Get Updates
Get notified of breaking news, exclusive insights, and must-see stories!

Navaratri 2023: ದಸರಾ ಸಂದರ್ಭದಲ್ಲಿ ಗೊಂಬೆಗಳ ಹಬ್ಬಕ್ಕೆ ಏಕೆ ಮಹತ್ವವಿದೆ ಗೊತ್ತಾ..

ದುರ್ಗಾ ದೇವಿಯನ್ನು ಒಂಬತ್ತು ದಿನಗಳ ಕಾಲ ಒಂಬತ್ತು ರೂಪಗಳಲ್ಲಿ ಅಲಂಕರಿಸಿ ಭಕ್ತಿಯಿಂದ ಪೂಜಿಸುವ ಮೂಲಕ ದಸರಾವನ್ನು ಆಚರಿಸಲಾಗುತ್ತದೆ.

ಹತ್ತನೆಯ ದಿನ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನವನ್ನು ವಿಜಯದಶಮಿ ಎಂದು ಕರೆಯಲಾಗುತ್ತದೆ. ಮಹಾಭಾರತದಲ್ಲಿ ಅಜ್ಞಾತವಾಸಕ್ಕಿಂತ ಮೊದಲು ಪಾಂಡವರು ತಮ್ಮ ಎಲ್ಲಾ ಆಯುಧಗಳನ್ನು ಬನ್ನಿ ಮರದ ಮೇಲೆ ಇರಿಸಿದ್ದರ ಪರಿಣಾಮ ಅವರಿಗೆ ಯುದ್ಧದ ಸಂದರ್ಭದಲ್ಲಿ ಜಯ ಸಾಧಿಸಲು ಸಾಧ್ಯವಾಯಿತು. ಹೀಗಾಗಿ ವಿಜಯದಶಮಿಯ ದಿನದಂದು ಈ ಮರಕ್ಕೆ ಪೂಜೆ ಸಲ್ಲಿಸುವುದು ಸಂಪ್ರದಾಯ.

Navaratri Gombe Habba 2023: Do you know why the festival of dolls is important during Dussehra?

ದಸರಾ ಹಬ್ಬದ ಸಮಯದಲ್ಲಿ ಹಲವೆಡೆ ಜನರು ಗೊಂಬೆಗಳನ್ನು ಕೂರಿಸುವ ಸಂಪ್ರದಾಯವನ್ನು ಅನುಸರಿಸುತ್ತಾರೆ. ಅದೇ ಸಂಪ್ರದಾಯವನ್ನು ಉತ್ತರದ ಜನರು ಸಂಕ್ರಾಂತಿಗೆ ಮತ್ತು ಇತರರು ದೀಪಾವಳಿಗೆ ಆಚರಿಸುತ್ತಾರೆ. ಏಳು, ಒಂಬತ್ತು ಅಥವಾ ಹನ್ನೊಂದು ಮೆಟ್ಟಿಲುಗಳಲ್ಲಿ ಗೊಂಬೆಗಳನ್ನು ಇಟ್ಟು ಪೂಜಿಸಲಾಗುತ್ತದೆ.

ಈ ಸಮಯದಲ್ಲಿ ಶ್ರೀ ವಿಷ್ಣುಮೂರ್ತಿ, ಕೃಷ್ಣ ಲೀಲೆ, ತ್ರಿಮೂರ್ತಿಗಳ ದಶಾವತಾರ, ಶ್ರೀರಾಮ ಪರಿವಾರ, ಶಿವ ಪರಿವಾರ, ಕೃಷ್ಣ ಬೃಂದಾವನ, ಕುಚೇಲ ಸ್ನೇಹ, ಶಿವ ಪಾರ್ವತಿ ಕಲ್ಯಾಣ, ರಾಮಾಯಣ ಕಥೆಗಳನ್ನು ಬಿಂಬಿಸುವ ಗೊಂಬೆಗಳನ್ನು ಇಡಲಾಗುತ್ತದೆ. ಮಾತ್ರವಲ್ಲದೆ ಗಾಂಧಿ, ನೆಹರು ಮತ್ತು ಸುಭಾಷ್ ಚಂದ್ರ ಬೋಸ್ ಅವರಂತಹ ರಾಷ್ಟ್ರೀಯ ನಾಯಕರ ಚಿತ್ರಗಳನ್ನು ಸಹ ಪ್ರದರ್ಶಿಸಲಾಗುತ್ತದೆ. ಭವಿಷ್ಯದ ಪೀಳಿಗೆಗೆ ನಮ್ಮ ಭಾರತೀಯ ಸಂಪ್ರದಾಯಗಳು, ಪದ್ಧತಿಗಳು ಮತ್ತು ಪರಂಪರೆಯ ಮೌಲ್ಯಗಳನ್ನು ತಿಳಿಸುವುದು ಇದರ ಗುರಿಯಾಗಿದೆ. ಹೀಗಾಗಿ ಇದನ್ನು ಗೊಂಬೆಗಳ ಹಬ್ಬ ಎಂದು ಕರೆಯಲಾಗುತ್ತದೆ.

