Get Updates
Get notified of breaking news, exclusive insights, and must-see stories!

Maha Kumbh Mela 2025: ಪ್ರಯಾಗರಾಜ್‌ನಲ್ಲಿ ಭಕ್ತರ ಸುರಕ್ಷತೆಗಾಗಿ ಅಗ್ನಿಶಾಮಕ ರೋಬೋಟ್ ವ್ಯವಸ್ಥೆ

ಲಕ್ನೋ ಜನವರಿ 3: ಉತ್ತರ ಪ್ರದೇಶದ ಪ್ರಯಾಗರಾಜ್ ಜಿಲ್ಲೆಯಲ್ಲಿ ಮಹಾಕುಂಭಮೇಳದ ಸಿದ್ಧತೆಗಳು ಭರದಿಂದ ಸಾಗಿವೆ. ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಪವಿತ್ರ ಸಂಗಮವಾದ ತ್ರಿವೇಣಿ ಸಂಗಮದಲ್ಲಿ ವಿಶೇಷ ಗಂಗಾ ಆರತಿಯಂತಹ ಪ್ರಮುಖ ಆಚರಣೆಗಳ ಪೂರ್ವಾಭ್ಯಾಸಗಳು ನಡೆಯುತ್ತಿವೆ. ಲಕ್ಷಾಂತರ ಭಕ್ತರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಜಿಲ್ಲಾಡಳಿತ ಹಲವಾರು ಕ್ರಮಗಳನ್ನು ಜಾರಿಗೆ ತಂದಿದೆ. ವಿಶೇಷವಾಗಿ ಜನಸಂದಣಿ ನಿರ್ವಹಣೆ ಮತ್ತು ಬೆಂಕಿ ಅವಘಡಗಳನ್ನು ತಡೆಗಟ್ಟಲು ಅಗ್ನಿಶಾಮಕ ರೋಬೋಟ್‌ಗಳು, ಆಲ್-ಟೆರೈನ್ ವಾಹನಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಹೌದು... ಮಹಾಕುಂಭ ಮೇಳದ ಪ್ರಯುಕ್ತ ಪ್ರಯಾಗರಾಜ್ ಪ್ರದೇಶದಲ್ಲಿ ಹೊಸ ಅಗ್ನಿಶಾಮಕ ಠಾಣೆಗಳನ್ನು ಉದ್ಘಾಟಿಸಲಾಗಿದೆ. ಅಗ್ನಿ ಅವಘಡಗಳ ಸಂದರ್ಭದಲ್ಲಿ ಕ್ಷಿಪ್ರ ಪ್ರತಿಕ್ರಿಯೆ ನೀಡಲು ಈ ಠಾಣೆಗಳು ಕಾರ್ಯ ನಿರ್ವಹಿಸಲಿವೆ. ಇಲ್ಲಿ 365 ವಾಹನಗಳನ್ನು ನಿಯೋಜಿಸಲಾಗಿದೆ. ಹೆಚ್ಚುವರಿಯಾಗಿ ಬೆಂಕಿಯ ಘಟನೆಗಳನ್ನು ಭಯಪಡದೆ ನಿರ್ವಹಿಸುವ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ನೀಡಲು ಜಾಗೃತಿ ಅಭಿಯಾನಗಳನ್ನು ನಡೆಸಲಾಗುತ್ತಿದೆ. ಅಣಕು ಡ್ರಿಲ್‌ಗಳನ್ನು ಆಯೋಜಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಪ್ರಯತ್ನಗಳು ಯಾವುದೇ ಅನಿರೀಕ್ಷಿತ ಸಂದರ್ಭಗಳಿಗೆ ಅಧಿಕಾರಿಗಳು ಮತ್ತು ಭಕ್ತರನ್ನು ಸಿದ್ಧಪಡಿಸುವ ಗುರಿಯನ್ನು ಹೊಂದಿವೆ.

maha kumbh mela 2025 fire fighting robots all-terrain vehicles arranged for the safety of devotees

ಮಾಧ್ಯಮಗಳೊಂದಿಗೆ ಮಾತನಾಡಿದ ಅಗ್ನಿಶಾಮಕ ವಿಭಾಗದ ಎಡಿಜಿ ಪದ್ಮಜಾ ಚೌಹಾಣ್, ಜಾಗೃತಿ ಮೂಡಿಸಲು ನಿಯೋಜಿಸಲಾದ ಅಧಿಕಾರಿಗಳು ಇಂತಹ ಬೆಂಕಿ ಘಟನೆಗಳನ್ನು ನಿಭಾಯಿಸಲು ಜನರಿಗೆ ಕಲಿಸುತ್ತಾರೆ. ನಾವು ಟೆಂಟ್‌ಗಳಿಗೆ ತೆರಳಿ ಜಾಗೃತಿ ಮೂಡಿಸಲು ಮತ್ತು ಅಣಕು ಡ್ರಿಲ್‌ಗಳನ್ನು ನಡೆಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಯಾವುದೇ ಸಣ್ಣ ಬೆಂಕಿ ಅವಘಡ ಸಂಭವಿಸಿದರೆ, ಜನರು ಗಾಬರಿಯಾಗಬಾರದು. ಅಂತಹ ಬೆಂಕಿಯನ್ನು ಹೇಗೆ ನಿಭಾಯಿಸಬೇಕು ಎಂದು ಅಧಿಕಾರಿಗಳು ಜನರಿಗೆ ಕಲಿಸುತ್ತಾರೆ ಎಂದು ಅವರು ಹೇಳಿದರು.

