ದೇವಿಗೆ ಸಹ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಅಶ್ವಿನಾ ಮಾಸದ ಶುಕ್ಲ ಪಕ್ಷದ ಏಕಾದಶಿ ತಿಥಿಯಂದು ಪಾಪಾಂಕುಶ ಏಕಾದಶಿಯನ್ನು ಆಚರಿಸಲಾಗುವುದು. ಈ ಬಾರಿ ಅಕ್ಟೋಬರ್ 25 ಅಂದರೆ ಬುಧವಾರ ಪಾಪಾಂಕುಶ ಏಕಾದಶಿ ಪೂಜೆ ಮಾಡಲಾಗುತ್ತದೆ.
ಪಾಪಾಂಕುಶ ಏಕಾದಶಿ 2023: ದಿನಾಂಕ ಮತ್ತು ಸಮಯ
ಏಕಾದಶಿ ಆರಂಭ - ಅಕ್ಟೋಬರ್ 24, 2023 - 03:14 ಮಧ್ಯಾಹ್ನ
ಏಕಾದಶಿ ತಿಥಿ ಮುಕ್ತಾಯ - ಅಕ್ಟೋಬರ್ 25, 2023 - 12:32 ಮಧ್ಯಾಹ್ನ

ಪಾಪಾಂಕುಶ ಏಕಾದಶಿಯ ಮಹತ್ವ
ಪಾಪಾಂಕುಶ ಏಕಾದಶಿ ಹಿಂದೂ ಧರ್ಮದಲ್ಲಿ ಹೆಚ್ಚಿನ ಧಾರ್ಮಿಕ ಮತ್ತು ಆಧ್ಯಾತ್ಮಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಪಾಪಾಂಕುಶ ಏಕಾದಶಿಯು ಭಗವಂತನ ವಿಷ್ಣುವಿನ ಅವತಾರವಾದ ಪದ್ಮನಾಭನಿಗೆ ಸಮರ್ಪಿತವಾಗಿದೆ. ಏಕಾದಶಿಯ ದಿನದಂದು ಭಕ್ತರು ಪದ್ಮನಾಭ ದೇವರನ್ನು ಶುದ್ಧ ಸಮರ್ಪಣೆ ಮತ್ತು ಭಕ್ತಿಯಿಂದ ಪೂಜಿಸುತ್ತಾರೆ. ಪಾಪಾಂಕುಶ ಏಕಾದಶಿ ವ್ರತವನ್ನು ಆಚರಿಸುವ ಮೂಲಕ, ಭಕ್ತರು ಶ್ರೀ ಪದ್ಮನಾಭನ ಆಶೀರ್ವಾದವನ್ನು ಪಡೆಯುತ್ತಾರೆ. ಇದರಿಂದ ಜೀವನದ ಸಂಕಷ್ಟಗಳು ದೂರಾಗಿ ನೆಮ್ಮದಿ ನೆಲಸುತ್ತದೆ ಎಂದು ನಂಬಿಕೆ ಇದೆ.
ಪಾಪಾಂಕುಶ ಏಕಾದಶಿ ವ್ರತವನ್ನು ಆಚರಿಸುವುದರಿಂದ ಭಕ್ತರು ತಮ್ಮ ಹಿಂದಿನ ಜನ್ಮದಲ್ಲಿ ಮಾಡಿದ ಪಾಪಗಳಿಂದ ಮತ್ತು ಅವರ ದುಷ್ಟ ಕ್ರಿಯೆಗಳಿಂದ ಮುಕ್ತರಾಗುತ್ತಾರೆ ಎಂದು ನಂಬಲಾಗಿದೆ. ಈ ದಿನ ಕೆಲವರು ಉಪವಾಸ ಮಾಡುತ್ತಾರೆ. ಇದು ಸಾವಿರ ಅಶ್ವಮೇಧ ಯಾಗಗಳಿಗೆ ಸಮಾನವಾಗಿದೆ. ಜೀವನದಲ್ಲಿನ ದುಃಖ ಪಾಪಾಂಕುಶ ಏಕಾದಶಿಯ ಈ ಪವಿತ್ರ ದಿನದಂದು ಉಪವಾಸ ಮಾಡಬೇಕು ಎಂದು ಭಕ್ತರಲ್ಲಿ ನಂಬಿಕೆ ಇದೆ.
ಪಾಪಾಂಕುಶ ಏಕಾದಶಿಯ ದಿನ ಮಾಡಲೇಬಾರದ ಕೆಲಸಗಳು
ಕಾದಶಿಯ ದಿನದಂದು ತುಳಸಿ ಎಲೆಗಳನ್ನು ಕೀಳಬೇಡಿ.
ಈ ಮಂಗಳಕರ ದಿನದಂದು ಸೋಪ್ ಅಥವಾ ಇನ್ನಾವುದೇ ಬಾಡಿ ವಾಶ್‌ನಿಂದ ಸ್ನಾನ ಮಾಡಬೇಡಿ.
ಯಾರೊಂದಿಗೂ ಜಗಳ ಮಾಡಿ ಬೈದಾಡ ಬೇಡಿ.
ಈ ದಿನ ಈರುಳ್ಳಿ, ಬೆಳ್ಳುಳ್ಳಿ, ಮೊಟ್ಟೆ ಮತ್ತು ಮಾಂಸ ತಿನ್ನುವುದು ಮದ್ಯಪಾನ ಮಾಡುವುದು ಅಶುಭ.

ಪಾಪಾಂಕುಶ ಏಕಾದಶಿ 2023: ಪೂಜಾ ವಿಧಿವಿಧಾನಗಳು
ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ, ಶುಭ್ರ ಬಟ್ಟೆ ಧರಿಸಿ.
ಮರದ ಹಲಗೆಯ ಮೇಲೆ ವಿಷ್ಣುವಿನ ವಿಗ್ರಹ ಮತ್ತು ಶ್ರೀ ಯಂತ್ರವನ್ನು ಇರಿಸಿ.
ವಿಷ್ಣುವಿಗೆ ಹಾರ, ಹೂವುಗಳು, ತುಳಸಿ ಪತ್ರ ಮತ್ತು ಸಿಹಿತಿಂಡಿಗಳನ್ನು ಅರ್ಪಿಸಿ.
ತುಳಸಿ ಪತ್ರವನ್ನು ಅರ್ಪಿಸದಿದ್ದರೆ ಪೂಜೆಯನ್ನು ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ತುಳಸಿ ಪತ್ರವನ್ನು ಅರ್ಪಿಸುವುದು ಮುಖ್ಯವಾಗಿದೆ.
ಸಂಜೆ, ಏಕಾದಶಿ ಕಥಾವನ್ನು ಪಠಿಸುವ ಮೂಲಕ ಮತ್ತೊಮ್ಮ ಪೂಜೆಯನ್ನು ಮಾಡಬೇಕು ಮತ್ತು ವಿಷ್ಣು ಸಹಸ್ರನಾಮವನ್ನು ಪಠಿಸಬೇಕು.
ಕೊನೆಯಲ್ಲಿ ಆರತಿ ಮಾಡಿ ಆಹಾರವನ್ನು ಸೇವಿಸಿ ಉಪವಾಸವನ್ನು ಮುರಿಯಬಹುದು.











Click it and Unblock the Notifications