ಕಾರ್ತಿಕ ಮಾಸ 2021 ಶುರು: ಮಹತ್ವ, ಹಬ್ಬಗಳು ಮತ್ತು ವ್ರತಗಳು
ಸನಾತನ ಧರ್ಮದಲ್ಲಿ ಕಾರ್ತಿಕ ಮಾಸಕ್ಕೆ ತನ್ನದೇ ಆದ ಮಹತ್ವವಿದೆ. ಈ ವರ್ಷ ಅಕ್ಟೋಬರ್ 21ರಿಂದ ಕಾರ್ತಿಕ ಮಾಸ ಶುರುವಾಗಿದ್ದು, ನವೆಂಬರ್ 19ರವರೆಗೆ ಇರಲಿದೆ. ಹಲವು ತಿಂಗಳುಗಳ ಕಾಲ ಸುದೀರ್ಘ ನಿದ್ದೆಯಲ್ಲಿದ್ದ ವಿಷ್ಣು ಈ ಮಾಸದಲ್ಲಿ ಎಚ್ಚರಗೊಳ್ಳುತ್ತಾನೆ ಎನ್ನುವ ಪ್ರತೀತಿ ಇದೆ.
ಈ ದಿನಗಳಲ್ಲಿ, ಪ್ರತಿದಿನ ತುಳಸಿ ಗಿಡದ ಬಳಿ ದೀಪವನ್ನು ಹಚ್ಚಿದರೆ ಶುಭ. ತುಳಸಿ ಮಾತೆಯನ್ನು ಅಲಂಕರಿಸುವ ಮೂಲಕ ಪೂಜಿಸಬೇಕು. ಈ ತಿಂಗಳಲ್ಲಿ ತುಳಸಿಯನ್ನು ಪೂಜಿಸುವುದರಿಂದ, ಭಯದಿಂದ ಮುಕ್ತಿ ಸಿಗುತ್ತದೆ ಎಂದು ಹೇಳಲಾಗುತ್ತದೆ.
ತೀರ್ಥಯಾತ್ರೆಯೂ ಇಲ್ಲ ಮತ್ತು ಸತ್ಯುಗನಂತಹ ಯುಗವೂ ಇಲ್ಲ ಎಂದು ಹೇಳಲಾಗಿದೆ. ಹಾಗೆಯೇ, ಕಾರ್ತಿಕ ಮಾಸದಂತಹ ಯಾವುದೇ ತಿಂಗಳು ಇಲ್ಲ. ಕಾರ್ತಿಕ ಮಾಸವನ್ನು ಏಕೆ ಮಹತ್ವದ್ದೆಂದು ಪರಿಗಣಿಸಲಾಗಿದೆ. ತ್ತದೆ ಎಂದು ಹೇಳಲಾಗುತ್ತದೆ.
ಕಾರ್ತಿಕ ಮಾಸದ ಮೊದಲ ಸೋಮವಾರ ಸ್ನಾನ ಮಾಡಿ 5 ತುಳಸಿ ಎಲೆಗಳನ್ನು ತೆಗದುಕೊಳ್ಳಿ. ಆ ಎಲೆಗಳನ್ನು ಎನ್ನಾಗಿ ತೊಳೆದು ಮನೆಯ ದೇವರ ಕೋಣೆಯಲ್ಲಿರಿಸಿ . ರಾತ್ರಿ ಮಲಗುವ ಮುನ್ನ ಆ ಎಲೆಗಳನ್ನು ನಿಮ್ಮ ದಿಂಬಿನ ಕೆಳಗೆ ಇಟ್ಟು ಮಲಗಿಕೊಳ್ಳಿ. ಹೀಗೆ ಮಾಡುವುದರಿಂದ ವಿಷ್ಣುವಿನ ವಿಶೇಷ ಆಶೀರ್ವಾದ ಸಿಗಲಿದೆ.
