Navratri 2024: ವಿಜಯದಶಮಿಯಂದು ಈ ನಿಯಮಗಳನ್ನು ಅನುಸರಿಸಲೇಬೇಕು.. ಯಾಕೆಂದರೆ
ಇನ್ನೇನು ಕೆಲವೇ ದಿನಗಳಲ್ಲಿ ನವರಾತ್ರಿ ಹಬ್ಬದ ಆಚರಣೆ ಆರಂಭವಾಗುತ್ತದೆ. ಶಾರದೀಯ ನವರಾತ್ರಿಯನ್ನು ದೇಶದ ನಾನಾ ಭಾಗಗಳಲ್ಲಿ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ವರ್ಷ ಶಾರದೀಯ ನವರಾತ್ರಿ ಅಕ್ಟೋಬರ್ 3ರಿಂದ ಪ್ರಾರಂಭವಾಗುತ್ತದೆ.
ಈ ವರ್ಷ ಅಶ್ವಿನ್ ಮಾಸದ ಶುಕ್ಲ ಪಕ್ಷದ ಪ್ರತಿಪದ ದಿನಾಂಕ ಪ್ರಾರಂಭವಾಗುತ್ತದೆ. ಇದು ಅಕ್ಟೋಬರ್ 2 ರಂದು ಮಧ್ಯಾಹ್ನ 12:18 ರಿಂದ ಸಂಭವಿಸುತ್ತದೆ. ಈ ದಿನಾಂಕವು ಅಕ್ಟೋಬರ್ 4 ರಂದು ಮಧ್ಯಾಹ್ನ 02:58 ರವರೆಗೆ ಮಾನ್ಯವಾಗಿರುತ್ತದೆ. ಹೀಗಾಗಿ ನವರಾತ್ರಿ ಆಚರಣೆ ಅಕ್ಟೋಬರ್ 3ರಿಂದ ಆರಂಭವಾಗುತ್ತದೆ.

ನವರಾತ್ರಿಯ 9 ನಿಯಮಗಳು
ನವರಾತ್ರಿಯ ವ್ರತವನ್ನು ಆಚರಿಸುವ ಪ್ರತಿಯೊಬ್ಬರೂ ಕೆಲ ನಿಯಮಗಳನ್ನು ಪಾಲಿಸುವುದು ಮುಖ್ಯ. ಈ ನಿಯಮಗಳನ್ನು ಅನುಸರಿಸದಿದ್ದರೆ ಅಥವಾ ಅವುಗಳನ್ನು ಉಲ್ಲಂಘಿಸಿದರೆ ಉಪವಾಸದ ಫಲವನ್ನು ಪಡೆಯುವುದಿಲ್ಲ. ಹಾಗಾದರೆ ನವರಾತ್ರಿಯ ವ್ರತದಲ್ಲಿ ಯಾವ 9 ನಿಯಮಗಳನ್ನು ಪಾಲಿಸಬೇಕು ಎಂದು ತಿಳಿಯೋಣ.
1. ನವರಾತ್ರಿಯ ಒಂದು ದಿನ ಮೊದಲು ಪೂಜಾ ಕೋಣೆಯನ್ನು ಶುಚಿಗೊಳಿಸಿ ದುರ್ಗೆಯನ್ನು ಪೂಜಿಸಬೇಕು. ಅದಕ್ಕಾಗಿ ಕಲಶವನ್ನು ಸ್ಥಾಪಿಸಬೇಕು. ಕಲಶ ಸ್ಥಾಪನವನ್ನು ಘಟಸ್ಥಾಪನೆ ಎಂದೂ ಕರೆಯುತ್ತಾರೆ.
2. ನವರಾತ್ರಿಯ ಸಮಯದಲ್ಲಿ ಇಡೀ ಕುಟುಂಬವು 9 ದಿನಗಳವರೆಗೆ ಸಾತ್ವಿಕ ಆಹಾರವನ್ನು ಸೇವಿಸಬೇಕು.
3. ನವರಾತ್ರಿಯಲ್ಲಿ 9 ದಿನಗಳ ಕಾಲ ಸದ್ಗುಣವನ್ನು ಪಾಲಿಸಬೇಕು. ಜೊತೆಗೆ ಶುದ್ಧವಾಗಿರುವ ನಿಯಮವನ್ನು ಪಾಲಿಸಲಬೇಕು
4. ನವರಾತ್ರಿಯಲ್ಲಿ ತಾಮಸಿಕ ವಸ್ತುಗಳನ್ನು ತಿನ್ನಬಾರದು. ಅಂದರೆ ಗುಟ್ಕಾ, ವೀಳ್ಯದೆಲೆ, ಸಿಗರೇಟು, ಮೊಟ್ಟೆ, ಮದ್ಯ, ಬೀಡಿ, ಈರುಳ್ಳಿ, ಬೆಳ್ಳುಳ್ಳಿ, ಮಾಂಸ, ಮೀನು ಇತ್ಯಾದಿಗಳನ್ನು ಸೇವಿಸಬಾರದು.
