Naga panchami 2023: ನಾಗ ದೇವರನ್ನು ಏಕೆ ಪೂಜಿಸಲಾಗುತ್ತದೆ? ಇದರ ಹಿಂದಿನ ಕಥೆ ಏನು?
ಶ್ರಾವಣ ತಿಂಗಳ ಪ್ರಮುಖ ಹಬ್ಬಗಳಲ್ಲಿ ನಾಗರ ಪಂಚಮಿ ಹಬ್ಬ ಕೂಡ ಒಂದು. ಈ ದಿನದಂದು ಸರ್ಪ ದೇವರನ್ನು ಪೂಜಿಸಲಾಗುತ್ತದೆ. ಈ ದಿನ ಹಾವುಗಳು ಶಿವನ ಕೊರಳನ್ನು ಅಲಂಕರಿಸುತ್ತವೆ ಎಂದು ಹೇಳಲಾಗುತ್ತದೆ. ಅಷ್ಟಕ್ಕೂ ಅವುಗಳನ್ನು ಪಂಚಮಿಯಂದು ಏಕೆ ಪೂಜಿಸುತ್ತಾರೆ? ಇದಕ್ಕೆ ಸರಿಯಾದ ಉತ್ತರ ಪುರಾಣದಲ್ಲಿದೆ.
ನಾಗ ಪಂಚಮಿಯಂದು ಜನರು ಹಾವಿನ ಮೂರ್ತಿಯನ್ನು ಪೂಜಿಸುತ್ತಾರೆ. ನಮಗೆ ಮತ್ತು ನಮ್ಮ ಕುಟುಂಬಕ್ಕೆ ನೋವುಂಟು ಮಾಡದಂತೆ ಮತ್ತು ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಲು ಆಶೀರ್ವದಿಸುವಂತೆ ಪ್ರಾರ್ಥಿಸುತ್ತಾರೆ. ಈ ಬಾರಿಯ ಪಂಚಮಿ ಆಗಸ್ಟ್ 21 ರಂದು 12.21 ನಿಮಿಷಕ್ಕೆ ಆರಂಭವಾಗಲಿದೆ.

ಪೂಜೆಯ ಮಂಗಳಕರ ಸಮಯ
ನಾಗ ಪಂಚಮಿ ಪೂಜಾ ಸಮಯ 21 ಆಗಸ್ಟ್ ಬೆಳಿಗ್ಗೆ 5:53 ರಿಂದ ಬೆಳಿಗ್ಗೆ 8:30ವರೆಗೆ ಇರುತ್ತದೆ. ನಾಗ ಪಂಚಮಿ ದಿನಾಂಕ 22 ಆಗಸ್ಟ್ ಬೆಳಿಗ್ಗೆ 2:00ಕ್ಕೆ ಕೊನೆಗೊಳ್ಳುತ್ತದೆ.
ನಾಗ ದೇವರನ್ನು ಏಕೆ ಪೂಜಿಸಲಾಗುತ್ತದೆ?
ವಾಸ್ತವವಾಗಿ ಹಾವುಗಳು ಲಕ್ಷ್ಮಿ ದೇವಿಗೆ ಪ್ರಿಯವೆಂದು ನಂಬಲಾಗಿದೆ. ಹಾವು ಸಂಪತ್ತಿನ ದೇವತೆಯನ್ನು ರಕ್ಷಿಸುತ್ತದೆ. ನಾಗದೇವತೆಯ ಆಶೀರ್ವಾದವಿಲ್ಲದೆ ಯಾರೂ ಲಕ್ಷ್ಮಿಯನ್ನು ತಲುಪಲು ಸಾಧ್ಯವಿಲ್ಲ. ಹಾವುಗಳು ರಹಸ್ಯ ಹಣವನ್ನು ಕಾಪಾಡುತ್ತವೆ ಎಂದು ನೀವು ಆಗಾಗ್ಗೆ ಕಥೆಗಳಲ್ಲಿ ಕೇಳಿರಬಹುದು.
ಲಕ್ಷ್ಮಿಯ ಪತಿ ವಿಷ್ಣು ಶೇಷನಾಗನನ್ನು ತನ್ನ ಹಾಸಿಗೆಯನ್ನಾಗಿ ಮಾಡಿಕೊಂಡಿದ್ದಾನೆ. ಆದ್ದರಿಂದಲೇ ತಾಯಿಗೆ ಹಾವುಗಳು ತುಂಬಾ ಪ್ರೀತಿ. ಹಾವನ್ನು ಪೂಜಿಸುವುದರಿಂದ ಲಕ್ಷ್ಮಿ ದೇವಿಯು ಪ್ರಸನ್ನಳಾಗುತ್ತಾಳೆ ಎಂಬ ನಂಬಿಕೆ ಇದೆ. ನಾಗಪಂಚಮಿಯ ದಿನದಂದು ನಾಗದೇವತೆಯನ್ನು ಪೂಜಿಸುವುದರ ಜೊತೆಗೆ ಲಕ್ಷ್ಮಿ ಮತ್ತು ವಿಷ್ಣು ದೇವರನ್ನು ಪೂಜಿಸಬೇಕು. ಇದನ್ನು ಮಾಡುವುದರಿಂದ ಶ್ರೀ ಹರಿ ಮತ್ತು ಲಕ್ಷ್ಮಿಯ ಅನುಗ್ರಹವನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ.