ಬೆಂಕಿ ಅವಘಡ ತಪ್ಪಿಸಲು ದೋಣಿ ವ್ಯವಸ್ಥೆ

ಮಹಾಕುಂಭದಲ್ಲಿ ಯಾವುದೇ ಬೆಂಕಿ ಅವಘಡವನ್ನು ತಪ್ಪಿಸಲು ಅಗ್ನಿಶಾಮಕ ಇಲಾಖೆ ಮಾನವಶಕ್ತಿಯನ್ನು ಹೆಚ್ಚಿಸಿದೆ. ಕ್ವಿಕ್ ರೆಸ್ಪಾನ್ಸ್ ವೆಹಿಕಲ್‌ಗಳು, ಯಾವುದೇ ರೀತಿಯ ಭೂಪ್ರದೇಶದಲ್ಲಿ ಚಲಿಸಬಲ್ಲ ಆಲ್-ಟೆರೈನ್ ವೆಹಿಕಲ್‌ಗಳು (ಎಟಿವಿಗಳು), ಅಗ್ನಿಶಾಮಕ ರೋಬೋಟ್‌ಗಳು ಮತ್ತು ಫೈರ್ ಮಿಸ್ಟ್ ಬೈಕ್‌ಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಇಲಾಖೆ ಅಗ್ನಿಶಾಮಕ ದೋಣಿಗಳ ವ್ಯವಸ್ಥೆಯನ್ನೂ ಮಾಡಿದೆ. ಇದು ಒಂದು ವಾರದಲ್ಲಿ ನಿಯೋಜಿಸಲು ಸಿದ್ಧವಾಗಲಿದೆ ಎಂದು ಚೌಹಾಣ್ ಹೇಳಿದರು. ದೋಣಿಗಳು ಬೆಂಕಿಯನ್ನು ನಂದಿಸಲು ನದಿಯ ನೀರನ್ನು ಬಳಸುತ್ತವೆ. ಈ ಮೂಲಕ ಬೆಂಕಿ ಅವಘಡಗಳನ್ನು ತಪ್ಪಿಸಲಾಗುತ್ತದೆ.

ಮಹಾಕುಂಭ ಮೇಳ 2025ರ ಬಗ್ಗೆ

ಕುಂಭಮೇಳವನ್ನು ಪ್ರತಿ 3 ವರ್ಷಗಳಿಗೊಮ್ಮೆ, ಅರ್ಧ ಕುಂಭಮೇಳವನ್ನು ಪ್ರತಿ 6 ವರ್ಷಗಳಿಗೊಮ್ಮೆ ಮತ್ತು ಮಹಾ ಕುಂಭಮೇಳವನ್ನು ಪ್ರತಿ 12 ವರ್ಷಗಳಿಗೊಮ್ಮೆ ಆಯೋಜಿಸಲಾಗುತ್ತದೆ. ಕೊನೆಯದಾಗಿ 2013ರಲ್ಲಿ ಮಹಾಕುಂಭಮೇಳ ಆಯೋಜಿಸಲಾಗಿತ್ತು.ಇದಾದ ಬಳಿಕ 2019ರಲ್ಲಿ ಅರ್ಧಕುಂಭಮೇಳವನ್ನು ಆಯೋಜಿಸಲಾಗಿತ್ತು.ಇದೀಗ 2025ರಲ್ಲಿ ಮಹಾಕುಂಭಮೇಳ ಆಯೋಜಿಸಲಾಗಿದ್ದು, ಅದ್ಧೂರಿಯಾಗಿ ನಡೆಯಲಿದೆ.

ಮಹಾಕುಂಭ ಮೇಳ 2025 ಅನ್ನು ಸಿದ್ಧಿ ಯೋಗದಲ್ಲಿ ಜನವರಿ 29, 2025 ರಂದು ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಆಯೋಜಿಸಲಾಗುವುದು. ಸನಾತನ ಧರ್ಮದಲ್ಲಿ ನಂಬಿಕೆ ಇರುವವರಿಗೆ ಇದು ದೊಡ್ಡ ಹಬ್ಬ. ಈ ಪವಿತ್ರ ಜಾತ್ರೆಯಲ್ಲಿ ಭಾಗವಹಿಸಲು ಪ್ರಪಂಚದಾದ್ಯಂತದ ಸಂತರು ಮತ್ತು ಜನರ ಗುಂಪು ಬರುತ್ತದೆ.

ಪ್ರತಿಯೊಬ್ಬರೂ ಮಹಾಕುಂಭದ ಈ ಪವಿತ್ರ ಮಹಾಸಂಗಮದಲ್ಲಿ ಸ್ನಾನ ಮಾಡಲು ಬಯಸುತ್ತಾರೆ. ಆದ್ದರಿಂದಲೇ ಇದನ್ನು ಮಹಾಸಂಗಮ ಎಂದೂ ಕರೆಯಲಾಗುತ್ತದೆ. ಮಹಾಕುಂಭ ಜನವರಿ 13 ರಿಂದ ಫೆಬ್ರವರಿ 26 ರವರೆಗೆ ನಡೆಯಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+