5. ನವರಾತ್ರಿಯಲ್ಲಿ ಉಪವಾಸವನ್ನು ಆಚರಿಸುವ ಜನರು ಬ್ರಹ್ಮಚರ್ಯದ ನಿಯಮಗಳನ್ನು ಅನುಸರಿಸಬೇಕು. ಸಂತೋಷ ಮತ್ತು ಐಷಾರಾಮಿ ಜೀವನದಿಂದ ಅಂತರವನ್ನು ಕಾಯ್ದುಕೊಳ್ಳಬೇಕು.
6. ನವರಾತ್ರಿಯ ಮೊದಲ ದಿನ ಉಪವಾಸದ ನಂತರ ಪೂಜೆ ಮಾಡಿ. ದುರ್ಗೆಯ ಪೂಜೆಯ ಬಳಿಕವೇ ಆಹಾರ ಸೇವಿಸಬೇಕು.
7. ನವರಾತ್ರಿಯಲ್ಲಿ ದುರ್ಗಾ ಸಪ್ತಶತಿ ಮತ್ತು ದೇವಿ ಭಗವತ್ ಪುರಾಣವನ್ನು ಪಠಿಸಿ. ತಾಯಿ ದುರ್ಗೆಯ ಆಶೀರ್ವಾದ ನಿಮಗೆ ದೊರೆಯುತ್ತದೆ.
8. ಹೆಣ್ಣುಮಕ್ಕಳನ್ನು ಮಾತೃದೇವತೆಯ ರೂಪವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ದುರ್ಗಾ ಅಷ್ಟಮಿಯ ದಿನದಂದು ಸ್ತ್ರೀಯರನ್ನು ಪೂಜಿಸಿ.
9. ದುರ್ಗಾ ಅಷ್ಟಮಿಯಂದು ನವರಾತ್ರಿ ಹವನ ಮಾಡಿ. ಬೇಕಾದರೆ ಮಹಾನವಮಿಯ ದಿನವೂ ಇದನ್ನು ಮಾಡಬಹುದು.
ನವರಾತ್ರಿ ಪೂಜಾ ವಿಧಾನ
* ನವರಾತ್ರಿ ವ್ರತ ಆಚರಿಸುವವರು ಒಂದು ದಿನ ಮುಂಚಿತವಾಗಿ ಮನೆಯನ್ನು ಶುದ್ಧಗೊಳಿಸಬೇಕು. ಸ್ವಲ್ಪ ಉಪ್ಪನ್ನು ನೀರಿನಲ್ಲಿ ಬೆರಸಿ ಮನೆಯನ್ನು ಶುಚಿಗೊಳಿಸಿ. ಸ್ನಾನ ಮಾಡಿ ಪೂಜೆಗೆ ಬೇಕಾದ ವಸ್ತುಗಳನ್ನು ಜೋಡಿಸಿಕೊಳ್ಳಿ.
* ನವರಾತ್ರಿ ಪೂಜೆ ಮಾಡಲು ಬೆಳಗೆ ಬೇಗ ಏಳುವುದು ಒಳ್ಳೆಯದು, ಸೂರ್ಯೋದಯ ಪೂಜೆಗೆ ಉತ್ತಮ ಸಮಯ ಎಂದು ಹೇಳಲಾಗುತ್ತದೆ.
* ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಶುದ್ಧ ಬಟ್ಟೆ ಧರಿಸಿ ದುರ್ಗಾ ದೇವಿಯ ಎಡಭಾಗದಲ್ಲಿ ದೀಪವನ್ನು ಹಚ್ಚಿ. 'ಅಖಂಡ ಜ್ಯೋತಿ' ಬೆಳಗಿಸಿದರೆ ಅದನ್ನು ಆರದಂತೆ ನೋಡಿಕೊಳ್ಳಬೇಕು.
* ಕಲಶ ಹಾಗೂ ತೆಂಗಿನಕಾಯಿಯನ್ನು ಪೂಜೆಯಲ್ಲಿ ಇಡಬೇಕು.
* ಹೂವು, ಹಣ್ಣು, ಇಟ್ಟು ದೀಪವನ್ನು ಬೆಳಗಿಸಿ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿದರೆ ದುರ್ಗಾದೇವಿಯ ಆಶೀರ್ವಾದ ಮನೆಯಲ್ಲಿ ನೆಲೆಸಲಿದೆ.











Click it and Unblock the Notifications