ಗೊಂಬೆ ಹಬ್ಬ ಅಥವಾ ಆಟಿಕೆ ಹಬ್ಬ

ದಸರಾ ಗೊಂಬೆ ಹಬ್ಬವನ್ನು ಕರ್ನಾಟಕದಲ್ಲಿ ಹಿಂದೂ ಸಂಪ್ರದಾಯದಂತೆ ದಕ್ಷಿಣದ ವಿವಿಧ ರೀತಿಯ ಗೊಂಬೆಗಳನ್ನು ಪ್ರದರ್ಶಿಸುವ ಮೂಲಕ ಆಚರಿಸಲಾಗುತ್ತದೆ. ಬೆಸ ಸಂಖ್ಯೆಯ ಶ್ರೇಣಿಯ(7,9 ಅಥವಾ 11) ಮೆಟ್ಟಿಲುಗಳಲ್ಲಿ ಈ ಗೊಂಬೆಗಳನ್ನು ಜೋಡಿಸಲಾಗುತ್ತದೆ.

Navaratri Gombe Habba 2023: Do you know why the festival of dolls is important during Dussehra?

ನವರಾತ್ರಿ ಅಂದರೆ ಒಂಬತ್ತು ರಾತ್ರಿಗಳನ್ನು ಪ್ರತಿನಿಧಿಸಲು ಅನೇಕ ಜನರು ತಮ್ಮ ಮನೆಗಳಲ್ಲಿ ಪ್ರತಿಮೆ (ಗೊಂಬೆ)ಗಳನ್ನು ಪ್ರದರ್ಶಿಸಲು ಒಂಬತ್ತು ಮೆಟ್ಟಿಲುಗಳನ್ನು ಸಿದ್ಧಪಡಿಸಿ ಪೂಜಿಸುತ್ತಾರೆ. ಈ ಶುಭ ಸಮಯದಲ್ಲಿ ವಿಗ್ರಹಗಳನ್ನು ಪೂಜಿಸುವುದು ವಾಡಿಕೆ.

ನವ ವಧುವಿಗೆ..

ಈ ಹಬ್ಬದ ಸಂದರ್ಭದಲ್ಲಿ ಈ ಗೊಂಬೆಗಳನ್ನು ನವವಿವಾಹಿತ ವಧುವಿಗೆ ಆಕೆಯ ಪೋಷಕರು ಗಂಡನ ಮನೆಯಲ್ಲಿ ಕುಟುಂಬವನ್ನು ಪ್ರಾರಂಭಿಸಲು ಮತ್ತು ಹಬ್ಬದ ಸಂಪ್ರದಾಯವನ್ನು ಮುಂದುವರಿಸಲು ಉಡುಗೊರೆಯಾಗಿ ನೀಡುತ್ತಾರೆ. ಈ ಗೊಂಬೆಗಳನ್ನು ಪಟ್ಟದ ಗೊಂಬೆ ಎಂದು ಕರೆಯಲಾಗುತ್ತದೆ.

ಒಂಬತ್ತು ರೂಪಗಳಲ್ಲಿ..

ಪಟ್ಟದ ಗೊಂಬೆ ಎಂಬುದು ಮರದಿಂದ ಮಾಡಿದ ಸಾಂಪ್ರದಾಯಿಕ ಗೊಂಬೆಯಾಗಿದೆ. ಕಾಗದ ಅಥವಾ ರೇಷ್ಮೆ ಬಳಸಿ ವರ್ಣರಂಜಿತವಾಗಿ ಇದನ್ನು ತಯಾರಿಸಲಾಗುತ್ತದೆ. ಈ ಮುಖ್ಯ ಜೋಡಿ ಗೊಂಬೆಗಳು ಯಾವಾಗಲೂ ಸಾಂಪ್ರದಾಯಿಕ ಶೈಲಿಯಲ್ಲಿ ತಯಾರಿಸಲಾಗುತ್ತದೆ. ಸಾಮಾನ್ಯವಾಗಿ ಈ ಹಬ್ಬದಲ್ಲಿ ರಾಮ, ಲಕ್ಷ್ಮಣ, ಸೀತೆ, ಕೃಷ್ಣ, ರಾಧಾ, ಶಿವ, ವಿಷ್ಣು, ದುರ್ಗಾ, ಲಕ್ಷ್ಮಿ, ಸರಸ್ವತಿ ಇತ್ಯಾದಿ ಮೂರ್ತಿಗಳನ್ನು ಬಳಸಲಾಗುತ್ತದೆ.

Navaratri Gombe Habba 2023: Do you know why the festival of dolls is important during Dussehra?

ದೇವರಿಗೆ ಸಮರ್ಪಿತ..

