ಅಮ್ಮನಿಗೆ ಪತ್ರ
ಎರಡು ಮಾತು. ನಿಮ್ಮ ಹೃದಯದಿಂದ ಹೊಮ್ಮುವ ಆ ನುಡಿಗಳು ಆಕೆಯ ಹೃದಯದೊಂದಿಗೆ ಕಣ್ಣನ್ನೂ ತುಂಬಿಸಲಿ ! ಆನಂದಬಾಷ್ಪದಿಂದ ಆಕೆ ತೊಯ್ದು ಹೋಗಲಿ !
ಎಷ್ಟೋ ಬಾರಿ ದೂರದ ಯಾವುದೋ ಊರಿಗೆ ಹಾರಿರುವ ನೀವು, ಅಲ್ಲಿಂದಲೇ ಅಮ್ಮಾ ಎಂದು ಸಂಬೋಧಿಸಿ ಪತ್ರ ಬರೆದರೆ ಸಾಕು. ಮೊದಲ ಪದ ನೋಡಿಯೇ ಆಕೆಯ ಕಣ್ಣಾಲಿಯಲ್ಲಿ ನೀರಾಡುತ್ತದೆ. ಅಮ್ಮಂದಿರ ದಿನಾಚರಣೆ ನಿಮಗೊಂದು ನೆವವಷ್ಟೇ, ಆಕೆಗೊಂದು ಪ್ರೀತಿಯ ಪತ್ರ ಬರೆಯಿರಿ. ಬರೆಹ ನಿಮ್ಮದು. ವೇದಿಕೆ ನಮ್ಮದು.
ನಮ್ಮಮ್ಮ 'ಅನ್ನಪೂರ್ಣೇಶ್ವರಿ" - ಡಾ. ಶಂಕರಶಾಸ್ತ್ರೀ, ಮಿಸ್ಸೌರಿ
ನನ್ನ ಅಮ್ಮ ಲೀಲಾವತಿ
ನಿಮ್ಮ ನೆರವಿಗೆ ಇದೋ ಒಂದಿಷ್ಟು ನಮೂನೆಗಳು...
ಪ್ರೀತಿಯ ಅಮ್ಮಾ,
ನಿನಗೆ ನಾನು ಬರೆಯುತ್ತಿರುವ ಮೊದಲ ಪತ್ರ ಇದು. ಹೇಗಿದ್ದೀಯಮ್ಮಾ ? ಅಂಗಳದಲ್ಲಿನ ಮಾವು ಈ ಸಲ ಚೆನ್ನಾಗಿ ಹಣ್ಣು ಬಿಟ್ಟಿದೆಯಾ. ವಾಟೆ ಸವಿಯುವಾಗ ನಾನು ನೆನಪಾದೆನೆ ...
ನಿನ್ನ ಪ್ರೀತಿಯ ..
ಅವ್ವಾ ...
ಮಾತೇ ಹೊರಡುತ್ತಿಲ್ಲ . ಗುಮ್ಮ ಬಂದಾಗ ನಿನ್ನ ಬೆಚ್ಚಗಿನ ರಕ್ಷೆ ಗೂಡು ಸೇರುತ್ತಿದ್ದೆ. ಈಗಲೂ ಆ ಗೂಡು ಬೇಕಮ್ಮಾ, ನಿನ್ನ ಮಡಿಲಿನಲ್ಲಿ ಮುಖ ಮರೆಸಿಕೊಳ್ಳಲು ಆಸೆಯಾಗುತ್ತಿದೆ . ದಿನರಾತ್ರಿಯೂ ಕೈ ತುತ್ತು ಬೇಕೆನಿಸುತ್ತೆ ...
ನಮಸ್ಕಾರಗಳು ..
ಪ್ರೀತಿಯ ಆಯಿ,
ಇಲ್ಲಿ ನೀನಿಲ್ಲ . ಯಾರ ನಂಬುವುದು ನಮ್ಮ ಹಿತ ಕಾಯ್ವರೆಂದು? ಒಂದೂ ಅರ್ಥವಾಗುತ್ತಿಲ್ಲ . ಬೇಸರದ ಒರತೆಯಲ್ಲಿ ಎದ್ದು ಕಾಣುತ್ತಿದೆ ನಿನ್ನ ಕೊರತೆ... ಅಂದಹಾಗೆ, ಈಗ ನೀನು ಉಪ್ಪಿನಕಾಯಿ ಹಾಕಿರಬೇಕಲ್ವಾ. ಕಟ್ಟಿಕೊಟ್ಟ ಡಬ್ಬಿಯ ತಳದಲ್ಲಿ ಉಳಿದಿರುವ ಹೋಳುಗಳನ್ನು ಚಪ್ಪರಿಸುವಾಗೆಲ್ಲ ನೀನು ಎದುರಿಗೆ ಇದ್ದಂತೆನಿಸುತ್ತೆ . ನಿನಗೀಗ ಕೆಮ್ಮು ವಾಸಿಯೇನಮ್ಮ ..
ನಿನ್ನ
ಪುಟ್ಟಿ












Click it and Unblock the Notifications