ಕಾರ್ತಿಕ ಮಹಾತ್ಮೆ ಹಾಗೂ ನಾರದೀಯ ಪುರಾಣಗಳಲ್ಲಿ ಹೇಳಲ್ಪಟ್ಟ ರುಕ್ಮಾಂಗದನ ಚರಿತ್ರೆ ಬಹಳ ಸ್ವಾರಸ್ಯದಿಂದ ಕೂಡಿದೆ. ಕಾರ್ತಿಕ ಮಾಸದಲ್ಲಿ ಏಕಾದಶಿ ವ್ರತವನ್ನು ಆಚರಿಸಿ ಹರಿಯ ಕೃಪೆಗೊಳಗಾಗುವುದನ್ನು ಈ ಕಥೆ ಮಾರ್ಮಿಕವಾಗಿ ವಿವರಿಸುತ್ತದೆ.

ಕಾರ್ತಿಕ ಮಾಸವು, ಹರಿಯು ಸಂಪ್ರೀತನಾದ ಕಾಲವೂ ಆಗಿರುವುದರಿಂದ ತುಳಸಿ ಪೂಜೆಯನ್ನೂ ಇದೇ ಮಾಸದಲ್ಲಿ ಮಾಡಲಾಗುತ್ತದೆ. ಒಳ್ಳೆಯ ಕಾಲದಲ್ಲಿ ಒಳ್ಳೆಯ ಕಾರ್ಯವನ್ನು ಮಾಡಿದರೆ ಅದರ ಫಲವೂ ಒಳ್ಳೆಯದೇ ಆಗಿರುತ್ತದೆ ಎನ್ನುವ ನಂಬಿಕೆ ಇದೆ.
ತುಳಸಿ ಪೂಜೆಯ ಮಹತ್ವ:ಹಿಂದೂ ಧರ್ಮದಲ್ಲಿ ತುಳಸಿಗೆ ವಿಶೇಷ ಪ್ರಾಮುಖ್ಯತೆ ಇದೆ. ಆದರೆ ಕಾರ್ತಿಕ ಮಾಸದಲ್ಲಿ, ತುಳಸಿ ಪೂಜೆಯ ಮಹತ್ವವು ಅನೇಕ ಪಟ್ಟು ಹೆಚ್ಚಾಗುತ್ತದೆ. ತುಳಸಿ ಭಗವಾನ್ ವಿಷ್ಣುವಿಗೆ ಅತ್ಯಂತ ಪ್ರಿಯವಾಗಿದೆ.
ತುಳಸಿಯು ಭಗವಾನ್ ವಿಷ್ಣುವಿನ ಅವತಾರವಾದ ಶಾಲಿಗ್ರಾಮನನ್ನು ವಿವಾಹವಾದರು. ಧಾರ್ಮಿಕ ನಂಬಿಕೆಗಳ ಪ್ರಕಾರ, ಕಾರ್ತಿಕ ಮಾಸದಲ್ಲಿ ಬ್ರಹ್ಮಿ ಮುಹೂರ್ತದಲ್ಲಿ ಸ್ನಾನ ಮಾಡಿ, ತುಳಸಿಯನ್ನು ಪೂಜಿಸುವುದು ಎಲ್ಲಾ ತೀರ್ಥಯಾತ್ರೆಗಳನ್ನು ಮಾಡಿದಷ್ಟೇ ಪುಣ್ಯ ಫಲಿತಾಂಶವನ್ನು ನೀಡುತ್ತದೆ.
ಕಾರ್ತಿಕ ಮಾಸದಲ್ಲಿ ಏನು ಮಾಡಬೇಕು?