ಈ ವಿಗ್ರಹಗಳನ್ನು ದಸರಾ ಹಬ್ಬದ ಸಮಯದಲ್ಲಿ ಮೊದಲ ಮೂರು ಹಂತಗಳಲ್ಲಿ ದೇವತೆಗಳಿಗೆ ಸಮರ್ಪಿಸಲಾಗುತ್ತದೆ. ಮಹಾನ್ ಸಂತರು ಅಥವಾ ರಾಜರು ಮತ್ತು ರಾಣಿಯರನ್ನು ಚಿತ್ರಿಸುವ ಚಿತ್ರಗಳನ್ನು ನಾಲ್ಕರಿಂದ ಆರನೇ ಹಂತಗಳಲ್ಲಿ ಜೋಡಿಸಲಾಗಿದೆ. ಈ ಹಬ್ಬದಲ್ಲಿ ಮೈಸೂರಿನ ರಾಜರಿಗೆ ಪ್ರಾಮುಖ್ಯತೆ ನೀಡಲಾಗುತ್ತದೆ.

ಕೊನೆಯ ಮೂರು ಹಂತಗಳು..

ಏಳನೇ ಹಂತವು ಹಿಂದೂ ಹಬ್ಬಗಳು, ಆಚರಣೆಗಳು ಮತ್ತು ಸಂದರ್ಭಗಳನ್ನು ಪ್ರಸ್ತುತಪಡಿಸಲು ಸಮರ್ಪಿಸಲಾಗಿದೆ. ಎಂಟನೇ ಹಂತವನ್ನು ಉದ್ಯಾನ, ಅಂಗಡಿ ಮತ್ತು ತರಕಾರಿ ಮಾರಾಟಗಾರರ ಚಿತ್ರಗಳಿಂದ ಅಲಂಕರಿಸಲಾಗಿದೆ. ಅಂತಿಮವಾಗಿ ಮಾನವಕುಲದ ಅಥವಾ ಜೀವಿಗಳ ವಿಕಾಸವನ್ನು ಸೂಚಿಸುತ್ತದೆ.

ಗೊಂಬೆ ಉತ್ಸವದ ಇತಿಹಾಸ

ಪುರಾಣಗಳ ಪ್ರಕಾರ, ಮಹಿಷಾಸುರನನ್ನು ಕೊಲ್ಲಲು ದೇವತೆಗಳು ದುರ್ಗಾದೇವಿಗೆ ಎಲ್ಲಾ ಶಕ್ತಿಗಳನ್ನು ನೀಡಿದರು. ಈ ಸಮಯದಲ್ಲಿ ದೇವತೆಗಳು ದುರ್ಬಲರಾದರು. ಆದರೆ ಹತ್ತನೆಯ ದಿನದಲ್ಲಿ ದುರ್ಗಾ ದೇವಿ ಮಹಿಷಾಸುರನ ಮೇಲೆ ವಿಜಯ ಸಾಧಿಸಿದಳು. ದೇವತೆಗಳ ಆತ್ಮ ತ್ಯಾಗವನ್ನು ಗೌರವಿಸಲು ಗೊಂಬೆಗಳ ರೂಪದಲ್ಲಿ ದೇವತೆಗಳನ್ನು ಪೂಜಿಸುವ ಮೂಲಕ ಗೊಂಬೆಗಳ ಹಬ್ಬವನ್ನು ಆಚರಿಸಲಾಗುತ್ತದೆ. ವಿಜಯನಗರ ಸಾಮ್ರಾಜ್ಯದ ಅಸ್ತಿತ್ವದಿಂದಲೂ ಈ ಪದ್ಧತಿ ಚಾಲ್ತಿಯಲ್ಲಿದೆ ಎಂದು ಹಲವರು ನಂಬುತ್ತಾರೆ.

Navaratri Gombe Habba 2023: Do you know why the festival of dolls is important during Dussehra?

ಗೊಂಬೆ ಹಬ್ಬದ ಮಹತ್ವ

ಈ ಗೊಂಬೆ ಹಬ್ಬವನ್ನು ಕರ್ನಾಟಕದಲ್ಲಿ ಹೆಚ್ಚಾಗಿ ಆಚರಿಸಲಾಗುತ್ತದೆ. ಈ ಮೂಲಕ ಹೊಸ ಪೀಳಿಗೆಗೆ ಸ್ಥಳೀಯ ಶ್ರೀಮಂತ ಸಂಸ್ಕೃತಿ ಮತ್ತು ಪುರಾಣಗಳನ್ನು ಪರಿಚಯಿಸಲಾಗುತ್ತದೆ. ದಸರಾ ಹಬ್ಬದ ಸಮಯದಲ್ಲಿ ದೈವಿಕ ಆಶೀರ್ವಾದವನ್ನು ಪಡೆಯಲು ಮತ್ತು ಮಕ್ಕಳನ್ನು ರಂಜಿಸಲು ಇದು ಒಂದು ಮಾರ್ಗವಾಗಿದೆ. ಆದರೆ ಸಾಂಪ್ರದಾಯಿಕ ಆಟಿಕೆ ತಯಾರಿಕೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಹೀಗಾಗಿ ಹಬ್ಬದ ಸಮಯದಲ್ಲಿ ಮಣ್ಣಿನ ಗೊಂಬೆ ತಯಾರಿಕೆಯನ್ನು ಜೀವಂತವಾಗಿಡಲು ಪ್ರೋತ್ಸಾಹಿಸಲಾಗುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+