ಹಿಂದೂ ಧರ್ಮದಲ್ಲಿ ಹಾವನ್ನು ದೇವರೆಂದು ಪೂಜಿಸಲಾಗುತ್ತದೆ. ಕಾರಣ ಇದರ ಹಿಂದೆ ಅನೇಕ ನಂಬಿಕೆಗಳಿವೆ. ಪುರಾಣಗಳಲ್ಲಿ ಈ ಭೂಮಿಯು ಶೇಷನಾಗನ ಹೆಡೆಯ ಮೇಲೆ ನಿಂತಿದೆ ಎಂದು ನಂಬಲಾಗಿದೆ. ಜೊತೆಗೆ ವಿಷ್ಣುವು ಕ್ಷೀರಸಾಗರದ ಶೇಷನಾಗನ ಹಾಸಿಗೆಯ ಮೇಲೆ ಮಲಗಿರುತ್ತಾನೆ. ಇದು ಕೂಡ ಹಾವನ್ನು ಪೂಜಿಸಲು ಒಂದು ಪ್ರಮುಖ ಕಾರಣವಾಗಿದೆ.
ಇನ್ನೂ ಸಮುದ್ರ ಮಂಥನದ ಸಮಯದಲ್ಲಿ ದೇವತೆಗಳಿಗೆ ಸಹಾಯ ಮಾಡಿದ್ದನು. ಆದ್ದರಿಂದ ದೇವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಈ ಹಬ್ಬವನ್ನು ಆಚರಿಸಲಾಗುತ್ತದೆ. ಜೊತೆಗೆ ಇನ್ನೊಂದು ಕಾರಣವೆಂದರೆ ಅರ್ಜುನನ ಮೊಮ್ಮಗ ಮತ್ತು ಪರೀಕ್ಷಿತನ ಮಗ ಜನಮೇಜಯನು ಸರ್ಪಗಳ ಮೇಲೆ ಸೇಡು ತೀರಿಸಿಕೊಳ್ಳಲು ಮತ್ತು ಅವರ ಸಂಪೂರ್ಣ ಕುಲವನ್ನು ನಾಶಮಾಡಲು ನಾಗ ಯಾಗವನ್ನು ಏರ್ಪಡಿಸಿದ್ದರು. ಏಕೆಂದರೆ ಅವನ ತಂದೆ ಪರೀಕ್ಷಿತನು ತಕ್ಷಕ ಅರ್ಪದಿಂದ ಕೊಲ್ಲಲ್ಪಟ್ಟನು. ಅದರ ಸೇಡಿಗಾಗಿ ಜನಮೇಜಯನು ನಾಯ ಯಾಗ ಏರ್ಪಡಿಸಿದ್ದನು. ಸರ್ಪಗಳನ್ನು ರಕ್ಷಿಸಲು ಜರತ್ಕಾರೂ ಖುಷಿಯ ಮಗನಾದ ಆಸ್ತಿಕ ಮುನಿಯು ಈ ಯಾಗವನ್ನು ನಿಲ್ಲಿಸಿದನು. ಅವರು ಯಾಗವನ್ನು ನಿಲ್ಲಿಸಿದ ದಿನ ಶ್ರಾವಣ ಶುಕ್ಲ ಪಂಚಮಿ ಇತ್ತು.

ನಾಗದೇವತೆ ಆರತಿ
ಈ ದಿನ ಭೂಮಿಯ ಭಾರವನ್ನು ಹೊರುವ ನಾಗದೇವತೆಗೆ ಆರತಿಯನ್ನು ಮಾಡಬೇಕು. ಮನಸ್ಸಿನಿಂದ ಸೇವೆ ಮಾಡುವವರಿಗೆ ಇಷ್ಟಾರ್ಥಗಳನ್ನು ಪೂರೈಸುತ್ತದೆ. ಜೊತೆಗೆ ಭಕ್ತರ ಸಂಕಷ್ಟ ನಿವಾರಣೆ ಮಾಡುತ್ತದೆ. ಮಹಾದೇವನ ಕೊರಳಿನ ಮಹಿಮೆ ನಾಗ ದೇವತೆಯಲ್ಲಿದೆ. ಹೀಗಾಗಿ ನಾಗದೇವತೆಗೆ ಆರತಿಯನ್ನು ಮಾಡುವುದರಿಂದ ಸಂಪತ್ತು, ಐಶ್ವರ್ಯ, ಸುಖ: ಶಾಂತಿ ನೆಮ್ಮದಿ ಪ್ರಾಪ್ತಿಯಾಗುತ್ತದೆ.












Click it and Unblock the Notifications