ಕಾರ್ತಿಕ ಮಾಸದಲ್ಲಿ ಎರಡು ಹೊತ್ತು ಸ್ನಾನ ಮಾಡಿ ದೀಪಾರಾಧನೆ ಮಾಡಬೇಕು. ಸಂಜೆ ಹೊತ್ತು ದೀಪ ಹಚ್ಚಿ ಪೂಜೆಯನ್ನು ಸಲ್ಲಿಸುವುದನ್ನು ತಪ್ಪಿಸಬಾರದು. ಕಾರ್ತಿಕ ಪುರಾಣವನ್ನು ಓದಿ, ಯಾರಾದರೂ ಜೋರಾಗಿ ಓದಿದರೆ ಕೇಳುವುದು ಕೂಡ ಒಳ್ಳೆಯದು. ಸೋಮವಾರ ಪ್ರಸಾದ ತಯಾರಿಸಬೇಕು, ಉಳಿದ ದಿನಗಳಲ್ಲಿ ಹಣ್ಣುಗಳನ್ನು ಪ್ರಸಾದವಾಗಿ ಸಮರ್ಪಿಸಬಹುದು
ಏನು ಮಾಡಬಾರದು?
ಈರುಳ್ಳಿ, ಬೆಳ್ಳುಳ್ಳಿ, ಮಾಂಸಾಹಾರ ಸೇವನೆ ಮಾಡಬಾರದು. ಎಳ್ಳೆಣ್ಣೆಯನ್ನು ದೀಪ ಹಚ್ಚಲು ಹೊರತು ಪಡಿಸಿ, ಬೇರೆ ಯಾವುದೇ ಕಾರ್ಯಕ್ಕೆ ಬಳಸಬಾರದು. ಉದ್ದಿನ ಬೇಳೆ ಸೇವಿಸಬಾರದು. ದಿನದಲ್ಲಿ ಒಮ್ಮೆ ಮಾತ್ರ ಸೇವನೆ ಮಾಡಿದರೆ ಒಳ್ಳೆಯದು. ಅದು ಸಾಧ್ಯವಾಗದಿದ್ದರೆ ಸೋಮವಾರ, ಕಾರ್ತಿಕ ಸೋಮವಾರ, ಕಾರ್ತಿಕ ಪೂರ್ಣಿಮ, ಕೋತಿ ಸೋಮವಾರದಂದು ವ್ರತ ಪಾಲಿಸಿ.
ತುಳಸಿ ಎಂದರೆ ವಿಷ್ಣುವಿಗೆ ತುಂಬಾ ಪ್ರೀತಿ: ತುಳಸಿ ಎಂದರೆ ವಿಷ್ಣುವಿಗೆ ಅತ್ಯಂತ ಪ್ರಿಯ ಎಂದು ನಂಬಲಾಗಿದೆ. ಹೀಗಾಗಿ ಕಾರ್ತಿಕ ಮಾಸದಲ್ಲಿ ತುಳಸಿಯನ್ನು ಪೂಜಿಸುವುದರಿಂದ ವಿಶೇಷ ಪುಣ್ಯ ಲಾಭಗಳು ಸಿಗುತ್ತವೆ ಮತ್ತು ಜೀವನದ ಎಲ್ಲಾ ದುಃಖಗಳು ಮತ್ತು ತೊಂದರೆಗಳು ದೂರವಾಗುತ್ತವೆ. ಅಲ್ಲದೆ, ಅಕಾಲಿಕ ಮರಣದ ಅಪಾಯವೂ ಕಡಿಮೆಯಾಗುತ್ತದೆಯಂತೆ.
ಕಾರ್ತಿಕ ಮಾಸದಲ್ಲಿ ಬರುವ ಹಬ್ಬಗಳ ಪಟ್ಟಿ ಇಲ್ಲಿದೆ:
- ಕರ್ವ ಚೌತ್ ವ್ರತ ಮತ್ತು ಸಂಕಷ್ಟಿ ಚತುರ್ಥಿ (ಅಕ್ಟೋಬರ್ 24)
- ಅಹೋಯಿ ಅಷ್ಟಮಿ (ಅಕ್ಟೋಬರ್ 28)
- ರಂಭಾ ಅಥವಾ ರಾಮ ಏಕಾದಶಿ, ಗೋವತ್ಸ ದ್ವಾದಶಿ (ನವೆಂಬರ್ 1)
- ಪ್ರದೋಷ ಉಪವಾಸ, ಧಂತೇರಸ್ (ನವೆಂಬರ್ 2)
- ನರಕ ಚತುರ್ದಶಿ, ದಕ್ಷಿಣ ದೀಪಾವಳಿ, ಛೋಟಿ ದೀಪಾವಳಿ (ನವೆಂಬರ್ 3)
- ದೀಪಾವಳಿ, ಶ್ರದ್ಧಾ ಅಮಾವಾಸ್ಯೆ, ಕೇದಾರ ಗೌರಿ ವ್ರತ (ನವೆಂಬರ್ 4)
- ಅನ್ನಕೂಟ, ಗೋವರ್ಧನ ಪೂಜೆ (ನವೆಂಬರ್ 5)
- ಚಂದ್ರ ದರ್ಶನ, ಚಿತ್ರಗುಪ್ತ ಪೂಜೆ, ಯಮ ದ್ವಿತೀಯ, ಭಾಯಿ ದೂಜ್ (ನವೆಂಬರ್ 6)
- ವಿನಾಯಕಿ ಚತುರ್ಥಿ (ನವೆಂಬರ್ 8)
- ಪಾಂಡವ ಪಂಚಮಿ (ನವೆಂಬರ್ 9)
- ಛತ್ ಪೂಜೆ, ಸೂರ್ಯ ಷಷ್ಠಿ ವ್ರತ (ನವೆಂಬರ್ 10)
- ಗೋಪಾಷ್ಟಮಿ (ನವೆಂಬರ್ 11)
- ಆಮ್ಲಾ ನವಮಿ (ನವೆಂಬರ್ 12)
- ದೇವತಾನಿ ಏಕಾದಶಿ, ತುಳಸಿ ವಿವಾಹ (ನವೆಂಬರ್ 15)
- ಪ್ರದೋಷ ವ್ರತ (ನವೆಂಬರ್ 16)
- ಬೈಕುಂಠ ಚತುರ್ದಶಿ, ತ್ರಿಪುರಾರಿ ಪೂರ್ಣಿಮಾ (ನವೆಂಬರ್ 17)
- ಕಾರ್ತಿಕ ಪೂರ್ಣಿಮಾ (ನವೆಂಬರ್ 19)
ಕಾರ್ತಿಕ ಮಾಸದಲ್ಲಿ ದೀಪದಾನ ಮಹತ್ವ:
ಕಾರ್ತಿಕ ಮಾಸದಲ್ಲಿ ತುಳಸಿ ಗಿಡವನ್ನು ದಾನ ಮಾಡುವುದು ಉತ್ತಮವೆಂದು ಪರಿಗಣಿಸಲಾಗಿದೆ. ಈ ತಿಂಗಳಲ್ಲಿ ಪ್ರತಿ ಗುರುವಾರ ತುಳಸಿ ಗಿಡಕ್ಕೆ ಹಸಿ ಹಾಲಿನೊಂದಿಗೆ ನೀರುಣಿಸಬೇಕು. ಇದರ ನಂತರ, ಪ್ರತಿದಿನ ಸಂಜೆ ತುಳಸಿ ಗಿಡದ ಮುಂದೆ ದೀಪವನ್ನು ಬೆಳೆಗಬೇಕು. ಅಲ್ಲದೆ ಈ ತಿಂಗಳಲ್ಲಿ ದೀಪವನ್ನು ದಾನ ಮಾಡಬೇಕು. ಇನ್ನು ಕಾರ್ತಿಕ ಮಾಸದ ಬ್ರಹ್ಮ ಮುಹೂರ್ತದಲ್ಲಿ ಎದ್ದು ತುಳಸಿಗೆ ನೀರನ್ನು ಅರ್ಪಿಸುವುದರಿಂದ ಎಲ್ಲಾ ಪಾಪಗಳಿಂದ ಮುಕ್ತಿ ಸಿಗುತ್ತದೆ.












Click it and Unblock the Notifications